Gattimela serial: ಧ್ರುವ-ಅದಿತಿ ಲವ್ ಸ್ಟೋರಿಗೆ ವೇದಾಂತ್ ಸಹಾಯ ದೊರಕುತ್ತಾ? ಮುಂದಿದೆ ಬಿಗ್ ಟ್ವಿಸ್ಟ್

ಅಮೂಲ್ಯ ವಸಿಷ್ಟ ಮನೆಯ ಸೊಸೆಯಾಗಿ ಹಾಗೂ ಮಂಜುನಾಥ್ ಅವರ ಮಗಳಾಗಿ ತನ್ನ ಕರ್ತವ್ಯವನ್ನು ಬಹಳ ಚೆನ್ನಾಗಿ ನಿಭಾಯಿಸಿಕೊಂಡು ಬರುತ್ತಿದ್ದಾಳೆ. ತಂದೆಗೆ ತಿಳಿಯದಂತೆ ತಂದೆಯ ಕರ್ತವ್ಯವನ್ನು ಬಹಳ ಚೆನ್ನಾಗಿ ಅಮೂಲ್ಯ ಮಾಡುತ್ತಿರುವುದು ಬಹಳ ಸಂತೋಷ.

ವೇದಾಂತ್

ವೇದಾಂತ್

  • Share this:
    ಜೀ ಕನ್ನಡ (Zee Kannada) ವಾಹಿನಿಯಲ್ಲಿ ಪ್ರಸಾರಗೊಳ್ಳುತ್ತಿರುವ ಜನಪ್ರಿಯ ಧಾರಾವಾಹಿಗಳಲ್ಲಿ ಗಟ್ಟಿಮೇಳ (Gattimela) ಕೂಡ ಒಂದು. ಪ್ರತಿದಿನ ಹೊಸ ಹೊಸ ತಿರುವುಗಳ ಮೂಲಕ ಪ್ರೇಕ್ಷಕರನ್ನು ಆರಂಭದಿಂದಲೂ ಈ ತಂಡವು ಯಶಸ್ವಿಯಾಗಿ ಮನರಂಜಿಸುತ್ತಾ ಬಂದಿದೆ. ರೌಡಿ ಬೇಬಿ ಅಮೂಲ್ಯ (Amulya) ಮತ್ತು ವೇದಾಂತ್ ವಸಿಷ್ಠ (Vedanth Vasista) ನಡುವಿನ ಕ್ಯೂಟ್ ಜಗಳ ನೋಡಲು ಪ್ರೇಕ್ಷಕರ ಕಾಯುತ್ತಿರುತ್ತಾರೆ. ಅಮೂಲ್ಯ ವಸಿಷ್ಟ ಮನೆಯ ಸೊಸೆಯಾಗಿ ಹಾಗೂ ಮಂಜುನಾಥ್ (Manjunath) ಮಗಳಾಗಿ ತನ್ನ ಕರ್ತವ್ಯವನ್ನು ಬಹಳ ಚೆನ್ನಾಗಿ ನಿಭಾಯಿಸಿಕೊಂಡು ಬರುತ್ತಿದ್ದಾಳೆ. ತಂದೆಗೆ ತಿಳಿಯದಂತೆ ತಂದೆಯ ಕರ್ತವ್ಯವನ್ನು ಬಹಳ ಚೆನ್ನಾಗಿ ಅಮೂಲ್ಯ ಮಾಡುತ್ತಿರುವುದು ಬಹಳ ಸಂತೋಷ.

    ಸುಹಾಸಿನಿಯ ಕುತಂತ್ರಕ್ಕೆ ಬಲಿಯಾಗುತ್ತಾ ಅದಿತಿ ಮತ್ತು ದ್ರುವನ ಪ್ರೀತಿ

    ಕೋಮಾದಲ್ಲಿರುವ ದ್ರುವನ್ನು ನೋಡಿಕೊಳ್ಳುವ ನರ್ಸ್ ಆಗಿ ವಸಿಷ್ಠ ಮನೆಗೆ ಅದಿತಿ ಕಳೆದ ಕೆಲ ದಿನಗಳಿಂದ ಬರುತ್ತಿದ್ದಾಳೆ. ಇತ್ತೀಚೆಗೆ ದ್ರುವನ ಆರೋಗ್ಯದಲ್ಲಿ ಚೇತರಿಕೆ ‌ಕೂಡ ಕಂಡುಬರುತ್ತಿದೆ. ಧ್ರುವನನ್ನು ಹಿಂದಿನಂತೆ ಮಾಡಲು ಅದಿತಿ ಬಹಳ ಪ್ರಯತ್ನ ಪಡುತ್ತಿದ್ದಾಳೆ. ಆದರೆ ಇದೀಗ ಅದಿತಿಯ ಈ ಪ್ಲಾನ್ ಪ್ಲಾಪ್ ಆಗುವ ಎಲಾ ಸೂಚನೆಗಳು ಕಾಣಿಸುತ್ತಿದೆ. ದ್ರುವನನ್ನು ನೋಡಿಕೊಳ್ಳಲು ನರ್ಸ್ ಬೇಕು ಎಂದು ಸುಹಾಸಿನಿ ಹೇಳಿದ ಮುಖ್ಯ ಉದ್ದೇಶವೇ ಆತನನ್ನು ಕೊಲ್ಲುವುದಾಗಿತ್ತು. ಅದೇ ವಿಚಾರವಾಗಿ ನರ್ಸ್ ‌ಕೈಯಲ್ಲಿ ಆತನ ಪ್ರಾಣಕ್ಕೆ ಅಪಾಯ ಇರುವಂತಹ ಮಾತ್ರೆಗಳನ್ನು ಕೊಟ್ಟಿದ್ದಳು ಸುಹಾಸಿನಿ. ಇದೇ ಕಾರಣಕ್ಕೆ ನರ್ಸ್ ಬಳಿ ಮಾತನಾಡಲು ಹೊರಟಿದ್ದಳು ಸುಹಾಸಿನಿ. ಆದರೇ ಮೊದಲ ಬಾರಿ ಆದ್ಯ ಅದಿತಿಯನ್ನು ಸುಹಾಸಿನಿ ಕೈಯಿಂದ ಪಾರು ಮಾಡಿದ್ದಳು. ಇದೀಗ ಎರಡನೇ ಬಾರಿ ಮತ್ತೆ ಅದಿತಿ ರೆಡ್ ಹ್ಯಾಂಡ್ ಆಗಿ ಸಿಕ್ಕಿ‌ಹಾಕಿಕೊಂಡಿದ್ದಾಳೆ. ಅಷ್ಟೇ ಅಲ್ಲದೆ ಸುಹಾಸಿನಿಗೆ ಧ್ರುವ ಮತ್ತು ಅದಿತಿ ನಡುವಿನ ಪ್ರೀತಿಯ ವಿಚಾರ ಕೂಡ ತಿಳಿದಿದೆ.

    ಇದನ್ನೂ ಓದಿ: Skin Allergy: ಚರ್ಮದ ಅಲರ್ಜಿ ತೊಡೆದು ಹಾಕಲು ಸರಳ ಮನೆಮದ್ದು ಬಳಸುವುದು ಹೇಗೆ?

    ಅದಿತಿಗೆ ಮದುವೆ ಮಾಡಲು ಹೊರಟ ಪರಿಮಳ

    ಈಗಾಗಲೇ ಅದಿತಿ ಮತ್ತು ದ್ರುವ ಪ್ರೀತಿ ಮಾಡುತ್ತಿರುವ ವಿಚಾರ ಆದ್ಯಳಿಗೆ ಬಿಟ್ಟರೆ ಬೇರೆ ಯಾರಿಗೂ ತಿಳಿದಿರಲಿಲ್ಲ. ಆದರೆ ನರ್ಸ್ ವೇಷದಲ್ಲಿ ವಸಿಷ್ಠ ಮನೆಗೆ ಧ್ರುವನನ್ನು ಭೇಟಿಯಾಗಲು ಬರುತ್ತಿದ್ದ ಅದಿತಿ ಸುಹಾಸಿನಿ ಕೈಯಲ್ಲಿ ಸಿಕ್ಕಿ ಬಿದ್ದಿದ್ದಾಳೆ. ಅಷ್ಟೇ ಅಲ್ಲದೆ ಅವರಿಬ್ಬರನ್ನು ದೂರ ಮಾಡಲು ಸುಹಾಸಿನಿ ತನ್ನ ಪ್ಲಾನ್ ಗಳನ್ನು ಮಾಡಲು ಈಗಾಗಲೇ ಆರಂಭ ಕೂಡ ಮಾಡಿದ್ದಾಳೆ. ಧ್ರುವನನ್ನು ಹಿಂದಿನಂತೆ ಮಾಡಲು ಅದಿತಿ ಬಹಳ ಪ್ರಯತ್ನ ಪಡುತ್ತಿದ್ದಾಳೆ. ಆದರೆ ಇದೀಗ ಅದಿತಿಯ ಈ ಪ್ಲಾನ್ ಪ್ಲಾಪ್ ಆಗುವ ಎಲಾ ಸೂಚನೆಗಳು ಕಾಣಿಸುತ್ತಿದೆ. ಅದಿತಿ ವಸಿಷ್ಠ ಮನೆಗೆ ಧ್ರುವನನ್ನು ನೋಡಿಕೊಳ್ಳಲು ಹೋಗುತ್ತಿರುವ ವಿಚಾರ ಈಗಾಗಲೇ ತಂದೆ ಮಂಜುನಾಥ್ ಅವರಿಗೆ ತಿಳಿದಿದೆ. ಇದೇ ವಿಚಾರವಾಗಿ ತಂದೆ ಮಗಳನ್ನು ಪ್ರಶ್ನಿಸಿದ್ದಾರೆ ಕೂಡ. ಆದರೆ ಇದೀಗ ಅದಿತಿಯ ಎಲ್ಲಾ ಪ್ಲಾನ್ ಗಳು ಪ್ಲಾಪ್ ಆಗುವ ಸಾಧ್ಯತೆ ಕಾಣಿಸುತ್ತಿದೆ. ಅಷ್ಟೇ ಅಲ್ಲದೆ ಪರಿಮಳ ಈಗಾಗಲೇ ಅದಿತಿಯ ಮದುವೆಯನ್ನು ಈ ಕೂಡಲೇ ಮಾಡಿ ಬಿಡಬೇಕು ಎಂದು ಯೋಚಿಸಿದ್ದಾರೆ.

    ಇದನ್ನೂ ಓದಿ: Monsoon And Health: ಮಳೆಗಾಲದಲ್ಲಿ ರೋಗಗಳ ಅಪಾಯ ಕಡಿಮೆ ಮಾಡಲು ಆರೋಗ್ಯಕರ ಸುಲಭ ಸಲಹೆ!

    ಅದಿತಿ ಪ್ರೀತಿಗೆ ವೇದಾಂತ್ ಸಹಾಯ ದೊರಕುತ್ತಾ?

    ವಿಕ್ರಾಂತ್ ಮತ್ತು ಆರತಿಯ ಲವ್ ಸ್ಟೋರಿಗೆ ವೇದಾಂತ್ ಹಾಗೂ ಅಮೂಲ್ಯ ಸಪೋರ್ಟ್ ಮಾಡಿದ್ದರು. ಇದೀಗ ಧ್ರುವನ ಮತ್ತು ಅದಿತಿಯ ಪ್ರೀತಿಗೂ ಸೇತುವೆಯಾಗಿ ವೇದಾಂತ್ ನಿಲ್ಲುತ್ತಾನಾ ಎಂಬುದನ್ನು ನೋಡಬೇಕಿದೆ. ಮದುವೆ ವಿಚಾರವಾಗಿ ನನ್ನ ಅನುಮತಿಯಿಲ್ಲದೆ ಯಾವುದಕ್ಕೂ ತಯಾರಾಗ ಬೇಡಿ ಎಂದು ಅದಿತಿ ಅಮ್ಮ ಪರಿಮಳ ಬಳಿ ಖಡಾಖಂಡಿತವಾಗಿ ಹೇಳಿದ್ದಾಳೆ. ಇದೇ ವಿಚಾರವಾಗಿ ಅಮ್ಮ ಮತ್ತು ಮಗಳ ನಡುವೆ ವೈಮನಸ್ಸು ಕೂಡ ಎದ್ದಿದೆ. ಪರಿಮಳಾಳಿಗೆ ಎದೆನೋವು ಕಾಣಿಸಿಕೊಂಡ ಬಳಿಕ ವೇದಾಂತ್ ಅನ್ನು ಅದಿತಿ ಕರೆಯುತ್ತಾಳೆ. ಇದೀಗ ಅದಿತಿಯನ್ನು ಮದುವೆಗೆ ಒಪ್ಪಿಸುವ ಜವಾಬ್ದಾರಿಯನ್ನು ವೇದಾಂತ್ ತೆಗೆದುಕೊಂಡಿದ್ದಾನೆ. ದ್ರುವ ಮತ್ತು ಅದಿತಿಯನ್ನು ವೇದಾಂತ್ ಎಂದು ಮಾಡುತ್ತಾನೆ ಎನ್ನುವ ಬಗ್ಗೆ ಮುಂದಿನ ಸಂಚಿಕೆಯಲ್ಲಿ ತಿಳಿಯಬೇಕಿದೆ.
    Published by:Swathi Nayak
    First published: