Sharanya Shetty: ಎಂಜಿನಿಯರಿಂಗ್ ಪದವೀಧರೆಯಂತೆ ಗಟ್ಟಿಮೇಳದ ಸುಂದರಿ - ಕಿರುತೆರೆಯಲ್ಲಿ ಮಿಂಚಲು ಶರಣ್ಯಾ ಶೆಟ್ಟಿ ರೆಡಿ

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಗಟ್ಟಿಮೇಳದ ಸಾಹಿತ್ಯ ಈಗ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಹಿರಿತೆರೆ ಮೂಲಕ ಬಣ್ಣದ ಯಾನ ಆರಂಭಿಸಿದರೂ ನಟಿ ಶರಣ್ಯಾ ಶೆಟ್ಟಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಗಟ್ಟಿಮೇಳ (Zee Kannada) ದ ಸಾಹಿತ್ಯ ಈಗ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಹಿರಿತೆರೆ ಮೂಲಕ ಬಣ್ಣದ ಯಾನ ಆರಂಭಿಸಿದರೂ ನಟಿ ಶರಣ್ಯಾ ಶೆಟ್ಟಿ (Sharanya Shetty) ಗೆ ಹೆಸರು ತಂದುಕೊಟ್ಟಿದ್ದು ಮಾತ್ರ ಕಿರುತೆರೆ. ಈ ಚೆಲುವೆಯ ನಗು ತುಂಬಾ ಕ್ಯೂಟ್ ಆಗಿದೆ. ಕಾಲೇಜಿನಲ್ಲಿ ಫ್ಯಾಷನ್ ಟೀಂ (Fashion Team) ಸೇರಿಕೊಂಡ ಶರಣ್ಯಾ ಶೆಟ್ಟಿ ಅವರು ಹಲವು ಬಾರಿ ರ್ಯಾಂಪ್ ವಾಕ್ ಮಾಡಿದ್ದಾರೆ. ಮಾಡೆಲ್ ಆಗಿರುವ ಶರಣ್ಯಾ ಶೆಟ್ಟಿ ಅವರು ಇದೀಗ ನಟಿ ಕೂಡ ಆಗಿದ್ದಾರೆ. ಮಿಸ್ ಬೆಂಗಳೂರು (Miss Bangalore) ಸ್ಪರ್ಧೆಗೆ ಆಯ್ಕೆಯಾಗಿದ್ದರು. ನಂತರ ಮಿಸ್ ಇಂಡಿಯಾ 2018ರ ಫೈನಲ್‌ವರೆಗೂ ಶರಣ್ಯಾ ಸ್ಫರ್ಧೆ ಮಾಡಿದ್ದರು. 

    ಮೂಲತಃ ಶಿವಮೊಗ್ಗದವರಾದ ಶರಣ್ಯಾ ಶೆಟ್ಟಿ ಹುಟ್ಟಿ ಬೆಳೆದದ್ದೆಲ್ಲಾ ಬೆಂಗಳೂರಿನಲ್ಲಿ. ಎಂಜಿನಿಯರ್ ಓದು ಮುಗಿಸಿದ್ದು, ಶೇ.98 ಪಡೆದಿದ್ದಾರೆ. ಶರಣ್ಯಾ ಪೋಷಕರಿಗೆ ಮಗಳು ಡಾಕ್ಟರ್‌ ಅಥವಾ ಎಂಜಿನಿಯರ್‌ ಆಗಬೇಕು ಎಂಬ ಆಸೆ ಇತ್ತಂತೆ. ಆದರೆ ಶರಣ್ಯಾ ಆಕ್ಟರ್ ಆಗಿದ್ದಾರೆ. ಇನ್ನು ಶರಣ್ಯಾ ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿದ್ದು, ಸದಾ ಫೋಟೋಶೂಟ್ ಮಾಡಿಸುತ್ತಿರುತ್ತಾರೆ. ಈ ಫೋಟೋಗಳನ್ನು ಅಪ್ ಲೋಡ್ ಮಾಡುತ್ತಲೇ ಇರುತ್ತಾರೆ.

    ಕಾಲೇಜು ದಿನಗಳಲ್ಲೇ ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟ ಶರಣ್ಯಾ ಶೆಟ್ಟಿ

    ಕಾಲೇಜು ದಿನಗಳಲ್ಲೇ ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟ ಶರಣ್ಯಾ ಶೆಟ್ಟಿ ಕ್ಯಾಟ್ ವಾಕ್ ಸೇರಿದಂತೆ ಎಲ್ಲವನ್ನೂ ಕಲಿತಿದ್ದರು. ಮಿಸ್ ಬೆಂಗಳೂರು ಸ್ಪರ್ಧೆಗೆ ಆಯ್ಕೆಯಾಗಿದ್ದರು. ನಂತರ ಮಿಸ್ ಇಂಡಿಯಾ 2018ರ ಫೈನಲ್‌ವರೆಗೂ ಶರಣ್ಯಾ ಸ್ಫರ್ಧೆ ಮಾಡಿದ್ದರು. ಬಳಿಕ 2019ರ ಮಿಸ್‌ಸೌತ್ ಇಂಡಿಯಾ ಕಿರೀಟವನ್ನು ಮುಡಿಗೇರಿಸಿಕೊಂಡರು. ಜೊತೆಗೆ ಮಿಸ್ ಕ್ವೀನ್ ಆಫ್ ಇಂಡಿಯಾ ಫೈನಲಿಸ್ಟ್ ಕೂಡಾ ಆಗಿದ್ದರು.

    ಇದನ್ನೂ ಓದಿ: Rachana Smith: ಕಮಲಿಯ ಅನಿಕಾ ಬಣ್ಣದ ಲೋಕಕ್ಕೆ ಬಂದು 9 ವರ್ಷ - ರಚನಾ ಸ್ಮಿತ್​ ರಿಯಲ್​ ಸ್ಟೋರಿ ಇದು

    ಆಲ್ಬಂ ಸಾಂಗ್ ಗಳಲ್ಲೂ ಬಣ್ಣ ಹಚ್ಚಿದ್ದಾರೆ ನಟಿ ಶರಣ್ಯಾ ಶೆಟ್ಟಿ

    ನಟಿ ಶರಣ್ಯಾ ಶೆಟ್ಟಿ ಅವರು ಕೇವಲ ಸಿನಿಮಾ, ಧಾರಾವಾಹಿಗಳಲ್ಲಿ ಅಷ್ಟೇ ಅಲ್ಲದೇ, ಆಲ್ಬಂ ಸಾಂಗ್ ಗಳಲ್ಲೂ ಬಣ್ಣ ಹಚ್ಚಿದ್ದಾರೆ. ಫ್ರೆಂಡ್ ಝೋನ್ಡ್ ಎಂಬ ಆಲ್ಬಂ ಸಾಂಗ್ ನಲ್ಲೂ ಕೂಡ ಕಾಣಿಸಿಕೊಂಡಿದ್ದಾರೆ. ಸದ್ಯ ಹಲವು ಸಿನಿಮಾಗಳಲ್ಲಿ ಬಣ್ಣ ಹಚ್ಚಿರುವ ಶರಣ್ಯ ಶೆಟ್ಟಿ ಅವರು ಪ್ಯಾರಲಲ್ ಯುನಿವರ್ಸ್ ಸೇರಿದಂತೆ ಇನ್ನೂ ಐದಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಶರಣ್ಯ ಅವರು ಅಭಿನಯಿಸಿರುವ ನಾಲ್ಕು ಚಿತ್ರಗಳು ರಿಲೀಸ್ ಗೆ ಸಜ್ಜಾಗಿವೆ. ಸ್ಫೂಕಿ ಕಾಲೇಜ್, ರವಿ ಬೋಪಣ್ಣ, ಪೆಂಟಗಾನ್ ಮತ್ತು ನಗುವಿನ ಹೂಗಳ ಮೇಲೆ ಚಿತ್ರಗಳು ಬಿಡುಗಡೆಯಾಗಬೇಕಿದೆ. ಈ ಚಿತ್ರಗಳ ಪೈಕಿ ರವಿ ಬೋಪಣ್ಣ ಚಿತ್ರದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಮಗಳ ಪಾತ್ರಕ್ಕೆ ಶರಣ್ಯ ಶೆಟ್ಟಿ ಬಣ್ಣ ಹಚ್ಚಿದ್ದಾರೆ.

    "1980" ಸಿನಿಮಾ ಮೂಲಕ ತಮ್ಮ ಚೊಚ್ಚಲ ಚಲನಚಿತ್ರದಲ್ಲಿ ‌ಇವರು ಕಾಣಿಸಿಕೊಂಡಿದ್ದಾರೆ. ಈ ಚೊಚ್ಚಲ ಸಿನಿಮಾದಲ್ಲಿ ಅವರು ಸಾನ್ವಿ ಪಾತ್ರವನ್ನು ನಿರ್ವಹಿಸಿ ಯಶಸ್ವಿಯಾಗಿದ್ದಾರೆ. ನಾಗರಾಜ್ ಬೇತೂರ್ ನಿರ್ದೇಶನದ "ಹುಟ್ಟು ಹಬ್ಬದ ಶುಭಶಯಗಳು" ಎಂಬ ಹಾಸ್ಯ-ನಾಟಕ ಚಿತ್ರದಲ್ಲೂ ಅವರು ನಟಿಸಿದ್ದಾರೆ.

    ಇದನ್ನೂ ಓದಿ: Sathya Serial: ಸತ್ಯಗೆ ಸುತ್ತಿಕೊಂಡ ಮದುವೆ ನಂಟು ಕಾರ್ತಿಕ್ ತಾಳಿ ಕಟ್ಟೋದೊಂದೆ ಬಾಕಿ!

    ಶರಣ್ಯಾರನ್ನು ಇಂದಿಗೂ ಸಾಹಿತ್ಯ ಹೆಸರಿನಲ್ಲೇ ಗುರುತಿಸುತ್ತಾರೆ

    ಗಟ್ಟಿಮೇಳ ಧಾರಾವಾಹಿಯಲ್ಲಿ ಸಾಹಿತ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ವಿಲನ್ ಪಾತ್ರಕ್ಕೆ ಬಣ್ಣ ಹಚ್ಚಿದ್ದ ಶರಣ್ಯಾರನ್ನು ಇಂದಿಗೂ ಸಾಹಿತ್ಯ ಹೆಸರಿನಲ್ಲೇ ಗುರುತಿಸುತ್ತಾರೆ. ಇನ್ನು ಶರಣ್ಯ ಅವರು ಗಟ್ಟಿಮೇಳ ಧಾರಾವಾಹಿ ಹೊರತು ಪಡಿಸಿ, ಮುದ್ದು ಲಕ್ಷ್ಮೀ, ಆಕಾಶ ದೀಪ ಸೇರಿದಂತೆ ಕೆಲ ಸೀರಿಯಲ್ ಗಳಲ್ಲಿ ನಟಿಸಿದ್ದಾರೆ. ಕಿರುತೆರೆಯಲ್ಲಿ ಹೆಚ್ಚು ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
    Published by:Swathi Nayak
    First published: