ಜೀ ಕನ್ನಡ (Zee Kannada) ವಾಹಿನಿಯಲ್ಲಿ ಪ್ರಸಾರಗೊಳ್ಳುತ್ತಿರುವ ಜನಪ್ರಿಯ ಧಾರಾವಾಹಿಗಳಲ್ಲಿ ಗಟ್ಟಿಮೇಳ (Gattimela) ಕೂಡ ಒಂದು. ರೌಡಿ ಬೇಬಿ ಅಮೂಲ್ಯ (Amulya) ನಟನೆಗೆ ಸೋಲದವರಿಲ್ಲ. ಪ್ರತಿದಿನ ಹೊಸ ಹೊಸ ಟ್ವಿಸ್ಟ್ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಿದೆ ಗಟ್ಟಿಮೇಳ ತಂಡ. ಸುಹಾಸಿನಿಯ ನಾಟಕವು ತೆರೆ ಬಿಡಲು ಇನ್ನೇನು ತುಂಬಾ ಸಮಯ ಇಲ್ಲ. ಮುಗ್ದೆ ಆರತಿಯನ್ನು ತಂಗಿ ಅಮೂಲ್ಯಳಿಂದ ದೂರ ಮಾಡಬೇಕೆಂದು ಹರಸಾಹಸಪಡುತ್ತಿದ್ದಳು ಸುಹಾಸಿನಿ (Suhasini) ಇದೀಗ ತಕ್ಕಮಟ್ಟಿಗೆ ಅದನ್ನು ಸಾಧಿಸಿ ಕೂಡ ಬಿಟ್ಟಿದ್ದಾಳೆ. ತನ್ನ ಅಕ್ಕನ ಮೇಲೆ ಬೆಟ್ಟದಷ್ಟು ಪ್ರೀತಿ ಇಟ್ಟುಕೊಂಡಿರುವ ಅಮೂಲ್ಯಾಳಿಗೆ ಆರತಿಯ ಈ ನಡವಳಿಕೆಯಿಂದ ಬೇಸರ ತಂದಿದೆ.
ತನ್ನ ಕುತಂತ್ರಕ್ಕೆ ಸುಹಾಸಿನಿ ಆರತಿಯನ್ನು ಗಾಳವಾಗಿ ಬಳಸಿಕೊಳ್ಳುತ್ತಿದ್ದಾಳೆ. ಹೌದು ಆರತಿಯ ಮುಗ್ಧತೆಯನ್ನು ಬಳಸಿಕೊಂಡು ಅಮೂಲ್ಯ- ವೇದಾಂತ್ ಮದುವೆಯನ್ನು ತಡೆಯಲು ಪ್ರಯತ್ನ ಪಟ್ಟಿದ್ದಳು ಆದರೆ ಅದೇಕೋ ಫಲಿಸಲಿಲ್ಲ.
ಇದೀಗ ಆರತಿ ಗರ್ಭಿಣಿ ಎಂದು ತಿಳಿದ ಬಳಿಕ ಮತ್ತೆ ಸುಹಾಸಿನಿ ತನ ನಾಟಕವನ್ನು ಮುಂದುವರಿಸಿದ್ದಾಳೆ. ಅನನಾಸು ಜ್ಯೂಸ್ ನೀಡಿ ಅಮೂಲ್ಯಾಳ ಮೇಲೆ ಕೆಟ್ಟ ಅಭಿಪ್ರಾಯ ಬರುವಂತೆ ಮಾಡಿದ್ದಳು ಸುಹಾಸಿನಿ. ಅದೇ ರೀತಿ ದೇವಸ್ಥಾನದಲ್ಲಿ ಕಾರ್ ಆಕ್ಸಿಡೆಂಟ್ ಮಾಡಲು ಪ್ರಯತ್ನಪಟ್ಟು ಅದನ್ನು ಅಮೂಲ್ಯಳಾ ಮೇಲೆ ಹಾಕಿದ್ದಾಳೆ.
ಅಕ್ಕ-ತಂಗಿ ಮಧ್ಯೆಯಿದ್ದ ಪ್ರೀತಿಯನ್ನು ದ್ವೇಷವಾಗಿ ಬದಲಾಯಿಸಿದ್ದಾಳೆ ಸುಹಾಸಿನಿ. ಅಕ್ಕ ಆರತಿಯ ನಡೆತೆಯಿಂದ ನೊಂದು ಹೋಗಿದ್ದಾಳೆ ಅಮೂಲ್ಯ. ಆದರೆ ಮನೆಯಲ್ಲಿ ವಿಕ್ರಾಂತ್ ಅಮೂಲ್ಯಾಳ ಪರವಾಗಿ ನಿಂತಿದ್ದಾನೆ.
ಇದನ್ನೂ ಓದಿ: Jothe Jotheyali: ಅಧರ್ಮದ ವಿರುದ್ಧ ಹೋರಾಡಲು ಜೊತೆಯಾದ ಅನು-ಮೀರಾ! ಇನ್ನೇನು ಕಾದಿದೆ ಆರ್ಯವರ್ಧನ್ಗೆ?
ಅಮೂಲ್ಯಾಳಿಗೆ ತಿಳಿದೆ ಬಿಟ್ಟಿತಾ ಸುಹಾಸಿನಿಯ ಕುತಂತ್ರ?
ಸುಹಾಸಿನಿ ಹಾಗೂ ಆರತಿ ರೂಮಿನಲ್ಲಿ ಮಾತನಾಡುತ್ತಿರುವುದನ್ನು ಕೇಳಿಸಿಕೊಂಡ ಅಮೂಲ್ಯಾಳಿಗೆ ನಡೆದೆಲ್ಲ ಘಟನೆಗೆ ಅತ್ತೆ ಸುಹಾಸಿನಿ ಗೆ ಕಾರಣ ಎಂದು ತಿಳಿದಿದೆ.
ಆರತಿಯ ಬಳಿ ತಂಗಿ ಅಮೂಲ್ಯ ಜೊತೆ ಸೇರಬೇಡ ನಿನಗೂ ನಿನ್ನ ಮಗುವಿಗೂ ಅವಳಿಂದ ಅಪಾಯ ತಪ್ಪಿದ್ದಲ್ಲ ಎಂದು ಇಲ್ಲಸಲ್ಲದನ್ನು ಆರತಿಯ ತಲೆಗೆ ತುಂಬಿಸುತ್ತಿದ್ದಾಳೆ ಸುಹಾಸಿನಿ.
ಸುಹಾಸಿನಿಯ ನಾಟಕಕ್ಕೆ ತೆರೆ ಬೀಳಬಹುದೇ?
ಸುಹಾಸಿನಿಯ ನಾಟಕಕ್ಕೆ ತೆರೆ ಬೀಳಲು ಇನ್ನೇನು ತುಂಬಾ ಸಮಯ ಬೇಡ. ವಿಕ್ರಾಂತ್ ಹಾಗೂ ಅಮೂಲ್ಯ ಸುಹಾಸಿನಿಯ ಕುತಂತ್ರ ಬುದ್ಧಿಯನ್ನು ವೇದಾಂತ್ ಗೆ ತಿಳಿಸಲು ಏನೆಲ್ಲಾ ಪ್ರಯತ್ನ ಮಾಡಿದ್ದರು ಸೋಲುತ್ತಿದ್ದಾರೆ. ಆದರೆ ಆಫೀಸ್ ನಲ್ಲಿ ವಿಕ್ರಾಂತ್ ಜೈಲಿಗೆ ಹೋಗಲು ಕಾರಣವಾದ ಲೇಡಿ ಬಗ್ಗೆ ತಿಳಿಯಲು ವೇದಾಂತ್ ಗುಟ್ಟಾಗಿ ಪ್ರಯತ್ನ ಮಾಡುತ್ತಿದ್ದಾನೆ.
ಇದನ್ನೂ ಓದಿ: Paaru Serial: ಧಾಮಿನಿಯ ಕುತಂತ್ರಕ್ಕೆ ಬಲಿಯಾಗುತ್ತಾ ಜನನಿ-ಪಾರು ಸಂಬಂಧ! ಪಾರು ಧಾರಾವಾಹಿಯಲ್ಲಿ ಇದೇನಿದು ಟ್ವಿಸ್ಟ್
ಧ್ರುವ ಮತ್ತು ಅದಿತಿ ಪ್ರೀತಿಯ ಅಧ್ಯಾಯ
ಇನ್ನು ಧ್ರುವ ಮತ್ತು ಅದಿತಿ ಪ್ರೀತಿಯ ಅಧ್ಯಾಯದ ಬಗ್ಗೆ ಹೇಳುವುದಾದರೆ ಧ್ರುವನಿಗೆ ಇಷ್ಟವಿರುವ ತಿಂಡಿ ಮಾಡಿ ಅಕ್ಕನ ಮನೆಗೆ ಬರುವ ನೆಪವಿಟ್ಟುಕೊಂಡು ಅದಿತಿ ಆಗಾಗ ಬಂದು ದ್ರುವನನ್ನು ಭೇಟಿಯಾಗುತ್ತಿದ್ದಾಳೆ.
ಮನೆಯಿಂದ ಕಾಲೇಜ್ ಗೆ ನಾಟಕ ಪ್ರಾಕ್ಟೀಸ್ ಮಾಡುವ ನೆಪ ಇಟ್ಟುಕೊಂಡು ಎರಡು ಗಂಟೆ ಮೊದಲೇ ಹೊರಟು ದ್ರುವನನ್ನು ಭೇಟಿಯಾಗುತ್ತಿದ್ದಾಳೆ ಅದಿತಿ.
ಕೋಮಾದಲ್ಲಿರುವ ಧ್ರುವನಿಗೆ ಈ ಬಗ್ಗೆ ಅರಿವಿಲ್ಲದಿದ್ದರೂ ಅದಿತಿ ಬಂದು ಹೋದ ನಂತರ ಅವನಲ್ಲೇನೋ ಬದಲಾವಣೆಯಾಗುತ್ತಿರುವುದನ್ನು ಗುರುತಿಸಿದ್ದಾಳೆ ವೈದೇಹಿ.
ಮಾವನ ಸ್ವಾಭಿಮಾನ ಕಂಡು ಹೆಮ್ಮೆಪಟ್ಟ ವೇದಾಂತ್
ಇತ್ತ ವೇದಾಂತ್ ಗೆ ತನ್ನ ಮಾವ ರಿಕ್ಷಾ ಓಡಿಸಿ ಜೀವನ ನಡೆಸುತ್ತಿದ್ದಾರೆ ಎಂಬ ಮುಚ್ಚಿಟ್ಟ ಸತ್ಯ ತಿಳಿದಿದೆ. ತನ್ನ ನಾಲ್ಕು ಹೆಣ್ಣು ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ನೀಡಿ ಅವರ ಭವಿಷ್ಯಕ್ಕಾಗಿ ಈ ಇಳಿ ವಯಸ್ಸಿನಲ್ಲೂ ದುಡಿಯುತ್ತಿರುವ ಮಾವನನ್ನು ಕಂಡು ವೇದಾಂತ್ ಖುಷಿಯಾಗಿದೆ.
ಇದರಿಂದ ಮಾವನ ಮೇಲಿನ ಅಭಿಮಾನ ಇನ್ನಷ್ಟು ಹೆಚ್ಚಾಗುವಂತೆ ಮಾಡಿದೆ. ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ