Reality Show: ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ವೇದಿಕೆಯಲ್ಲಿ ಅಪ್ಪಾಜಿಯನ್ನು ನೆನೆದು ಭಾವುಕರಾದ ಶಿವಣ್ಣ

ಜೀ ಕನ್ನಡ ವಾಹಿನಿಯಲ್ಲಿ ವಾರಂತ್ಯದಲ್ಲಿ ಪ್ರಸಾರಗೊಳ್ಳುವ ಕರ್ನಾಟಕ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಪ್ರೇಕ್ಷಕರಿಗೆ ಎಲ್ಲರಿಗೂ ಅಚ್ಚುಮೆಚ್ಚು. ರಿಯಾಲಿಟಿ ಶೋನಲ್ಲಿ ಕ್ರೇಜಿ ಕ್ವೀನ್ ರಕ್ಷಿತಾ, ಚಿನ್ನಿ ಮಾಸ್ಟರ್, ಅರ್ಜುನ್‌ ಜನ್ಯ ಅವರು ತೀರ್ಪುಗಾರರಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಶಿವರಾಜ್​ಕುಮಾರ್​​

ಶಿವರಾಜ್​ಕುಮಾರ್​​

 • Share this:
  ಜೀ ಕನ್ನಡ (Zee Kannada) ವಾಹಿನಿಯಲ್ಲಿ ವಾರಂತ್ಯದಲ್ಲಿ ಪ್ರಸಾರಗೊಳ್ಳುವ ಕರ್ನಾಟಕ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ (Dance Karnataka Dance) ಪ್ರೇಕ್ಷಕರಿಗೆ ಎಲ್ಲರಿಗೂ ಅಚ್ಚುಮೆಚ್ಚು. ಇದೀಗ ಈ ಸೀಸನ್ ಅಂತೂ ಇನ್ನು ವಿಶೇಷ ಹೌದು ಡಿಕೆಡಿ (DKD) ಯಲ್ಲಿ ಸೆಂಟರ್ ಆಫ್ ಅಟ್ರಾಕ್ಷನ್ ಆಗಿ ಸೆಂಚುರಿ ಸ್ಟಾರ್ ಶಿವಣ್ಣ (Shivanna) ಕಾಣಿಸಿಕೊಳ್ಳುತ್ತಿದ್ದಾರೆ. ಪ್ರತಿ ಶೋವನ್ನು ಕೂಡ ಶಿವಣ್ಣ ಮನಸ್ಪೂರ್ವಕವಾಗಿ ಮೆಚ್ಚಿ ಮಕ್ಕಳ ಪ್ರತಿಭೆಗೆ ಶಭಾಷ್ ಗಿರಿ ನೀಡುತ್ತಾ ಬಂದಿದ್ದಾರೆ. ಅಂತಹದ್ದೇ ಒಂದು ಅದ್ಭುತವಾದ ಪರ್ಫಾರ್ಮೆನ್ಸ್ ಈ ವಾರವೂ ಸ್ಪರ್ಧಿಗಳು ನೀಡಿ ಶಿವಣ್ಣನ ಪ್ರೀತಿಗೆ ಪಾತ್ರರಾಗಿದ್ದಾರೆ.

  ನಿನ್ನೆಯ ಸಂಚಿಕೆಯಲ್ಲಿ ರಣರಂಗ ಸಿನಿಮಾದ ಜಗವೇ ಒಂದು ರಣರಂಗ ಎಂಬ ಅರ್ಥಗರ್ಭಿತ ಆಕ್ರೋಶದ ಹಾಡಿಗೆ ಗಗನ್ ಹಾಗೂ ದಿಶಾ ಶಿವಣ್ಣ ಇದ್ದ ರೀತಿಯಲ್ಲಿ ಮಾಸ್ ಲುಕ್ ನಲ್ಲಿ ಎಂಟ್ರಿ ಕೊಟ್ಟಿದ್ದಾರೆ. ಈ ಹಾಡಿನಲ್ಲಿ ಶಿವಣ್ಣ ಕೋಪದಲ್ಲಿಯೇ ಅನ್ಯಾಯದ ವಿರುದ್ಧ ತನ್ನ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ ಅಷ್ಟೇ ಅಲ್ಲ ಈ ಹಾಡನ್ನು ಕೇಳುವಾಗ ಯಾರಿಗೆ ಆದರೂ ಎಕ್ಸ್ಟ್ರಾ ಎನರ್ಜಿ ಬರುವುದಂತೂ ಸುಳ್ಳಲ್ಲ.

  ಇದನ್ನೂ ಓದಿ: Sara Annaiah: ಕನ್ನಡತಿ ವರೂಧಿನಿ ಸೂಪರ್ ಪೋಸ್, ರಿಯಲ್​ ಲೈಫ್​ನಲ್ಲೂ ಸಾರಾ ಅಣ್ಣಯ್ಯ ಸಖತ್ ಸ್ಟೈಲಿಶ್

  ಅಪ್ಪಾಜಿಯ ಧ್ವನಿ ಕೇಳಿ ಭಾವುಕರಾದ ಶಿವಣ್ಣ

  ರಣರಂಗ ಸಿನಿಮಾದ ಈ ಹಾಡು ಹಂಸಲೇಖ ಅವರ ಸಂಗೀತ ನಿರ್ದೇಶನದಲ್ಲಿ ಅದ್ಭುತವಾಗಿ ಮೂಡಿ ಬಂದಿದೆ. ಅದ್ಭುತವಾದ ಹಾಡಿಗೆ ಡಾ.ರಾಜಕುಮಾರ್ ಅವರು ಧ್ವನಿಯಾಗಿದ್ದರು. ಈ ಅರ್ಥಗರ್ಭಿತ ಹಾಡಿಗೆ ಎಕ್ಸ್ಟ್ರಾ ಎನರ್ಜಿ ಬಂದಿರುವುದೇ ಅಣ್ಣಾವರ ಅದ್ಭುತ ಗತ್ತಿನ ಕಂಠದಿಂದ ಎಂದರೆ ತಪ್ಪಾಗಲಾರದು.

  ನಿನ್ನೆಯ ಸಂಚಿಕೆಯಲ್ಲಿ ಶಿವಣ್ಣ ಅಪ್ಪಾಜಿಯ ಈ ಹಾಡನ್ನು ಮತ್ತೆ ನೆನೆಸಿಕೊಂಡು ಭಾವುಕರಾಗಿದ್ದಾರೆ. ಇವತ್ತು ಅಪ್ಪಾಜಿಯನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಅವರ ಈ ಅದ್ಭುತವಾದ ಕಂಠವನ್ನು ಮತ್ತೆ ಮತ್ತೆ ಕೇಳಬೇಕು ಎಂದು ಅನಿಸುತ್ತದೆ ಈ ಹಾಡು ಅವರಿಗಾಗಿ ಬರೆದಂತಿದೆ ಎಂದು ಕೂಡ ಹೇಳಿದ್ದಾರೆ.  ವೇದಿಕೆ ಮೇಲೆ ಅಪ್ಪಾಜಿಯನ್ನು ನೆನೆದ ಶಿವಣ್ಣ ಅಪ್ಪಾಜಿಗಾಗಿ ನಿನ್ನಂತ ಅಪ್ಪ ಇಲ್ಲ ಎಂಬ ಹಾಡಿನ ಮೂಲಕ ಗೌರವ ಸಲ್ಲಿಸಿದ್ದಾರೆ.

  ಡಿಕೆಡಿ 6 ರಿಯಾಲಿಟಿ ಶೋನಲ್ಲಿ ಅಪ್ಪುಗೆ ವಿಭಿನ್ನ ರೀತಿಯಲ್ಲಿ ಗೌರವ

  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಗಲಿಕೆ ಬಳಿಕ ಎಲ್ಲಾ ಕಾರ್ಯಕ್ರಮಗಳಲ್ಲಿ ಅವರನ್ನು ನೆನಪಿಸಿಕೊಳ್ಳಲಾಗುತ್ತದೆ ಅದೇ ರೀತಿ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸೀಸನ್ 6 ರಿಯಾಲಿಟಿ ಶೋನಲ್ಲಿ ಅಪ್ಪುಗೆ ವಿಭಿನ್ನ ರೀತಿಯಲ್ಲಿ ಗೌರವ ಸಲ್ಲಿಸಲಾಗಿದೆ.

  ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸೀಸನ್ 6 ಶೋನ ವಿಜೇತರಿಗೆ ಅಪ್ಪು ಇರುವ ಟ್ರೋಫಿ ಸಿಗಲಿದೆ ಟ್ರೋಫಿಯನ್ನು ನಿನ್ನೆ ಸಂಚಿಕೆಯಲ್ಲಿ ಪುನೀತ್ ರಾಜಕುಮಾರ್ ಅವರ ಮುದ್ದಿನ ಅಣ್ಣ ಡಾ. ಶಿವರಾಜ್ ಕುಮಾರ್ ಅವರು ಅನಾವರಣ ಮಾಡಿದ್ದಾರೆ. ಪುನೀತ್ ಅಗಲಿಕೆ ಬಳಿಕ ಸಾರ್ವಜನಿಕವಾಗಿ ಇವರು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಅಲ್ಲದೆ ನಿನ್ನೆ ಸಂಚಿಕೆಯಲ್ಲಿ ಟ್ರೋಫಿ ನೋಡಿ ಬಹಳ ಬಾಹುಕರಾಗಿದ್ದಾರೆ ಸೆಂಚುರಿ ಸ್ಟಾರ್ ಶಿವಣ್ಣ.

  ಶಿವಣ್ಣ ಕೂಡ ವೇದಿಕೆಯಲ್ಲಿ‌ ಇದನ್ನು ಕಂಡು ಅಕ್ಷರಶಃ ಕುಗ್ಗಿ ಹೋದರು. ಶಿವಣ್ಣನ ದುಃಖ ಇಡೀ ಡಿಕೆಡಿ ಬಳಗದ ದುಃಖವಾಗಿತ್ತು. ಅಷ್ಟೇ ಅಲ್ಲ ಟ್ರೋಫಿಗೆ ಶಿವಣ್ಣ ಮುತ್ತಿಟ್ಟಾಗ ಇಡೀ ಕರುನಾಡಿಗೆ ದುಃಖ ಉಮ್ಮಳಿಸಿ ಬಂದಿತ್ತು ಎಂದರೆ ತಪ್ಪಾಗಲಾರದು.

  ಇದನ್ನೂ ಓದಿ: Sanjjanaa Galrani: ಸಂಜನಾ ಮುದ್ದು ಮಗನ ಹೆಸರೇನು ಗೊತ್ತಾ? ಈ ಕ್ಯೂಟ್ ಪುಟಾಣಿಯ ವಿಡಿಯೋ ನೀವು ನೋಡಿ

  ಹ್ಯಾಟ್ರಿಕ್ ಹೀರೋ ಶಿವ ರಾಜ್‌ಕುಮಾರ್ ಸ್ಪೆಷಲ್‌ ಜಡ್ಜ್‌

  ರಿಯಾಲಿಟಿ ಶೋನಲ್ಲಿ ಕ್ರೇಜಿ ಕ್ವೀನ್ ರಕ್ಷಿತಾ, ಚಿನ್ನಿ ಮಾಸ್ಟರ್, ಅರ್ಜುನ್‌ ಜನ್ಯ ಅವರು ತೀರ್ಪುಗಾರರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಕಾರ್ಯಕ್ರಮಕ್ಕೆ ಪವರ್ ಹೆಚ್ಚಿಸಲು ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅವರು ಸ್ಪೆಷಲ್‌ ಜಡ್ಜ್‌ ಆಗಿ ಭಾಗಿಯಾಗುತ್ತಿದ್ದಾರೆ.

  ಪುಟ್ಟ ಮಕ್ಕಳ ಡ್ಯಾನ್ಸ್‌ಯಿಂದ ಹಿಡಿದು ವಯಸ್ಸಾದವರು ಡ್ಯಾನ್ಸ್‌ ಮಾಡಿ ಎಂದು ವೇದಿಕೆ ಮೇಲೆ ಕರೆದರೆ ಶಿವಣ್ಣ ಮೊದಲು ಹೋಗುತ್ತಾರೆ. ಎಲ್ಲಾ ಜೋಡಿಗಳು ವಿಭಿನ್ನ ಐಡಿಯಾಗಳೊಂದಿಗೆ ಈ ವಾರದ ಎಪಿಸೋಡ್​ನಲ್ಲಿ ಪ್ರೇಕ್ಷಕರನ್ನು ಮನರಂಜಿಸಿದ್ದಾರೆ.
  Published by:Swathi Nayak
  First published: