ವೈವಿಧ್ಯಮಯ ಕಾರ್ಯಕ್ರಮಗಳಿಗೆ ಹೆಸರಾಗಿರುವ ಜೀ ಕನ್ನಡ ಈ ಬಾರಿ, ಕನ್ನಡ ಕಿರುತೆರೆಯಲ್ಲೇ ಮೊದಲ ಬಾರಿಗೆ ಭಗವಂತ ಮತ್ತು ಮನುಷ್ಯನ ಸಂಬಂಧದ ಕತೆಯನ್ನು ಹೇಳುತ್ತಿದೆ. ಜೀ ಕನ್ನಡದಲ್ಲಿ (Zee Kannada) ಮಾರ್ಚ್ 20 ದಿಂದ ಈ ಧಾರಾವಾಹಿ (Serial) ಶುರುವಾಗಿದೆ. ರಾತ್ರಿ 9.30ಕ್ಕೆ ಭೂಮಿಗೆ ಬಂದ ಭಗವಂತ (Bhoomige Banda Bhagavantha) ಧಾರಾವಾಹಿ ಪ್ರಸಾರವಾಗುತ್ತಿದೆ. ನಿರ್ದೇಶಕ ನವೀನ್ ಕೃಷ್ಣ ಈ ಧಾರಾವಾಹಿಯಲ್ಲಿ ನಟನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಭೂಮಿಗೆ ಬಂದ ಭಗವಂತ ವಿಶಿಷ್ಟ ಕಥಾಹಂದರ ಹೊಂದಿದ್ದು, ಮಧ್ಯಮ ವರ್ಗದ ಜನರ (People) ಕಷ್ಟ, ನಷ್ಟ, ಇಷ್ಟಗಳನ್ನು ಜತೆಗೆ ಅವರು ದೇವರನ್ನು (God) ನೋಡುವ ರೀತಿಯನ್ನು ಅನಾವರಣಗೊಂಡಿದೆ. ಆದ್ರೆ ಇದರ ಕೆಲ ದೃಶ್ಯಗಳು ಸಿನಿಮಾ ದೃಶ್ಯಗಳನ್ನು ಕಾಪಿ (Copy) ಮಾಡಿದಂತೆ ಇದೆ.
ಮಧ್ಯಮ ವರ್ಗದ ಭಾವನೆಗಳಿಗೆ ಕನ್ನಡಿ
ಈ ಧಾರಾವಾಹಿ ಮಧ್ಯಮ ವರ್ಗದ ಭಾವನೆಗಳಿಗೆ ಕನ್ನಡಿ ಹಿಡಿಯುವುದರ ಜತೆಗೆ, ದೈನಂದಿನ ಬದುಕಿನಲ್ಲಿ ಎದುರಾಗುವ ಅನೇಕ ಗೊಂದಲ , ಪ್ರಶ್ನೆಗಳಿಗೆ ಉತ್ತರ ಹುಡುಕುವ ಪ್ರಯತ್ನ ಮಾಡಿದೆ. ಮಧ್ಯಮ ವರ್ಗದ ಸೂಕ್ಷ್ಮ ಪ್ರಶ್ನೆಗಳಿಗೆ ಉತ್ತರ ನೀಡಲೆಂದೇ ಕಥಾನಾಯಕನ ಸ್ನೇಹಿತನಾಗಿ ಭಗವಂತ ಭೂಮಿಗೆ ಬರುತ್ತಾನೆ.
ದೊಡ್ಡ ತಾರಾ ಬಳಗ
ಖ್ಯಾತ ನಟ, ನಿರ್ದೇಶಕ ನವೀನ್ ಕೃಷ್ಣ, ನಟಿ ಕೃತ್ತಿಕಾ, ಹಿರಿಯ ನಟ ಉಮೇಶ್, ಬಾಲ ಕಲಾವಿದರಾದ ಅಂಕಿತಾ, ಡ್ರಾಮಾ ಜೂನಿಯರ್ಸ್ ಖ್ಯಾತಿಯ ಅನುರಾಗ್ ಮತ್ತು ಭಗವಂತನ ಪಾತ್ರದಲ್ಲಿ ಕಾರ್ತಿಕ್ ಸಾಮಗ ಕಾಣಿಸಿಕೊಂಡಿದ್ದಾರೆ.ಅಷ್ಟೇ ಅಲ್ಲದೆ ಎಮ್.ಎನ್.ಸುರೇಶ್, ಬೆಂಗಳೂರು ನಾಗೇಶ್, ಪವನ್, ಗೌತಮಿ ಸೇರಿದಂತೆ ದೊಡ್ಡ ತಾರಾ ಬಳಗ ಈ ಧಾರಾವಾಹಿಯಲ್ಲಿ ಕಾಣಿಸಿಕೊಂಡಿದೆ.
ಸಿನಿಮಾ ದೃಶ್ಯಗಳು ಕಾಪಿನಾ?
ಈ ಧಾರಾವಾಹಿ ಜನರಿಗೆ ಇಷ್ಟ ಆಗಿದೆ. ವಿಭಿನ್ನವಾಗಿಯೂ ಇದೆ. ಆದ್ರೆ ಧಾರಾವಾಹಿಯಲ್ಲಿ ಸಿನಿಮಾ ದೃಶ್ಯಗಳನ್ನು ಕಾಪಿ ಮಾಡಲಾಗುತ್ತಿದೆ ಎಂದು ಕೆಲ ಅಭಿಮಾನಿಗಳ ಅಭಿಪ್ರಾಯ. ನಿನ್ನೆ, ಮೊನ್ನೆ ಪ್ರಸಾರವಾಗ ಧಾರಾವಾಹಿ ದೃಶ್ಯಗಳು ಸಿನಿಮಾಗಳನ್ನು ನೆನೆಪು ಮಾಡಿವೆ. ಇದರಲ್ಲಿ ಹೊಸದೇನಿದೆ ಎಂದು ಅಭಿಮಾನಿಗಳು ಕೇಳ್ತಾ ಇದ್ದಾರೆ.
'ಸೂರ್ಯವಂಶ'ದ ಬಟ್ಟೆ ತರುವ ಸೀನ್
ವಿಷ್ಣುವರ್ಧನ್ ಅವರ ಅಭಿನಯದ ಸೂರ್ಯವಂಶ ಧಾರಾವಾಹಿಯಲ್ಲಿ ಗಂಡ ಹೆಂಡ್ತಿಗೆ, ಹೆಂಡ್ತಿ ಗಂಡನ ಬಟ್ಟೆಗೆ ತರುವ ಸೀನ್ ಇದೆ. ಅದೇ ರೀತಿ ಧಾರಾವಾಹಿಯಲ್ಲೂ ಶಿವಪ್ರಸಾದ್ ಮತ್ತು ಆತನ ಹೆಂಡ್ತಿ ಇಬ್ಬರು ಹೇಳದೇ ಒಬ್ಬರಿಗೊಬ್ಬರು ಬಟ್ಟೆ ತಂದಿದ್ದಾರೆ. ಅಲ್ಲದೇ ಸಿನಿಮಾ ರೀತಿಯಲ್ಲೇ ಇಬ್ಬರು ತಮ್ಮ ತಪ್ಪಿಗೆ ಕಿವಿ ಹಿಡಿದು ಬಸಿಗೆ ಹೊಡೆಯುತ್ತಾರೆ.
ಇದನ್ನೂ ಓದಿ: Bhoomige Banda Bhagavantha: ಮಾರ್ಚ್ 20ರಿಂದ 'ಭೂಮಿಗೆ ಬಂದ ಭಗವಂತ' ಧಾರಾವಾಹಿ, ದೇವರು-ಮನುಷ್ಯರ ನಂಟು ಇದು!
'ಶ್ರೀಮಂಜುನಾಥ' ಸಿನಿಮಾ ನೆನಪು
ಶ್ರೀಮಂಜುನಾಥ ಸಿನಿಮಾದಲ್ಲಿ ದೇವರು ಭಿಕ್ಷುಕನ ವೇಷದಲ್ಲಿ ಬರ್ತಾನೆ. ಅದೇ ರೀತಿ ಧಾರಾವಾಹಿಯಲ್ಲೂ ದೇವರು ಶಿವಪ್ರಸಾದ್ ನ ಮನೆಗೆ ಭಿಕ್ಷುಕನ ವೇಷದಲ್ಲಿ ಬರುತ್ತಾನೆ. ಮನೆ ಕೊಂಡ ಮೇಲೆ ಭಕ್ತ ಬದಲಾಗಿದ್ದಾನಾ ಎಂದು ಟೆಸ್ಟ್ ಮಾಡುತ್ತಿದ್ದಾನೆ. ಅದಕ್ಕೆ ಜನ ಯಾಕ್ ಸಿನಿಮಾ ದೃಶ್ಯ ತೆಗೆಯುತ್ತೀರಾ ಎಂದು ಕೇಳ್ತಾ ಇದ್ದಾರೆ.
ಇದನ್ನೂ ಓದಿ: Krishna-Milana: ಥೈಲ್ಯಾಂಡ್‍ನಲ್ಲಿ ಲವ್ ಬರ್ಡ್ಸ್! ಕೃಷ್ಣ-ಮಿಲನ ಜೋಡಿ ನೋಡಿ
ಈ ಧಾರಾವಾಹಿಯ ಶೀರ್ಷಿಕೆ ಗೀತೆಗೆ ಕಾರ್ತಿಕ್ ಶರ್ಮಾ ಸಂಗೀತ ಸಂಯೋಜನೆ ಮಾಡಿದ್ದು, ಸುಧೀಂದ್ರ ಭಾರದ್ವಾಜ್ ಮತ್ತು ರಾಘವೇಂದ್ರ ಸಿ ವಿ ಸಾಹಿತ್ಯ ರಚಿಸಿದ್ದಾರೆ. ಹೆಸರಾಂತ ಗಾಯಕ ಶಂಕರ್ ಮಹದೇವನ್ ಧ್ವನಿಯಾಗಿದ್ದಾರೆ. ಸದ್ಯ ಧಾರಾವಾಹಿ ಜನರನ್ನು ಹಿಡಿದಿಡುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ