Malathi Sar Deshpande: ಮಗಳಿಗೆ ದೋಸ್ತಿ ಎಂದು ಹೆಸರಿಟ್ಟ ಸತ್ಯ ಸೀರಿಯಲ್‍ನ ಸೀತಾ, ಕಾರಣವೇನು?

ಮಾಲತಿ  ಸರ್‌ದೇಶಪಾಂಡೆ

ಮಾಲತಿ  ಸರ್‌ದೇಶಪಾಂಡೆ

ಜೀವನದಲ್ಲಿ ಎಲ್ಲರ ಜೊತೆ ಸ್ನೇಹದಿಂದ ಇರುವು ಮುಖ್ಯ. ನಮ್ಮ ಮಗಳು ಎಲ್ಲರ ಜೊತೆ ಸಂತೋಷವಾಗಿ ಸ್ನೇಹದಿಂದ ಇರಲಿ ಎಂದು ಮಗಳಿಗೆ ದೋಸ್ತಿ ಎಂದು ಹೆಸರಿಟ್ಟಿದ್ದೇವೆ ಎಂದಿದ್ದಾರೆ ನಟಿ.

  • News18 Kannada
  • 3-MIN READ
  • Last Updated :
  • Karnataka, India
  • Share this:

    ಜೀ ಕನ್ನಡದಲ್ಲಿ (Zee Kannada) ರಾತ್ರಿ 9 ಗಂಟೆಗೆ ಪ್ರಸಾರವಾಗುವ ಸತ್ಯ (Sathya) ಸೀರಿಯಲ್ (Serial) ಎಲ್ಲರ ನೆಚ್ಚಿನ ಸೀರಿಯಲ್ ಹಲವು ತಿರುವುಗಳ ಮೂಲಕ ಅಭಿಮಾನಿಗಳನ್ನು ಹಿಡಿದಿಡುವಲ್ಲಿ ಯಶಸ್ವಿಯಾಗುತ್ತಿದೆ. ಸತ್ಯ ಧಾರಾವಾಹಿಯಲ್ಲಿ ಸತ್ಯಾಳಿಗೆ ಅತ್ತೆ ಆಗಿರು ಸೀತಾ (Seetha) ಪಾತ್ರವೂ ಅಷ್ಟೇ ಗತ್ತಿನಿಂದ ಕೂಡಿದೆ. ತನ್ನ ಮನೆಗೆ ತಮ್ಮ ಪದ್ದತಿ ಬಗ್ಗೆ ತಿಳಿದಿರುವ ಸೊಸೆಯನ್ನು ತರಬೇಕು ಎಂದುಕೊಂಡಿರುತ್ತಾಳೆ. ಆದ್ರೆ ಸತ್ಯ ಅವರ ಮನೆಗೆ ಸೊಸೆ ಆಗಿ ಬಂದಿರುತ್ತಾಳೆ. ಅದಕ್ಕೆ ಮಗ, ಸೊಸೆಗೆ ಡಿವೋರ್ಸ್ ಕೊಡಿಸಲು ಮುಂದಾಗಿದ್ದಾಳೆ. ಸೀತಾ ನಿಜವಾದ ಹೆಸರು ಮಾಲತಿ  ಸರ್‌ದೇಶಪಾಂಡೆ, ಹಲವು ಸಿನಿಮಾ, ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಈ ನಟಿ ತಮ್ಮ ಪಾತ್ರಕ್ಕೆ ಜೀವ ತುಂಬುತ್ತಾ, ಅದನ್ನು ಯಶಸ್ವಿಯಾಗಿಸುತ್ತಾರೆ. ಮಾಲತಿ  ಸರ್‌ದೇಶಪಾಂಡೆ ನಿಜ ಜೀವನದಲ್ಲಿ ತಮ್ಮ ಮಗಳಿಗೆ (Daughter) ದೋಸ್ತಿ (Dosthi) ಎಂದು ಹೆಸರಿಟ್ಟಿದ್ದಾರೆ.


    ಮಗಳಿಗೆ ದೋಸ್ತಿ ಎಂದು ಹೆಸರು
    ಸತ್ಯ ಧಾರಾವಾಹಿಯಲ್ಲಿ ಸ್ಟ್ರಿಕ್ಟ್ ಅತ್ತೆ ಆಗಿರುವ ಸೀತಾ ಅಂದ್ರೆ ಮಾಲತಿ  ಸರ್‌ದೇಶಪಾಂಡೆ ನಿಜ ಜೀವನದಲ್ಲಿ ತುಂಬಾ ಸರಳವಾಗಿರುತ್ತಾರೆ. ಎಲ್ಲರ ಬಳಿ ಆತ್ಮೀಯವಾಗಿರುತ್ತಾರೆ. ಅಲ್ಲದೇ ಇವರು ಈಗ ಸುದ್ದಿಯಲ್ಲಿರೋದು ದೋಸ್ತಿಯಿಂದ. ಮಾಲತಿ  ಸರ್‌ದೇಶಪಾಂಡೆ ಮಗಳಿಗೆ ದೋಸ್ತಿ ಎಂದು ಹೆಸರಿಟ್ಟಿದ್ದಾರೆ.


    ಸ್ನೇಹದಿಂದ ಇರಲಿ ಎಂದು ದೋಸ್ತಿ ಹೆಸರು
    ಜೀವನದಲ್ಲಿ ಎಲ್ಲರ ಜೊತೆ ಸ್ನೇಹದಿಂದ ಇರುವು ಮುಖ್ಯ. ನಮ್ಮ ಮಗಳು ಎಲ್ಲರ ಜೊತೆ ಸಂತೋಷವಾಗಿ ಸ್ನೇಹದಿಂದ ಇರಲಿ ಎಂದು ಮಗಳಿಗೆ ದೋಸ್ತಿ ಎಂದು ಹೆಸರಿಟ್ಟಿದ್ದೇವೆ. ಹೆಸರಿಗೆ ತಕ್ಕಂತೆ ನಮ್ಮ ಮಗಳು ಇದ್ದಾಳೆ. ಯಾರ ಮನಸ್ಸಿಗೂ ನೋವು ಮಾಡೋದಿಲ್ಲ. ಎಲ್ಲರ ಜೊತೆ ಆತ್ಮೀಯತೆಯಿಂದ ಇರುತ್ತಾಳೆ.


    ಇದನ್ನೂ ಓದಿ: Colors Kannada: ದೀಪಾವಳಿ ಹಬ್ಬಕ್ಕೆ ನಿಮ್ಮ ಮನೆಗೂ ಬರ್ತಾರೆ ಕಲರ್ಸ್ ತಾರೆಯರು! 


    ಮಗಳು ಬಂದ ಮೇಲೆ ಎಲ್ಲವೂ ಬದಲು
    ನಮ್ಮ ಮಗಳು ಹುಟ್ಟಿದ ಮೇಲೆ ನಮ್ಮ ಬದುಕೇ ಬದಲಾಯ್ತು. ಮಹಾಲಕ್ಷ್ಮಿ ಬಂದಂತೆ ಆಯ್ತು. ಅವಳು ಹುಟ್ಟಿದ ಮೇಲೆ ನಮಗೆ ಯಾವುದಕ್ಕೂ ಕಮ್ಮಿ ಇಲ್ಲ. ಮಗಳು ಇಲ್ಲ ಅಂದ್ರೆ, ಮನೆಯಲ್ಲಿ ಏನೋ ಕಳೆದುಕೊಂಡಂತೆ ಆಗುತ್ತೆ. ಅವಳೇ ನಮ್ಮ ಪಾಲಿಗೆ ಎಲ್ಲಾ ಎಂದು ನಟಿ ಮಾಲತಿ  ಸರ್‌ದೇಶಪಾಂಡೆ ಹೇಳಿದ್ದಾರೆ.


    Zee Kannada Serial Actress Malathi Sar Deshpande daughter name is Dosthi see reason
    ಮಾಲತಿ  ಸರ್‌ದೇಶಪಾಂಡೆ- ದೋಸ್ತಿ


    ಮಾಲತಿ ಮಗಳು ದೋಸ್ತಿ ಹೀಗೆ ಅಂದ್ರು
    ಪ್ರಪಂಚದಲ್ಲಿ ಅಮ್ಮ ಎನ್ನೋದು ಒಂದು ಪ್ರಶಸ್ತಿ ಇದ್ದಂತೆ. ಮುಂದಿನ ಜನ್ಮ ಅಂತ ಇದ್ರೆ, ನಾನು ಈ ತಾಯಿ ಹೊಟ್ಟೆಯಲ್ಲಿ ಹುಟ್ಟುತ್ತೇನೆ. ಶೂಟಿಂಗ್‍ನಲ್ಲಿ ಬ್ಯುಸಿ ಇದ್ದರೂ ಕೂಡ, ನಾನು ಊಟ ಮಾಡಿದ್ನಾ, ತಿಂಡಿ ತಿಂದ್ನಾ ಅಂತ ಕೇಳುತ್ತಾರೆ. ನನ್ನ ತುಂಬ ಕೇರ್ ಮಾಡುತ್ತಾಳೆ. ಅದಕ್ಕೆ ನಮ್ಮ ಅಮ್ಮ ಅಂದ್ರೆ ನನಗೆ ತುಂಬಾ ಇಷ್ಟ ಎಂದು ದೋಸ್ತಿ ಹೇಳಿದ್ದಾಳೆ.


    Zee Kannada Serial, Actress Malathi Sar Deshpande, Malathi Sar Deshpande daughter name is Dosthi, ಜೀ ಕನ್ನಡ ಧಾರಾವಾಹಿ, ನಟಿ ಮಾಲತಿ ಸಾರ್ ದೇಶಪಾಂಡೆ, ಮಾಲತಿ ಸಾರ್ ದೇಶಪಾಂಡೆ ಮಗಳ ಹೆಸರು ದೋಸ್ತಿ, Kannada news, Karnataka news,
    ಸತ್ಯ


    ರಂಗಭೂಮಿಯಲ್ಲಿ ಯಶವಂತ್ ಸರ್‍ದೇಶಪಾಂಡೆ ಮತ್ತು ಮಾಲತಿ  ಸರ್‌ದೇಶಪಾಂಡೆ ತುಂಬಾ ಹೆಸರು ಮಾಡಿದ್ದಾರೆ. ಕನ್ನಡದ ಸಾಕಷ್ಟು ಸಿನಿಮಾ, ಸೀರಿಯಲ್‍ಗಳಲ್ಲಿ ನಟಿಸಿದ್ದಾರೆ.


    ಇದನ್ನೂ ಓದಿ: BBK Season 09: ಸುದೀಪ್ ಇಲ್ಲದೆ ಎಲಿಮಿನೇಷನ್! ಮನೆಯಿಂದ ಹೊರ ಹೋಗೋ 4ನೇ ಸ್ಪರ್ಧಿ ಯಾರು?


    ಶ್ರೀರಸ್ತು ಶುಭಮಸ್ತು, ಸತ್ಯ, ಆಕಾಶದೀಪ ಧಾರಾವಾಹಿಗಳಲ್ಲಿ ಮಾಲತಿ  ಸರ್‌ದೇಶಪಾಂಡೆ ನಟಿಸಿದ್ದಾರೆ. ಸತ್ಯ ಧಾರಾವಾಹಿಯಲ್ಲಿ ಸ್ಟ್ರಿಕ್ಟ್ ಅತ್ತೆ ಆಗಿರುವ ಸೀತಾ ಅಂದ್ರೆ ಮಾಲತಿ ಸರ್‍ದೇಶಪಾಂಡೆ ನಿಜ ಜೀವನದಲ್ಲಿ ತುಂಬಾ ಸರಳವಾಗಿರುತ್ತಾರೆ. ಎಲ್ಲರ ಬಳಿ ಆತ್ಮೀಯವಾಗಿರುತ್ತಾರೆ.

    Published by:Savitha Savitha
    First published: