Sathya Serial: ಈ ಬಾರಿ ಗಲ್ಲಿ ಗಣೇಶ ಹಬ್ಬಕ್ಕೆ ಸತ್ಯಾ ಹೋಗಬಾರದಾ? ಬೇಸರದಲ್ಲಿದ್ದಾಳೆ ಲೇಡಿ ರಾಮಾಚಾರಿ!

ಸತ್ಯ ಲೈಫ್‌ನಲ್ಲಿ ಕಾರ್ತಿಕ್ ಜೊತೆ ನಡೆದ ಮದುವೆ ಎಂಬ ತಿರುವು ಎಲ್ಲವನ್ನೂ ಬದಲಾಯಿಸಿದೆ. ಪ್ರತಿ ವರ್ಷ ಗಣೇಶನ ಹಬ್ಬದಂದು ಏರಿಯಾ ಜನದ ಜೊತೆ ಖುಷಿಯಾಗಿರುತ್ತಿದ್ದ ಸತ್ಯಾ ಖುಷಿಗೆ ಈ ಬಾರಿ ಬ್ರೇಕ್ ಬಿದ್ದಿದೆ. ಅದ್ಯಾಕೆ ಅಂತ ನೋಡಿ...

ಸತ್ಯ

ಸತ್ಯ

  • Share this:
    ಜೀ ಕನ್ನಡದಲ್ಲಿ (Zee Kannada) ಪ್ರಸಾರವಾಗುತ್ತಿರುವ ಸತ್ಯ (Sathya) ಧಾರಾವಾಹಿ (Serial) ಬೇರೆ ಎಲ್ಲಾ ಧಾರವಾಹಿಗಳಿಗಿಂತ ವಿಭಿನ್ನವಾದ ಧಾರವಾಹಿ. ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತೆ. ನಟಿ ಅಂದ್ರೆ ಅಳು, ನೋವು, ಮನೆ, ಕೆಲಸ ಅಂತ ಇರುತ್ತೆ. ಆದ್ರೆ ಎಲ್ಲರಿಗೂ ಬೇರೆಯದ್ದೇ ರೀತಿ ನಿರೀಕ್ಷೆ ಹುಟ್ಟಿಸಿದ್ದ ಸತ್ಯ ಸೀರಿಯಲ್. ಯಾವನೋ ಅಲ್ಲ, ಯಾವಳೋ ಅನ್ನೋ ಮೂಲಕ ಕನ್ನಡಿಗರ ಮನಗೆದ್ದ ಧಾರಾವಾಹಿ. ರಫ್ ಅಂಡ್ ಟಫ್ ಮೂಲಕ ಹೆಣ್ಣು ಮಕ್ಕಳು ಈ ತರನೂ ಇರಬಹುದ ಎಂದು ತೋರಿಸಿಕೊಟ್ಟ ಹೊಸ ಕಲ್ಪನೆ. ಸತ್ಯ ಲೈಫ್ ನಲ್ಲಿ ಕಾರ್ತಿಕ್ ಜೊತೆ ನಡೆದ ಮದುವೆ ಎಂಬ ತಿರುವು ಎಲ್ಲವನ್ನೂ ಬದಲಾಯಿಸಿದೆ. ಪ್ರತಿ ವರ್ಷ ಗಣೇಶನ ಹಬ್ಬದಂದು ಏರಿಯಾ ಜನದ ಜೊತೆ ಖುಷಿಯಾಗಿರುತ್ತಿದ್ದ ಸತ್ಯಾ ಖುಷಿಗೆ ಈ ಬಾರಿ ಬ್ರೇಕ್ ಬಿದ್ದಿದೆ.

    ಸತ್ಯ ಬಾಳಲ್ಲಿ ಸಂಭ್ರಮ ತರಲಿಲ್ವಾ ಗಣೇಶ?
    ಸತ್ಯ ಸ್ಲಂನಲ್ಲಿ ಬೆಳೆದ ಹುಡುಗಿ. ಮೊದಲೇ ಹುಡುಗನ ರೀತಿ ನಡೆ, ನುಡಿ. ಏರಿಯಾದವರೆಲ್ಲಾ ಸೇರಿ ಸಂಭ್ರಮದಿಂದ ಗಣೇಶ ಹಬ್ಬವನ್ನು ಆಚರಣೆ ಮಾಡ್ತಾ ಇದ್ರು. ಹಬ್ಬದ ನೆಪದಲ್ಲಿ ಏರಿಯಾ ಜನರೆಲ್ಲಾ ಸೇರಿ, ತಾವು ಒಗ್ಗಟ್ಟಾಗಿ ಇದ್ದಾವೆ ಎಂದು ತೋರಿಸಿಕೊಳ್ತಾ ಇದ್ರು. ಆದ್ರೆ ಈ ಬಾರಿ ಆ ಸಂಭ್ರಮಕ್ಕೆಲ್ಲಾ ಬ್ರೇಕ್ ಬಿದ್ದಿದೆ. ಸತ್ಯ ಬೇಸರದಲ್ಲಿ ಇದ್ದಾಳೆ.

    ಮನೆಯಲ್ಲೇ ಹಬ್ಬ ಆಚರಣೆ ಮಾಡಿ ಎಂದ ಅತ್ತೆ ಸೀತಾ
    ಸತ್ಯ ತವರು ಮನೆಗೆ ಹೋಗಿ ಹಬ್ಬ ಮಾಡಲು ತುದಿಗಾಲಿನಲ್ಲಿ ನಿಂತಿದ್ದಾಳೆ. ಆದ್ರೆ ಅತ್ತೆ ಸೀತಾ ಎಲ್ಲವನ್ನೂ ತಡೆದಿದ್ದಾಳೆ. ಮನೆಯಲ್ಲೇ ನೀನು, ಕಾರ್ತಿಕ್ ಸೇರಿ ಹಬ್ಬ ಮಾಡಿ ಎಲ್ಲಿಗೂ ಹೋಗೋದು ಬೇಡ ಎಂದಿದ್ದಾಳೆ. ನೀನು ಕೋಟೆ ಮನೆ ಸೊಸೆ ಆಗಿ ಇದ್ದೀಯಾ ಮರೆಯಬೇಡ. ನಮ್ಮ ಆಚಾರ, ವಿಚಾರಕ್ಕೆ ತಕ್ಕಂತೆ ಇರು ಎಂದಿದ್ದಾಳೆ.

    ಇದನ್ನೂ ಓದಿ: Kendasampige: ಆಪರೇಷನ್​ಗೆ ಬೇಕು ಲಕ್ಷ ಲಕ್ಷ! ಸುಮಿ ಕೈಲಿ ಇದೆಲ್ಲಾ ಸಾಧ್ಯಾನಾ?

    ಮದುವೆ ಆಗಿ ಮೊದಲ ಹಬ್ಬ ಆದ್ರೂ ತವರಿಗೆ ಹೋಗುತ್ತಿಲ್ಲ
    ಮದುವೆ ಆದ ಹೊಸ ಜೋಡಿ ಮೊದಲ ಗೌರಿ-ಗಣೇಶನ ಹಬ್ಬವನ್ನು ತವರು ಮನೆಯಲ್ಲಿ ಮಾಡ್ತಾರೆ. ಸತ್ಯಾಗೂ ಅದು ಗೊತ್ತು. ಸತ್ಯ ಚಿಕ್ಕತ್ತೆ ಬಳಿ ನಾವು ಮೊದಲ ಹಬ್ಬಕ್ಕೆ ಹೋಗಬೇಕಲ್ವಾ ಎಂದು ಕೇಳುತ್ತಾಳೆ. ಅದಕ್ಕೆ ಅವಳು, ಇಲ್ಲ ಹಬ್ಬವನ್ನಿ ಇಲ್ಲೇ ಮಾಡಲು ಅಕ್ಕ ಹೇಳಿದ್ದಾಳೆ. ನಿಮ್ಮ ಮನೆಯವರು ಕಾಲ್ ಮಡಿದಗಲೂ ಇದನ್ನೇ ಹೇಳಿದ್ದಾರೆ. ನೀನು ಈ ಬಾರಿ ಇಲ್ಲೇ ಹಬ್ಬ ಮಾಡು ಎಂದಿದ್ದಾಳೆ.

    ಸತ್ಯ ಬಳಿ ಡಿವೋರ್ಸ್ ಪೇಪರ್ ಗೆ  ಸಹಿ ಮಾಡಿಸಿಕೊಂಡಿರುವ ಸೀತಾ
    ಸತ್ಯ ಗಂಡುಬೀರಿ ಥರ ಬೆಳೆದ ಹುಡುಗಿ. ಆಕೆಗೆ ಯಾವ ಸಂಪ್ರದಾಯಗಳು ಅಷ್ಟಾಗಿ ಗೊತ್ತಿಲ್ಲ. ಗ್ಯಾರೇಜ್ ನಡೆಸುತ್ತಿದ್ದವಳು. ಅಡುಗೆ ಮನೆಯಲ್ಲಿ ಅಡುಗೆ ಮಾಡಬೇಕು ಅಂದ್ರೆ ತುಂಬಾ ಕಷ್ಟ. ಸತ್ಯ ಮದುವೆಯಾಗಿ ಕಾರ್ತಿಕ್ ಮನೆಗೆ ಬಂದಿರೋದು ಅತ್ತೆ ಸೀತಾಗೆ ಸ್ವಲ್ಪವೂ ಇಷ್ಟ ಇಲ್ಲ. ಅವಳಿಗೆ ಆಚಾರ ವಿಚಾರ ಏನೂ ಗೊತ್ತಿಲ್ಲ ಎಂದು ಪದೇ ಪದೇ ಅವಮಾನ ಮಾಡುತ್ತಲೇ ಇದ್ದಾಳೆ. ಸತ್ಯ ಏನೇ ಕೆಲಸ ಮಾಡಿದ್ರೂ ತಪ್ಪು ಕಂಡು ಹಿಡಿದು ಬೈಯ್ತಾಳೆ. ಅಲ್ಲದೇ ಡಿವೋರ್ಸ್  ಪೇಪರ್ ಗೆ ಸೈನ್ ಹಾಕಿಸಿಕೊಂಡಿದ್ದಾಳೆ.

    ಇದನ್ನೂ ಓದಿ: Kannadathi: ಅಮ್ಮಮ್ಮನ ಮರೆವಿನ ಕಾಯಿಲೆ; ನಿಜ ಗೊತ್ತಾದ್ರೆ ಹರ್ಷನಿಗೆ ಶಾಕ್!

    ಬದಲಾಗುತ್ತಿರುವ ಸತ್ಯಾಗೆ ಸಂಕಷ್ಟ!
    ಗಂಡ ಮತ್ತು ಗಂಡನ ಮನೆಯವರಿಗಾಗಿ ಸತ್ಯ ಎಲ್ಲವನ್ನು ಕಲಿತು ಬದಲಾಗುವ ಸಮಯದಲ್ಲಿ ಅತ್ತೆ ಸೀತಾ ಡಿವೋರ್ಸ್ ಪೇಪರ್ ಮುಂದಿಟ್ಟಿದ್ದಳು. ಸಹಿ ಮಾಡಿರುವ ಸತ್ಯಾಗೆ ಮುಂದೇನು ಮಾಡಬೇಕು ಎಂದು ತಿಳಿಯದೇ ಕೊರಗುತ್ತಿದ್ದಾಳೆ. ರಾತ್ರಿಯೆಲ್ಲಾ ನಿದ್ದೆ ಮಾಡದೇ ಒದ್ದಾಡುತ್ತಿದ್ದಾಳೆ. ಎಲ್ಲವನ್ನೂ ತಾನೇ ಅನುಭವಿಸುತ್ತಿದ್ದಾಳೆ.

    ಈಗ ಗಣೇಶನ ಹಬ್ಬಕ್ಕೂ ಹೋಗಲು ಚಾನ್ಸ್ ಸಿಗುತ್ತಿಲ್ಲ. ಅದಕ್ಕೆ ಸತ್ಯ ಬೇಸರ ಮಾಡಿಕೊಂಡಿದ್ದಾಳೆ. ಮುಂದೆ ಏನ್ ಆಗುತ್ತೆ ಅಂತ ನೋಡೋಕೆ ಸತ್ಯ ಸೀರಿಯಲ್ ನೋಡಬೇಕು.
    Published by:Savitha Savitha
    First published: