ಕನ್ನಡದ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ‘ಸತ್ಯ‘ (Sathya) ಸೀರಿಯಲ್ ನಲ್ಲಿ (Serial) ಬಿಗ್ ಟ್ವಿಸ್ಟ್ (Big Twist) ಸಿಕ್ಕಿದೆ. ಮದುವೆಯ ಸಂಭ್ರಮದಲ್ಲಿರುವವರಿಗೆ ದೊಡ್ಡ ಆಘಾತ ಉಂಟಾಗಿದೆ. ಮದುವೆಯ ಮಂಟಪಕ್ಕೆ ಬರಬೇಕಿದ್ದ ಮಧುಮಗಳು ಕಾಣೆಯಾಗಿದ್ದಾರೆ. ರಾಮಚಂದ್ರ ರಾಯರು (Ramachandra Rayaru) ಸತ್ಯಳನ್ನು ಮನೆಗೆ ತುಂಬಿಸಿಕೊಳ್ಳಲು ಮುಂದಾಗಿದ್ದಾರೆ. ಇದೇ ವಿಚಾರವಾಗಿ ಸತ್ಯ ಅವರ ಮನೆಯವರ ಬಳಿ ಮಾತನಾಡಲು ಬಂದಿದ್ದಾರೆ. ನಿಮ್ಮ ಮೊಮ್ಮೊಗಳನ್ನ ನಮ್ಮ ಮನೆ ತುಂಬಿಸಿಕೊಳ್ಳುತ್ತೀನಿ ಎಂದು ಮಾತು ಕೊಟ್ಟಿದ್ದೀನಿ. ಈಗಲೂ ಆ ಮಾತನ್ನು ಉಳಿಸಿಕೊಳ್ಳೋದಕ್ಕೆ ಬಂದಿದ್ದೀನಿ ಎಂದು ರಾಮಚಂದ್ರ ರಾಯರು ಹೇಳಿದ್ದಾರೆ.
ಕಣ್ಣೀರು ಹಾಕುತ್ತಿರುವ ಜಾನಕಿ, ಗಿರಿಜಮ್ಮ!
ಇತ್ತ ಜಾನಕಿ ಹಾಗೂ ಗಿರಿಜಮ್ಮ ನೊಂದುಕೊಂಡಿರುತ್ತಾರೆ. ಸತ್ಯ ಸಮಾಧಾನ ಮಾಡುತ್ತಿರುತ್ತಾಳೆ. ಆದರೆ ಜಾನಕಿ, ಇಲ್ಲ ಸತ್ಯ, ಒಬ್ಬ ಮಗಳಿಗೋಸ್ಕರ ಮತ್ತೊಬ್ಬಳು ಮಗಳ ಬಾಳನ್ನು ಕತ್ತಲೆಗೆ ದೂಡಿ ತಪ್ಪು ಮಾಡಿದ್ವಿ. ಆದರೆ ಆ ದೇವರು ನಮಗೆ ಸರಿಯಾಗೇ ಪಾಠ ಕಲಿಸಿದ್ದಾನೆ. ನಡೀರಿ ಬೀಗರು ಬರುವ ಮುಂಚೆ ಹೊರಟು ಬಿಡೋಣ. ಇನ್ನು ಹೆಚ್ಚು ಹೊತ್ತು ನಾವು ಇಲ್ಲಿರುವುದು ಬೇಡ ಎಂದು ಜಾನಕಿ ಹೇಳುತ್ತಾಳೆ. ಅಷ್ಟರಲ್ಲಿ ರಾಮಚಂದ್ರ ರಾಯರು ಬಂದು, ಕಣ್ತಪ್ಪಿಸಿ ಹೋಗಬೇಕು ಎಂದು ಕೊಂಡಿದ್ದೀರಾ. ಎಲ್ಲಿಗೆ ಹೊರಟಿದ್ದೀರಾ ಎಂದು ರಾಮಚಂದ್ರ ರಾಯರು ಕೇಳುತ್ತಾರೆ. ಆಗ ಜಾನಕಿ ಹಾಗೂ ಗಿರಿಜಮ್ಮ ಇನ್ನಿಲ್ಲಿದ್ದು ನಾವೇನು ಮಾಡೋದು, ನಿಮ್ಮ ಮನೆ ಆಸೆಪಟ್ಟು ತಪ್ಪು ಮಾಡಿದ್ವಿ ಎಂದು ಕ್ಷಮೆ ಕೇಳುತ್ತಾರೆ.
ಆಗ ರಾಮಚಂದ್ರ ರಾಯರು ಇಟ್ಟ ಮುಹೂರ್ತದಲ್ಲೇ ಮದುವೆ ನಡೆಯುತ್ತೆ ಗಂಡು-ಹೆಣ್ಣಿಗೆ ಆಶೀರ್ವಾದ ಮಾಡಿನೇ ಹೋಗಬೇಕು ಎನ್ನುತ್ತಾರೆ. ನಡೆದ ಎಲ್ಲಾ ಘಟನೆಗಳು ನಾವೆಲ್ಲಾ ನೆಪವಷ್ಟೇ. ನಿಮ್ಮ ಮೊಮ್ಮೊಗಳನ್ನು ನಮ್ಮ ಮನೆ ತುಂಬಿಸಿಕೊಳ್ಳುತ್ತೀನಿ ಎಂದು ಮಾತು ಕೊಟ್ಟಿದ್ದೀನಿ. ಈಗಲೂ ಆ ಮಾತನ್ನು ಉಳಿಸಿಕೊಳ್ಳೋದಕ್ಕೆ ಬಂದಿದ್ದೀನಿ ಎಂದು ರಾಮಚಂದ್ರ ರಾಯರು ಹೇಳುತ್ತಾರೆ. ಅಲ್ಲಿಗೆ ಸತ್ಯ ಹಾಗೂ ಕಾರ್ತಿಕ್ ಮದುವೆ ನಡೆಯೋದು ಪಕ್ಕಾ ಆಗಿದೆ.
ಗಿರಿಜಮ್ಮ ರಾಮಚಂದ್ರ ಅವರ ಮಾತನ್ನು ಕೇಳಿ ಶಾಕ್
ಗಿರಿಜಮ್ಮ ರಾಮಚಂದ್ರ ಅವರ ಮಾತನ್ನು ಕೇಳಿ ಶಾಕ್ ಆಗುತ್ತಾರೆ. ರಾಯರೇ ನೀವಾ ಈ ಮಾತು ಹೇಳುತ್ತಿರುವುದು ನನಗೆ ನಂಬೋದಕ್ಕೆ ಆಗುತ್ತಿಲ್ಲ ಎನ್ನುತ್ತಾಳೆ. ಜಾನಕಿ ಖುಷಿ ಪಟ್ಟು ಇದಕ್ಕಿಂತ ಅದೃಷ್ಟವೇನಿದೆ. ನಮಗೇನೋ ಒಪ್ಪಿಗೆ ಇದೆ. ಆದರೆ ಸತ್ಯ ಇದಕ್ಕೆ ಒಪ್ಪಬೇಕು ಅಷ್ಟೇ. ನಮ್ಮ ಸತ್ಯ ಯಾವ ನಿರ್ಧಾರ ತೆಗೆದುಕೊಳ್ಳುತ್ತಾಳೋ. ಅದೇ ನಮ್ಮ ನಿರ್ಧಾರ ಎನ್ನುತ್ತಾಳೆ. ಇದಕ್ಕೆ ರಾಮಚಂದ್ರರಾಯರು, ಅಮ್ಮ ಇದು ನಮ್ಮ ಗುರುಗಳು ಹೇಳಿರೋದು, ಈ ಮದುವೆ ದೈವ ಲಿಖಿತ. ಅದಕ್ಕೆ ನಮ್ಮ ಕೈ ಮೀರಿ ಇಷ್ಟೆಲ್ಲಾ ನಡೆದಿದ್ದು. ಈಗ ಸತ್ಯ ಒಪ್ಪಿ ಮದುವೆಯಾದರೆ ಗುರುಗಳ ಮಾತನ್ನು ಉಳಿಸಿಕೊಳ್ಳಬಹುದು. ಏನಮ್ಮ ನನ್ನ ಮಗ ಕಾರ್ತಿಕ್ನ ಮದುವೆಯಾಗುತ್ತೀಯಾ ಸತ್ಯ ಎಂದು ಕೇಳುತ್ತಾರೆ.
ಅದಕ್ಕೆ ಸತ್ಯ ಶಾಕ್ ಆಗಿ ನಿಂತಿರುತ್ತಾಳೆ. ಗಿರಿಜಮ್ಮ ಇದಕ್ಕಿಂದ ಅವಕಾಶ ಇನ್ನೊಮ್ಮೆ ಸಿಗೋದಿಲ್ಲ ಒಪ್ಪಿಕೋ ಸತ್ಯ. ಈ ಮೂಲಕನಾದರೂ ನಿನ್ನ ಪ್ರೀತಿ ಸಿಗುತ್ತೆ. ಒಪ್ಪಿಕೊಂಡು ಬಿಡು ಎನ್ನುತ್ತಾರೆ. ಜಾನಕಿ ಹೀಗಾದರೂ ನಿನಗೆ ನ್ಯಾಯ ಸಿಗುತ್ತೆ. ಇಲ್ಲ ಅನ್ನಬೇಡ ಒಪ್ಪಿಕೊಂಡು ಬಿಡಮ್ಮ ಎಂದು ಹೇಳುತ್ತಾಳೆ. ರಾಮಚಂದ್ರ ರಾಯರು, ಯಾಕಮ್ಮ ಸತ್ಯ ಸುಮ್ಮನಿದ್ದೀಯಾ.? ನಿನಗೆ ಕಾರ್ತಿಕ್ ನನ್ನ ಮದುವೆಯಾಗಲು ಒಪ್ಪಿಗೆ ತಾನೇ. ಸತ್ಯ ನಿನ್ನ ನಿರ್ಧಾರ ಏನು ಎಂದು ಹೇಳಮ್ಮ ಎಂದು ಕೇಳುತ್ತಾರೆ. ಆದರೆ ಸತ್ಯ, ಕ್ಷಮಿಸಿ ರಾಯರೇ ನಾನು ಕಾರ್ತಿಕ್ನ ಮದುವೆಯಾಗುವುದಿಲ್ಲ ಎಂದು ಹೇಳಿ ಅಲ್ಲಿಂದ ಹೊರಡುತ್ತಾಳೆ. ಆಗ ಜಾನಕಿ, ಗಿರಿಜಮ್ಮ ಹಾಗೂ ರಾಮಚಂದ್ರ ರಾಯರು ಶಾಕ್ ಆಗುತ್ತಾರೆ.
Published by:Swathi Nayak
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ