• Home
  • »
  • News
  • »
  • entertainment
  • »
  • Sathya: ದಿವ್ಯಾಗೆ ಬಾಲನ ವಂಚನೆ ಗೊತ್ತಾಗ್ತಿಲ್ವಾ? ಅಕ್ಕನ ಜೀವನದ ಬಗ್ಗೆ ಸತ್ಯಾಗೆ ಹೆಚ್ಚಿದ ಚಿಂತೆ!

Sathya: ದಿವ್ಯಾಗೆ ಬಾಲನ ವಂಚನೆ ಗೊತ್ತಾಗ್ತಿಲ್ವಾ? ಅಕ್ಕನ ಜೀವನದ ಬಗ್ಗೆ ಸತ್ಯಾಗೆ ಹೆಚ್ಚಿದ ಚಿಂತೆ!

ದಿವ್ಯಾ-ಬಾಲ

ದಿವ್ಯಾ-ಬಾಲ

ಸತ್ಯಾಗೆ ಬಾಲನ ಬಗ್ಗೆ ಚೆನ್ನಾಗಿ ಗೊತ್ತು. ಅವನು ಮೋಸಗಾರ. ವಂಚನೆ ಮಾಡಿ ದಿವ್ಯಾಳನ್ನು ಮದುವೆ ಆಗಿದ್ದಾನೆ. ಈ ಹಿಂದೆ ಸತ್ಯಾನೇ ಬಾಲನನ್ನು ಜೈಲಿಗೆ ಹಾಕಿಸಿದ್ದಳು. ಅದನ್ನು ಹೇಳಿದ್ರೂ ದಿವ್ಯಾ ನಂಬ್ತಿಲ್ಲ.

  • News18 Kannada
  • Last Updated :
  • Karnataka, India
  • Share this:

    ಸತ್ಯ (Sathya) ಧಾರಾವಾಹಿ  (Serial) ಜೀ ಕನ್ನಡದಲ್ಲಿ (Zee Kannada) ಪ್ರಸಾರವಾಗುತ್ತಿರು ಜನಪ್ರಿಯ ಸೀರಿಯಲ್. ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತೆ. ಗಂಡು ಬೀರಿ ತರ ಇರುವ ಸತ್ಯಳನ್ನು ನೋಡಲು ಅದೆಷೋ ಅಭಿಮಾನಿಗಳು ಕಾಯ್ತಾ ಇರುತ್ತಾರೆ. ತನ್ನ ವಿಭಿನ್ನ ಕಥೆಯ ಮೂಲಕ ಜನರ ಮನಸ್ಸು ಗೆಲ್ಲುವಲ್ಲಿ ಧಾರಾವಾಹಿ ಯಶಸ್ವಿಯಾಗಿದೆ. ಆದ್ರೆ ಸತ್ಯಾಳ ಬಾಳಲ್ಲಿ ನಡೆದ ಮದುವೆ ಎಂಬ ತಿರುವಿನಲ್ಲಿ ಎಲ್ಲವೂ ಬದಲಾಗಿದೆ. ಪ್ಯಾಂಟ್, ಶರ್ಟ್ ಹಾಕುತ್ತಿದ್ದ ಸತ್ಯ ಸೀರೆ ಉಡುತ್ತಿದ್ದಾಳೆ. ಗಂಡ, ಅತ್ತೆ ಮನಸ್ಸು ಗೆಲ್ಲಲು ಹರಸಾಹಸ ಪಡುತ್ತಿದ್ದಾಳೆ. ಅವರ ಮನೆ ಸಂಸ್ಕøತಿ ಕಲಿಯುತ್ತಿದ್ದಾಳೆ. ಅಡುಗೆ ಕಲಿಯುತ್ತಿದ್ದಾಳೆ. ಇತ್ತ ತವರು ಮನೆಗೆ ಬಂದಿರುವ ಅಕ್ಕ ದಿವ್ಯಾ (Divya) ಮತ್ತೆ ತನ್ನ ಕುತಂತ್ರ ಬುದ್ಧಿ ತೋರಲು ಮುಂದಾಗಿದ್ದಾಳೆ. ಸತ್ಯಾಗೆ ದಿವ್ಯಾಳ ಜೀವನ (Life) ಬಗ್ಗೆ ಚಿಂತೆಯಾಗಿದೆ.


    ಬಾಲನನ್ನು ಮದುವೆಯಾದ ದಿವ್ಯಾ
    ಸತ್ಯ ಅಕ್ಕ ದಿವ್ಯಾ. ಮನೆಯವರೆಲ್ಲಾ ಸೇರಿ ದಿವ್ಯಾ ಮತ್ತು ಕಾರ್ತಿಕ್ ನ ಮದುವೆ ನಿಶ್ಚಯ ಮಾಡಿರುತ್ತಾರೆ. ಅದಕ್ಕೆ ಎಲ್ಲ ಸಿದ್ಧತೆಯೂ ಆಗಿರುತ್ತದೆ. ಬೆಳಗ್ಗೆ ಮದುವೆ ಇರಬೇಕಾದ್ರೆ, ರಾತ್ರಿ ದಿವ್ಯಾ ಓಡಿ ಹೋಗಿರುತ್ತಾಳೆ. ಆಗ ಕಾರ್ತಿಕ್ ಅಪ್ಪ ಕೇಳಿಕೊಂಡ್ರು ಅಂತ ಸತ್ಯ ಕಾರ್ತಿಕ್‍ನನ್ನು ಮದುವೆ ಆಗಿರುತ್ತಾಳೆ. ಮದುವೆ ಮನೆಯಿಂದ ಓಡಿ ಹೋಗಿದ್ದ ದಿವ್ಯಾ ಈಗ ಮತ್ತೆ ಮನೆಗೆ ವಾಪಸ್ ಬಂದಿದ್ದಾಳೆ.


    ಮೋಸಗಾರ ಬಾಲ
    ದಿವ್ಯಾ, ಬಾಲ ಎನ್ನುವ ಹುಡುಗನನ್ನು ಪ್ರೀತಿ ಮಾಡ್ತಾ ಇರ್ತಾಳೆ. ಅವನು ತುಂಬಾ ಶ್ರೀಮಂತ ಎಂದುಕೊಂಡಿದ್ದಾಳೆ. ಆದ್ರೆ ಬಾಲ ಶ್ರೀಮಂತ ಅಲ್ಲ ದಿವ್ಯಾಳಿಗಾಗಿ ಸುಳ್ಳು ಹೇಳಿರ್ತಾನೆ. ಏನೇನು ಸುಳ್ಳು ಹೇಳಿ ದಿವ್ಯಾಳನ್ನು ಹಳ್ಳಿಗೆ ಕರೆದುಕೊಂಡು ಹೋಗಿರುತ್ತಾನೆ. ಅಲ್ಲಿ ವಾಸಿಸಲು ಆಗದೇ ದಿವ್ಯಾ ಬಾಲನಿಗೂ ಹೇಳದೇ, ಮನೆಗೆ ವಾಪಸ್ ಬಂದಿದ್ದಾಳೆ.


    ಇದನ್ನೂ ಓದಿ: Lakshana: ಶ್ವೇತಾಗೆ ಪಾಠ ಕಲಿಸಿದ ನಕ್ಷತ್ರಾ, ತಿರುಗುಬಾಣವಾಯ್ತು ಶ್ವೇತಾ ಕುತಂತ್ರ


    ಅಕ್ಕನ ಜೀವನದ ಬಗ್ಗೆ ಸತ್ಯಾಗೆ ಹೆಚ್ಚಾದ ಚಿಂತೆ!
    ಸತ್ಯಾಗೆ ಬಾಲನ ಬಗ್ಗೆ ಚೆನ್ನಾಗಿ ಗೊತ್ತು. ಅವನು ಮೋಸಗಾರ. ವಂಚನೆ ಮಾಡಿ ದಿವ್ಯಾಳನ್ನು ಮದುವೆ ಆಗಿದ್ದಾನೆ. ಈ ಹಿಂದೆ ಸತ್ಯಾನೇ ಬಾಲನನ್ನು ಜೈಲಿಗೆ ಹಾಕಿಸಿದ್ದಳು. ಅದನ್ನು ಹೇಳಿದ್ರೂ ದಿವ್ಯಾ ನಂಬ್ತಿಲ್ಲ. ಸತ್ಯ ತನ್ನ ಲೈಫ್ ನೋಡಿ ಹೊಟ್ಟೆ ಉರಿ ಪಡುತ್ತಿದ್ದಾಳೆ ಎಂದು ಕೊಳ್ತಿದ್ದಾಳೆ. ಸತ್ಯಾಗೆ ತನ್ನ ಅಕ್ಕ ದಿವ್ಯಾನ ಜೀವನ ಹಾಳಾಗುತ್ತೆ ಅನ್ನೋ ಚಿಂತೆ ಹೆಚ್ಚಾಗಿದೆ.


    Zee Kannada serial, Kannada serial, Sathya Kannada serial, Sathya serial Kannada cast, Sathya sister married person is not good, ಸತ್ಯ ಧಾರಾವಾಹಿ, ದಿವ್ಯಾಗೆ ಬಾಲನ ವಂಚನೆ ಗೊತ್ತಾಗ್ತಿಲ್ವಾ?, ಅಕ್ಕನ ಜೀವನದ ಬಗ್ಗೆ ಸತ್ಯಾಗೆ ಹೆಚ್ಚಾದ ಚಿಂತೆ, ಜೀ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಗಳು, Kannada news, Karnataka news,
    ದಿವ್ಯಾ


    ಕೀರ್ತನಾಗೆ ಬ್ಲ್ಯಾಕ್‍ಮೇಲ್
    ದಿವ್ಯಾ ಮನೆಗೆ ಬಾಲನ್ನು ಬಂದಿದ್ದಾನೆ. ಅಲ್ಲಿಗೆ ಬಂದಿರುವ ಬಾಲ ಕಾರ್ತಿಕ್ ಅಕ್ಕ ಕೀರ್ತನಾಳನ್ನು ಬ್ಲ್ಯಾಕ್ ಮೇಲ್ ಮಾಡ್ತಾ ಇದ್ದಾನೆ. ನನಗೆ ದುಡ್ಡು ಬೇಕು ಕೊಡು ಎನ್ನುತ್ತಾನೆ. ಅದಕ್ಕೆ ಕೀರ್ತನಾ ಇಲ್ಲ ಎನ್ನುತ್ತಾಳೆ. ಅದಕ್ಕೆ ಬಾಲ ನೀನು ದುಡ್ಡು ಕೊಡದಿದ್ದರೆ, ನಾನು ಓಡಿ ಹೋಗಲು ಸಹಾಯ ಮಾಡಿದ್ದು ಕೀರ್ತನಾ ಎಂದು ಹೇಳುತ್ತೇನೆ ಎಂದು ಹೇಳ್ತಾನೆ. ಅದಕ್ಕೆ ಕೀರ್ತನಾ ಓಕೆ ಎಂದು ದುಡ್ಡು ಕಳಿಸುತ್ತಾಳೆ.


    Zee Kannada serial, Kannada serial, Sathya Kannada serial, Sathya serial Kannada cast, Sathya sister married person is not good, ಸತ್ಯ ಧಾರಾವಾಹಿ, ದಿವ್ಯಾಗೆ ಬಾಲನ ವಂಚನೆ ಗೊತ್ತಾಗ್ತಿಲ್ವಾ?, ಅಕ್ಕನ ಜೀವನದ ಬಗ್ಗೆ ಸತ್ಯಾಗೆ ಹೆಚ್ಚಾದ ಚಿಂತೆ, ಜೀ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಗಳು, Kannada news, Karnataka news,
    ಕೀರ್ತನಾ


    ಇದನ್ನೂ ಓದಿ: Kendasampige: ಸುಮನಾ ನಿಜವಾಗಿಯೂ ಸೊಸೆ ಎಂದು ಒಪ್ಪಿಕೊಂಡ ತೀರ್ಥ ಅಮ್ಮ, ನಾಟಕ ಸೂಪರ್ ಎಂದ ಮಗ! 


    ಕಾರ್ತಿಕ್ ಪ್ರೀತಿ ಸಿಗುತ್ತಾ?
    ಸತ್ಯಾಗೆ ಎಲ್ಲ ಕಡೆಯಿಂದಲೂ ಕಷ್ಟ ಎದುರಾಗುತ್ತಿದೆ. ಒಂದು ಕಡೆ ಅತ್ತೆ ನಂಬಿಕೆ ಗಳಿಸಿಕೊಳ್ಳಲು ಒದ್ದಾಡುತ್ತಿದ್ದಾಳೆ. ಇನ್ನೊಂದು ಕಡೆ ಮನೆಯ ಸಂಸ್ಕಾರ ಕಲಿಯಲು ಒದ್ದಾಡುತ್ತಿದ್ದಾಳೆ. ಇವೆಲ್ಲದ ಮಧ್ಯೆ ಗಂಡ ಕಾರ್ತಿಕ್ ಪ್ರೀತಿಯಾದ್ರೂ ಸಿಗುತ್ತಾ ಎಂದು ಕಾಯ್ತಾ ಇದ್ದಾಳೆ. ಕಾರ್ತಿಕ್ ಮನೆಯವರನ್ನು ಮೆಚ್ಚಿಸಲು ಸ್ವಲ್ಪ ಬದಲಾಗುತ್ತಿದ್ದಾನೆ.

    Published by:Savitha Savitha
    First published: