• Home
  • »
  • News
  • »
  • entertainment
  • »
  • Sathya Serial: ಸತ್ಯ ಮದುವೆ ಆಗಿದ್ದು ಕಾರ್ತಿಕ್​ನನ್ನು ಅನ್ನೋ ನಿಜ ಗೊತ್ತಾಗುತ್ತಾ? ದಿವ್ಯಾ ಮುಂದೇನು ಮಾಡ್ತಾಳೆ?

Sathya Serial: ಸತ್ಯ ಮದುವೆ ಆಗಿದ್ದು ಕಾರ್ತಿಕ್​ನನ್ನು ಅನ್ನೋ ನಿಜ ಗೊತ್ತಾಗುತ್ತಾ? ದಿವ್ಯಾ ಮುಂದೇನು ಮಾಡ್ತಾಳೆ?

ಸತ್ಯ

ಸತ್ಯ

ದಿವ್ಯಾಗೆ, ಸತ್ಯ ಯಾರನ್ನು ಮದುವೆ ಆಗಿದ್ದಾಳೆ ಅಂತ ಗೊತ್ತಿಲ್ಲ. ಸತ್ಯ ಯಾರೋ ಬಡವರನ್ನು ಮದುವೆ ಆಗಿದ್ದಾಳೆ ಎಂದು ಕೊಂಡಿದ್ದಾಳೆ. ಇವತ್ತು ದಿವ್ಯಾಗೆ ಸತ್ಯ ಮದುವೆ ಆಗಿರೋದು ಕಾರ್ತಿಕ್ ನನ್ನು ಎನ್ನುವುದು ಗೊತ್ತಾಗಲಿದೆ. ಸತ್ಯ ಮತ್ತು ಕಾರ್ತಿಕ್ ನವರಾತ್ರಿ ಹಬ್ಬಕ್ಕೆ ತವರು ಮನೆಗೆ ಬರಲಿದ್ದಾರೆ.

ಮುಂದೆ ಓದಿ ...
  • News18 Kannada
  • Last Updated :
  • Karnataka, India
  • Share this:

    ಸತ್ಯ (Sathya) ಧಾರಾವಾಹಿ (Serial) ಜೀ ಕನ್ನಡದಲ್ಲಿ (Zee Kannada) ಪ್ರಸಾರವಾಗುತ್ತಿರು ಜನಪ್ರಿಯ ಸೀರಿಯಲ್. ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತೆ. ಗಂಡು ಬೀರಿ ತರ ಇರುವ ಸತ್ಯಳನ್ನು ನೋಡಲು ಅದೆಷೋ ಅಭಿಮಾನಿಗಳು ಕಾಯ್ತಾ ಇರುತ್ತಾರೆ. ತನ್ನ ವಿಭಿನ್ನ ಕಥೆಯ (Story) ಮೂಲಕ ಜನರ ಮನಸ್ಸು ಗೆಲ್ಲುವಲ್ಲಿ ಧಾರಾವಾಹಿ ಯಶಸ್ವಿಯಾಗಿದೆ. ಆದ್ರೆ ಸತ್ಯಾಳ ಬಾಳಲ್ಲಿ ನಡೆದ ಮದುವೆ (Marriage) ಎಂಬ ತಿರುವಿನಲ್ಲಿ ಎಲ್ಲವೂ ಬದಲಾಗಿದೆ. ಪ್ಯಾಂಟ್, ಶರ್ಟ್ ಹಾಕುತ್ತಿದ್ದ ಸತ್ಯ ಸೀರೆ ಉಡುತ್ತಿದ್ದಾಳೆ. ಗಂಡ, ಅತ್ತೆ ಮನಸ್ಸು ಗೆಲ್ಲಲು ಹರಸಾಹಸ ಪಡುತ್ತಿದ್ದಾಳೆ. ಅವರ ಮನೆ ಸಂಸ್ಕೃತಿ ಕಲಿಯುತ್ತಿದ್ದಾಳೆ. ಅಡುಗೆ ಕಲಿಯುತ್ತಿದ್ದಾಳೆ. ಇತ್ತ ತವರು ಮನೆಗೆ ಬಂದಿರುವ ಅಕ್ಕ ದಿವ್ಯಾ ಮತ್ತೆ ತನ್ನ ಕುತಂತ್ರ ಬುದ್ಧಿ ತೋರಲು ಮುಂದಾಗಿದ್ದಾಳೆ.


    ಮನೆಗೆ ವಾಪಸ್ ಬಂದ ದಿವ್ಯಾ


    ಸತ್ಯ ಅಕ್ಕ ದಿವ್ಯಾ. ಮನೆಯವರೆಲ್ಲಾ ಸೇರಿ ದಿವ್ಯಾ ಮತ್ತು ಕಾರ್ತಿಕ್ ನ ಮದುವೆ ನಿಶ್ಚಯ ಮಾಡಿರುತ್ತಾರೆ. ಅದಕ್ಕೆ ಎಲ್ಲ ಸಿದ್ಧತೆಯೂ ಆಗಿರುತ್ತದೆ. ಬೆಳಗ್ಗೆ ಮದುವೆ ಇರಬೇಕಾದ್ರೆ, ರಾತ್ರಿ ದಿವ್ಯಾ ಓಡಿ ಹೋಗಿರುತ್ತಾಳೆ. ಆಗ ಕಾರ್ತಿಕ್ ಅಪ್ಪ ಕೇಳಿಕೊಂಡ್ರು ಅಂತ ಸತ್ಯ ಕಾರ್ತಿಕ್‍ನನ್ನು ಮದುವೆ ಆಗಿರುತ್ತಾಳೆ. ಮದುವೆ ಮನೆಯಿಂದ ಓಡಿ ಹೋಗಿದ್ದ ದಿವ್ಯಾ ಈಗ ಮತ್ತೆ ಮನೆಗೆ ವಾಪಸ್ ಬಂದಿದ್ದಾಳೆ.


    ಬಾಲನ ಜೊತೆ ಹೋಗಿದ್ದ ದಿವ್ಯಾ


    ದಿವ್ಯಾ ಬಾಲ ಎನ್ನುವ ಹುಡುಗನನ್ನು ಪ್ರೀತಿ ಮಾಡ್ತಾ ಇರ್ತಾಳೆ. ಅವನು ತುಂಬಾ ಶ್ರೀಮಂತ ಎಂದುಕೊಂಡಿದ್ದಾಳೆ. ಆದ್ರೆ ಬಾಲ ಶ್ರೀಮಂತ ಅಲ್ಲ ದಿವ್ಯಾಳಿಗಾಗಿ ಸುಳ್ಳು ಹೇಳಿರ್ತಾನೆ. ಏನೇನು ಸುಳ್ಳು ಹೇಳಿ ದಿವ್ಯಾಳನ್ನು ಹಳ್ಳಿಗೆ ಕರೆದುಕೊಂಡು ಹೋಗಿರುತ್ತಾನೆ. ಅಲ್ಲಿ ವಾಸಿಸಲು ಆಗದೇ ದಿವ್ಯಾ ಬಾಲನಿಗೂ ಹೇಳದೇ, ಮನೆಗೆ ವಾಪಸ್ ಬಂದಿದ್ದಾಳೆ.


    ಇದನ್ನೂ ಓದಿ: Kannadathi: ಅಮ್ಮಮ್ಮನ ಸ್ಥಾನ ತುಂಬೇ ಬಿಟ್ಟಳು ಭುವಿ, ಮತ್ತೆ ಆಸ್ಪತ್ರೆ ಸೇರ್ತಾರಾ ರತ್ನಮಾಲಾ?


    ಸತ್ಯಾಳ ಬಗ್ಗೆ ದಿವ್ಯಾಗೆ ಕುತೂಹಲ


    ಜಟ್ಟಿ ಬಿದ್ರೂ ಮೀಸೆ ಮಣ್ಣಾಗಲಿಲ್ಲ ಎನ್ನುವ ಜಾತಿಯವಳು ದಿವ್ಯಾ. ಓಡಿ ಹೋಗಿ ವಾಪಸ್ ಬಂದಿದ್ರೂ ಏನೂ ಆಗಿಲ್ಲ ಎನ್ನುವಂತೆ, ಮೊದಲಿನ ರೀತಿ ಧಿಮಾಕು ಮಾಡಿಕೊಂಡು ಓಡಾಡುತ್ತಿದ್ದಾಳೆ. ಸತ್ಯ ಮದುವೆ ಆಗಿರೋದನ್ನು ಕೇಳಿ ಶಾಕ್ ಆಗಿದ್ದಾಳೆ. ಅವಳನ್ನು ಕಟ್ಟಿಕೊಂಡವನ ಕಥೆ ಅದೋ ಗತಿ ಎನ್ನುತ್ತಿದ್ದಾಳೆ.


    Zee Kannada serial, Kannada serial, Sathya Kannada serial, Sathya serial Kannada cast, Sathya sister come back, ಸತ್ಯ ಧಾರಾವಾಹಿ, ಸತ್ಯ ಮದುವೆ ಆಗಿದ್ದು ಕಾರ್ತಿಕ್ ನನ್ನು ಅನ್ನೋ ನಿಜ ಗೊತ್ತಾಗುತ್ತಾ?, ದಿವ್ಯಾ ಮುಂದಿನ ನಡೆ ಕುತೂಹಲ, ಜೀ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಗಳು, Kannada news, Karnataka news,
    ದಿವ್ಯಾ


    ಕಾರ್ತಿಕ್- ಸತ್ಯ ಮದುವೆ ಬಗ್ಗೆ ಗೊತ್ತಾಗುತ್ತಾ?
    ದಿವ್ಯಾಗೆ ಸತ್ಯ ಯಾರನ್ನು ಮದುವೆ ಆಗಿದ್ದಾಳೆ ಅಂತ ಗೊತ್ತಿಲ್ಲ. ಸತ್ಯ ಯಾರೋ ಬಡವರನ್ನು ಮದುವೆ ಆಗಿದ್ದಾಳೆ ಎಂದು ಕೊಂಡಿದ್ದಾಳೆ. ಇವತ್ತು ದಿವ್ಯಾಗೆ ಸತ್ಯ ಮದುವೆ ಆಗಿರೋದು ಕಾರ್ತಿಕ್ ನನ್ನು ಎನ್ನುವುದು ಗೊತ್ತಾಗಲಿದೆ. ಸತ್ಯ ಮತ್ತು ಕಾರ್ತಿಕ್ ನವರಾತ್ರಿ ಹಬ್ಬಕ್ಕೆ ತವರು ಮನೆಗೆ ಬರಲಿದ್ದಾರೆ.


    Zee Kannada serial, Kannada serial, Sathya Kannada serial, Sathya serial Kannada cast, Sathya sister come back, ಸತ್ಯ ಧಾರಾವಾಹಿ, ಸತ್ಯ ಮದುವೆ ಆಗಿದ್ದು ಕಾರ್ತಿಕ್ ನನ್ನು ಅನ್ನೋ ನಿಜ ಗೊತ್ತಾಗುತ್ತಾ?, ದಿವ್ಯಾ ಮುಂದಿನ ನಡೆ ಕುತೂಹಲ, ಜೀ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಗಳು, Kannada news, Karnataka news,
    ಕಾರ್ತಿಕ್


    ಕಾರ್ತಿಕ್ ಪ್ರೀತಿ ಸಿಗುತ್ತಾ?
    ಸತ್ಯಾಗೆ ಎಲ್ಲ ಕಡೆಯಿಂದಲೂ ಕಷ್ಟ ಎದುರಾಗುತ್ತಿದೆ. ಒಂದು ಕಡೆ ಅತ್ತೆ ನಂಬಿಕೆ ಗಳಿಸಿಕೊಳ್ಳಲು ಒದ್ದಾಡುತ್ತಿದ್ದಾಳೆ. ಇನ್ನೊಂದು ಕಡೆ ಮನೆಯ ಸಂಸ್ಕಾರ ಕಲಿಯಲು ಒದ್ದಾಡುತ್ತಿದ್ದಾಳೆ. ಇವೆಲ್ಲದ ಮಧ್ಯೆ ಗಂಡ ಕಾರ್ತಿಕ್ ಪ್ರೀತಿಯಾದ್ರೂ ಸಿಗುತ್ತಾ ಎಂದು ಕಾಯ್ತಾ ಇದ್ದಾಳೆ. ಕಾರ್ತಿಕ್ ಮನೆಯವರನ್ನು ಮೆಚ್ಚಿಸಲು ಸ್ವಲ್ಪ ಬದಲಾಗುತ್ತಿದ್ದಾನೆ.


    ಇದನ್ನೂ ಓದಿ: Anupama Gowda: ಬಿಗ್ ಬಾಸ್ ಮನೆಯಲ್ಲಿ ಅನುಪಮಾ ಹಾಟ್ ಲುಕ್, ಪಡ್ಡೆ ಹುಡುಗರ ನಿದ್ದೆ ಕದ್ದ ಸುಂದರಿ


    ದಿವ್ಯಾಗೆ ನಿಜ ಗೊತ್ತಾದ್ರೆ ಏನ್ ಮಾಡ್ತಾಳೆ? ಕಾರ್ತಿಕ್-ಸತ್ಯ ದೂರ ಆಗಲು ಏನಾದ್ರೂ ಕುತಂತ್ರ ಮಾಡ್ತಾಳಾ? ಎಲ್ಲವನ್ನು ನೋಡಲು ಸತ್ಯ ಸೀರಿಯಲ್ ನೋಡಬೇಕು.

    Published by:Savitha Savitha
    First published: