ಸತ್ಯ (Sathya) ಧಾರಾವಾಹಿ (Serial) ಜೀ ಕನ್ನಡದಲ್ಲಿ (Zee Kannada) ಪ್ರಸಾರವಾಗುತ್ತಿರು ಜನಪ್ರಿಯ ಸೀರಿಯಲ್. ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತೆ. ಗಂಡು ಬೀರಿ ತರ ಇರುವ ಸತ್ಯಳನ್ನು ನೋಡಲು ಅದೆಷೋ ಅಭಿಮಾನಿಗಳು (Fans) ಕಾಯ್ತಾ ಇರುತ್ತಾರೆ. ತನ್ನ ವಿಭಿನ್ನ ಕಥೆಯ ಮೂಲಕ ಜನರ ಮನಸ್ಸು ಗೆಲ್ಲುವಲ್ಲಿ ಧಾರಾವಾಹಿ ಯಶಸ್ವಿಯಾಗಿದೆ. ಆದ್ರೆ ಸತ್ಯಾಳ ಬಾಳಲ್ಲಿ ನಡೆದ ಮದುವೆ (Marriage) ಎಂಬ ತಿರುವಿನಲ್ಲಿ ಎಲ್ಲವೂ ಬದಲಾಗಿದೆ. ಪ್ಯಾಂಟ್, ಶರ್ಟ್ ಹಾಕುತ್ತಿದ್ದ ಸತ್ಯ ಸೀರೆ ಉಡುತ್ತಿದ್ದಾಳೆ. ಗಂಡ, ಅತ್ತೆ ಮನಸ್ಸು ಗೆಲ್ಲಲು ಹರಸಾಹಸ ಪಡುತ್ತಿದ್ದಾಳೆ. ಅವರ ಮನೆ ಸಂಸ್ಕøತಿ ಕಲಿಯುತ್ತಿದ್ದಾಳೆ. ಅಡುಗೆ ಕಲಿಯುತ್ತಿದ್ದಾಳೆ. ಆದ್ರೂ ಏನೂ ಪ್ರಯೋಜನ ಆಗ್ತಾ ಇಲ್ಲ. ಏನೇ ಮಾಡಿದ್ರೂ ಸತ್ಯ ಬಗ್ಗೆ ಅತ್ತೆ ಸೀತಮ್ಮ ತಪ್ಪು ತಿಳಿದುಕೊಳ್ತಿದ್ದಾಳೆ.
ಕಾರ್ತಿಕ್ ಕುಡಿದ್ರು ಅದಕ್ಕೆ ಸತ್ಯ ಕಾರಣವಂತೆ
ಕಾರ್ತಿಕ್ ಚಿಕ್ಕಪ್ಪ ಲಕ್ಷ್ಮಣ ಮತ್ತು ಚಿಕ್ಕಮ್ಮ ಊರ್ಮಿಳಾ ಮದುವೆ ವಾರ್ಷಿಕೋತ್ಸವ ಇರುತ್ತೆ. ಅದಕ್ಕೆ ಕೀರ್ತನಾ ಪಾರ್ಟಿ ಸಿದ್ಧತೆ ಮಾಡಿರುತ್ತಾಳೆ. ಕಾರ್ತಿಕ್ ಅಕ್ಕ ಕೀರ್ತನಾಗೆ ಸತ್ಯ ಕಂಡ್ರೆ ಆಗಲ್ಲ. ಅದಕ್ಕೆ ಹೇಗಾದ್ರೂ ಆಕೆ ಹೆಸರು ಹಾಳು ಮಾಡಬೇಕು ಎಂದು ಪಾರ್ಟಿ ನೆಪದಲ್ಲಿ ಕಾರ್ತಿಕ್ಗೆ ಕುಡಿಸಿರುತ್ತಾಳೆ. ಸತ್ಯ ಬಂದ ಮೇಲೆಯೇ ತನ್ನ ಮಗ ಕುಡಿಯಲು ಶುರು ಮಾಡಿದ ಎಂದು ಸೀತಮ್ಮ ತಪ್ಪು ತಿಳಿದುಕೊಂಡು, ಸತ್ಯಾಳನ್ನು ಬೈಯುತ್ತಾಳೆ.
ಸತ್ಯ ಎಷ್ಟೇ ಕೇಳಿಕೊಂಡ್ರು ಒಪ್ಪದ ಸೀತಾ
ಸತ್ಯ, ಅತ್ತೆ ಸೀತಾ ಬಳಿ ತನ್ನ ತಪ್ಪಿಲ್ಲ. ಇದಕ್ಕೆಲ್ಲಾ ನಾನು ಕಾರಣ ಅಲ್ಲ ಎಂದು ಕೇಳಿಕೊಳ್ತಾಳೆ. ಆದ್ರೂ ಸೀತಾ ಒಪ್ಪುವುದಿಲ್ಲ. ಈ ಕೋಟೆ ಮನೆಗೆ ನೀನು ಸರಿಯಾದ ಸೊಸೆ ಅಲ್ಲ ಎನ್ನುತ್ತಾಳೆ. ಈ ಹಿಂದೆಯೇ ಸೀತಮ್ಮ ಸತ್ಯ ಬಳಿ ಡಿವೋರ್ಸ್ ಪೇಪರ್ ಗೆ ಸಹಿ ಮಾಡಿಸಿಕೊಂಡಿದ್ದಾಳೆ. ಇನ್ನು 6 ತಿಂಗಳು ಮಾತ್ರ ಸತ್ಯಗೆ ಟೈಂ ಇರೋದು.
ಇದನ್ನೂ ಓದಿ: Hitler Kalyana: ಪರ್ಫೆಕ್ಟ್ ಆ್ಯಂಡ್ ಸ್ಟ್ರಿಕ್ಟ್ ಇದ್ದ ಎಜೆ ಇದ್ಯಾಕ್ ಹಿಂಗೆ ಬದಲಾಗಿದ್ದು? ಇದರ ಹಿಂದಿನ ರಹಸ್ಯವೇನು?
ಸತ್ಯ ಮಾವ ರಾಮಚಂದ್ರ ರಾಯರಿಗೆ ಚಿಂತೆ
ಕಾರ್ತಿಕ್ ಮದುವೆ ಸತ್ಯ ಅಕ್ಕ ದಿವ್ಯಾ ಜೊತೆ ನಿಶ್ಚಯ ಆಗಿರುತ್ತೆ. ಆದ್ರೆ ಮದುವೆ ಸಂದರ್ಭದಲ್ಲಿ ದಿವ್ಯಾ ಓಡಿ ಹೋದ ಕಾರಣ ರಾಮಚಂದ್ರ ಸತ್ಯಾಳಿಗೆ ಕೈ ಮುಗಿದು ಬೇಡಿಕೊಂಡು, ಕಾರ್ತಿಕ್ ಜೊತೆ ಮದುವೆ ಮಾಡಿಸಿರುತ್ತಾರೆ. ಆದ್ರೆ ಮದುವೆ ಆದ ದಿನದಿಂದ ಸತ್ಯ ಖುಷಿಯಾಗಿಲ್ಲ ಅಂತ ಗೊತ್ತು. ಅದಕ್ಕೆ ತಾನೇ ಕಾರಣ ಎಂದು ಕೊರಗುತ್ತಿದ್ದಾರೆ. ಅದನ್ನೇ ಕಾರ್ತಿಕ್ ಬಳಿ ಸಹ ಹೇಳಿದ್ದಾರೆ. ಸತ್ಯಾಳನ್ನು ಚೆನ್ನಾಗಿ ನೋಡಿಕೋ ಎಂದು ಹೇಳಿದ್ದಾರೆ.
ಪಾರ್ಟಿ ಸಿದ್ಧತೆ ಮಾಡಿದ್ದು ಕೀರ್ತನಾ
ಸೀತಾ ಕೋಪ ಮಾಡಿಕೊಂಡಿರುವುದನ್ನು ನೋಡಿದ ಊರ್ಮಿಳಾ, ಸೀತಾ ಬಳಿ ಬಂದು ಅಕ್ಕ ಪಾರ್ಟಿ ಅರೆಂಜ್ ಮಾಡಿದ್ದು ಸತ್ಯ ಅಲ್ಲ. ಕೀರ್ತನಾ ಎಂದು ಹೇಳುತ್ತಾಳೆ. ಸತ್ಯ ಮೇಲೆ ಸುಮ್ಮನೇ ಕೋಪ ಮಾಡಿಕೊಂಡಿದ್ದೀರಿ. ಅವಳು ಏನೇ ಹೇಳಲು ಬಂದ್ರೂ ನೀವು ಕೇಳಲಿಲ್ಲ ಎಂದು ಹೇಳಿದ್ದಾಳೆ.
ಕಾರ್ತಿಕ್ ಪ್ರೀತಿ ಸಿಗುತ್ತಾ?
ಸತ್ಯಾಗೆ ಎಲ್ಲ ಕಡೆಯಿಂದಲೂ ಕಷ್ಟ ಎದುರಾಗುತ್ತಿದೆ. ಒಂದು ಕಡೆ ಅತ್ತೆ ನಂಬಿಕೆ ಗಳಿಸಿಕೊಳ್ಳಲು ಒದ್ದಾಡುತ್ತಿದ್ದಾಳೆ. ಇನ್ನೊಂದು ಕಡೆ ಮನೆಯ ಸಂಸ್ಕಾರ ಕಲಿಯಲು ಒದ್ದಾಡುತ್ತಿದ್ದಾಳೆ. ಇವೆಲ್ಲದ ಮಧ್ಯೆ ಗಂಡ ಕಾರ್ತಿಕ್ ಪ್ರೀತಿಯಾದ್ರೂ ಸಿಗುತ್ತಾ ಎಂದು ಕಾಯ್ತಾ ಇದ್ದಾಳೆ. ಏನೂ ಸಿಗದೇ ಒದ್ದಾಡುತ್ತಿದ್ದಾಳೆ.
ಇದನ್ನೂ ಓದಿ: Bhagya Lakshmi: ಮದುವೆಗೆ ಅತ್ತೆ-ಸೊಸೆ ಜಾತಕ ಮ್ಯಾಚ್ ಆಗ್ಬೇಕಂತೆ! ಲಕ್ಷ್ಮೀಗೊಬ್ಬ ಶ್ರೀರಾಮ ಸಿಗ್ತಾನಾ?
ಕಾರ್ತಿಕ್-ಸತ್ಯ ಒಂದಾಗ್ತಾರಾ? ಸತ್ಯಾಗೆ ಕಾರ್ತಿಕ್ ಪ್ರೀತಿ ಸಿಗುತ್ತಾ? ಅತ್ತೆ ಸೀತಮ್ಮ ಸೊಸೆ ಎಂದು ಒಪ್ಪಿಕೊಳ್ತಾಳಾ? ಮುಂದೇನಾಗುತ್ತೆ ಅಂತ ನೋಡೋಕೆ ಸತ್ಯ ಧಾರಾವಾಹಿ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ