ಸತ್ಯ (Sathya) ಧಾರಾವಾಹಿ (Serial) ಜೀ ಕನ್ನಡದಲ್ಲಿ (Zee Kannada) ಪ್ರಸಾರವಾಗುತ್ತಿರುವ ಜನಪ್ರಿಯ ಸೀರಿಯಲ್. ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತೆ. ಗಂಡು ಬೀರಿ ತರ ಇರುವ ಸತ್ಯಾಳನ್ನು ನೋಡಲು ಅದೆಷೋ ಅಭಿಮಾನಿಗಳು ಕಾಯ್ತಾ ಇರುತ್ತಾರೆ. ತನ್ನ ವಿಭಿನ್ನ ಕಥೆಯ ಮೂಲಕ ಜನರ ಮನಸ್ಸು ಗೆಲ್ಲುವಲ್ಲಿ ಧಾರಾವಾಹಿ ಯಶಸ್ವಿಯಾಗಿದೆ. ಆದ್ರೆ ಸತ್ಯಾಳ ಬಾಳಲ್ಲಿ ನಡೆದ ಮದುವೆ (Marriage) ಎಂಬ ತಿರುವಿನಲ್ಲಿ ಎಲ್ಲವೂ ಬದಲಾಗಿದೆ. ಪ್ಯಾಂಟ್, ಶರ್ಟ್ ಹಾಕುತ್ತಿದ್ದ ಸತ್ಯ ಸೀರೆ ಉಡುತ್ತಿದ್ದಾಳೆ. ಗಂಡ, ಅತ್ತೆ ಮನಸ್ಸು ಗೆಲ್ಲಲು ಹರಸಾಹಸ ಪಡುತ್ತಿದ್ದಾಳೆ. ಅವರ ಮನೆ ಸಂಸ್ಕøತಿ ಕಲಿಯುತ್ತಿದ್ದಾಳೆ. ಅಡುಗೆ ಕಲಿಯುತ್ತಿದ್ದಾಳೆ. ಆದ್ರೂ ಏನೂ ಪ್ರಯೋಜನ ಆಗ್ತಾ ಇಲ್ಲ. ಏನೇ ಮಾಡಿದ್ರೂ ಸತ್ಯ ಬಗ್ಗೆ ಅತ್ತೆ ಸೀತಮ್ಮ ತಪ್ಪು ತಿಳಿದುಕೊಳ್ತಿದ್ದಾಳೆ.
ಸತ್ಯ ಅಂದ್ರೆ ಸೀತಮ್ಮನಿಗೆ ಕೋಪ
ಕಾರ್ತಿಕ್ ಕುಡಿದ್ರೂ ಅದಕ್ಕೆ ಸತ್ಯ ಕಾರಣ ಎಂದು ಅತ್ತೆ ಸೀತಮ್ಮ ತಿಳಿದುಕೊಳ್ಳುತ್ತಿದ್ದಾಳೆ. ಸತ್ಯ, ಅತ್ತೆ ಸೀತಾ ಬಳಿ ತನ್ನ ತಪ್ಪಿಲ್ಲ. ಇದಕ್ಕೆಲ್ಲಾ ನಾನು ಕಾರಣ ಅಲ್ಲ ಎಂದು ಕೇಳಿಕೊಳ್ತಾಳೆ. ಆದ್ರೂ ಸೀತಾ ಒಪ್ಪುವುದಿಲ್ಲ. ಈ ಕೋಟೆ ಮನೆಗೆ ನೀನು ಸರಿಯಾದ ಸೊಸೆ ಅಲ್ಲ ಎನ್ನುತ್ತಾಳೆ. ಈ ಹಿಂದೆಯೇ ಸೀತಮ್ಮ ಸತ್ಯ ಬಳಿ ಡಿವೋರ್ಸ್ ಪೇಪರ್ ಗೆ ಸಹಿ ಮಾಡಿಸಿಕೊಂಡಿದ್ದಾಳೆ. ಇನ್ನು 6 ತಿಂಗಳು ಮಾತ್ರ ಸತ್ಯಾಗೆ ಟೈಂ ಇರೋದು.
ಪಾರ್ಟಿ ಸಿದ್ಧತೆ ಮಾಡಿದ್ದು ಕೀರ್ತನಾ
ಸೀತಾ ಕೋಪ ಮಾಡಿಕೊಂಡಿರುವುದನ್ನು ನೋಡಿದ ಊರ್ಮಿಳಾ, ಸೀತಾ ಬಳಿ ಬಂದು ಅಕ್ಕ ಪಾರ್ಟಿ ಅರೆಂಜ್ ಮಾಡಿದ್ದು ಸತ್ಯ ಅಲ್ಲ. ಕೀರ್ತನಾ ಎಂದು ಹೇಳುತ್ತಾಳೆ. ಸತ್ಯ ಮೇಲೆ ಸುಮ್ಮನೇ ಕೋಪ ಮಾಡಿಕೊಂಡಿದ್ದೀರಿ. ಅವಳು ಏನೇ ಹೇಳಲು ಬಂದ್ರೂ ನೀವು ಕೇಳಲಿಲ್ಲ ಎಂದು ಹೇಳಿದ್ದಾಳೆ. ಅದಕ್ಕೆ ಕೀರ್ತಾನಳಿ ಸೀತಮ್ಮ ಬೈದಿದ್ದಾಳೆ. ಅವಳಿಗೂ ಎಚ್ಚರಿಕೆ ಕೊಟ್ಟಿದ್ದಾಳೆ.
ಇದನ್ನೂ ಓದಿ: Lakshana: ನಕ್ಷತ್ರಾ ಬದುಕು ನರಕ ಮಾಡ್ತಾಳಂತೆ ಶ್ವೇತಾ!, ಸೆಡ್ಡು ಹೊಡೆದು ನಿಂತ ಭೂಪತಿ ಹೆಂಡ್ತಿ
ಸತ್ಯ ಇರೋದು ಆರೇ ತಿಂಗಳು ಮಾತ್ರ
ಕೀರ್ತನಾ ಬಲಿ ಮಾತನಾಡುತ್ತಾ ಸೀತಮ್ಮ ಅವಳಿಗೆ ಈ ಮನೆಯಲ್ಲಿ ಜಾಗ ಇರೋದು 6 ತಿಂಗಳು ಮಾತ್ರ ಎನ್ನುತ್ತಾಳೆ. ಅದಕ್ಕೆ ಕೀರ್ತನಾ ಅದರ ಅರ್ಥ ಏನು ಎಂದು ಕೇಳ್ತಾಳೆ. ಆಗ ಅವಳ ಬಳಿ ಡಿವೋರ್ಸ್ ಪೇಪರ್ ಸಹಿ ಮಾಡಿಸಿಕೊಂಡಿರುವುದನ್ನು ಹೇಳ್ತಾಳೆ. ಅದಕ್ಕೆ ಸತ್ಯಾಳನ್ನು ಆಟ ಆಡಿಸ್ತಾಳಂತೆ ಕೀರ್ತನಾ.
ಸತ್ಯ ಜುಟ್ಟು ಕೀರ್ತನಾ ಕೈಯಲ್ಲಿ
ಸತ್ಯ ಬಳಿ ಡಿವೋರ್ಸ್ ಪೇಪರ್ ಗೆ ಸಹಿ ಹಾಕಿಸಿಕೊಂಡಿರುವ ವಿಚಾರ ಅತ್ತೆ ಸೀತಾ, ಸತ್ಯ, ಕೀರ್ತನಾಗೆ ಮಾತ್ರ ಗೊತ್ತು ಅದನ್ನು ಮುಂದಿಟ್ಟುಕೊಂಡು ಸತ್ಯಾಳನ್ನು ಆಟವಾಡಿಸಬೇಕು ಎಂದುಕೊಳ್ತಿದ್ದಾಳೆ. ಅದಕ್ಕೆ ಎಲ್ಲಾ ಪ್ಲ್ಯಾನ್ ಮಾಡ್ತಾ ಇದ್ದಾಳೆ.
ಸತ್ಯಾಗೆ ಉಡುಗೊರೆ ಕೊಡಲು ಕಾರ್ತಿಕ್ ತೀರ್ಮಾನ
ಇನ್ನು ಅಪ್ಪ ಹೇಳಿದ್ದಕ್ಕೆ ಕಾರ್ತಿಕ್ ಬದಲಾಗುತ್ತಿದ್ದಾನೆ. ಹೇಗಾದ್ರೂ ಸತ್ಯಾಳನ್ನು ಖುಷಿ ಪಡಿಸಬೇಕು ಎಂದು ಉಡುಗೊರೆ ಕೊಡಲು ಯೋಚನೆ ಮಾಡುತ್ತಿದ್ದಾನೆ. ಸತ್ಯ ಏನ್ ಕೊಟ್ರೆ ಖುಷಿಯಾಗುತ್ತೆ ಎಂದು ಯೋಚ್ನೆ ಮಾಡ್ತಾ ಇದ್ದಾನೆ.
ಇದನ್ನೂ ಓದಿ: Kendasampige: ವೋಟ್ಗಾಗಿ ಸುಮನಾ ಮದುವೆ! ಎಲೆಕ್ಷನ್ ಆದ ಮೇಲೆ ಸುಮನಾಳನ್ನು ಬಿಡ್ತಾನಂತೆ!
ಲೇಡಿ ರಾಮಾಚಾರಿಯನ್ನು ಕೀರ್ತನಾ ಬಗ್ಗಿಸುತ್ತಾಳಾ? ಸತ್ಯಾಗೆ ಕಾರ್ತಿಕ್ ಪ್ರೀತಿ ಸಿಗುತ್ತಾ? ಎಲ್ಲವನ್ನೂ ನೋಡಲು ಸತ್ಯ ಧಾರಾವಾಹಿ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ