Sathya Serial: ಸತ್ಯ ಮೇಲೆ ಕಾರ್ತಿಕ್‍ಗೆ ಲವ್ ಆಗಿದ್ಯಾ? ತನ್ನ ಸುದ್ದಿಗೆ ಬಂದ ಕೀರ್ತನಾಗೆ ಲೇಡಿ ರಾಮಾಚಾರಿ ಕ್ಲಾಸ್!

ಸತ್ಯಾಳನ್ನು ಮದುವೆ ಆಗಿದ್ದು ಕಾರ್ತಿಕ್‍ಗೆ ಇಷ್ಟ ಇರಲಿಲ್ಲ. ಮೊದ ಮೊದಲು ಅವನು ಅವಳ ಕಡೆಯೂ ತಿರುಗಿ ನೋಡುತ್ತಿರಲಿಲ್ಲ. ಅವಳು ಮಾತನಾಡಿದ್ರೂ ಬೈತಿದ್ದ. ಈಗ ಕಾರ್ತಿಕ್ ಸತ್ಯ ಜೊತೆ ಚೆನ್ನಾಗಿ ಮಾತನಾಡುತ್ತಾನೆ. ಹಾಗಾದ್ರೆ ಸತ್ಯ ಮೇಲೆ ಕಾರ್ತಿಕ್‍ಗೆ ಲವ್ ಆಗಿದ್ಯಾ ಅನ್ನೋ ಅನುಮಾನ ಶುರುವಾಗಿದೆ.

ಸತ್ಯ

ಸತ್ಯ

 • Share this:
  ಜೀ ಕನ್ನಡದಲ್ಲಿ (Zee Kannada) ಪ್ರಸಾರವಾಗುತ್ತಿರುವ ಸತ್ಯ (Sathya ) ಧಾರಾವಾಹಿ (Serial) ಬೇರೆ ಎಲ್ಲಾ ಧಾರವಾಹಿಗಳಿಗಿಂತ ವಿಭಿನ್ನವಾದ ಧಾರವಾಹಿ. ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತೆ. ನಟಿ ಅಂದ್ರೆ ಅಳು, ನೋವು, ಮನೆ, ಕೆಲಸ ಅಂತ ಇರುತ್ತೆ. ಆದ್ರೆ ಎಲ್ಲರಿಗೂ ಬೇರೆಯದ್ದೇ ರೀತಿ ನಿರೀಕ್ಷೆ ಹುಟ್ಟಿಸಿದ್ದ ಸತ್ಯ ಸೀರಿಯಲ್. ಯಾವನೋ ಅಲ್ಲ, ಯಾವಳೋ ಅನ್ನೋ ಮೂಲಕ ಕನ್ನಡಿಗರ ಮನಗೆದ್ದ ಧಾರಾವಾಹಿ. ರಫ್ ಅಂಡ್ ಟಫ್ ಮೂಲಕ ಹೆಣ್ಣು ಮಕ್ಕಳು ಈ ತರನೂ ಇರಬಹುದ ಎಂದು ತೋರಿಸಿಕೊಟ್ಟ ಹೊಸ ಕಲ್ಪನೆ. ಸತ್ಯ ಲೈಫ್ ನಲ್ಲಿ ಕಾರ್ತಿಕ್ (Karthik) ಜೊತೆ ನಡೆದ ಮದುವೆ  (Marriage) ಎಂಬ ತಿರುವು ಎಲ್ಲವನ್ನೂ ಬದಲಾಯಿಸಿದೆ. ಪತ್ನಿ ಸತ್ಯಾಗಾಗಿ ಅಮ್ಮನ ಬಳಿ ಸುಳ್ಳು ಹೇಳಿದ್ದಾನೆ ಕಾರ್ತಿಕ್. ಹಾಗಾದ್ರೆ ಸತ್ಯ ಮೇಲೆ ಕಾರ್ತಿಕ್‍ಗೆ ಲವ್ (Love) ಆಗಿದ್ಯಾ?

  ಸತ್ಯಾಳನ್ನು ಹಬ್ಬಕ್ಕೆ ಕರೆದುಕೊಂಡು ಹೋಗಿದ್ದ ಕಾರ್ತಿಕ್
  ಸತ್ಯಾಗೆ ಪ್ರತಿ ವರ್ಷದಂತೆ ತನ್ನ ಏರಿಯಾದಲ್ಲಿ ಗಣೇಶ ಹಬ್ಬ ಮಾಡಬೇಕು ಎಂದು ಇಷ್ಟ ಇರುತ್ತೆ. ಆದ್ರೆ ಅತ್ತೆ ಸೀತಾ ಮನೆಯಿಂದ ಎಲ್ಲು ಹೋಗಬಾರದು ಎಂದು ಕಟ್ಟಪ್ಪಣೆ ಮಾಡಿರುತ್ತಾಳೆ. ಆದ್ರೆ ಸತ್ಯಾಗೆ ಅಲ್ಲಿಗೆ ಹೋಗಲೇ ಬೇಕಾಗಿರುತ್ತೆ. ಆಗ ಕಾರ್ತಿಕ್ ಮನೆಯವರಿಗೆ ಹೇಳದೇ, ತನ್ನ ಅಮ್ಮನ ಕಣ್ಣು ತಪ್ಪಿಸಿ ಆಕೆಯನ್ನು, ಅವರ ಏರಿಯಾ ಹಬ್ಬಕ್ಕೆ ಕರೆದುಕೊಂಡು ಹೋಗಿರುತ್ತಾನೆ. ಅದಕ್ಕೆ ಸತ್ಯ ತುಂಬಾ ಖುಷಿಯಾಗುತ್ತಾಳೆ.

  ಸತ್ಯ ಪರ ನಿಂತ ಕಾರ್ತಿಕ್
  ಸತ್ಯ ತಾನು ಹೇಳಿದ್ರೂ ಹೊರಗೆ ಹೋಗಿದ್ದಾಳೆ ಎಂದು ಕೋಪ ಮಾಡಿಕೊಂಡ ಅತ್ತೆ ಸೀತಾ, ಇಬ್ಬರನ್ನು ಹೊರಗೆ ನಿಲ್ಲಿಸಿ ಬೈಯುತ್ತಿದ್ದಾಳೆ. ಆಗ ಕಾರ್ತಿಕ್ ಅಪ್ಪ ರಾಮಚಂದ್ರ ಅವರು ಬಂದು ಏನಾಯ್ತು ಎಂದು ಕೇಳುತ್ತಾರೆ. ಅದಕ್ಕೆ ಕಾರ್ತಿಕ್ ನಾವ್ ಹೊರಗೆ ಹೋಗಿದ್ದು ನಿಜ ಅಪ್ಪ. ನನ್ನ ಸ್ನೇಹಿತ ಕರೆದಿದ್ದ, ದಂಪತಿ ಬಾಗಿನ ತೆಗೆದುಕೊಳ್ಳಲು ಹೋಗಿದ್ವಿ ಎಂದು ಸುಳ್ಳು ಹೇಳುತ್ತಾನೆ. ಆಗ ಮನೆಯವರು ಸುಮ್ಮನೇ ಆಗ್ತಾರೆ.

  ಸತ್ಯ


  ಇದನ್ನೂ ಓದಿ: Kendasampige: ತಾಳಿ ಹಿಡಿದು ಸುಮಿ ಮನೆ ಮುಂದೆ ಕೂತಿದ್ದಾನೆ ಕಾಳಿ! ಸಾಲ ತೀರಿಸದ್ದಕ್ಕೆ ಇದೆಂಥಾ ಶಿಕ್ಷೆ?

  ಸತ್ಯಾ ಮೇಲೆ ಕಾರ್ತಿಕ್‍ಗೆ ಲವ್ ಆಯ್ತಾ?
  ಸತ್ಯಾಳನ್ನು ಮದುವೆ ಆಗಿದ್ದು ಕಾರ್ತಿಕ್‍ಗೆ ಇಷ್ಟ ಇರಲಿಲ್ಲ. ಮೊದ ಮೊದಲು ಅವನು ಅವಳ ಕಡೆಯೂ ತಿರುಗಿ ನೋಡುತ್ತಿರಲಿಲ್ಲ. ಅವಳು ಮಾತನಾಡಿದ್ರೂ ಬೈತಿದ್ದ. ಈಗ ಕಾರ್ತಿಕ್ ಸತ್ಯ ಜೊತೆ ಚೆನ್ನಾಗಿ ಮಾತನಾಡುತ್ತಾನೆ. ಅವಳ ಖುಷಿ ನೋಡುತ್ತಾನೆ. ತನ್ನ ಅಮ್ಮನ ಬಳಿಯೇ ಸುಳ್ಳು ಹೇಳುತ್ತಿದ್ದಾನೆ. ಹಾಗಾದ್ರೆ ಸತ್ಯ ಮೇಲೆ ಕಾರ್ತಿಕ್‍ಗೆ ಲವ್ ಆಗಿದ್ಯಾ ಅನ್ನೋ ಅನುಮಾನ ಶುರುವಾಗಿದೆ.

  ಕೀರ್ತನಾಗೆ ಸತ್ಯಾ ಕ್ಲಾಸ್
  ಸತ್ಯಾಗೆ ಕೀರ್ತನಾ ಪದೇ ಪದೇ ಅವಮಾನ ಮಾಡುತ್ತಲೇ ಇದ್ದಾಳೆ. ನೀನು ಬ್ರಾಂಡೆಡ್ ಚೈನ್ ನೋಡಿಲ್ಲ. ನಿಮ್ಮ ಬಳಿ ಹಣ ಇಲ್ಲ ಎಂದು ವ್ಯಂಗ್ಯವಾಗಿ ಮಾತನಾಡಿರುತ್ತಾಳೆ. ಅದಕ್ಕೆ ಲೇಡಿ ರಾಮಾಚಾರಿ ಸತ್ಯ, ಕೀರ್ತನಾಗೆ ಕ್ಲಾಸ್ ತೆಗೆದುಕೊಂಡಿದ್ದಾಳೆ. ಹೌದು ನಾನು ಬ್ರಾಂಡೆಡ್ ಚೈನ್ ನೋಡಿಲ್ಲ.

  Zee Kannada serial, Kannada serial, Sathya Kannada serial, Sathya serial Kannada cast, Karthik loves Sathya, ಸತ್ಯ ಧಾರಾವಾಹಿ, ಸತ್ಯ ಮೇಲೆ ಕಾರ್ತಿಕ್‍ಗೆ ಲವ್ ಆಗಿದ್ಯಾ?, ಜೀ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಗಳು, Kannada news, Karnataka news,
  ಕೀರ್ತನಾ


  ನನ್ನ ಹತ್ರ ಅಷ್ಟು ದುಡ್ಡಿಲ್ಲ. ಏನ್ ಈಗ? ನೀನು ಗಂಡನ ಮನೆಯಲ್ಲಿ ಬಾಳುವುದನ್ನು ಬಿಟ್ಟು, ತವರು ಮನೆ ಸೇರಿದ್ದಿ. ನಿನಗೆ ನಾಚಿಕೆ ಆಗಲ್ವಾ ಎಂದು ಪ್ರಶ್ನೆ ಮಾಡಿದ್ದಾಳೆ? ಸತ್ಯ ಮಾತು ಕೇಳಿ ಕೀರ್ತನಾ ಕೋಪಗೊಂಡಿದ್ದಾಳೆ.

  ಇದನ್ನೂ ಓದಿ: Actress Ramya: ಎಷ್ಟು ಚಂದ ಕಾಣ್ತಾರೆ ನೋಡಿ ರಮ್ಯಾ! ಪ್ಲೀಸ್ ಮೂವಿ ಮಾಡಿ ಅಂತಿದ್ದಾರೆ ಫ್ಯಾನ್ಸ್

  ಸತ್ಯಾಗೆ ತನ್ನ ಪ್ರೀತಿಯನ್ನು ಹೇಳಿಕೊಳ್ತಾನಾ ಕಾರ್ತಿಕ್? ಇಲ್ಲ 6 ತಿಂಗಳಲ್ಲಿ ಇಬ್ಬರು ಬೇರೆ ಬೇರೆ ಆಗ್ತಾರಾ? ಎಲ್ಲವನ್ನೂ ನೋಡಲು ಸತ್ಯ ಧಾರಾವಾಹಿ ನೋಡಬೇಕು.
  Published by:Savitha Savitha
  First published: