• Home
  • »
  • News
  • »
  • entertainment
  • »
  • Sathya: ಸತ್ಯಾಗೆ ಕಾರ್ತಿಕ್ ಕೊಟ್ಟ ಸಪ್ರ್ರೈಸ್ ಏನು? ಲೇಡಿ ರಾಮಾಚಾರಿಗೆ ಖುಷಿ ಆಗುತ್ತಾ?

Sathya: ಸತ್ಯಾಗೆ ಕಾರ್ತಿಕ್ ಕೊಟ್ಟ ಸಪ್ರ್ರೈಸ್ ಏನು? ಲೇಡಿ ರಾಮಾಚಾರಿಗೆ ಖುಷಿ ಆಗುತ್ತಾ?

ಸತ್ಯ

ಸತ್ಯ

ಕಾರ್ತಿಕ್ ಸಪ್ರೈಸ್ ಎಂದು ಹೇಳಿ, ಗ್ಯಾರೇಜ್‍ಗೆ ಸತ್ಯಾಳನ್ನು ಕರೆದುಕೊಂಡು ಬಂದಿದ್ದಾನೆ. ಸತ್ಯ ಗ್ಯಾರೇಜ್ ನಲ್ಲಿ ತನ್ನ ಹುಡುಗರನ್ನು ನೋಡಿ ಖಷಿಯಾಗಿದ್ದಾಳೆ. ಕಾರ್ತಿಕ್ ಕೊಟ್ಟ ಸಪ್ರೈಸ್ ನಿಜವಾಗ್ಲೂ ಇಷ್ಟವಾಗಿದೆ.

  • Share this:

    ಜೀ ಕನ್ನಡದಲ್ಲಿ (Zee Kannada) ಪ್ರಸಾರವಾಗುತ್ತಿರುವ ಸತ್ಯ (Sathya) ಧಾರಾವಾಹಿ ಬೇರೆ ಎಲ್ಲಾ ಧಾರಾವಾರದಿಂದ ಚೂರೂ ಭಿನ್ನವಾಗಿದೆ. ನಟಿ ಅಂದ್ರೆ ಅಳು, ನೋವು, ಮನೆ, ಕೆಲಸ ಅಂತ ಇರುತ್ತೆ. ಆದ್ರೆ ಎಲ್ಲರಿಗೂ ಬೇರೆಯದ್ದೇ ರೀತಿ ನಿರೀಕ್ಷೆ ಹುಟ್ಟಿಸಿದ್ದ ಸತ್ಯ ಸೀರಿಯಲ್. ಯಾವನೋ ಅಲ್ಲ, ಯಾವಳೋ ಅನ್ನೋ ಮೂಲಕ ಕನ್ನಡಿಗರ ಮನಗೆದ್ದ ಧಾರಾವಾಹಿ. ರಫ್ ಅಂಡ್ ಟಫ್ ಮೂಲಕ ಹೆಣ್ಣು ಮಕ್ಕಳು ಈ ತರನೂ ಇರಬಹುದಾ ಎಂದು ತೋರಿಸಿಕೊಟ್ಟ ಹೊಸ ಕಲ್ಪನೆ. ಸತ್ಯ ಲೈಫ್​ನಲ್ಲಿ ಕಾರ್ತಿಕ್ ಜೊತೆ ನಡೆದ ಮದುವೆ (Marriage) ಎಂಬ ತಿರುವು ಎಲ್ಲವನ್ನೂ ಬದಲಾಯಿಸಿದೆ. ಹುಡುಗನ ರೀತಿ ಇದ್ದವಳು ಮನೆ ಸೊಸೆ ರೀತಿ ಬದಲಾಗುತ್ತಿದ್ದಾಳೆ. ಕಾರ್ತಿಕ್ ಕೊಟ್ಟ ಸಪ್ರೈಸ್‍ನಿಂದ (Surprise) ಸತ್ಯ ಖುಷಿಯಾಗಿದ್ದಾಳೆ.


    ಚಿಕ್ಕಪ್ಪ-ಚಿಕ್ಕಮ್ಮನ ಮದುವೆ ವಾರ್ಷಿಕೋತ್ಸವ
    ಕಾರ್ತಿಕ್ ಚಿಕ್ಕಪ್ಪ ಮತ್ತು ಚಿಕ್ಕಮ್ಮನ ವಾರ್ಷಿಕೋತ್ಸವ ಇರುತ್ತೆ. ಅದಕ್ಕೆ ಸತ್ಯ ಅವರಿಗೆ ಸಪ್ರೈಸ್ ಕೊಟ್ಟು ಖುಷಿ ಪಡಿಸಿರುತ್ತಾಳೆ. ಅಲ್ಲದೇ ನಂದಿ ಬೆಟ್ಟ ಪ್ರವಾಸಕ್ಕೂ ಹೋಗಿರುತ್ತಾರೆ. ಅಲ್ಲಿ ಕಾರ್ತಿಕ್ ಚಿಕ್ಕಪ್ಪ ಸತ್ಯಾನ ಪ್ರೀತಿಯನ್ನು ಅರ್ಥ ಮಾಡಿಕೋ ಎಂದು ಹೇಳುತ್ತಾನೆ. ಅವಳಿಗೆ ಸಪ್ರೈಸ್ ಕೊಡು ಎಂದು ಹೇಳುತ್ತಾನೆ.


    ಸತ್ಯ ಕಣ್ಣಿಗೆ ಬಟ್ಟೆ ಕಟ್ಟಿದ ಕಾರ್ತಿಕ್
    ಕಾರ್ತಿಕ್ ಸತ್ಯ ಬಳಿ ಬಂದು ಕಣ್ಣಿಗೆ ಬಟ್ಟೆ ಕಟ್ಟುತ್ತೇನೆ ಎಲ್ಲಿಗೋ ಹೋಗಬೇಕು ಎಂದು ಹೇಳುತ್ತಾನೆ. ಅದಕ್ಕೆ ಸತ್ಯ ಏನೂ ಮಾತನಾಡದೇ ಕಣ್ಣಿಗೆ ಬಟ್ಟೆ ಕಟ್ಟಿಸಿಕೊಳ್ತಾಳೆ. ಅದಕ್ಕೆ ಕಾರ್ತಿಕ್ ಆಶ್ಚರ್ಯಗೊಂಡು, ಏನೂ ಕೇಳದೇ ಕಟ್ಟಿಕೊಂಡೇ ಅನ್ನೊತ್ತಾನೆ. ಪ್ರೀತಿ ಅಂದ್ರೆ ನಂಬಿಕೆ ಕಾರ್ತಿಕ್. ನನ್ನ ನಂಬಿಕೆ ನೀನು ಎನ್ನುತ್ತಾಳೆ.


    ಇದನ್ನೂ ಓದಿ: Rashmika Mandanna: ಸ್ಟೈಲಿಶ್ ಲುಕ್‍ನಲ್ಲಿ ರಶ್ಮಿಕಾ ಮಂದಣ್ಣ, ವಾವ್ ಸೂಪರ್ ಎಂದ ನೆಟ್ಟಿಗರು


    ಗ್ಯಾರೇಜ್‍ಗೆ ಬಂದ ಕಾರ್ತಿಕ್ ಮತ್ತು ಸತ್ಯ
    ಕಾರ್ತಿಕ್ ಸಪ್ರೈಸ್ ಎಂದು ಹೇಳಿ, ಗ್ಯಾರೇಜ್‍ಗೆ ಸತ್ಯಾಳನ್ನು ಕರೆದುಕೊಂಡು ಬಂದಿದ್ದಾನೆ. ಸತ್ಯ ಗ್ಯಾರೇಜ್ ನಲ್ಲಿ ತನ್ನ ಹುಡುಗರನ್ನು ನೋಡಿ ಖಷಿಯಾಗಿದ್ದಾಳೆ. ಕಾರ್ತಿಕ್ ಕೊಟ್ಟ ಸಪ್ರೈಸ್ ನಿಜವಾಗ್ಲೂ ಇಷ್ಟವಾಗಿದೆ. ಕಾರ್ತಿಕ್ ಬರೋಕು ಮುಂಚೆ ಗ್ಯಾರೇಜ್ ವಿವರಣೆ ಎಲ್ಲ ಪಡೆದುಕೊಂಡು ಬಂದಿದ್ದ.


    Zee Kannada serial, Kannada serial, Sathya Kannada serial, Sathya serial Kannada cast, Karthik give surprise to Satya, ಸತ್ಯ ಧಾರಾವಾಹಿ, ಸತ್ಯಾಗೆ ಕಾರ್ತಿಕ್ ಕೊಟ್ಟ ಸಪ್ರ್ರೈಸ್ ಏನು?, ಜೀ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಗಳು, Kannada news, Karnataka news,
    ಕಾರ್ತಿಕ್


    ಗ್ಯಾರೇಜ್ ಗೆ 10 ಲಕ್ಷ ನೀಡಿದ
    ಗ್ಯಾರೇಜ್ ಶುರುವಾಗಿ 30 ವರ್ಷಕ್ಕೂ ಮೇಲಾಗಿದೆಯಂತೆ. ಅದಕ್ಕೆ ಕಾರ್ತಿಕ್ 10 ಲಕ್ಷ ಚೆಕ್‍ನ್ನು ಸತ್ಯಾಗೆ ನೀಡಿದ್ದಾನೆ. ಅದನ್ನು ನೋಡಿ ಸತ್ಯ ಖುಷಿಯಾಗಿದ್ದಾಳೆ. ಗ್ಯಾರೇಜ್ ಹುಡುಗರು ಸಹ ಖುಷಿಯಾಗಿ ಕಾರ್ತಿಕ್‍ನನ್ನು ತಬ್ಬಿಕೊಂಡು ಸಂತೋಷದ ಕಣ್ಣೀರು ಹಾಕಿದ್ದಾರೆ.


    ಇದನ್ನೂ ಓದಿ: BBK Season 9: ಕಾವ್ಯಶ್ರೀ ಲಿಪ್‍ಸ್ಟಿಕ್ ಮೇಲೆ ಅರುಣ್ ಸಾಗರ್ ಕಣ್ಣು! ಆದರೆ ಈ ರೀತಿ ಕಮೆಂಟ್ ಮಾಡಬಾರದಿತ್ತು


    ಸತ್ಯಾ ಮೇಲೆ ಕಾರ್ತಿಕ್‍ಗೆ ಲವ್ ಆಯ್ತಾ?
    ಸತ್ಯಾಳನ್ನು ಮದುವೆ ಆಗಿದ್ದು ಕಾರ್ತಿಕ್‍ಗೆ ಇಷ್ಟ ಇರಲಿಲ್ಲ. ಮೊದ ಮೊದಲು ಅವನು ಅವಳ ಕಡೆಯೂ ತಿರುಗಿ ನೋಡುತ್ತಿರಲಿಲ್ಲ. ಅವಳು ಮಾತನಾಡಿದ್ರೂ ಬೈತಿದ್ದ. ಈಗ ಕಾರ್ತಿಕ್ ಸತ್ಯ ಜೊತೆ ಚೆನ್ನಾಗಿ ಮಾತನಾಡುತ್ತಾನೆ. ಅವಳ ಖುಷಿ ನೋಡುತ್ತಾನೆ. ತನ್ನ ಅಮ್ಮನ ಬಳಿಯೇ ಸುಳ್ಳು ಹೇಳುತ್ತಿದ್ದಾನೆ. ಹಾಗಾದ್ರೆ ಸತ್ಯ ಮೇಲೆ ಕಾರ್ತಿಕ್‍ಗೆ ಲವ್ ಆಗಿದ್ಯಾ ಅನ್ನೋ ಅನುಮಾನ ಶುರುವಾಗಿದೆ.


    Zee Kannada serial, Kannada serial, Sathya Kannada serial, Sathya serial Kannada cast, Karthik give surprise to Satya, ಸತ್ಯ ಧಾರಾವಾಹಿ, ಸತ್ಯಾಗೆ ಕಾರ್ತಿಕ್ ಕೊಟ್ಟ ಸಪ್ರ್ರೈಸ್ ಏನು?, ಜೀ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಗಳು, Kannada news, Karnataka news,
    ಕಾರ್ತಿಕ್ ಚಿಕ್ಕಪ್ಪ


    ಕಾರ್ತಿಕ್ ಮತ್ತು ಸತ್ಯ ಎಲ್ಲವನ್ನೂ ಮರೆತು ಒಂದಾಗಿ ಬಾಳ್ತಾರಾ. ಎಲ್ಲ ಕುತೂಹಕ್ಕೂ ಸತ್ಯ ಸೀರಿಯಲ್ ನೋಡಬೇಕು.

    Published by:Savitha Savitha
    First published: