Sathya Serial: ವರಮಹಾಲಕ್ಷ್ಮಿ ಹಬ್ಬದ ತಯಾರಿ ಜವಾಬ್ದಾರಿ ಸತ್ಯ ಮೇಲೆ! ಏನ್ ಮಾಡ್ತಾಳೆ ಲೇಡಿ ರಾಮಾಚಾರಿ?

ಸತ್ಯಾಗೆ ಅತ್ತೆ ಸೀತಾ, ವರಮಹಾಹಲಕ್ಷ್ಮಿ ಹಬ್ಬದ ಪೂಜೆ, ಪ್ರಸಾದದ ಜವಾಬ್ದಾರಿ ನೀಡಿದ್ದಾಳೆ. ಸತ್ಯಾಗೆ ಅದು ಯಾವುದರ ಬಗ್ಗೆಯೂ ಗೊತ್ತಿಲ್ಲ. ಲ್ಲಾ ಜವ್ದಾಬಾರಿ ಕೊಟ್ಟಿರೋ ಸತ್ಯ ಪೂಜೆಗೆ ರೆಡಿ ಮಾಡ್ತಾಳಾ? ಇಲ್ಲ ಮತ್ತೆ ಅತ್ತೆ ಕೈಯಲ್ಲಿ ಬೈಸಿಕೊಳ್ಳುತ್ತಾಳೋ ಕಾದು ನೋಡಬೇಕಿದೆ.

ಸತ್ಯ ಧಾರಾವಾಹಿ

ಸತ್ಯ ಧಾರಾವಾಹಿ

  • Share this:
ಜೀ ಕನ್ನಡ (Zee Kannada)ದಲ್ಲಿ ಪ್ರಸಾರವಾಗುತ್ತಿರುವ ಸತ್ಯ (Sathya) ಧಾರಾವಾಹಿ (Serial) ಬೇರೆ ಎಲ್ಲಾ ಧಾರವಾಹಿಗಳಿಗಿಂತ ವಿಭಿನ್ನವಾದ ಧಾರವಾಹಿ. ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತೆ. ನಟಿ ಅಂದ್ರೆ ಅಳು, ನೋವು, ಮನೆ, ಕೆಲಸ ಅಂತ ಇರುತ್ತೆ. ಆದ್ರೆ ಎಲ್ಲರಿಗೂ ಬೇರೇಯದ್ದೇ ರೀತಿ ನಿರೀಕ್ಷೆ ಹುಟ್ಟಿಸಿದ್ದ ಸತ್ಯ ಸೀರಿಯಲ್. ಯಾವನೋ ಅಲ್ಲ, ಯಾವಳೋ ಅನ್ನೋ ಮೂಲಕ ಕನ್ನಡಿಗರ ಮನಗೆದ್ದ ಧಾರಾವಾಹಿ. ರಫ್ (Ruff) ಅಂಡ್ ಟಫ್ (Tuff) ಮೂಲಕ ಹೆಣ್ಣು ಮಕ್ಕಳು ಈ ತರನೂ ಇರಬಹುದ ಎಂದು ತೋರಿಸಿಕೊಟ್ಟ ಹೊಸ ಕಲ್ಪನೆ. ಹೆಣ್ಣು ಮಕ್ಕಳ ಗಟ್ಟಿತನವನ್ನು ಅನಾವರಣಗೊಳಿಸುವಲ್ಲಿ ನಿರ್ದೇಶಕಿ ಸ್ಪಪ್ನ ಕೃಷ್ಣ ಯಶಸ್ವಿಯಾಗಿದ್ದಾರೆ. ಆದರೆ ಸತ್ಯ ಲೈಪ್‍ನಲ್ಲಿ ನಡೆದ ಮದುವೆ ಎಂಬ ತಿರುವು ಎಲ್ಲವನ್ನೂ ಬದಲಾಯಿಸಿದೆ.

ವರಮಹಾಲಕ್ಷ್ಮಿ ಹಬ್ಬ ಅಂದ್ರೂ ನಗು ಇಲ್ಲ ಸತ್ಯಾಗೆ!
ಅನಿರೀಕ್ಷಿತ ತಿರುವುಗಳಿಂದ ಸತ್ಯ ಮತ್ತು ಕಾರ್ತಿಕ್ ಮದುವೆಯಾಗೋ ಸಂದರ್ಭ ಬರುತ್ತೆ. ಇಬ್ಬರಿಗೂ ಮದುವೆ ಇಷ್ಟ ಇರಲಿಲ್ಲ. ಆದ್ರೆ ಕಾರ್ತಿಕ್ ತಂದೆ ಮಾತಿಗೆ ಬೆಲೆ ಕೊಟ್ಟು ಮದುವೆಯಾಗಿದ್ದಾರೆ. ಗಂಡು ಬೀರಿ ತರ ಇರೋ ಸತ್ಯಳನ್ನು ಸೊಸೆ ಎಂದು ಒಪ್ಪಿಕೊಳ್ಳಲು ಅತ್ತೆ ಸೀತಾಗೆ ಸಾಧ್ಯವಾಗುತ್ತಿಲ್ಲ. ಆದ ಕಾರಣ ಆಕೆಗೆ ದಿನವೂ ಏನಾದ್ರೂ ಅನ್ನುತ್ತಲೇ ಇರುತ್ತಾಳೆ. ವರಮಹಾಲಕ್ಷ್ಮಿ ಹಬ್ಬ ಅಂದ್ರೂ ಸತ್ಯಾಗೆ ಆ ಮನೆಯಲ್ಲಿ ಖುಷಿಯಿಲ್ಲ.

ಸಹಾಯ ಮಾಡುತ್ತೇನೆ ಅಂದವಳಿಗೆ ಅವಮಾನ
ಹೇಗಾದ್ರೂ ಅತ್ತೆ ಸೀತಾ ಮನವೊಲಿಸಿಕೊಳ್ಳಬೇಕು. ಅವರ ಮನೆಯ ಸಂಪ್ರದಾಯ ಕಲಿಯಬೇಕು. ಎಲ್ಲರಿಗೂ ಹೊಂದಿಕೊಳ್ಳಬೇಕು ಎಂದು ಪ್ರಯತ್ನ ಮಾಡುತ್ತಿದ್ದಾಳೆ. ವರಮಹಾಲಕ್ಷ್ಮಿ ಹಬ್ಬಕ್ಕೆ ರೆಡಿ ಮಾಡ್ತಿರೋ ಅತ್ತೆಗೆ ತಾನು ಏನಾದ್ರೂ ಸಹಾಯ ಮಾಡಲಾ ಎಂದು ಸತ್ಯ ಕೇಳುತ್ತಾಳೆ. ಅದಕ್ಕೆ ಸೀತಾ ಹೂವನ್ನು ಕೊಟ್ಟು ತಗೋ ಕಟ್ಟು ಎನ್ನುತ್ತಾಳೆ. ಸತ್ಯ ಕಂಗಾಲಾಗುತ್ತಾಳೆ. ಅದಕ್ಕೆ ಸೀತಾ ನಿನಗೆ ಬರಲ್ಲ ತಾನೇ ನೀನು ಗಂಡುಬೀರಿ ಎಂದು ಅವಮಾನ ಮಾಡುತ್ತಾಳೆ. ಅದಕ್ಕೆ ಸತ್ಯ ಕಣ್ಣೀರು ಹಾಕುತ್ತಿದ್ದಾಳೆ.

ಇದನ್ನೂ ಓದಿ: Bigg Boss OTT: ನಾಳೆಯಿಂದಲೇ ಅಸಲಿ ಆಟ ಶುರು! ಬಿಗ್ ಮನೆಯೊಳಗೆ ಇವ್ರೆಲ್ಲ ಹೋಗ್ತಾರಂತೆ! 

ಚಾಡಿ ಹೂದುವ ಅಭ್ಯಾಸ ಬೇರೆ ಇದೆಯಾ ಎಂದು ಕೊಂಕು
ಹಬ್ಬದ ದಿನ ಸತ್ಯ ಅಳುತ್ತಿದ್ದನ್ನು ನೋಡಿ ಮಾವ ಅಂದ್ರೆ ರಾಮಚಂದ್ರ ರಾಯರು ಏಕೆ ಎಂದು ಕೇಳುತ್ತಾಳೆ. ಏನೂ ಹೇಳದೇ ಇರೋ ಕಾರಣ ತನ್ನ ಹೆಂಡತಿ ಸೀತಾನೇ ಎಂದುಕೊಂಡು, ಅವಳನ್ನು ಕರೆದು ಕೇಳುತ್ತಾರೆ. ಅದಕ್ಕೆ ಕೋಪಗೊಂಡ ಸೀತಾ ಚಾಡಿ ಬೇರೆ ಹೇಳುತ್ತೀಯಾ ಎಂದು ಸಿಡಿಮಿಡಿಗೊಂಡಿದ್ದಾಳೆ.

ವರಮಹಾಲಕ್ಷ್ಮಿ ಹಬ್ಬ ರೆಡಿ ಮಾಡೋ ಜವಾಬ್ದಾರಿ ಸತ್ಯ ಮೇಲೆ
ಇನ್ನು ಮನೆಗೆ ಹೊಂದಿಕೊಳ್ಳಬೇಕು ಅಂದುಕೊಂಡಿರುವ ಸತ್ಯಾಗೆ ಅತ್ತೆ ಸೀತಾ, ವರಮಹಾಹಲಕ್ಷ್ಮಿ ಹಬ್ಬದ ಪೂಜೆ, ಪ್ರಸಾದದ ಜವಾಬ್ದಾರಿ ನೀಡಿದ್ದಾಳೆ. ಸತ್ಯಾಗೆ ಅದು ಯಾವುದರ ಬಗ್ಗೆಯೂ ಗೊತ್ತಿಲ್ಲ. ಏನೂ ತಿಳಿಯದೇ ಕೀರ್ತನಾ ಬಳಿ ಸಹಾಯ ಕೇಳಿದ್ರೆ ಅವಳು ತನಗೆ ಏನೂ ಗೊತ್ತಿಲ್ಲ ಎಂದು ಜಾರಿಕೊಂಡಿದ್ದಾಳೆ.

ಏನ್ ಮಾಡ್ತಾಳೆ ಸತ್ಯ, ಪೂಜೆ ಸರಾಗವಾಗಿ ಆಗುತ್ತಾ?
ಇನ್ನು ಪೂಜೆ ಬಗ್ಗೆ ಎಳ್ಳು ಕಾಳಷ್ಟು ಸತ್ಯಗೆ ಗೊತ್ತಿಲ್ಲ. ಯೂಟ್ಯೂಬ್ ನೋಡಿ ಏನಾದ್ರೂ ತಯಾರಿ ಮಾಡ್ತಾಳಾ? ಅಥವಾ ತನ್ನ ಅಮ್ಮನಿಗೆ ಕರೆ ಮಾಡಿ ಅವಳು ಹೇಳಿದಂತೆ, ಪೂಜೆ, ಪ್ರಸಾದ್ ಮಾಡಬಹುದು.

ಇದನ್ನೂ ಓದಿ: HBD Ashika Ranganath: ಚುಟು ಚುಟು ಬೆಡಗಿಗೆ ಇಂದು ಜನ್ಮದಿನದ ಸಂಭ್ರಮ, 26ನೇ ವಸಂತಕ್ಕೆ ಕಾಲಿಟ್ಟ ಆಶಿಕಾ ರಂಗನಾಥ್

ಇನ್ನು ಎಲ್ಲಾ ಜವ್ದಾಬಾರಿ ಕೊಟ್ಟಿರೋ ಸತ್ಯ ಪೂಜೆಗೆ ರೆಡಿ ಮಾಡ್ತಾಳಾ? ಇಲ್ಲ ಮತ್ತೆ ಅತ್ತೆ ಕೈಯಲ್ಲಿ ಬೈಸಿಕೊಳ್ಳುತ್ತಾಳೋ ಕಾದು ನೋಡಬೇಕಿದೆ. ಇದೆಲ್ಲಾ ನೋಡಬೇಕು ಅಂದ್ರೆ ಇವತ್ತಿನ ಸಂಚಿಕೆ ನೋಡಲೇ ಬೇಕು.
Published by:Savitha Savitha
First published: