• Home
 • »
 • News
 • »
 • entertainment
 • »
 • Sagar Biligowda: ಅಮುಲ್ ಬೇಬಿ ಕಾರ್ತಿಕ್ ಮದುವೆ, ಸಂಗಾತಿಯನ್ನ ಪರಿಚಯಿಸಿದ ನಟ

Sagar Biligowda: ಅಮುಲ್ ಬೇಬಿ ಕಾರ್ತಿಕ್ ಮದುವೆ, ಸಂಗಾತಿಯನ್ನ ಪರಿಚಯಿಸಿದ ನಟ

ಸಾಗರ್ ಬಿಳಿಗೌಡ ಮದುವೆ

ಸಾಗರ್ ಬಿಳಿಗೌಡ ಮದುವೆ

ಸಾಗರ್ ಬಿಳಿಗೌಡ ಮದುವೆ ಆಗಲು ರೆಡಿಯಾಗಿದ್ದಾರೆ. ನಟಿ, ಮಾಡೆಲ್ ಆಗಿರುವ ಸಿರಿ ರಾಜು ಜೊತೆ ತಮ್ಮ ಮುಂದಿನ ಪಯಣ ಶುರು ಮಾಡಲಿದ್ದಾರೆ.

 • News18 Kannada
 • Last Updated :
 • Karnataka, India
 • Share this:

  ಸತ್ಯ (Sathya) ಧಾರಾವಾಹಿ (Serial) ಜೀ ಕನ್ನಡದಲ್ಲಿ (Zee Kannada) ಪ್ರಸಾರವಾಗುತ್ತಿರುವ ಜನಪ್ರಿಯ ಸೀರಿಯಲ್. ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತೆ. ಗಂಡು ಬೀರಿ ತರ ಇರುವ ಸತ್ಯ ಬದಲಾಗಿದ್ದನ್ನು ನೋಡಲು ಅದೆಷ್ಟೋ ಅಭಿಮಾನಿಗಳು ಕಾಯ್ತಾ ಇರುತ್ತಾರೆ. ತನ್ನ ವಿಭಿನ್ನ ಕಥೆಯ ಮೂಲಕ ಜನರ ಮನಸ್ಸು ಗೆಲ್ಲುವಲ್ಲಿ ಧಾರಾವಾಹಿ ಯಶಸ್ವಿಯಾಗಿದೆ. ಆದ್ರೆ ಸತ್ಯಾಳ ಬಾಳಲ್ಲಿ ಕಾರ್ತಿಕ್ ಜೊತೆ ನಡೆದ ಮದುವೆ (Marriage) ಎಂಬ ತಿರುವಿನಲ್ಲಿ ಎಲ್ಲವೂ ಬದಲಾಗಿದೆ. ಪ್ಯಾಂಟ್, ಶರ್ಟ್ ಹಾಕುತ್ತಿದ್ದ ಸತ್ಯ ಸೀರೆ ಉಡುತ್ತಿದ್ದಾಳೆ. ಗಂಡ, ಅತ್ತೆ ಮನಸ್ಸು ಗೆಲ್ಲಲು ಹರಸಾಹಸ ಪಡುತ್ತಿದ್ದಾಳೆ. ಅವರ ಮನೆ ಸಂಸ್ಕೃತಿ ಕಲಿಯುತ್ತಿದ್ದಾಳೆ. ಅಡುಗೆ ಕಲಿಯುತ್ತಿದ್ದಾಳೆ. ಆದ್ರೆ ನಾವು ಈಗ ಹೇಳ್ತಿರೋದು ಧಾರಾವಾಹಿ ಬಗ್ಗೆ ಅಲ್ಲ. ಕಾರ್ತಿಕ್ ಅಂದ್ರೆ ಸಾಗರ್ ಬಿಳಿಗೌಡ ಅವರ ನಿಜ ಜೀವನದ (Real Life) ಮದುವೆ ಬಗ್ಗೆ.


  ಅಮುಲ್  ಬೇಬಿ ಕಾರ್ತಿಕ್
  ಸತ್ಯ ಧಾರಾವಾಹಿಯಲ್ಲಿ ಕಾರ್ತಿಕ್ ಪಾತ್ರ ಮಾಡುತ್ತಾ ಇರುವವರ ನಿಜವಾದ ಹೆಸರು ಸಾಗರ್ ಬಿಳಿಗೌಡ. ಸೀರಿಯಲ್‍ನಲ್ಲಿ ಕಾರ್ತಿಕ್ ತುಂಬಾ ಮುಗ್ಧ. ತನ್ನ ಅಮ್ಮನ ಮಾತು ಕೇಳೋ ಮಗ. ಎಲ್ಲದಕ್ಕೂ ಭಯ ಪಡೋ ಹುಡುಗ. ಅದಕ್ಕೆ ಸತ್ಯ ಇವನಿಗೆ ಅಮುಲ್  ಬೇಬಿ ಎಂದು ಹೆಸರಿಟ್ಟಿದ್ದಳು. ಅವನು ಅದೇ ತರ ಮಾಡ್ತಾ ಇದ್ದ. ಆದ್ರೆ ನಿಜ ಜೀವನದಲ್ಲಿ ಧೈರ್ಯವಂತ ಹುಡುಗ ಸಾಗರ್.


  ಯಾರ ಜೊತೆ ಸಾಗರ್ ಮದುವೆ?
  ಸತ್ಯ ಧಾರಾವಾಹಿಯಲ್ಲಿ, ಸತ್ಯ ಜೊತೆ ಕಾರ್ತಿಕ್ ಮದುವೆ ಅಚಾನಕ್ಕಾಗಿ ನಡೆದು ಬಿಡುತ್ತೆ. ಕಾರ್ತಿಕ್ ಗೆ ಸತ್ಯ ಮದುವೆ ಆಗಲು ಇಷ್ಟ ಇರಲಿಲ್ಲ. ಆದ್ರೆ ನಿಜ ಜೀವನದಲ್ಲಿ ಸಾಗರ್ ಬಿಳಿಗೌಡ ಮದುವೆ ಆಗಲು ರೆಡಿಯಾಗಿದ್ದಾರೆ. ನಟಿ, ಮಾಡೆಲ್ ಆಗಿರುವ ಸಿರಿ ರಾಜು ಜೊತೆ ತಮ್ಮ ಮುಂದಿನ ಪಯಣ ಶುರು ಮಾಡಲಿದ್ದಾರೆ.


  ಇದನ್ನೂ ಓದಿ: Bigg Boss Kannada: ಕ್ಯಾಪ್ಟನ್ ಆದ್ರೂ ಕಾವ್ಯಶ್ರೀ ಮಾತಿಗೆ ಬೆಲೆ ಇಲ್ಲ, ರೊಚ್ಚಿಗೆದ್ದ ಮಂಗಳಗೌರಿ! 


  ಸಾಗರ್ ಬಿಳಿಗೌಡ ವೆಡ್ಸ್ ಸಿರಿ ರಾಜು
  ಸಾಗರ್ ಬಿಳಿಗೌಡ ಅವರನ್ನು ಮದುವೆ ಆಗುತ್ತಿರುವುದಾಗಿ ಸಿರಿ ರಾಜು ಅವರು ತಮ್ಮ ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.'ನಾನು ಮದುವೆಯಾಗುತ್ತಿರುವ ಅತ್ಯುತ್ತಮ ವ್ಯಕ್ತಿಯನ್ನ ಪರಿಚಯಿಸುತ್ತಿದ್ದೇನೆ' ಎಂದು ಸಿರಿ ರಾಜು ಇನ್ಸ್ಟಾಗ್ರಾಮ್ ನಲ್ಲಿ ಸಾಗರ್ ಬಿಳಿಗೌಡ ಜೊತೆಗಿನ ಫೋಟೋಗಳನ್ನು ಶೇರ್ ಮಾಡಿದ್ದಾರೆ. ತಮ್ಮ ಖುಷಿಯನ್ನು ಹಂಚಿಕೊಂಡಿದ್ದಾರೆ.


  zee Kannada serial, sathya serial actor marriage, sagar married plan to siri raju, sathya serial kannada cast, ಸತ್ಯ ಧಾರಾವಾಹಿ, ಅಮುಲ್ ಬೇಬಿ ಕಾರ್ತಿಕ್ ಮದುವೆ, ಸಾಗರ್ ಬಿಳಿಗೌಡ ಇವರನ್ನು ಮದುವೆ ಆಗುತ್ತಿದ್ದಾರೆ, ಜೀ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಗಳು, kannada news, karnataka news,
  ಸಾಗರ್ ಬಿಳಿಗೌಡ ವೆಡ್ಸ್ ಸಿರಿ ರಾಜು


  ಸಿರಿ ರಾಜು ಮಾಡೆಲ್ ಕಮ್ ನಟಿ. ಇವರು ಉದ್ಯಮಿ ಕೂಡ ಹೌದು. ಸಿರಿ ರಾಜು ಅವರು ಈವೆಂಟ್ ಕಂಪನಿಯನ್ನ ನಡೆಸುತ್ತಿದ್ದಾರೆ. ವಿಜಯ್ ರಾಘವೇಂದ್ರ ಜೊತೆಗೆ FIR 6 to 6 ಸಿನಿಮಾದಲ್ಲಿ ಸಿರಿ ರಾಜು ಅಭಿನಯಿಸುತ್ತಿದ್ದಾರೆ. ಸದ್ಯ ಸಾಗರ್ ಜೊತೆ ಮದುವೆ ಆಗೋ ಪ್ಲ್ಯಾನ್‍ನಲ್ಲಿ ಇದ್ದಾರೆ.


  zee Kannada serial, sathya serial actor marriage, sagar married plan to siri raju, sathya serial kannada cast, ಸತ್ಯ ಧಾರಾವಾಹಿ, ಅಮುಲ್ ಬೇಬಿ ಕಾರ್ತಿಕ್ ಮದುವೆ, ಸಾಗರ್ ಬಿಳಿಗೌಡ ಇವರನ್ನು ಮದುವೆ ಆಗುತ್ತಿದ್ದಾರೆ, ಜೀ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಗಳು, kannada news, karnataka news,
  ಸಾಗರ್ ಬಿಳಿಗೌಡ


  ಸಾಗರ್ ಬಿಳಿಗೌಡ ಅವರಿಗೆ ಶುಭಾಶಯಗಳು
  ಸಿರಿ ರಾಜು ಇನ್ಸ್ಟಾಗ್ರಾಮ್ ನಲ್ಲಿ ಸಾಗರ್ ಬಿಳಿಗೌಡ ಜೊತೆಗಿನ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದೇ ತಡ, ಇಬ್ಬರಿಗೂ ನಟ, ನಟಿಯರು. ಜನರ, ಸಂಬಂಧಿಕರ ವಿಶ್ ಮಾಡ್ತಾ ಇದ್ದಾರೆ.


  ಇದನ್ನೂ ಓದಿ: Actress Megha Shetty: ಇನ್‍ಸ್ಟಾಗ್ರಾಂ ಮೂಲಕ ಮೇಘಾ ಶೆಟ್ಟಿಗೆ ಆಫರ್, ಪಾರ್ಲೆ ಜಿ ಬಿಸ್ಕತ್‍ಗಾಗಿ ನಟನೆ ಬಿಟ್ಟು ಹೋದರಾ? 


  ಅಮುಲ್ ಬೇಬಿ ಕಾರ್ತಿಕ್ ಮದುವೆ, ಸಾಗರ್ ಬಿಳಿಗೌಡ ಅವರನ್ನು ಮದುವೆ ಆಗುತ್ತಿರುವುದಾಗಿ ಸಿರಿ ರಾಜು ಅವರು ತಮ್ಮ ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

  Published by:Savitha Savitha
  First published: