• Home
 • »
 • News
 • »
 • entertainment
 • »
 • Sathya: ಸತ್ಯ ಧಾರಾವಾಹಿಗೆ 500 ಸಂಚಿಕೆಗಳ ಸಂಭ್ರಮ, ಲೇಡಿ ರಾಮಾಚಾರಿಗೆ ಜೈ ಅಂದ್ರು ಜನ!

Sathya: ಸತ್ಯ ಧಾರಾವಾಹಿಗೆ 500 ಸಂಚಿಕೆಗಳ ಸಂಭ್ರಮ, ಲೇಡಿ ರಾಮಾಚಾರಿಗೆ ಜೈ ಅಂದ್ರು ಜನ!

ಸತ್ಯ ಧಾರಾವಾಹಿಗೆ 500 ಸಂಚಿಕೆಗಳ ಸಂಭ್ರಮ

ಸತ್ಯ ಧಾರಾವಾಹಿಗೆ 500 ಸಂಚಿಕೆಗಳ ಸಂಭ್ರಮ

ಸತ್ಯ ಧಾರಾವಾಹಿ ದಿನಕ್ಕೊಂದು ತಿರುವುಗಳ ಮೂಲಕ ಮುನ್ನುಗುತ್ತಿದೆ. ಖಡಕ್ ಮಾತಿನ, ಮಾಸ್ ಲುಕ್ ನ ಸತ್ಯ ಸೀರಿಯಲ್‍ಗೆ 500 ಸಂಚಿಕೆಗಳ ಸಂಭ್ರಮ. ಇನ್ನೂ ಹೆಚ್ಚು ಸಂಚಿಕೆಗಳನ್ನು ಮಾಡುವ ಖುಷಿಯಲ್ಲಿದೆ ಧಾರಾವಾಹಿ ತಂಡ.

 • News18 Kannada
 • Last Updated :
 • Karnataka, India
 • Share this:

  ಸತ್ಯ (Sathya) ಧಾರಾವಾಹಿ (Serial) ಜೀ ಕನ್ನಡದಲ್ಲಿ (Zee Kannada) ಪ್ರಸಾರವಾಗುತ್ತಿರು ಜನಪ್ರಿಯ ಸೀರಿಯಲ್ (Serial). ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತೆ. ಗಂಡು ಬೀರಿ ತರ ಇರುವ ಸತ್ಯಳನ್ನು ನೋಡಲು ಅದೆಷ್ಟೋ ಅಭಿಮಾನಿಗಳು ಕಾಯ್ತಾ ಇರುತ್ತಾರೆ. ತನ್ನ ವಿಭಿನ್ನ ಕಥೆಯ ಮೂಲಕ ಜನರ ಮನಸ್ಸು ಗೆಲ್ಲುವಲ್ಲಿ ಧಾರಾವಾಹಿ ಯಶಸ್ವಿಯಾಗಿದೆ. ಆದ್ರೆ ಸತ್ಯಾಳ ಬಾಳಲ್ಲಿ ನಡೆದ ಮದುವೆ ಎಂಬ ತಿರುವಿನಲ್ಲಿ ಎಲ್ಲವೂ ಬದಲಾಗಿದೆ. ಪ್ಯಾಂಟ್, ಶರ್ಟ್ ಹಾಕುತ್ತಿದ್ದ ಸತ್ಯ ಸೀರೆ ಉಡುತ್ತಿದ್ದಾಳೆ. ಗಂಡ, ಅತ್ತೆ ಮನಸ್ಸು ಗೆಲ್ಲಲು ಹರಸಾಹಸ ಪಡುತ್ತಿದ್ದಾಳೆ. ಅವರ ಮನೆ ಸಂಸ್ಕøತಿ ಕಲಿಯುತ್ತಿದ್ದಾಳೆ. ಅಡುಗೆ ಕಲಿಯುತ್ತಿದ್ದಾಳೆ. ಗಂಡ ಕಾರ್ತಿಕ್ ಪ್ರೀತಿ (Love) ಪಡೆಯಲು ಒದ್ದಾಡುತ್ತಿದ್ದಾಳೆ. ಸತ್ಯ ಧಾರಾವಾಹಿ 500 ಸಂಚಿಕೆಗಳ (Episode) ಸಂಭ್ರಮದಲ್ಲಿದೆ.


  ಸತ್ಯ ಧಾರಾವಾಹಿಗೆ 500 ಸಂಚಿಕೆಗಳ ಸಂಭ್ರಮ
  ಸತ್ಯ ಧಾರಾವಾಹಿ ದಿನಕ್ಕೊಂದು ತಿರುವುಗಳ ಮೂಲಕ ಮುನ್ನುಗುತ್ತಿದೆ. ಖಡಕ್ ಮಾತಿನ, ಮಾಸ್ ಲುಕ್ ನ ಸತ್ಯ ಸೀರಿಯಲ್‍ಗೆ 500 ಸಂಚಿಕೆಗಳ ಸಂಭ್ರಮ. ಇನ್ನೂ ಹೆಚ್ಚು ಸಂಚಿಕೆಗಳನ್ನು ಮಾಡುವ ಖುಷಿಯಲ್ಲಿದೆ ಧಾರಾವಾಹಿ ತಂಡ.


  ಸತ್ಯಾಗೆ 6 ತಿಂಗಳು ಮಾತ್ರ ಟೈಮ್
  ಸತ್ಯ ಕಾರ್ತಿಕ್‍ನನ್ನು ಮದುವೆ ಆಗಿರೋದು ಅತ್ತೆ ಸೀತಾಗೆ ಇಷ್ಟ ಇಲ್ಲ. ಸತ್ಯ ಕೋಟೆ ಮನೆಗೆ ತಕ್ಕ ಸೊಸೆ ಅಲ್ಲ ಎಂದು, ಸತ್ಯ ಬಳಿ ಡಿವೋರ್ಸ್ ಪೇಪರ್ ಗೆ ಸಹಿ ಮಾಡಿಸಿಕೊಂಡಿದ್ದಾಳೆ. 6 ತಿಂಗಳು ಟೈಂ ಕೊಟ್ಟಿದ್ದಾಳೆ. 6 ತಿಂಗಳಲ್ಲಿ ಮನೆಯ ಎಲ್ಲಾ ಸಂಸ್ಕøತಿ ಕಲಿತು, ಮನೆಯವರಿಗೆ ಇಷ್ಟ ಆಗಬೇಕು. ಇಲ್ಲದಿದ್ದರೆ ಮನೆ ಬಿಟ್ಟು ಹೋಗಬೇಕು.


  ಇದನ್ನೂ ಓದಿ: Lakshana: ಇಕ್ಕಟ್ಟಿಗೆ ಸಿಲುಕಿದ ಭೂಪತಿ, ನಕ್ಷತ್ರಾ ಮುಖ್ಯನಾ, ವೈಷ್ಣವಿನಾ 


  ಕಾರ್ತಿಕ್ ಪ್ರೀತಿ ಪಡೆಯಲು ಒದ್ದಾಟ
  ಸತ್ಯಾಗೆ ಒಂದರ ಮೇಲೊಂದು ಸಂಕಷ್ಟಗಳು ಎದುರಾಗುತ್ತಿವೆ. ಈ ನಡುವೆ ಕಾರ್ತಿಕ್ ಪ್ರೀತಿಯಾದ್ರೂ ಸಿಗುತ್ತಾ ಅಂತ ಕಾಯ್ತಾ ಇದ್ದಾಳೆ. ಆದ್ರೆ ಕಾರ್ತಿಕ್‍ಗೆ ಸತ್ಯ ಮೇಲೆ ಪ್ರೀತಿ ಇದ್ರೂ ಅದು ಗೊತ್ತಾಗುತ್ತಿಲ್ಲ. ಸತ್ಯಾಳನ್ನು ಕಂಡ್ರೆ ಕೋಪಗೊಳ್ಳುತ್ತಾನೆ. ಕೆಲವೊಮ್ಮೆ ಚೆನ್ನಾಗಿ ಮಾತನಾಡುತ್ತಾನೆ.


  zee kannada serial, kannada serial, sathya kannada serial, sathya serial complete 500 episodes, sathya serial Kannada cast, ಸತ್ಯ ಧಾರಾವಾಹಿ, ಸತ್ಯ ಸೀರಿಯಲ್‍ಗೆ 500 ಸಂಚಿಕೆಗಳ ಸಂಭ್ರಮ, ಜೀ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಗಳು, kannada news, karnataka news,
  ಕಾರ್ತಿಕ್


  ಬಾಲನನ್ನು ಮದುವೆಯಾದ ದಿವ್ಯಾ
  ಸತ್ಯ ಅಕ್ಕ ದಿವ್ಯಾ. ಮನೆಯವರೆಲ್ಲಾ ಸೇರಿ ದಿವ್ಯಾ ಮತ್ತು ಕಾರ್ತಿಕ್ ನ ಮದುವೆ ನಿಶ್ಚಯ ಮಾಡಿರುತ್ತಾರೆ. ಅದಕ್ಕೆ ಎಲ್ಲ ಸಿದ್ಧತೆಯೂ ಆಗಿರುತ್ತದೆ. ಬೆಳಗ್ಗೆ ಮದುವೆ ಇರಬೇಕಾದ್ರೆ, ರಾತ್ರಿ ದಿವ್ಯಾ ಓಡಿ ಹೋಗಿರುತ್ತಾಳೆ. ಆಗ ಕಾರ್ತಿಕ್ ಅಪ್ಪ ಕೇಳಿಕೊಂಡ್ರು ಅಂತ ಸತ್ಯ ಕಾರ್ತಿಕ್‍ನನ್ನು ಮದುವೆ ಆಗಿರುತ್ತಾಳೆ. ಮದುವೆ ಮನೆಯಿಂದ ಓಡಿ ಹೋಗಿದ್ದ ದಿವ್ಯಾ ಬಾಲನ ಜೊತೆ ಮದುವೆ ಆಗಿರುತ್ತಾಳೆ.


  ಇದನ್ನೂ ಓದಿ: Kannadathi: ಹರ್ಷನಿಗಾಗಿ ಅಡ್ಡ ದಾರಿ ಹಿಡಿದ ವರು! ಸಾನಿಯಾ ಹೇಳಿದ ಪೇಪರ್​ ಹಿಡಿದು ಹೊಸ ಗೇಮ್ 


  ದಿವ್ಯಾ ಬಗ್ಗೆ ಸತ್ಯಾಗೆ ಹೆಚ್ಚಾದ ಚಿಂತೆ!
  ಸತ್ಯಾಗೆ ಬಾಲನ ಬಗ್ಗೆ ಚೆನ್ನಾಗಿ ಗೊತ್ತು. ಅವನು ಮೋಸಗಾರ. ವಂಚನೆ ಮಾಡಿ ದಿವ್ಯಾಳನ್ನು ಮದುವೆ ಆಗಿದ್ದಾನೆ. ಈ ಹಿಂದೆ ಸತ್ಯಾನೇ ಬಾಲನನ್ನು ಜೈಲಿಗೆ ಹಾಕಿಸಿದ್ದಳು. ಅದನ್ನು ಹೇಳಿದ್ರೂ ದಿವ್ಯಾ ನಂಬ್ತಿಲ್ಲ. ಸತ್ಯ ತನ್ನ ಲೈಫ್ ನೋಡಿ ಹೊಟ್ಟೆ ಉರಿ ಪಡುತ್ತಿದ್ದಾಳೆ ಎಂದು ಕೊಳ್ತಿದ್ದಾಳೆ. ಸತ್ಯಾಗೆ ತನ್ನ ಅಕ್ಕ ದಿವ್ಯಾನ ಜೀವನ ಹಾಳಾಗುತ್ತೆ ಅನ್ನೋ ಚಿಂತೆ ಹೆಚ್ಚಾಗಿದೆ.


  zee kannada serial, kannada serial, sathya kannada serial, sathya serial complete 500 episodes, sathya serial Kannada cast, ಸತ್ಯ ಧಾರಾವಾಹಿ, ಸತ್ಯ ಸೀರಿಯಲ್‍ಗೆ 500 ಸಂಚಿಕೆಗಳ ಸಂಭ್ರಮ, ಜೀ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಗಳು, kannada news, karnataka news,
  ಸತ್ಯ


  ದಿವ್ಯಾ, ಕಾರ್ತಿಕ್ ಮತ್ತು ಸತ್ಯ ಚೆನ್ನಾಗಿರಬಾರದು ಎಂದು ಇಬ್ಬರ ಮಧ್ಯೆ ತಂದಿಡುವ ಕೆಲಸ ಮಾಡುತ್ತಿದ್ದಾಳೆ. ದಿವ್ಯಾ ಮಾತು ಕೇಳಿ ಕಾರ್ತಿಕ್ ಸತ್ಯ ಮೇಲೆ ಅನುಮಾನ ಒಡುತ್ತಿದ್ದಾನೆ. ಮುಂದೇನಾಗುತ್ತೆ ಅಂತ ನೋಡೋಕೆ ಸತ್ಯ ಧಾರಾವಾಹಿ ನೋಡಬೇಕು.

  Published by:Savitha Savitha
  First published: