ಜೀ ಕನ್ನಡ (Zee Kannada) ವಾಹಿನಿಯಲ್ಲಿ ವಿಭಿನ್ನ ರೀತಿಯಲ್ಲಿ ಪ್ರಸಾರಗೊಳ್ಳುತ್ತಿರುವ ಧಾರವಾಹಿ 'ಸತ್ಯ' ( Sathya serial) ನಂಬರ್ 1 ಸ್ಥಾನದಲ್ಲಿದೆ. ಪಕ್ಕಾ ಟಾಮ್ ಬಾಯ್ ಪಾತ್ರದಲ್ಲಿ ಗೌತಮಿ ಜಾದವ್ ಇಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ತೆರೆಯ ಮೇಲೆ ಸತ್ಯ ಪಾತ್ರವನ್ನು ನಿರ್ವಹಿಸುವ ಗೌತಮಿ ಜಾದವ್ ಗೂ ತೆರೆಯ ಹಿಂದಿನ ಗೌತಮಿ ಜಾದವ್ (Gouthami Jadav) ಗೂ ತುಂಬಾ ಹೋಲಿಕೆನೆ ಇಲ್ವಂತೆ. ತೆರೆ ಮೇಲೆ ಅವರನ್ನು ಸತ್ಯ ಪಾತ್ರದ ಗೆಟಪ್ನಲ್ಲಿ ನೋಡೋದಕ್ಕೂ ತೆರೆ ಹಿಂದೆ ನೋಡೋದಕ್ಕೂ ತುಂಬ ವ್ಯತ್ಯಾಸವಿದೆ. 2012ರಲ್ಲಿ ಪ್ರಸಾರಗೊಳ್ಳುತ್ತಿದ್ದ ಧಾರಾವಾಹಿ 'ನಾಗಪಂಚಮಿ'ಯಲ್ಲಿ ನಟಿಸಿದ್ದ ನಟಿ ಗೌತಮಿ ಅವರು ತುಂಬ ವಿಭಿನ್ನವಾದ ಪಾತ್ರದ ಮೂಲಕ ಮತ್ತೆ ಟಿವಿ ಲೋಕಕ್ಕೆ ಎಂಟ್ರಿ ಕೊಟ್ಟಿದ್ದಾರೆ.
ಡೋಂಟ್ ಕೇರ್ ಹುಡುಗಿ ಸತ್ಯ!
'ನಿಜಕ್ಕೂ ಸತ್ಯ ಧಾರಾವಾಹಿಯಲ್ಲಿ ನನ್ನ ಪಾತ್ರ ನಿಭಾಯಿಸೋದು ತುಂಬ ಕಷ್ಟವಿದೆ. ನಾನು ಈ ಸೀರಿಯಲ್ಗೋಸ್ಕರ ನಾನು ದ್ವಿಚಕ್ರ ವಾಹನ ಓಡಿಸಬೇಕಾಗಿದೆ. ನಾನು ಒಂದು ವರ್ಷದ ಹಿಂದೆ ಗಾಡಿ ಓಡಿಸಿದ್ದೆ. ಈ ಪಾತ್ರದಿಂದ ನಾನು ಕಲಿಯೋದು ಸಾಕಷ್ಟಿದೆ. ಇನ್ನು ಟೀಶರ್ಟ್-ಜೀನ್ಸ್ನಲ್ಲಿಯೇ ನಾನು ಕಾಣಿಸಿಕೊಳ್ಳುತ್ತೇನೆ' ಎಂದು ಗೌತಮಿ ಹೇಳಿದ್ದಾರೆ. ಇಲ್ಲಿ ಸತ್ಯ ಯಾವುದು ಸರಿ ಎಂದು ನಂಬಿಕೊಳ್ಳುತ್ತಾಳೋ ಅದಕ್ಕಾಗಿ ಅವಳು ಹೋರಾಡುತ್ತಾರೆ. ಇದು ಪಕ್ಕಾ ಮಹಿಳಾ ಆಧಾರಿತ ಕಥೆಯಾಗಿದೆ. ಸಾಗರ್ ಬಿಳಿಗೌಡ ಅವರು ಈ ಧಾರಾವಾಹಿಯಲ್ಲಿ ಲೀಡ್ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ಇದನ್ನೂ ಓದಿ : Hitler Kalyana Serial: 'ಹಿಟ್ಲರ್ ಕಲ್ಯಾಣ' ಲೀಲಾ ಎಡವಟ್ಟು ಅಭಿನಯಕ್ಕೆ ಅಭಿಮಾನಿಗಳು ಫಿದಾ, ನಿಮ್ಗೂ ಇಷ್ಟನಾ?
ಸತ್ಯ ಎಲ್ಲದಕ್ಕೂ 'ಡೋಂಟ್ ಕೇರ್' ಎನ್ನುವ ಟಾಮ್ ಬಾಯ್ ಶೈಲಿಯ ಹುಡುಗಿ. ಪ್ರತಿ ತಾಯಿಯೂ ತನ್ನ ಮಗಳು ಹೀಗಿರಬೇಕೆಂದು ಬಯಸುವ ವಿಶಿಷ್ಠ ಪಾತ್ರ ಸತ್ಯಳದ್ದು. ನೋಟದಲ್ಲಿ ರಫ್ ಆಂಡ್ ಟಫ್ ಇರುವ ಸತ್ಯ ವಾಸ್ತವದಲ್ಲಿ ತುಂಬಾ ಒಳ್ಳೆಯ ನಡತೆ ಇದ್ದೂ ಎಲ್ಲರಿಗೂ ಸಹಾಯ ಮಾಡುವ ಮನಸ್ಥಿತಿಯುಳ್ಳ ಹುಡುಗಿ.
ಯಾವುದೇ ಪರಿಸ್ಥಿತಿಯಲ್ಲೂ ತಲೆ ಬಾಗದ ದಿಟ್ಟ ಹೆಣ್ಣು ಮಗಳು ಆಕೆ. ಟಾಮ್ ಬಾಯ್ ಎಂದರೆ ಸಾಮಾನ್ಯ ಹುಡುಗಿಯರು ಅಸಾಮಾನ್ಯ ಕೆಲಸ ಮಾಡುವವರು. ಸತ್ಯ ಕೂಡ ಅಂತಹ ಒಬ್ಬಳು ಟಾಮ್ ಬಾಯ್! ಅವಳು ತನ್ನ ತಂದೆ ಮರಣಿಸುತ್ತಿದ್ದಾಗ ತಂದೆಗೆ ನೀಡಿದ ಮಾತಿನಂತೆ ಕುಟುಂಬದ ಜವಾಬ್ದಾರಿ ತೆಗೆದುಕೊಳ್ಳುವ ದಿಟ್ಟ ಹಾಗೂ ಭಯವಿಲ್ಲದ ಯುವತಿ. ಇಂತಹ ಕಥೆ ಎಳೆಯನ್ನು ಇಟ್ಟುಕೊಂಡು ಸತ್ಯ ಧಾರಾವಾಹಿಯನ್ನು ನಿರ್ಮಿಸಲಾಗಿದೆ.
'ನಾಗಪಂಚಮಿ'ಯ ಧಾರವಾಹಿ ಮೂಲಕ ಬೆಳ್ಳಿ ತೆರೆಗೆ ಎಂಟ್ರಿ
2012ರ ಧಾರಾವಾಹಿ 'ನಾಗಪಂಚಮಿ'ಯಲ್ಲಿ ಗೌತಮಿ ನಟಿಸಿದ್ದರು. 'ಲೂಟಿ', 'ಆದ್ಯಾ', 'ಕಿನಾರೆ' ಹಾಗೂ ತಮಿಳಿನ ಸಿನಿಮಾವೊಂದರಲ್ಲಿ ಅವರು ಬಣ್ಣ ಹಚ್ಚಿದ್ದರು. ಕಿರುತೆರೆಯಲ್ಲಿ ಮತ್ತೆ ಕಾಣಿಸಿಕೊಳ್ಳಲು ಗೌತಮಿ ಒಂದು ಒಳ್ಳೆಯ ಪಾತ್ರಕ್ಕಾಗಿ ಕಾಯುತ್ತಿದ್ದರು. ಸತ್ಯ ಪಾತ್ರಕ್ಕಾಗಿ ಗೌತಮಿ ಗಾಡಿ ಓಡಿಸುವುದನ್ನು ಕೂಡ ಕಲಿತಿದ್ದಾರೆ.
ತನ್ನಿಷ್ಟದಂತೆ ಬದುಕುವ ಹುಡುಗಿ ಸತ್ಯ ಟಾಮ್ಬಾಯ್ ರೀತಿ ಇರುತ್ತಾಳೆ. ಸತ್ಯ ಹೇಳಿದ್ದೇ ನ್ಯಾಯ. ಕಾಕತಾಳೀಯ ಎಂಬಂತೆ ಶ್ರೀಮಂತರ ಮನೆಯ ಮುಗ್ಧ ಹುಡುಗ ಅಮುಲ್ ಬೇಬಿ ಕಾರ್ತಿಕ್ ಹಾಗೂ ಸತ್ಯ ಮುಖಾಮುಖಿಯಾಗುತ್ತದೆ. ಈ ನಡುವೆ ಸತ್ಯಳ ಅಕ್ಕನನ್ನು ಕಾರ್ತಿಕ್ ಪ್ರೀತಿ ಮಾಡುತ್ತಾನೆ. ಹಣ ಹಣ ಎಂದು ಬಾಯಿ ಬಿಡುವ ಸತ್ಯಳ ಅಕ್ಕ ದಿವ್ಯಾ ಈ ಹಿಂದೆ ಪ್ರೀತಿ ಮಾಡಿದ ಹುಡುಗನಿಗೆ ಕೈಕೊಡುತ್ತಾಳೆ. ಇವುಗಳನ್ನು ಸತ್ಯ ಹೇಗೆ ನಿಭಾಯಿಸುತ್ತಾಳೆ? ಎಂಬುದೇ ಈ ಧಾರಾವಾಹಿ ಕಥೆ.
ಇದನ್ನೂ ಓದಿ: Kannada Serial Actress: ಹಿಟ್ಲರ್ ಮನೆಯಲ್ಲಿ ಲೀಲಾ ದರ್ಬಾರ್! ಮಲೈಕಾಗೆ ಮಾತಿಗೆ ಪ್ರೇಕ್ಷಕರು ಫಿದಾ
ಗೌತಮಿ ಅವರಿಗೆ ಮದುವೆಯಾಗಿದೆ. ಕನ್ನಡ ಚಿತ್ರರಂಗದಲ್ಲಿ ಸಿನಿಮಾಟೋಗ್ರಾಫರ್ ಆಗಿ ಕೆಲಸ ಮಾಡುತ್ತಿರುವ ಅಭಿಷೇಕ್ ಕಾಸರಗೋಡು ಅವರನ್ನು ಗೌತಮಿ ವರಿಸಿದ್ದಾರೆ.ಸೋಶಿಯಲ್ ಮೀಡಿಯಾದಲ್ಲಿ ಗೌತಮಿ ಜಾಧವ್ ಅವರು ಅಭಿಷೇಕ್ ಜೊತೆಗಿನ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇನ್ನು ಗೌತಮಿ ದಂಪತಿಗೆ ನಾಯಿಗಳೆಂದರೆ ತುಂಬ ಇಷ್ಟ.
ಈಗಾಗಲೇ ಸತ್ಯ ಧಾರವಾಹಿಯಲ್ಲಿ ಮುಚ್ಚಿಟ್ಟ ಎಲ್ಲಾ ಸತ್ಯಗಳು ಹೊರ ಬರುತ್ತಿವೆ. ಎರಡನೇ ಬಾರಿ ಮದುವೆಯ ಸಂಭ್ರಮದಲ್ಲಿ ಇದ್ದಾರೆ ಸತ್ಯ ತಂಡ. ಮದುವೆ ದಿವ್ಯಾ ಜೊತೆ ನಡೆಯುತ್ತಾ ಇಲ್ಲಾ ಸತ್ಯ ಜೊತೆ ನಡೆಯುತ್ತಾ ಎನ್ನುವುದು ಇನ್ನೇನು ಸ್ವಲ್ಪದರಲ್ಲೇ ತಿಳಿಯಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ