ಸತ್ಯ (Sathya) ಧಾರಾವಾಹಿ (Serial) ಜೀ ಕನ್ನಡದಲ್ಲಿ (Zee Kannada) ಪ್ರಸಾರವಾಗುತ್ತಿರು ಜನಪ್ರಿಯ ಸೀರಿಯಲ್. ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತೆ. ಗಂಡು ಬೀರಿ ತರ ಇರುವ ಸತ್ಯಳನ್ನು ನೋಡಲು ಅದೆಷೋ ಅಭಿಮಾನಿಗಳು ಕಾಯ್ತಾ ಇರುತ್ತಾರೆ. ತನ್ನ ವಿಭಿನ್ನ ಕಥೆಯ ಮೂಲಕ ಜನರ ಮನಸ್ಸು ಗೆಲ್ಲುವಲ್ಲಿ ಧಾರಾವಾಹಿ ಯಶಸ್ವಿಯಾಗಿದೆ. ಆದ್ರೆ ಸತ್ಯಾಳ ಬಾಳಲ್ಲಿ ನಡೆದ ಮದುವೆ ಎಂಬ ತಿರುವಿನಲ್ಲಿ ಎಲ್ಲವೂ ಬದಲಾಗಿದೆ. ಪ್ಯಾಂಟ್, ಶರ್ಟ್ ಹಾಕುತ್ತಿದ್ದ ಸತ್ಯ ಸೀರೆ ಉಡುತ್ತಿದ್ದಾಳೆ. ಗಂಡ, ಅತ್ತೆ (Mother In Law) ಮನಸ್ಸು ಗೆಲ್ಲಲು ಹರಸಾಹಸ ಪಡುತ್ತಿದ್ದಾಳೆ. ಅವರ ಮನೆ ಸಂಸ್ಕøತಿ ಕಲಿಯುತ್ತಿದ್ದಾಳೆ. ಅಡುಗೆ ಕಲಿಯುತ್ತಿದ್ದಾಳೆ. ಆದ್ರೂ ಅತ್ತೆ ಸೀತಾಗೆ ಸತ್ಯಾಳನ್ನು ಕಂಡ್ರೆ ಆಗುತ್ತಿಲ್ಲ. ಅದಕ್ಕೆ ಹೆಂಡ್ತಿ (Wife) ಪರ ಕಾರ್ತಿಕ್ ನಿಂತಿದ್ದಾರೆ.
ಮನೆಯ ಬಾಗಿಲಲ್ಲಿ ನಿಲ್ಲಿಸಿ ನೂರೆಂಟು ಪ್ರಶ್ನೆ
ಸತ್ಯ ಮತ್ತು ಕಾರ್ತಿಕ್ ಸೇರಿ ಒಂದು ಪ್ರಾಜೆಕ್ಟ್ ಮಾಡಿರುತ್ತಾರೆ. ಅದರ ಅವಾರ್ಡ್ ಕಾರ್ಯಕ್ರಮಕ್ಕೆ ಹೋಗಿರುತ್ತಾರೆ. ಅವರಿಗೆ ಬಹುಮಾನ ಬಂದಿರುತ್ತೆ. ಅದನ್ನು ಮನೆಯಲ್ಲಿ ಹೇಳೋಣ ಎಂದು ಖುಷಿಯಾಗಿ ಬರ್ತಾರೆ. ಆದ್ರೆ ಸೀತಾ ಅವರನ್ನು ಬಾಗಿಲಲ್ಲೇ ತಡೆದು ನೂರೆಂಟು ಪ್ರಶ್ನೆ ಕೇಳ್ತಾಳೆ. ನೀನು ಸೀರೆ ಬಿಟ್ಟು ಯಾಕೆ ಪ್ಯಾಂಟ್, ಶರ್ಟ್ ಹಾಕಿಕೊಂಡಿದ್ದೇ, ಇದು ನಮ್ಮ ಮನೆಯ ಸಂಸ್ಕøತಿನಾ ಎಂದೆಲ್ಲಾ ಪ್ರಶ್ನೆಗಳನ್ನು ಮಾಡಿದ್ದಾಳೆ.
ಹಳೇ ರೀತಿ ಕಂಡಿದ್ದ ಸತ್ಯ
ಸತ್ಯ ಮತ್ತು ಕಾರ್ತಿಕ್ ಅವಾರ್ಡ್ ಕಾರ್ಯಕ್ರಮಕ್ಕೆ ಹೊರಟಿರುತ್ತಾರೆ. ಮಧ್ಯೆದಲ್ಲಿ ಕಾರ್ತಿಕ್ ಸತ್ಯ ನಾವು ಬೈಕ್ ರೈಡ್ ಹೋಗೋಣ. ನೀನು ಸೀರೆ ಹಾಕಿಕೊಳ್ಳಬೇಡ. ಮೊದಲಿನ ರೀತಿ ಪ್ಯಾಂಟ್, ಶರ್ಟ್ ಹಾಕಿಕೊಂಡು ಬಾ ಎಂದು ಹೇಳ್ತಾನೆ. ಅವನು ಬಲವಂತ ಮಾಡಿದ್ದಕ್ಕೆ ಸತ್ಯ ಮೊದಲಿನ ರೀತಿ ರೆಡಿ ಆಗ್ತಾಳೆ. ಈಗ ಅದೇ ವಿಷ್ಯಕ್ಕೆ ಮನೆಯಲ್ಲಿ ಜಗಳ ಆಗ್ತಾ ಇದೆ.
ಎಲ್ಲಾ ಕೀರ್ತನಾ ಕುತಂತ್ರ
ಕಾರ್ತಿಕ್ ಅಕ್ಕ ಕೀರ್ತನಾ ಸತ್ಯಾನನ್ನು ಹೇಗಾದ್ರೂ ಮನೆಯಿಂದ ಆಚೆ ಕಳಿಸಬೇಕು ಎಂದುಕೊಂಡಿದ್ದಾಳೆ. ಅದಕ್ಕೆ ಅವರನ್ನು ಯಾವಾಗಲೂ ಫಾಲೋ ಮಾಡ್ತಾ ಇರ್ತಾಳೆ. ಈಗಲೂ ಸತ್ಯಾಗೆ ತೊಂದ್ರೆ ಕೊಡಬೇಕು ಎಂದು ಆಕೆ, ಆ ರೀತಿ ಡ್ರೆಸ್ ಮಾಡಿಕೊಂಡಿದ್ದನ್ನು ಫೋಟೋ ತೆಗೆದುಕೊಂಡು ಬಂದು ಅಮ್ಮ ಸೀತಾನಿಗೆ ತೋರಿಸಿದ್ದಾಳೆ. ಅದಕ್ಕೆ ಮನೆಯವರೆಲ್ಲಾ ಬೇಸರ ಮಾಡಿಕೊಂಡಿದ್ದಾರೆ.
ನನ್ನ ಹೆಂಡ್ತಿ ಇಷ್ಟ
ಮನೆಯ ಬಾಗಿಲಿನಲ್ಲೇ ನಿಲ್ಲಿಸಿ, ಎಲ್ಲರೂ ಪ್ರಶ್ನೆ ಮಾಡಿದ್ದಾರೆ. ಆದ್ರೆ ಸತ್ಯ ಏನೂ ಹೇಳದೇ ನಿಂತಿದ್ದಳು. ಅದಕ್ಕೆ ಕಾರ್ತಿಕ್ ಮಾತನಾಡಿದ್ದಾನೆ. ಆಕೆ ಈ ಮನೆಯವಳು. ಅವಳಿಗೆ ಏನು ಇಷ್ಟಾನೋ, ಆ ಡ್ರೆಸ್ ಹಾಕಿ ಕೊಳ್ತಾಳೆ. ನನ್ನ ಹೆಂಡ್ತಿ ಇಷ್ಟ .ಯಾರೂ ಏನೂ ಹೇಳಬೇಡಿ ಎಂದು ಅಮ್ಮನ ವಿರುದ್ಧ ಮಾತನಾಡುತ್ತಾನೆ. ಅದಕ್ಕೆ ಎಲ್ಲರೂ ಶಾಕ್ ಆಗ್ತಾರೆ.
ನಿನ್ನ ಜೊತೆ ನಾನು ಇರ್ತೇನೆ
ಸತ್ಯ ಗಾಬರಿ ಮಾಡಿಕೊಂಡಿರುತ್ತಾಳೆ. ಅದಕ್ಕೆ ಕಾರ್ತಿಕ್ ಧೈರ್ಯ ತುಂಬ್ತಾನೆ. ಯಾರನ್ನು ಅವರು ಹಾಕೋ ಬಟ್ಟೆಯಿಂದ ಅಳೆಯಬಾರದು ಎಂದು ಹೇಳ್ತಾನೆ. ಅಲ್ಲದೇ ಸತ್ಯ ನಾನು ನಿನ್ನ ಜೊತೆ ಸದಾ ಇರುತ್ತೇನೆ. ಯಾವುದಕ್ಕೂ ತೆಲೆ ಕೆಡಸಿಕೊಳ್ಳಬೇಡ ಎಂದು ಭರವಸೆ ನೀಡ್ತಾನೆ. ಸತ್ಯಾಗೂ ಖುಷಿ ಆಗುತ್ತೆ. ಆದ್ರೆ ಮನೆಯವರೆಲ್ಲಾ ಕಾರ್ತಿಕ್ ನಮ್ಮ ವಿರುದ್ಧ ಮಾತನಾಡಿದ ಎಂದು ಕೋಪ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: Akshatha Kukki Marriage: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಿಗ್ ಬಾಸ್ ಚೆಲುವೆ ಅಕ್ಷತಾ ಕುಕಿ!
ಗಂಡ ಕಾರ್ತಿಕ್ ಭರವಸೆಯಿಂದ ಸತ್ಯಾಗೆ ಖುಷಿಯಾಗಿದೆ. ಆದ್ರೆ ಮನೆಯವರು ಬೇಸರ ಮಾಡಿಕೊಂಡಿದ್ದಾರೆ. ಸತ್ಯ ಇದನ್ನೆಲ್ಲಾ ಹೇಗೆ ನಿಭಾಯಿಸುತ್ತಾಳೆ ಅಂತ ನೋಡಬೇಕು. ಅದಕ್ಕೆ ನೀವು ಸತ್ಯ ಸೀರಿಯಲ್ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ