ಇಂದು ಸರಿಗಮಪ Championship Final ನೇರಪ್ರಸಾರ, ತೀರ್ಪುಗಾರರೊಂದಿಗೆ ಆಡಿಯನ್ಸ್ ವೋಟ್ ಲೆಕ್ಕಚಾರ!

ವಾರಾಂತ್ಯ ಬಂದರೆ ಸಾಕು ಸರಿಗಮಪ ಶೋ ನೋಡಲು ಕಾಯುತ್ತಿದ್ದ ವೀಕ್ಷಕರು ಸಹ ಇದ್ದರು. ಕಳೆದ ಮೂರು ತಿಂಗಳಿಂದ ಕಿರುತೆರೆ ವೀಕ್ಷಕರನ್ನು ರಂಜಿಸಿದ್ದ 'ಸರಿಗಮಪ' ಕಾರ್ಯಕ್ರಮ ಗ್ರ್ಯಾಂಡ್ ಫಿನಾಲೆ(Grand Finale) ಇದೇ ಫೆಬ್ರವರಿ 26ಕ್ಕೆ ನಡೆಯಲಿದೆ.

ಇಂದು ಸಂಜೆ 6ರಿಂದ ನೇರಪ್ರಸಾರ

ಇಂದು ಸಂಜೆ 6ರಿಂದ ನೇರಪ್ರಸಾರ

  • Share this:
ಜೀ ಕನ್ನಡ(Zee Kannada)ದಲ್ಲಿ ಸೀರಿಯಲ್(Serial)​ಗಳಿಗಿಂತ ಹೆಚ್ಚು ಸದ್ದು ಮಾಡಿದ್ದು ರಿಯಾಲಿಟಿ ಶೋ(Reality Show)ಗಳು. ಅದರಲ್ಲೂ ಮೊದಲಿನಿಂದಲೂ ‘ಸರಿಗಮಪ’ ರಿಯಾಲಿಟಿ ಶೋ(SAREGAMAPA Reality Show) ಅಂದರೆ, ಎಲ್ಲರಿಗೂ ಅಚ್ಚುಮೆಚ್ಚು. ವಾರಾಂತ್ಯ ಬಂದರೆ ಸಾಕು ಸರಿಗಮಪ ಶೋ ನೋಡಲು ಕಾಯುತ್ತಿದ್ದ ವೀಕ್ಷಕರು ಸಹ ಇದ್ದರು. ಕಳೆದ ಮೂರು ತಿಂಗಳಿಂದ ಕಿರುತೆರೆ ವೀಕ್ಷಕರನ್ನು ರಂಜಿಸಿದ್ದ 'ಸರಿಗಮಪ' ಕಾರ್ಯಕ್ರಮ ಗ್ರ್ಯಾಂಡ್ ಫಿನಾಲೆ (Grand Finale) ಇದೇ ಫೆಬ್ರವರಿ 26ಕ್ಕೆ ನಡೆಯಲಿದೆ. ವಿಶೇಷ ಅಂದರೆ, ಈ ಗ್ರ್ಯಾಂಡ್ ಫಿನಾಲೆ ಕಾರ್ಯಕ್ರಮವನ್ನು ಜೀ ಕನ್ನಡ ನೇರಪ್ರಸಾರ (Zee Kannada Live Telecast) ಮಾಡಲಿದೆ. ವೀಕೆಂಡ್​(Weekend)ನಲ್ಲಿಎಲ್ಲೂ ಹೋಗದೇ ಮನೆಯಲ್ಲಿಯೇ ಕಾಲ ಕಳೆಯುವವರಿಗೆ, ‘ಸರಿಗಮಪ’ ಸಖತ್​ ಮನರಂಜನೆ ನೀಡಲಿದೆ.  ಜೀ ಕನ್ನಡ ಈ ಬಾರಿ ಕಳೆದ ಸೀಸನ್​ಗಳಲ್ಲಿ ಚೆನ್ನಾಗಿ ಹಾಡಿದ್ದ ಸ್ಫರ್ಧಿಗಳನ್ನು ಒಟ್ಟುಗೂಡಿಸಿ, ‘ಸರಿಗಮಪ’ ಚಾಂಪಿಯನ್​ಶಿಪ್(Championship) ನಡೆಸಿಕೊಂಡು ಬಂದಿತ್ತು. ಎಲ್ಲ ಸೀಸನ್​ಗಳಲ್ಲಿ ಇದ್ದ ಹಾಘೇ ಈ ಚಾಂಪಿಯನ್​ ಶಿಪ್​ನಲ್ಲೂ ಮುಖ್ಯ ತೀರ್ಪುಗಾರರಾದ ನಾದ ಬ್ರಹ್ಮ ಹಂಸಲೇಖ (Hamsalekha), ವಿಜಯ್ ಪ್ರಕಾಶ್ (Vijay Prakash), ಅರ್ಜುನ್ ಜನ್ಯ (Arjun Janya) ಸಮ್ಮುಖದಲ್ಲಿ ಪ್ರತಿಭಾವಂತ ಗಾಯಕರು ತಮ್ಮ ಪ್ರತಿಭೆಯನ್ನು ಮತ್ತೊಂದು ತೋರಿಸಿದ್ದರು.

ಇಂದಿನ ಗ್ರ್ಯಾಂಡ್​ ಫಿನಾಲೆಯಲ್ಲಿ ಒಟ್ಟು 6 ತಂಡ

ಜೀ ಕನ್ನಡದ 'ಸರಿಗಮಪ' ಚಾಂಪಿಯನ್‌ಶಿಪ್‌ ಗ್ರ್ಯಾಂಡ್ ಫಿನಾಲೆಯಲ್ಲಿ 6 ತಂಡಗಳು ಭಾಗವಹಿಸಲಿವೆ. ಗಾಯಕ ಹೇಮಂತ್, ಅನುರಾಧ ಭಟ್, ನಂದಿತಾ, ಇಂದು ನಾಗರಾಜ್, ಲಕ್ಷ್ಮಿ ನಾಗರಾಜ್, ಸುಚೇತನ್ ಈ ಆರು ತಂಡಗಳ ಮೆಂಟರ್ ಆಗಿದ್ದಾರೆ. ಹೇಮಂತ್ ತಂಡದಲ್ಲಿ ಹನುಮಂತ, ವಸುಶ್ರೀ, ಶ್ರೀನಿಧಿ, ಕೀರ್ತನಾ, ಕಂಬದ ರಂಗಯ್ಯ ಹಾಗೂ ವಿಜೇತಾ ಸ್ಪರ್ಧಿಗಳು. ಅನುರಾಧ ಭಟ್ ಟೀಮ್‌ನಲ್ಲಿ ಅಂಕಿತಾ ಕುಂಡು, ಶ್ರೀ ಹರ್ಷ, ವರ್ಣ, ದರ್ಶನ್, ಅಭಿಶ್ಯಂತ್, ಮೆಹಬೂಬ್ ಭಾಗವಹಿಸುತ್ತಿದ್ದಾರೆ.

ಇದನ್ನೂ ಓದಿ: ಗೋಲ್ಡನ್ ‘ಗೂಡಿ‘ಗೆ ಬಂತು ‘ಸರಿಗಮಪ’ ಗ್ಯಾಂಗ್, ಸಂಗೀತದ ಜೊತೆ ಆಟದ ಮಸ್ತಿ

ನಂದಿತಾ ಟೀಮ್‌ನಲ್ಲಿ ರಜತ್, ಪೃಥ್ವಿ, ಸುಪ್ರಿಯಾ ಜೋಷಿ, ಸುಹಾನಾ, ಕೀರ್ತನ್ ಹೊಳ್ಳ, ಚೆನ್ನಪ್ಪ, ಇಂದು ನಾಗರಾಜ್ ತಂಡದಲ್ಲಿ ಸುನೀಲ್, ಸಾಕ್ಷಿ, ಸುಪ್ರಿತ್, ಅನ್ವಿತಾ, ಅಖಿಲಾ, ಗಗನಾ, ಲಕ್ಷ್ಮಿ ನಾಗರಾಜ್ ತಂಡದಲ್ಲಿ ಅಭಿನವ್, ನೇಹಾ, ಸದ್ವಿನಿ, ರಜತ್ ಮಯ್ಯ, ಶ್ರೀರಾಮ್, ಗುರುಕಿರಣ್ ಇದ್ದರೆ. ಸುಚೇತನ್ ತಂಡದಲ್ಲಿ, ಅಶ್ವಿನ್ ಶರ್ಮಾ, ಶರಧಿ ಪಾಟೀಲ್, ಜ್ಞಾನೇಶ, ಮದ್ವೇಶ್, ಅರುಂಧತಿ, ಆಶಾ ಸ್ಪರ್ಧಿಗಳಾಗಿದ್ದಾರೆ.

ನೇರಪ್ರಸಾರದಲ್ಲಿ ಹಾಡಲಿದ್ದಾರೆ 36 ಸ್ಪರ್ಧಿಗಳು!

'ಸರಿಗಮಪ' ಚಾಂಪಿಯನ್‌ಶಿಪ್‌ ಗ್ರ್ಯಾಂಡ್ ಫಿನಾಲೆಯಲ್ಲಿ 36 ಸ್ಪರ್ಧಿಗಳು ನೇರಪ್ರಸಾರದಲ್ಲಿ ಹಾಡಲಿದ್ದಾರೆ. ಒಂದೊಂದು ತಂಡದಿಂದ ಒಬ್ಬರೊಬ್ಬರು ವೇದಿಕೆ ಮೇಲೆ ತಮ್ಮ ತಂಡದಿಂದ ಹಾಡಲಿದ್ದಾರೆ. ಜನರಿಗೆ ಸಂಗೀತ ಜೊತೆಗೆ ಮನರಂಜನೆಯನ್ನೂ ನೀಡಲಿದೆ.

ವೀಕ್ಷಕರ ಸಮ್ಮುಖದಲ್ಲೇ ವಿನ್ನರ್​ ಘೋಷಣೆ!

ಪ್ರತಿ ಸೀಸನ್‌ನಂತೆ ನಾದಬ್ರಹ್ಮ ಹಂಸಲೇಖ, ಗಾಯಕ ವಿಜಯ್ ಪ್ರಕಾಶ್ ಹಾಗೂ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ತೀರ್ಪುಗಾರಗಾಗಿ ಕಾಣಿಸಿಕೊಳ್ಳಲಿದ್ದಾರೆ. ಇವರ ಸಮ್ಮುಖದಲ್ಲಿ ಈ 36 ಗಾಯಕರು ಹಾಡಿನ ಮೂಲಕ ಸ್ಪರ್ಧೆಗಿಳಿಯಲಿದ್ದಾರೆ. ಜೊತೆಗೆ ಆಡಿಯನ್ಸ್​ ವೋಟ್ ಮಾಡಲು ಜೀ ಕನ್ನಡ ಅವಕಾಶ ಮಾಡಿಕೊಟ್ಟಿದೆ. ಹೀಗಾಗಿ ತೀರ್ಪುಗಾರರು ಹಾಗೂ ವೀಕ್ಷಕರ ಅಭಿಪ್ರಾಯವನ್ನೂ ಸೇರಿಸಿ ವಿಜೇತರನ್ನು ಘೋಷಣೆ ಮಾಡಲಾಗುತ್ತೆ.

ಇದನ್ನೂ ಓದಿ: ಅಪ್ಪು ಕೊನೆಯ ಚಿತ್ರದ ಅಪರೂಪದ ಫೋಟೋಗಳು, ಹೇಗಿದ್ದಾನೆ ನೋಡಿ ಜೇಮ್ಸ್

ಈ ಚಾಂಪಿಯನ್​ಶಿಪ್​ ಗೆದ್ದವರಿಗೆ ಸಿಕ್ಕೋದೇನು?

ಜೀ ಕನ್ನಡದ 'ಸರಿಗಮಪ' ಚಾಂಪಿಯನ್‌ಶಿಪ್‌ ಗೆದ್ದವರಿಗೆ ದೊಡ್ಡ ಮೊತ್ತದ ಬಹುಮಾನ ಜೀ ಕನ್ನಡ ಕಡೆಯಿಂದ ಸಿಗಲಿದೆ. ಆದರೆ, ಆ ಬಹುಮಾನದ ಬಗ್ಗೆ ಜೀ ಕನ್ನಡ ಅಧಿಕೃತ ಮಾಹಿತಿ ನೀಡಿಲ್ಲ. ಇದರ ಜೊತೆಗೆ ಹಲವು ಸ್ಪಾನ್ಸರರ್​ ಕಡೆಯಿಂದ ಬಹುಮಾನ ಸಿಗಲಿದೆ. ಎಲ್ಲ ಸೀಸನ್​ಗಳ ಫೈನಲ್​ ನಂತೆ ಇಂದು ಕೂಡ ಅನುಶ್ರೀ ಜನರಿಗೆ ಮನರಂಜನೆ ನೀಡಲಿದ್ದಾರೆ. ಮಾತಿನ ಮಲ್ಲಿಯ ಮಾತು ಕೇಳುವುದಕ್ಕೆ ವೀಕ್ಷಕರು ರೆಡಿಯಾಗಿ ಟಿವಿ ಮುಂದೆ ರಿಮೋಟ್​ ಹಿಡಿದು ಕೂತಿದ್ದಾರೆ.
Published by:Vasudeva M
First published: