• Home
 • »
 • News
 • »
 • entertainment
 • »
 • SA RI GA MA PA: ಬಡಪ್ರತಿಭೆ ಬಾಳಲ್ಲಿ ಮೂಡಿತು ವಿಜಯದ ಪ್ರಕಾಶ, ವೇದಿಕೆಯಲ್ಲಿ ಸಂಗೀತ ಪಾಠ ಮಾಡಿದ ವಿಪಿ!

SA RI GA MA PA: ಬಡಪ್ರತಿಭೆ ಬಾಳಲ್ಲಿ ಮೂಡಿತು ವಿಜಯದ ಪ್ರಕಾಶ, ವೇದಿಕೆಯಲ್ಲಿ ಸಂಗೀತ ಪಾಠ ಮಾಡಿದ ವಿಪಿ!

ವೇದಿಕೆಯಲ್ಲೇ ಗುರುವಾದ ವಿಜಯ್ ಪ್ರಕಾಶ್

ವೇದಿಕೆಯಲ್ಲೇ ಗುರುವಾದ ವಿಜಯ್ ಪ್ರಕಾಶ್

ಖ್ಯಾತ ಗಾಯಕ ವಿಜಯ್ ಪ್ರಕಾಶ್ ಅವರು ಗುರುಪ್ರಸಾದ್‍ಗೆ ಸಂಗೀತ ಪಾಠ ಹೇಳಿಕೊಡಲು ಒಪ್ಪಿಕೊಂಡಿದ್ದಾರೆ. ಎಷ್ಟು ದಿನ ಇಲ್ಲಿ ಇರ್ತಿಯೋ ಗೊತ್ತಿಲ್ಲ. ನೀನು ಇರುವ ತನಕ ನನ್ನ ಕೈಯಲ್ಲಿ ಆದ ಸಂಗೀತ ಪಾಠ ಹೇಳಿ ಕೊಡ್ತೇನೆ ಎಂದು ವಿಪಿ ಹೇಳಿದ್ದಾರೆ.

 • News18 Kannada
 • Last Updated :
 • Karnataka, India
 • Share this:

  ಜೀ ಕನ್ನಡ (Zee Kannada) ಅಭಿಮಾನಿಗಳಿಗೆ ಮನರಂಜನೆ (Entetainment) ನಿಡೋದ್ರಲ್ಲಿ ಸದಾ ಮುಂದೆ ಇರುತ್ತೆ. ಕಳೆದ ವಾರದಿಂದ ಜೀ ಕನ್ನಡದಲ್ಲಿ 'ಸರಿಗಮಪ ಲಿಟಲ್ ಚಾಂಪ್ಸ್  (SA RI GA MA PA Lil Champs) ಸೀಸನ್ -19'  ಶುರುವಾಗಿದೆ. ಮಕ್ಕಳನ್ನು ಕಾರ್ಯಕ್ರಮಕ್ಕೆ ಸೆಲೆಕ್ಟ್ ಮಾಡಿಕೊಳ್ಳುತ್ತಿದ್ದಾರೆ. ಮೆಗಾ ಆಡಿಷನ್ ನಡೆಯುತ್ತಿದೆ. 18 ಸರಿಗಮಪ ಲಿಟಲ್ ಚಾಂಪ್ಸ್ ಸೀಸನ್‍ಗಳನ್ನು ಯಶಸ್ವಿಯಾಗಿ ಪೂರೈಸಿರುವ ಜೀ ಕನ್ನಡ ವಾಹಿನಿ 19ನೇ ಸೀಸನ್ ನಡೆಸುತ್ತಿದೆ.  18 ಸೀಸನ್‍ಗಳಲ್ಲಿ ಅದೆಷ್ಟೋ ಹಾಡುಗಾರರು ಇಲ್ಲಿ ಬಂದು ಕಲಿತು, ಯಶಸ್ವಿಯಾಗಿದ್ದಾರೆ. ಎಷ್ಟೋ ಜನ ತಮ್ಮ ಬದುಕು ಕಟ್ಟಿಕೊಂಡಿದ್ದಾರೆ. ಚಿತ್ರರಂಗದಲ್ಲೂ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಇದೀಗ ಮೈಸೂರಿನ (Mysuru) ಗುರು ಪ್ರಸಾದ್‍ಗೆ ವಿಜಯ್ ಪ್ರಕಾಶ್ (Vijay Prakash) ಅವರು ಗುರುಗಳಾಗಿದ್ದಾರೆ.


   'ಸರಿಗಮಪ ಲಿಟಲ್ ಚಾಂಪ್ಸ್ ಸೀಸನ್ -19'
  ಜೀ ಕನ್ನಡದಲ್ಲಿ ಹಾಡೋ ಮಕ್ಕಳಿಗೆ ದೊಡ್ಡ ವೇದಿಕೆ ರೆಡಿಯಾಗಿದೆ. ಮುದ್ದಾಗಿ ಸಾಂಗ್ಸ್ ಮಕ್ಕಳಿಗೆ ಸಿಕ್ಕೇ ಸಿಗುತ್ತೆ ಅವಕಾಶ. ಮೆಗಾ ಆಡಿಷನ್ ನಡೆಯುತ್ತಿದ್ದು, 'ಸರಿಗಮಪ ಲಿಟಲ್ ಚಾಂಪ್ಸ್ ಸೀಸನ್ -19' ಸೀಸನ್‍ಗೆ ಮಕ್ಕಳನ್ನು ಸೆಲೆಕ್ಟ್ ಮಾಡಲಾಗ್ತಿದೆ. ಈಗಾಗಲೇ ಹಲವು ಮಕ್ಕಳು ಸೆಲೆಕ್ಟ್ ಆಗಿದ್ದು, ಇವತ್ತೂ ಸಹ ಮೆಗಾ ಆಡಿಷನ್ ಮುಂದುವರೆಯಲಿದೆ.


  ಅದ್ಭುತವಾಗಿ ಹಾಡಿದ ಮೈಸೂರಿನ ಗುರುಪ್ರಸಾದ್
  ಮೆಗಾ ಆಡಿಷನ್ ರೌಂಡ್‍ನಲ್ಲಿ ಮೈಸೂರಿನ 15 ವರ್ಷದ ಗುರುಪ್ರಸಾದ್ ಎನ್ನುವ ಹುಡುಗು ಸೆಲೆಕ್ಟ್ ಆಗಿದ್ದಾನೆ. ಕಣ್ಣ ಮುಚ್ಚೇ, ಗಾಡೇ ಗೂಡೆ ಆಟ ನಮ್ಮದು ಸಾಂಗ್ ಹೇಳಿದ್ದಾನೆ. ಆ ಹಾಡು ವಿಜಯ್ ಪ್ರಕಾಶ್ ಸರ್, ಅರ್ಜುನ್ ಜನ್ಯ ಅವರಿಗೆ ಇಷ್ಟ ಆಗಿ, ಆತನನ್ನು ಸೆಲೆಕ್ಟ್ ಮಾಡಿದ್ದಾರೆ.


  ಇದನ್ನೂ ಓದಿ: BBK Season 9: ಈ ವಾರದ ಕ್ಯಾಪ್ಟನ್ ಪ್ರಶಾಂತ್ ಸಂಬರ್ಗಿ! ಕೂಗಾಟ ಮುಂದುವರೆಯುತ್ತಾ? 


  ಗುರುಪ್ರಸಾದ್ ಹಿನ್ನೆಲೆ
  ಗುರುಪ್ರಸಾದ್ ಮೈಸೂರಿ ಹುಡುಗ. ಬಡತನದಲ್ಲಿ ಅರಳಿದ ಪ್ರತಿಭೆ. 6 ತಿಂಗಳ ಹಿಂದೆ ಅಪ್ಪ ಹಾರ್ಟ್ ಅಟ್ಯಾಕ್ ಆಗಿ ತೀರಿ ಹೋಗಿದ್ದಾರಂತೆ. ಅಮ್ಮ ಮನೆ ಕೆಲಸ ಮಾಡಿ ಇವರನ್ನು ಸಾಕುತ್ತಿದ್ದಾಳೆ. ತಿಂಗಳಿಗೆ 7 ಸಾವಿರ ಬರುತ್ತಂತೆ. ಅನುಶ್ರೀ ಸಂಗೀತ ಕಲಿಯುತ್ತಿದ್ದೀರಾ ಎಂದು ಕೇಳುತ್ತಾರೆ. ಇಲ್ಲ ಎನ್ನುತ್ತಾನೆ. ಹೇಗೆ ಹಾಡ್ತೀರಿ ಎಂದಿದ್ದಕ್ಕೆ, ವಿಜಯ್ ಪ್ರಕಾಶ್ ಅವರ ಹಾಡು ಕೇಳಿ ಕಲಿತಿದ್ದೇನೆ ಎಂದು ಹೇಳ್ತಾನೆ.


  zee kannada program, sa ri ga ma pa season 19, vijay prakash teach music to mysuru boy, ಸರಿಗಮಪ ಲಿಟಲ್ ಚಾಂಪ್ಸ್ ಸೀಸನ್ 19, ಬಡತನದ ಪ್ರತಿಭೆ ಬಾಳಲಿ ಬೆಳಕು ಮೂಡಿಸುತ್ತಿರುವ ವಿಜಯ್ ಪ್ರಕಾಶ್, ವೇದಿಕೆಯಲ್ಲಿ ಸಂಗೀತಾ ಪಾಠ, ಜೀ ಕನ್ನಡ ವಾಹಿನಿಯ ಕಾರ್ಯಕ್ರಮಗಳು, kannada news, karnataka news,
  ಗುರುಪ್ರಸಾದ್


  ವೇದಿಕೆಯಲ್ಲೇ ಗುರುವಾದ ವಿಜಯ್ ಪ್ರಕಾಶ್
  ಗುರುಪ್ರಸಾದ್ ವಿಪಿ ಸರ್ ಹಾಡು ಕೇಳಿ ಕಲಿಯುತ್ತಿದ್ದೇನೆ ಎಂದಿದ್ದೇ ತಡ, ವಿಜಯ್ ಪ್ರಕಾಶ್ ಅವರು ಗುರುಪ್ರಸಾದ್‍ಗೆ ಸಂಗೀತ ಪಾಠ ಹೇಳಿಕೊಡಲು ಒಪ್ಪಿಕೊಂಡಿದ್ದಾರೆ. ಎಷ್ಟು ದಿನ ಇಲ್ಲಿ ಇರ್ತಿಯೋ ಗೊತ್ತಿಲ್ಲ. ನೀನು ಇರುವ ತನಕ ನನ್ನ ಕೈಯಲ್ಲಿ ಆಗಿದ್ದು, ನಾನು ಸಂಗೀತ ಪಾಠ ಹೇಳಿ ಕೊಡ್ತೇನೆ ಎಂದು ವಿಜಯ್ ಪ್ರಕಾಶ್ ಅವರು ಹೇಳಿದ್ದಾರೆ. ವೇದಿಕೆಯಲ್ಲೇ ಸರಿಗಮಪ ಶುರು ಮಾಡಿದ್ದಾರೆ.

  View this post on Instagram


  A post shared by Zee Kannada (@zeekannada)
  18 ಸರಿಗಮಪ ಲಿಟಲ್ ಚಾಂಪ್ಸ್ ಸೀಸನ್ ಯಶಸ್ವಿ
  ರಾಜ್ಯಾದ್ಯಂತ ಮೆಚ್ಚುಗೆ ಪಡೆದ ಜೀ ಕನ್ನಡದ ಮ್ಯೂಸಿಕ್ ರಿಯಾಲಿಟಿ ಶೋ, ಸರಿಗಮಪ ಲಿಟಲ್ ಚಾಂಪ್ಸ್. 18 ಶೋ ಗಳನ್ನು ಈಗಾಗಲೇ ಯಶಸ್ವಿಯಾಗಿ ಪೂರೈಸಿದೆ. ಎಷ್ಟೋ ಜನ ಸರಿಗಮಪ ಕಾರ್ಯಕ್ರಮದಿಂದ ಬದುಕು ಕಟ್ಟಿಕೊಂಡಿದ್ದಾರೆ. ಈ ವೇದಿಕೆಯ ಮೂಲಕ ಜನಪ್ರಿಯರಾಗಿದ್ದಾರೆ. ಕರುನಾಡ ಜನರಿಗೆ ಇಷ್ಟವಾಗಿದ್ದಾರೆ. ಸಿನಿಮಾ ರಂಗದಲ್ಲಿ ಉನ್ನತ ಸ್ಥಾನಕ್ಕೆ ಏರಿದ್ದಾರೆ.


  ಇದನ್ನೂ ಓದಿ: Sameer Acharya: ಗುಡ್‍ನ್ಯೂಸ್ ಕೊಟ್ಟ ಸಮೀರ್ ಆಚಾರ್ಯ ಮತ್ತು ಶ್ರಾವಣಿ, ಅಭಿಮಾನಿಗಳ ವಿಶ್! 


  ಬಡತನದ ಪ್ರತಿಭೆ ಬಾಳಲಿ ಬೆಳಕು ಮೂಡಿಸುತ್ತಿರುವ ವಿಜಯ್ ಪ್ರಕಾಶ್, ವೇದಿಕೆಯಲ್ಲಿ ಸಂಗೀತಾ ಪಾಠ ಹೇಳಿಕೊಟ್ಟಿದ್ದಾರೆ.

  Published by:Savitha Savitha
  First published: