• Home
 • »
 • News
 • »
 • entertainment
 • »
 • SA RI GA MA PA: ಇನ್ನೆರಡು ದಿನದಲ್ಲಿ ಆರಂಭವಾಗಲಿದೆ 'ಸರಿಗಮಪ ಲಿಟಲ್ ಚಾಂಪ್ಸ್ ಸೀಸನ್ -19

SA RI GA MA PA: ಇನ್ನೆರಡು ದಿನದಲ್ಲಿ ಆರಂಭವಾಗಲಿದೆ 'ಸರಿಗಮಪ ಲಿಟಲ್ ಚಾಂಪ್ಸ್ ಸೀಸನ್ -19

'ಸರಿಗಮಪ ಲಿಟಲ್ ಚಾಂಪ್ಸ್ ಸೀಸನ್ -19'

'ಸರಿಗಮಪ ಲಿಟಲ್ ಚಾಂಪ್ಸ್ ಸೀಸನ್ -19'

ಇನ್ನೆರೆಡು ದಿನದಲ್ಲಿ 'ಸರಿಗಮಪ ಲಿಟಲ್ ಚಾಂಪ್ಸ್ ಸೀಸನ್ -19', ಹಾಡು ಕೇಳೋಕೆ ರೆಡಿಯಾಗಿ. ಮುದ್ದಾಗಿ ಸಾಂಗ್ಸ್ ಮಕ್ಕಳಿಗೆ ಸಿಕ್ಕೇ ಸಿಗುತ್ತೆ ಅವಕಾಶ.

 • News18 Kannada
 • Last Updated :
 • Karnataka, India
 • Share this:

  ಜೀ ಕನ್ನಡ (Zee Kannada) ಅಭಿಮಾನಿಗಳಿಗೆ (Fans) ಮನರಂಜನೆ ನಿಡೋದ್ರಲ್ಲಿ ಸದಾ ಮುಂದೆ ಇರುತ್ತೆ. ಇನ್ನೇರೆಡು ದಿನದಲ್ಲಿ ಜೀ ಕನ್ನಡದಲ್ಲಿ ಶುರುವಾಗಲಿದೆ 'ಸರಿಗಮಪ ಲಿಟಲ್ ಚಾಂಪ್ಸ್ ಸೀಸನ್ -19' . 18 ಸರಿಗಮಪ ಲಿಟಲ್ ಚಾಂಪ್ಸ್ (SA RI GA MA PA Lil Champs) ಸೀಸನ್‍ಗಳನ್ನು ಯಶಸ್ವಿಯಾಗಿ ಪೂರೈಸಿರುವ ಜೀ ಕನ್ನಡ ವಾಹಿನಿ 19ನೇ ಸೀಸನ್ ತರುತ್ತದೆ. 18 ಸೀಸಸ್‍ಗಳಲ್ಲಿ ಅದೆಷ್ಟೋ ಹಾಡುಗಾರರು ಇಲ್ಲಿ ಬಂದು ಕಲಿತು, ಯಶಸ್ವಿಯಾಗಿದ್ದಾರೆ. ಎಷ್ಟೋ ಜನ ತಮ್ಮ ಬದುಕು ಕಟ್ಟಿಕೊಂಡಿದ್ದಾರೆ. ಚಿತ್ರರಂಗದಲ್ಲೂ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಈಗ ಮತ್ತೆ ಕರ್ನಾಟಕದ (Karnataka) ಮಕ್ಕಳಿಗೆ ಒಂದು ಸುವರ್ಣ ಅವಕಾಶ ಸಿಗುತ್ತಿದೆ. ಬರ್ತಿದೆ ಸರಿಗಮಪ ಲಿಟಲ್ ಚಾಂಪ್ಸ್ ಸೀಸನ್ -19. ಶನಿವಾರ, ಭಾನುವಾರ ರಾತ್ರಿ 7.30ಕ್ಕೆ ಪ್ರಸಾರವಾಗಲಿದೆ.


  ಶನಿವಾರದಿಂದ 'ಸರಿಗಮಪ ಲಿಟಲ್ ಚಾಂಪ್ಸ್ ಸೀಸನ್ -19'
  ಜೀ ಕನ್ನಡದಲ್ಲಿ ಹಾಡೋ ಮಕ್ಕಳಿಗೆ ದೊಡ್ಡ ವೇದಿಕೆ ರೆಡಿಯಾಗ್ತಿದೆ. ಮುದ್ದಾಗಿ ಸಾಂಗ್ಸ್ ಮಕ್ಕಳಿಗೆ ಸಿಕ್ಕೇ ಸಿಗುತ್ತೆ ಅವಕಾಶ. ಶನಿವಾರದಿಂದ 'ಸರಿಗಮಪ ಲಿಟಲ್ ಚಾಂಪ್ಸ್ ಸೀಸನ್ -19' ಶುರುವಾಗುತ್ತಿದ್ದು, ಆಡಿಷನ್ ನಡೆಸಿ ಮಕ್ಕಳನ್ನು ಆಯ್ಕೆ ಮಾಡಲಾಗಿದೆ. ಅದರಲ್ಲಿ ಮತ್ತೆ ಯಾರು ಸೆಲೆಕ್ಟ್ ಹಾಕ್ತಾರೆ ಅಂತ ಶನಿವಾರ, ಭಾನುವಾರದ ಕಾರ್ಯಕ್ರಮ ನೋಡಬೇಕು.


  18 ಸರಿಗಮಪ ಲಿಟಲ್ ಚಾಂಪ್ಸ್ ಸೀಸನ್ ಯಶಸ್ವಿ
  ರಾಜ್ಯಾದ್ಯಂತ ಮೆಚ್ಚುಗೆ ಪಡೆದ ಜೀ ಕನ್ನಡದ ಮ್ಯೂಸಿಕ್ ರಿಯಾಲಿಟಿ ಶೋ, ಸರಿಗಮಪ ಲಿಟಲ್ ಚಾಂಪ್ಸ್. 18 ಶೋ ಗಳನ್ನು ಈಗಾಗಲೇ ಯಶಸ್ವಿಯಾಗಿ ಪೂರೈಸಿದೆ. ಎಷ್ಟೋ ಜನ ಸರಿಗಮಪ ಕಾರ್ಯಕ್ರಮದಿಂದ ಬದುಕು ಕಟ್ಟಿಕೊಂಡಿದ್ದಾರೆ. ಈ ವೇದಿಕೆಯ ಮೂಲಕ ಜನಪ್ರಿಯರಾಗಿದ್ದಾರೆ. ಕರುನಾಡ ಜನರಿಗೆ ಇಷ್ಟವಾಗಿದ್ದಾರೆ. ಸಿನಿಮಾ ರಂಗದಲ್ಲಿ ಉನ್ನತ ಸ್ಥಾನಕ್ಕೆ ಏರಿದ್ದಾರೆ.


  ಇದನ್ನೂ ಓದಿ: Kannadathi: ಹರ್ಷ ಅಮ್ಮಮ್ಮನ ಬಳಿ ಮಾತನಾಡುವಾಗಲೇ ಕೋಮಾಗೆ ಜಾರಿದ ರತ್ನಮಾಲಾ! 


  ಜೀ ಕನ್ನಡ ವಾಹಿನಿಯ ಯಶಸ್ವಿ ಕಾರ್ಯಕ್ರಮಗಳು
  ಜೀ ಕನ್ನಡ ವಾಹಿನಿಯೂ ಈಗಾಗಲೇ ಜನಪ್ರಿಯ ಧಾರಾವಾಹಿಗಳನ್ನು ನೀಡುತ್ತಾ ಬಂದಿದೆ. ವಾರದ ದಿನಗಳಲ್ಲಿ ಧಾರಾವಾಹಿಗಳು ಜನರನ್ನು ರಂಜಿಸಿದ್ರೆ, ವೀಕೆಂಡ್ ನಲ್ಲಿ ಡ್ರಾಮಾ ಜೂನಿಯರ್ಸ್, ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೋಗಳು ಜನರನ್ನು ತಲುಪುವಲ್ಲಿ ಯಶಸ್ವಿಯಾಗಿವೆ.


  ಜೋಡಿ ನಂಬರ್ 01, ಕಾಮಿಡಿ ಕಿಲಾಡಿಗಳು, ಜನ ವೀಕೆಂಡ್ ಬಂತು ಅಂದ್ರೆ ಕಾರ್ಯಕ್ರಮಗಳನ್ನು ತಪ್ಪದೇ ನೋಡ್ತಾರೆ. ಈಗ ಸರಿಗಮಪ ಲಿಟಲ್ ಚಾಂಪ್ಸ್ ಬರುತ್ತಿದ್ದು, ಮಕ್ಕಳ ಮದ್ದಾಗಿ ಹಾಡೋದನ್ನು ಕೇಳಲು ಕರ್ನಾಟಕ ರೆಡಿಯಾಗಿದೆ.


  <iframe src="https://www.facebook.com/plugins/video.php?height=476&href=https%3A%2F%2Fwww.facebook.com%2Fzeekannadatv%2Fvideos%2F1287567415363764%2F&show_text=false&width=476&t=0" width="476" height="476" style="border:none;overflow:hidden" scrolling="no" frameborder="0" allowfullscreen="true" allow="autoplay; clipboard-write; encrypted-media; picture-in-picture; web-share" allowFullScreen="true"></iframe>
  'ಸರಿಗಮಪ ಲಿಟಲ್ ಚಾಂಪ್ಸ್ ಸೀಸನ್ -19'


  ರಾಜ್ಯ ಸುತ್ತಿ ಆಡಿಷನ್
  ಇನ್ನು ಹಾಡೋ ಮಕ್ಕಳನ್ನು ಆಯ್ಕೆ ಮಾಡಲು ರಾಜ್ಯಾದ್ಯಂತ ಆಡಿಷನ್ ನಡೆದಿದೆ. ಜಿಲ್ಲೆ ಜೆಲ್ಲೆಯಲ್ಲೂ ಮಕ್ಕಳು ಅವಕಾಶಕ್ಕಾಗಿ ಹಾಡಿದ್ದಾರೆ. ಈಗಾಗಲೇ ಕೆಲವು ಮಕ್ಕಳು ಸೆಲೆಕ್ಟ್ ಆಗಿದ್ದಾರೆ. ಅದರಲ್ಲಿ ಇನ್ನೂ ಕೆಲವರನ್ನು ಜಡ್ಜ್ ಗಳು ಆಯ್ಕೆ ಮಾಡಲಿದ್ದಾರೆ. ಯಾರಿಗೆ ಸಿಕ್ಕಿದೆ ಅವಕಾಶ? ಯಾರು ಚೆನ್ನಾಗಿ ಹಾಡ್ತಾರೆ, ಶನಿವಾರ ನೋಡೋಣ


  ಇದನ್ನೂ ಓದಿ: Gattimela: ತಮ್ಮನನ್ನು ಕಾಪಾಡೋಕೆ ಟೈಟ್ ಸೆಕ್ಯೂರಿಟಿ! ವೇದಾಂತ ತಮ್ಮ ದ್ರುವನಿಗೆ ಪ್ರಾಣಾಪಾಯ 


  ಇನ್ನೂ ಸರಿಗಮಪ ಲಿಟಲ್ ಚಾಂಪ್ಸ್ ನಲ್ಲಿ ಮಹಾಗುರುವಾಗಿ ಹಂಸಲೇಖ ಸರ್ ಇರುತ್ತಾರೆ. ಜಡ್ಜ್ ಗಳಾಗಿ ವಿಜಯ್ ಪ್ರಕಾಶ್, ಅರ್ಜುನ್ ಜನ್ಯ ಇರಲಿದ್ದಾರೆ. ನಿರೂಪಕಿಯಾಗಿ ಆಗಿ ಅನುಶ್ರೀ ಇರಲಿದ್ದಾರೆ. ಇನ್ನೆರೆಡು ದಿನದಲ್ಲಿ 'ಸರಿಗಮಪ ಲಿಟಲ್ ಚಾಂಪ್ಸ್ ಸೀಸನ್ -19', ಹಾಡು ಕೇಳೋಕೆ ರೆಡಿಯಾಗಿ. ಮುದ್ದಾಗಿ ಸಾಂಗ್ಸ್ ಮಕ್ಕಳಿಗೆ ಸಿಕ್ಕೇ ಸಿಗುತ್ತೆ ಅವಕಾಶ.

  Published by:Savitha Savitha
  First published: