• Home
 • »
 • News
 • »
 • entertainment
 • »
 • SA RI GA MA PA: ಪುನೀತ್ ಮಾಮ ಅಂದ್ರೆ ಇಷ್ಟ! ಅವರು ಬಡವರಿಗೆಲ್ಲಾ ಸಹಾಯ ಮಾಡಿದ್ರು

SA RI GA MA PA: ಪುನೀತ್ ಮಾಮ ಅಂದ್ರೆ ಇಷ್ಟ! ಅವರು ಬಡವರಿಗೆಲ್ಲಾ ಸಹಾಯ ಮಾಡಿದ್ರು

ಸರಿಗಮಪ ಲಿಟಲ್ ಚಾಂಪ್ಸ್ ಸೀಸನ್ -19

ಸರಿಗಮಪ ಲಿಟಲ್ ಚಾಂಪ್ಸ್ ಸೀಸನ್ -19

ಅನುಶ್ರೀ ನಿನಗೆ ಈ ಹಾಡು ಯಾಕೆ ಇಷ್ಟ ಎಂದು ಕೇಳಿದ್ದಾರೆ. ಅದಕ್ಕೆ ಸಾನಿಧ್ಯ, ಪುನೀತ್ ಮಾಮ್ ಅಂದ್ರೆ ಇಷ್ಟ ಎಂದು ಹೇಳುತ್ತಾಳೆ. ಯಾಕೆ ಎಂದು ಅನುಶ್ರೀ ಕೇಳ್ತಾಳೆ. ಅವರು ಬಡವರಿಗೆಲ್ಲಾ ಸಹಾಯ ಮಾಡಿದ್ದಾರೆ ಎಂದು ಹೇಳ್ತಾಳೆ.

 • News18 Kannada
 • Last Updated :
 • Karnataka, India
 • Share this:

  ಜೀ ಕನ್ನಡ (Zee Kannada) ಅಭಿಮಾನಿಗಳಿಗೆ ಮನರಂಜನೆ ನಿಡೋದ್ರಲ್ಲಿ ಸದಾ ಮುಂದೆ ಇರುತ್ತೆ. ಇಂದಿನಿಂದ ಜೀ ಕನ್ನಡದಲ್ಲಿ ಶುರುವಾಗಲಿದೆ 'ಸರಿಗಮಪ ಲಿಟಲ್ ಚಾಂಪ್ಸ್ ಸೀಸನ್ -19'  (SA RI GA MA PA Lil Champs). 18 ಸರಿಗಮಪ ಲಿಟಲ್ ಚಾಂಪ್ಸ್ ಸೀಸನ್‍ಗಳನ್ನು ಯಶಸ್ವಿಯಾಗಿ ಪೂರೈಸಿರುವ ಜೀ ಕನ್ನಡ ವಾಹಿನಿ 19ನೇ ಸೀಸನ್ ತರುತ್ತದೆ. 18 ಸೀಸನ್‍ಗಳಲ್ಲಿ ಅದೆಷ್ಟೋ ಹಾಡುಗಾರರು ಇಲ್ಲಿ ಬಂದು ಕಲಿತು, ಯಶಸ್ವಿಯಾಗಿದ್ದಾರೆ. ಎಷ್ಟೋ ಜನ ತಮ್ಮ ಬದುಕು ಕಟ್ಟಿಕೊಂಡಿದ್ದಾರೆ. ಚಿತ್ರರಂಗದಲ್ಲೂ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಈಗ ಮತ್ತೆ ಕರ್ನಾಟಕದ (Karnataka) ಮಕ್ಕಳಿಗೆ ಒಂದು ಸುವರ್ಣ ಅವಕಾಶ ಸಿಗುತ್ತಿದೆ. ಶನಿವಾರ, ಭಾನುವಾರ ರಾತ್ರಿ 7.30ಕ್ಕೆ ಪ್ರಸಾರವಾಗಲಿದೆ. 4.5 ವರ್ಷದ ಪುಟ್ಟ ಕಂದಮ್ಮ ಪುನೀತ್ (Punit) ಬಗ್ಗೆ ಹೇಳಿದ್ದೇನು ನೋಡಿ.


  ಇಂದಿನಿಂದ 'ಸರಿಗಮಪ ಲಿಟಲ್ ಚಾಂಪ್ಸ್ ಸೀಸನ್ -19'
  ಜೀ ಕನ್ನಡದಲ್ಲಿ ಹಾಡೋ ಮಕ್ಕಳಿಗೆ ದೊಡ್ಡ ವೇದಿಕೆ ರೆಡಿಯಾಗಿದೆ. ಮುದ್ದಾಗಿ ಸಾಂಗ್ಸ್ ಮಕ್ಕಳಿಗೆ ಸಿಕ್ಕೇ ಸಿಗುತ್ತೆ ಅವಕಾಶ. ಇಂದು 'ಸರಿಗಮಪ ಲಿಟಲ್ ಚಾಂಪ್ಸ್ ಸೀಸನ್ -19' ಶುರುವಾಗುತ್ತಿದ್ದು, ಆಡಿಷನ್ ನಡೆಸಿ ಮಕ್ಕಳನ್ನು ಆಯ್ಕೆ ಮಾಡಲಾಗಿದೆ. ಅದರಲ್ಲಿ ಮತ್ತೆ ಯಾರು ಸೆಲೆಕ್ಟ್ ಹಾಕ್ತಾರೆ ಅಂತ ಇವತ್ತು ಮತ್ತು ನಾಳೆ ಕಾರ್ಯಕ್ರಮ ನೋಡಬೇಕು.


  ಪುನೀತ್ ಮಾಮ ಅಂದ್ರೆ ಇಷ್ಟ
  ಇವತ್ತು ನಾಲ್ಕೂವರೆ ವರ್ಷದ ಸಾನಿಧ್ಯ ಎಂಬ ಮಗು ಸರಿಗಮಪ ಲಿಟಲ್ ಚಾಂಪ್ಸ್ ಸೀಸನ್ 19 ಕ್ಕೆ ಆಯ್ಕೆಯಾಗಿದ್ದು, ಬಾನದಾರಿಯಿಲ್ಲಿ ಸೂರ್ಯ ಜಾರಿ ಬಂದ ಹಾಡನ್ನು ಅದ್ಭುತವಾಗಿ ಹಾಡಿದ್ದಾಳೆ. ಅದಕ್ಕೆ ಅನುಶ್ರೀ ನಿನಗೆ ಈ ಹಾಡು ಯಾಕೆ ಇಷ್ಟ ಎಂದು ಕೇಳಿದ್ದಾರೆ.


  ಇದನ್ನೂ ಓದಿ: Punit Rajkumar: ನವೆಂಬರ್ 1ಕ್ಕೆ ಪುನೀತ್‍ಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ, ಅತಿಥಿಯಾಗಿ ಬರಲಿದ್ದಾರೆ ಜೂನಿಯರ್ ಎನ್ಟಿಆರ್


  ಅದಕ್ಕೆ ಸಾನಿಧ್ಯ, ಪುನೀತ್ ಮಾಮ್ ಅಂದ್ರೆ ಇಷ್ಟ ಎಂದು ಹೇಳುತ್ತಾಳೆ. ಯಾಕೆ ಎಂದು ಅನುಶ್ರೀ ಕೇಳ್ತಾಳೆ. ಅವರು ಬಡವರಿಗೆಲ್ಲಾ ಸಹಾಯ ಮಾಡಿದ್ದಾರೆ ಎಂದು ಹೇಳ್ತಾಳೆ.

  View this post on Instagram


  A post shared by Zee Kannada (@zeekannada)
  ಡ್ರಾಮಾ ಜೂನಿಯರ್ಸ್ ಮಕ್ಕಳು ಸಹ ಅಪ್ಪುಗೆ ನಮನ
  ಸರಿಗಮಪ ವೇದಿಕೆ ಮಾತ್ರವಲ್ಲದೇ, ಡ್ರಾಮಾ ಜೂನಿಯರ್ಸ್ ಮಕ್ಕಳು ಸಹ ಪುನೀತ್ ರಾಜ್‍ಕುಮಾರ್‍ಗೆ ನಮನ ಸಲ್ಲಿಸಿದ್ದಾರೆ. ಪುನೀತ್ ಅವರ ಹಾಡುಗಳಿಗೆ ಡ್ಯಾನ್ಸ್ ಮಾಡಿದ್ದಾರೆ. ಅವರ ಸಿನಿಮಾ ದೃಶ್ಯಗಳನ್ನು ಮರು ಸೃಷ್ಟಿಸಿದ್ದಾರೆ. ಎಲ್ಲೆಡೆ ಅಪ್ಪುವಿನ ಸ್ಮರಣೆ ನಡೆದಿದೆ.

  View this post on Instagram


  A post shared by Zee Kannada (@zeekannada)
  18 ಸರಿಗಮಪ ಲಿಟಲ್ ಚಾಂಪ್ಸ್ ಸೀಸನ್ ಯಶಸ್ವಿ
  ರಾಜ್ಯಾದ್ಯಂತ ಮೆಚ್ಚುಗೆ ಪಡೆದ ಜೀ ಕನ್ನಡದ ಮ್ಯೂಸಿಕ್ ರಿಯಾಲಿಟಿ ಶೋ, ಸರಿಗಮಪ ಲಿಟಲ್ ಚಾಂಪ್ಸ್. 18 ಶೋ ಗಳನ್ನು ಈಗಾಗಲೇ ಯಶಸ್ವಿಯಾಗಿ ಪೂರೈಸಿದೆ. ಎಷ್ಟೋ ಜನ ಸರಿಗಮಪ ಕಾರ್ಯಕ್ರಮದಿಂದ ಬದುಕು ಕಟ್ಟಿಕೊಂಡಿದ್ದಾರೆ. ಈ ವೇದಿಕೆಯ ಮೂಲಕ ಜನಪ್ರಿಯರಾಗಿದ್ದಾರೆ. ಕರುನಾಡ ಜನರಿಗೆ ಇಷ್ಟವಾಗಿದ್ದಾರೆ. ಸಿನಿಮಾ ರಂಗದಲ್ಲಿ ಉನ್ನತ ಸ್ಥಾನಕ್ಕೆ ಏರಿದ್ದಾರೆ.


  ಇದನ್ನೂ ಓದಿ: Ashwini Punit Rajkumar: ನೆನಪಿನ ಸಾಗರದಲ್ಲಿ, ಎಂದು ಭಾವನಾತ್ಮಕ ಪತ್ರ ಬರೆದ ಅಶ್ವಿನಿ ಪುನೀತ್ ರಾಜ್‍ಕುಮಾರ್! 


  ಇನ್ನೂ ಸರಿಗಮಪ ಲಿಟಲ್ ಚಾಂಪ್ಸ್ ನಲ್ಲಿ ಮಹಾಗುರುವಾಗಿ ಹಂಸಲೇಖ ಸರ್ ಇರುತ್ತಾರೆ. ಜಡ್ಜ್ ಗಳಾಗಿ ವಿಜಯ್ ಪ್ರಕಾಶ್, ಅರ್ಜುನ್ ಜನ್ಯ ಇರಲಿದ್ದಾರೆ. ನಿರೂಪಕಿಯಾಗಿ ಆಗಿ ಅನುಶ್ರೀ ಇರಲಿದ್ದಾರೆ. ಇಂದಿನಿಂದ 'ಸರಿಗಮಪ ಲಿಟಲ್ ಚಾಂಪ್ಸ್ ಸೀಸನ್ -19', ಹಾಡು ಕೇಳೋಕೆ ರೆಡಿಯಾಗಿ. ಮುದ್ದಾಗಿ ಸಾಂಗ್ಸ್ ಮಕ್ಕಳಿಗೆ ಸಿಕ್ಕೇ ಸಿಗುತ್ತೆ ಅವಕಾಶ.

  Published by:Savitha Savitha
  First published: