• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • Sa Ri Ga Ma Pa: ಸರಿಗಮಪ ಲಿಟಲ್ ಚಾಂಪ್ಸ್‌ನಲ್ಲಿ 'ಚಿತ್ರಮ್ಮ'ನ ಗಾನೋತ್ಸವ, 'ಗಾನ ಸರಸ್ವತಿ' ಮುಂದೆ ಪುಟಾಣಿ ದಿಯಾ ಹೆಗಡೆ ಗಾನಸುಧೆ!

Sa Ri Ga Ma Pa: ಸರಿಗಮಪ ಲಿಟಲ್ ಚಾಂಪ್ಸ್‌ನಲ್ಲಿ 'ಚಿತ್ರಮ್ಮ'ನ ಗಾನೋತ್ಸವ, 'ಗಾನ ಸರಸ್ವತಿ' ಮುಂದೆ ಪುಟಾಣಿ ದಿಯಾ ಹೆಗಡೆ ಗಾನಸುಧೆ!

'ಚಿತ್ರ ಗಾನೋತ್ಸವ'

'ಚಿತ್ರ ಗಾನೋತ್ಸವ'

'ಸರಿಗಮಪ ಲಿಟಲ್ ಚಾಂಪ್ಸ್ ಸೀಸನ್ -19'ನಲ್ಲಿ 'ಚಿತ್ರ ಗಾನೋತ್ಸವ' ನಡೆಯುತ್ತಿದೆ. ಈ ಕಾರ್ಯಕ್ರಮಕ್ಕೆ ಖ್ಯಾತ ಗಾಯಕಿ ಚಿತ್ರ ಅವರು ಬಂದಿದ್ದಾರೆ. ಎಲ್ಲಾ ಮಕ್ಕಳು ಚಿತ್ರಮ್ಮ ಹಾಡಿದ ಹಾಡುಗಳನ್ನು ಹಾಡಿದ್ದಾರೆ.

  • News18 Kannada
  • 3-MIN READ
  • Last Updated :
  • Karnataka, India
  • Share this:

    ಜೀ ಕನ್ನಡ (Zee Kannada) ಅಭಿಮಾನಿಗಳಿಗೆ ಮನರಂಜನೆ ನೀಡೋದ್ರಲ್ಲಿ ಸದಾ ಮುಂದೆ ಇರುತ್ತೆ. ಜೀ ಕನ್ನಡದಲ್ಲಿ 'ಸರಿಗಮಪ ಲಿಟಲ್ ಚಾಂಪ್ಸ್ ಸೀಸನ್ -19' (SA RI GA MA PA Lil Champs) ನಡೆಯುತ್ತಿದೆ. 18 ಸರಿಗಮಪ ಲಿಟಲ್ ಚಾಂಪ್ಸ್ ಸೀಸನ್‍ಗಳನ್ನು ಯಶಸ್ವಿಯಾಗಿ ಪೂರೈಸಿರುವ ಜೀ ಕನ್ನಡ ವಾಹಿನಿ 19ನೇ ಸೀಸನ್ ನಡೆಸುತ್ತಿದೆ. 18 ಸೀಸನ್‍ಗಳಲ್ಲಿ ಅದೆಷ್ಟೋ ಪುಟ್ಟ ಪುಟ್ಟ ಹಾಡುಗಾರರು (Singers) ಇಲ್ಲಿ ಬಂದು ಕಲಿತು, ಯಶಸ್ವಿಯಾಗಿದ್ದಾರೆ. ಎಷ್ಟೋ ಜನ ತಮ್ಮ ಬದುಕು ಕಟ್ಟಿಕೊಂಡಿದ್ದಾರೆ. ಚಿತ್ರರಂಗದಲ್ಲೂ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಸರಿಗಮಪ ಲಿಟಲ್ ಚಾಂಪ್ಸ್ ಸೀಸನ್ -19ಗೆ ದಿಯಾ ಹೆಗಡೆ (Diya Hegde) ಎನ್ನುವ ಹುಡುಗಿ ಸೆಲೆಕ್ಟ್ ಆಗಿದ್ದಾಳೆ.


    ಆದ್ರೆ ಈಕೆ ಸ್ಪರ್ಧಿ ಅಲ್ಲ. ವಿಶೇಷ ಸ್ಪರ್ಧಿ ಆಗಿ ಬಂದಿದ್ದಾಳೆ. ಹಾಡು ಚೆನ್ನಾಗಿ ಹಾಡ್ತಾಳೆ. ತನ್ನ ಮಾತಿನ ಮೂಲಕ ಮೋಡಿ ಮಾಡಿದ್ದಾಳೆ. ಅಲ್ಲದೇ ಈ ಬಾರಿ ಚಿತ್ರ ಗಾನೋತ್ಸವ ನಡೆಯುತ್ತಿದ್ದು, ಗಾಯಕಿ ಚಿತ್ರ ಅವರು ಬಂದಿದ್ದಾರೆ.


    ಚಿತ್ರ ಗಾನೋತ್ಸವ
    ಸರಿಗಮಪ ಲಿಟಲ್ ಚಾಂಪ್ಸ್ ಸೀಸನ್ -19 ನಲ್ಲಿ ಚಿತ್ರ ಗಾನೋತ್ಸವ ನಡೆಯುತ್ತಿದೆ. ಕಾರ್ಯಕ್ರಮಕ್ಕೆ ಗಾಯಕಿ ಚಿತ್ರ ಅವರು ಬಂದಿದ್ದಾರೆ. ಎಲ್ಲಾ ಮಕ್ಕಳು ಚಿತ್ರಮ್ಮ ಹಾಡಿದ ಹಾಡುಗಳನ್ನು ಹಾಡಿದ್ದಾರೆ. ಮಕ್ಕಳ ಹಾಡುಗಳನ್ನು ಕೇಳಿ ಚಿತ್ರ ಮೇಡಂ ಖುಷಿಯಾಗಿದ್ದಾರೆ.




    ಚಿತ್ರ ಅಮ್ಮನಿಗಾಗಿ ಹಾಡು ಬರೆದ ದಿಯಾ
    ನನ್ನ ದಿಯಾ ಡ್ರೀಮ್ ಫಾರೆಸ್ಟ್ ಗೆ ದೇವತೆ ತರ ಹಾಡ್ತಾ ಹಾಡ್ತಾ ಬಂದ್ರು. ಅವರು ಯಾರು ಅಂತ ನೋಡಿದ್ರೆ ಚಿತ್ರಮ್ಮ. ಚಿತ್ರಮ್ಮ ಅಲ್ಲಿಗೆ ಬಂದಾಗ ಏನ್ ಆಯ್ತು ಗೊತ್ತಾ ಎಂದು ಹಾಡು ಶುರು ಮಾಡ್ತಾಳೆ.


    zee kannada program, sa ri ga ma pa season 19, singer chitra is guest this week, contestant diya hegde sing song for chitra, ಸರಿಗಮಪ ಲಿಟಲ್ ಚಾಂಪ್ಸ್ ಸೀಸನ್ 19, ಸರಿಗಮಪ ಲಿಟಲ್ ಚಾಂಪ್ಸ್ 19 ನಲ್ಲಿ 'ಚಿತ್ರ ಗಾನೋತ್ಸವ', ದಿಯಾ ಹೆಗಡೆ ಹೊಸ ಹಾಡು ಕೇಳಿ!, ಜೀ ಕನ್ನಡ ವಾಹಿನಿಯ ಕಾರ್ಯಕ್ರಮಗಳು, kannada news, karnataka news,
    ಚಿತ್ರ ಅಮ್ಮನಿಗಾಗಿ ಹಾಡು ಬರೆದ ದಿಯಾ


    ನಮ್ಮ ಪ್ರೀತಿಯ ಚಿತ್ರ ಅಮ್ಮ ಬನಕ್ಕೆ ಬಂದಿದ್ದರು.
    ಅಲ್ಲಿ ಇದ್ದ ಜೀವಿಗಳೆಲ್ಲಾ ಬೆರಗು ಆಗಿದ್ವು.
    ಗಿಡದಲ್ಲಿ ಬಿಟ್ಟ ಮಲ್ಲಿಗೆ ಹೂವು ಮುದುಡಿ ಕೂತಿತ್ತು.
    ಚಿತ್ರ ಅಮ್ಮನ ನಗುವ ಕಂಡು ಅರಳೇ ಬಿಟ್ಟಿತ್ತು.
    ಕೋಗಿಲೆ ಒಂದು ಮರದ ಮೇಲೆ ನೋಡ್ತಾ ಕೂತಿತ್ತು
    ಚಿತ್ರ ಅಮ್ಮನ ಜೊತೆಗೆ ಬಂದು ಡೂಯೆಟ್ ಹಾಡಿತ್ತು
    ನವಿಲು ಒಂದು ನೃತ್ಯ ಮಾಡಲು ಕಾದು ಕೂತಿತ್ತು
    ಚಿತ್ರ ಅಮ್ಮನ ಹಾಡು ಕೇಳಿ ಗರಿಯ ಬಿಚ್ಚಿತ್ತು
    ಜಿಂಕೆಯೊಂದು ಹಾರಿ ಬಂದು ಇಣುಕಿ ನೋಡ್ತಿತ್ತು.
    ಚಿತ್ರ ಅಮ್ಮನ ತಾಳ ಕೇಳಿ ಥೈ ಥೈ ಕುಣಿದಿತ್ತು.
    ಜೇನುಗಳೆಲ್ಲ ಗೂಡು ಕಟ್ಟಿ ಸಿಹಿ ತುಂಬಿತ್ತು
    ಚಿತ್ರ ಅಮ್ಮನ ಕಂಠದ ಜೊತೆ ಬೆರಸಿ ಉಣಿಸಿತ್ತು
    ಲಿಟಲ್ ಹೆಗಡೆ ದಿಯಾ ಹೆಗಡೆ ಅಲ್ಲೇ ನಿಂತಿದ್ಲು
    ಓಡಿ ಹೋಗಿ ಚಿತ್ರ ಅಮ್ಮನ ಅಪ್ಪಿಕೊಂಡಿದ್ಲು.


    ಎಂದು ದಿಯಾ ಹೆಗಡೆ ಹಾಡು ಹೇಳಿದಳು. ಆಗ ಚಿತ್ರ ಅಮ್ಮ ನಿಜವಾಗ್ಲೂ ದಿಯಾರನ್ನು ಅಪ್ಪಿಕೊಂಡು ಖುಷಿ ಪಟ್ಟು ದೃಷ್ಟಿ ತೆಗೆದ್ರು.


    CHITRA ಎಂದರೇನು?
    ದಿಯಾ ಹೆಗಡೆ ಹೇಳಿದ್ದು ಇದು.


    C ಫಾರ್ ಕ್ಯೂಟೆಸ್ಟ್ ಡಾಲ್
    H ಫಾರ್ ಹ್ಯಾಪಿಯಷ್ಟ್ ವುಮೆನ್
    I  ಫಾರ್ ಇನೋಸೆನ್ಸ್ ಸೋಲ್
    T ಫಾರ್ ಟ್ಯಾಲೆಂಟೆಡ್ ಸಿಂಗರ್
    R ಫಾರ್ ರಾಗಗಳ ರಾಣಿ
    A ಫಾರ್ ಆಲ್‍ವೇಸ್ ಕೇರಿಂಗ್ ಅಮ್ಮ









    View this post on Instagram






    A post shared by Zee Kannada (@zeekannada)





    ಇದನ್ನೂ ಓದಿ: Triple Riding: ಗಣೇಶ್ ಅಭಿನಯದ ಹೊಸ ಸಿನಿಮಾ ತ್ರಿಬಲ್ ರೈಡಿಂಗ್ ಟಿವಿಯಲ್ಲಿ ಬರಲಿದೆ 


    ಅವರೇ ನಮ್ಮ ಚಿತ್ರಮ ಎಂದು ದಿಯಾ ಹೆಗಡೆ ಹೇಳಿದ್ದಾರೆ.

    Published by:Savitha Savitha
    First published: