• Home
 • »
 • News
 • »
 • entertainment
 • »
 • Sa Ri Ga Ma Pa: ಮಧ್ಯರಾತ್ರಿ ಎದ್ದು ಧ್ಯಾನ ಮಾಡೋ ಸರಿಗಮಪ ಹಾಡುಗಾರ!

Sa Ri Ga Ma Pa: ಮಧ್ಯರಾತ್ರಿ ಎದ್ದು ಧ್ಯಾನ ಮಾಡೋ ಸರಿಗಮಪ ಹಾಡುಗಾರ!

ಮಧ್ಯರಾತ್ರಿ 2.30ಕ್ಕೆ ಎದ್ದು ಧ್ಯಾನ ಮಾಡ್ತಾನಂತೆ ಪ್ರವೀಣ್

ಮಧ್ಯರಾತ್ರಿ 2.30ಕ್ಕೆ ಎದ್ದು ಧ್ಯಾನ ಮಾಡ್ತಾನಂತೆ ಪ್ರವೀಣ್

ಪ್ರವೀಣ್ ಶೇಟ್ ದಿನ ರಾತ್ರಿ 2.30 ಕ್ಕೆ ಎದೇಳುತ್ತಾರಂತೆ. ಎರಡೂವರೆಯಿಂದ 5 ಗಂಟೆ ತನಕ ಧ್ಯಾನ ಮಾಡ್ತಾರಂತೆ!

 • News18 Kannada
 • Last Updated :
 • Karnataka, India
 • Share this:

  ಜೀ ಕನ್ನಡ (Zee Kannada) ಅಭಿಮಾನಿಗಳಿಗೆ ಮನರಂಜನೆ ನಿಡೋದ್ರಲ್ಲಿ ಸದಾ ಮುಂದೆ ಇರುತ್ತೆ. ಕಳೆದ ವಾರದಿಂದ ಜೀ ಕನ್ನಡದಲ್ಲಿ 'ಸರಿಗಮಪ (Sa Ri Ga Ma Pa)  ಲಿಟಲ್ ಚಾಂಪ್ಸ್ ಸೀಸನ್ -19' ಶುರುವಾಗಿದೆ. ಮಕ್ಕಳನ್ನು ಕಾರ್ಯಕ್ರಮಕ್ಕೆ ಸೆಲೆಕ್ಟ್ ಮಾಡಿಕೊಳ್ಳುತ್ತಿದ್ದಾರೆ. ಮೆಗಾ ಆಡಿಷನ್ ನಡೆಯುತ್ತಿದೆ. 18 ಸರಿಗಮಪ ಲಿಟಲ್ ಚಾಂಪ್ಸ್ ಸೀಸನ್‍ಗಳನ್ನು ಯಶಸ್ವಿಯಾಗಿ ಪೂರೈಸಿರುವ ಜೀ ಕನ್ನಡ ವಾಹಿನಿ 19ನೇ ಸೀಸನ್ ನಡೆಸುತ್ತಿದೆ. 18 ಸೀಸನ್‍ಗಳಲ್ಲಿ ಅದೆಷ್ಟೋ ಹಾಡುಗಾರರು ಇಲ್ಲಿ ಬಂದು ಕಲಿತು, ಯಶಸ್ವಿಯಾಗಿದ್ದಾರೆ. ಎಷ್ಟೋ ಜನ ತಮ್ಮ ಬದುಕು ಕಟ್ಟಿಕೊಂಡಿದ್ದಾರೆ. ಚಿತ್ರರಂಗದಲ್ಲೂ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಸರಿಗಮಪ ಲಿಟಲ್ ಚಾಂಪ್ಸ್ ಸೀಸನ್ -19 ಗೆ ಶಿರಸಿ (Sirsi) ಮೂಲದ ಪ್ರವೀಣ್ ಶೇಟ್ (Praveen Shet) ಸೆಲೆಕ್ಟ್ ಆಗಿದ್ದಾನೆ. ತನ್ನ ಹಾಡಿನ ಮೂಲಕ ಜಡ್ಜ್ ಮನಸ್ಸು ಗೆದ್ದಿದ್ದಾರೆ.


  'ಸರಿಗಮಪ ಲಿಟಲ್ ಚಾಂಪ್ಸ್ ಸೀಸನ್ -19'
  ಜೀ ಕನ್ನಡದಲ್ಲಿ ಹಾಡೋ ಮಕ್ಕಳಿಗೆ ದೊಡ್ಡ ವೇದಿಕೆ ರೆಡಿಯಾಗಿದೆ. ಮುದ್ದಾಗಿ ಸಾಂಗ್ಸ್ ಮಕ್ಕಳಿಗೆ ಸಿಕ್ಕೇ ಸಿಗುತ್ತೆ ಅವಕಾಶ. ಮೆಗಾ ಆಡಿಷನ್ ನಡೆಯುತ್ತಿದ್ದು, 'ಸರಿಗಮಪ ಲಿಟಲ್ ಚಾಂಪ್ಸ್ ಸೀಸನ್ -19' ಸೀಸನ್‍ಗೆ ಮಕ್ಕಳನ್ನು ಸೆಲೆಕ್ಟ್ ಮಾಡಲಾಗ್ತಿದೆ. ಈಗಾಗಲೇ ಹಲವು ಮಕ್ಕಳು ಸೆಲೆಕ್ಟ್ ಆಗಿದ್ದು, ಇವತ್ತೂ ಸಹ ಮೆಗಾ ಆಡಿಷನ್ ಮುಂದುವರೆಯಲಿದೆ.


  ಪ್ರವೀಣ್ ಶೇಟ್ ಸೆಲೆಕ್ಟ್
  'ಸರಿಗಮಪ ಲಿಟಲ್ ಚಾಂಪ್ಸ್ ಸೀಸನ್ -19' ಗೆ ಶಿರಸಿ ಮೂಲದ ಪ್ರವೀಣ್ ಶೇಟ್ ಸೆಲೆಕ್ಟ್ ಆಗಿದ್ದಾರೆ. ತನ್ನ ಹಾಡಿನ ಮೂಲಕ ಜಡ್ಜ್ ಮನಸ್ಸು ಗೆದ್ದಿದ್ದಾರೆ. ಸರಿಗಮಪಗೆ ಬರಬೇಕು ಎಂದು ತುಂಬಾ ಆಸೆ ಇತ್ತು. ತುಂಬಾ ದಿನದಿಂದ ಕನಸು ಕಂಡಿದ್ದೆ. ಆ ಆಸೆ ಈಗ ಈಡೇರಿದೆ. ನನ್ನ ಅಪ್ಪ ಅಮ್ಮನಿಗೂ ತುಂಬಾ ಇಷ್ಟ ಇತ್ತು. ನಾನು ಸರಿಗಮಪಗೆ ಬರಬೇಕು ಎಂದು ಎಂದು ಪ್ರವೀಣ್ ಹೇಳಿದ್ದಾರೆ.


  ಪ್ರವೀಣ್ ಶೇಟ್


  ಇದನ್ನೂ ಓದಿ: BBK Season 09: ಕನ್ನಡಿಗರ ವಿರುದ್ಧ ಮಾತನಾಡಿದ್ದ ಸಂಬರ್ಗಿಗೆ ಕಿಚ್ಚನ ಕ್ಲಾಸ್, ಮಾತಿನ ಮೇಲೆ ನಿಗಾ ಇರಲಿ ಎಂದು ಎಚ್ಚರಿಕೆ! 


  ಪ್ರವೀಣ್ ದಿನಚರಿ ಕೇಳಿದ್ರೆ ಶಾಕ್ ಆಗ್ತೀರಿ!
  ಪ್ರವೀಣ್ ಶೇಟ್ ದಿನ ರಾತ್ರಿ 2.30ಕ್ಕೆ ಎದೇಳುತ್ತಾರಂತೆ. ಎರಡೂವರೆಯಿಂದ 5 ಗಂಟೆ ತನಕ ಧ್ಯಾನ ಮಾಡ್ತಾರಂತೆ. ಆತ್ಮ, ಪರಮಾತ್ಮನ ಮೇಲೆ ಧ್ಯಾನ ಮಾಡ್ತಾರಂತೆ. ಆತ್ಮ, ಪರಮಾತ್ಮ ಎಂದರೇನು ಎಂದು ಅನುಶ್ರೀ ಕೇಳ್ತಾರೆ. ಪರಮಾತ್ಮ ಎಂದ್ರೆ, ನಿರಾಕಾರ ರೂಪ. ಅವನಿಗೆ ಆಕಾರ ಇರಲ್ಲ. ಆತ್ಮ ಎಂದ್ರೆ ಜನನ, ಮರಣದಲ್ಲಿ ಬರುತ್ತೆ. ಮನುಷ್ಯ ಜನ್ಮದ ಉದ್ದೇಶ ಏನು ಎಂದು ಅನುಶ್ರೀ ಕೇಳ್ತಾರೆ. ಅದಕ್ಕೆ ಪ್ರವೀಣ್, ಮುಕ್ತಿ ಎಂದು ಹೇಳ್ತಾರೆ. ಅದನ್ನು ಕೇಳಿ ಅಲ್ಲಿದ್ದವರಲ್ಲೇ ಶಾಕ್ ಆಗಿದ್ದಾರೆ.

  View this post on Instagram


  A post shared by Zee Kannada (@zeekannada)
  18 ಸರಿಗಮಪ ಲಿಟಲ್ ಚಾಂಪ್ಸ್ ಸೀಸನ್ ಯಶಸ್ವಿ
  ರಾಜ್ಯಾದ್ಯಂತ ಮೆಚ್ಚುಗೆ ಪಡೆದ ಜೀ ಕನ್ನಡದ ಮ್ಯೂಸಿಕ್ ರಿಯಾಲಿಟಿ ಶೋ, ಸರಿಗಮಪ ಲಿಟಲ್ ಚಾಂಪ್ಸ್. 18 ಶೋ ಗಳನ್ನು ಈಗಾಗಲೇ ಯಶಸ್ವಿಯಾಗಿ ಪೂರೈಸಿದೆ. ಎಷ್ಟೋ ಜನ ಸರಿಗಮಪ ಕಾರ್ಯಕ್ರಮದಿಂದ ಬದುಕು ಕಟ್ಟಿಕೊಂಡಿದ್ದಾರೆ. ಈ ವೇದಿಕೆಯ ಮೂಲಕ ಜನಪ್ರಿಯರಾಗಿದ್ದಾರೆ. ಕರುನಾಡ ಜನರಿಗೆ ಇಷ್ಟವಾಗಿದ್ದಾರೆ. ಸಿನಿಮಾ ರಂಗದಲ್ಲಿ ಉನ್ನತ ಸ್ಥಾನಕ್ಕೆ ಏರಿದ್ದಾರೆ.


  ಇದನ್ನೂ ಓದಿ: BBK Season 09: ಆರ್ಯವರ್ಧನ್ ಪಲ್ಲಿ ಗುಟ್ಟು ಕೇಳಿ ಸುದೀಪ್ ಸುಸ್ತು, ಬಿದ್ದು ಬಿದ್ದು ನಕ್ಕ ಕಿಚ್ಚ! 


  ಯಶಸ್ವಿ ಕಾರ್ಯಕ್ರಮಗಳು
  ಜೀ ಕನ್ನಡ ವಾಹಿನಿಯೂ ಈಗಾಗಲೇ ಜನಪ್ರಿಯ ಧಾರಾವಾಹಿಗಳನ್ನು ನೀಡುತ್ತಾ ಬಂದಿದೆ. ವಾರದ ದಿನಗಳಲ್ಲಿ ಧಾರಾವಾಹಿಗಳು ಜನರನ್ನು ರಂಜಿಸಿದ್ರೆ, ವೀಕೆಂಡ್‍ನಲ್ಲಿ ಜೋಡಿ ನಂಬರ್ ಒನ್, ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ರಿಯಾಲಿಟಿ ಶೋಗಳು ಜನರನ್ನು ತಲುಪುವಲ್ಲಿ ಯಶಸ್ವಿಯಾಗಿವೆ. ಜನ ವೀಕೆಂಡ್ ಬಂತು ಅಂದ್ರೆ ಕಾರ್ಯಕ್ರಮಗಳನ್ನು ತಪ್ಪದೇ ನೋಡ್ತಾರೆ.

  Published by:Savitha Savitha
  First published: