ಜೀ ಕನ್ನಡ (Zee Kannada) ಅಭಿಮಾನಿಗಳಿಗೆ ಮನರಂಜನೆ ನಿಡೋದ್ರಲ್ಲಿ ಸದಾ ಮುಂದೆ ಇರುತ್ತೆ. ಜೀ ಕನ್ನಡದಲ್ಲಿ 'ಸರಿಗಮಪ (Sa Ri Ga Ma Pa) ಲಿಟಲ್ ಚಾಂಪ್ಸ್ ಸೀಸನ್ -19' ಶುರುವಾಗಿದೆ. 18 ಸರಿಗಮಪ ಲಿಟಲ್ ಚಾಂಪ್ಸ್ ಸೀಸನ್ಗಳನ್ನು ಯಶಸ್ವಿಯಾಗಿ ಪೂರೈಸಿರುವ ಜೀ ಕನ್ನಡ ವಾಹಿನಿ 19ನೇ ಸೀಸನ್ ನಡೆಸುತ್ತಿದೆ. 18 ಸೀಸನ್ಗಳಲ್ಲಿ ಅದೆಷ್ಟೋ ಪುಟ್ಟ ಪುಟ್ಟ ಹಾಡುಗಾರರು ಇಲ್ಲಿ ಬಂದು ಕಲಿತು, ಯಶಸ್ವಿಯಾಗಿದ್ದಾರೆ. ಎಷ್ಟೋ ಜನ ತಮ್ಮ ಬದುಕು ಕಟ್ಟಿಕೊಂಡಿದ್ದಾರೆ. ಚಿತ್ರರಂಗದಲ್ಲೂ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಸರಿಗಮಪ ಲಿಟಲ್ ಚಾಂಪ್ಸ್ ಸೀಸನ್ -19 ಗೆ ಮೈಸೂರಿನ (Mysuru) ಗುರುಪ್ರಸಾದ್ (Guruprasad) ಸೆಲೆಕ್ಟ್ ಆಗಿದ್ದಾರೆ. ಈ ಬಾರಿ ಗುರುಪ್ರಸಾದ್ ಅಮ್ಮನಿಗೆ ಹಸಿರು ಗಾಜಿನ ಬಳೆಗಳನ್ನು ಗಿಫ್ಟ್ (Gift) ಕೊಟ್ಟಿದ್ದಾನೆ. ಅಮ್ಮ ವೇದಿಕೆಯಲ್ಲಿ ಕಣ್ಣೀರು ಹಾಕಿದ್ದಾರೆ.
ಅಮ್ಮನಿಗೆ ಬಳೆ ಗಿಫ್ಟ್ ಕೊಟ್ಟ ಗುರುಪ್ರಸಾದ್
ಮೈಸೂರಿನ ಗುರುಪ್ರಸಾದ್ ಅಮ್ಮನಿಗಾಗಿ ಬಳೆ ತಂದಿದ್ದಾನೆ. ಅಮ್ಮ ನಮಗಾಗಿ ಎಲ್ಲಾ ತ್ಯಾಗ ಮಾಡಿದ್ದಾರೆ. ಅಮ್ಮನಿಗೆ ಏನೂ ಮಾಡಿದ್ರೂ ಸಾಲದು. ಅವಳೇ ನನ್ನ ಸರ್ವಸ್ವ ಎಂದಿದ್ದಾನೆ. ಮಗನ ಉಡುಗೊರೆ ನೋಡಿ ತಾಯಿ ಕಣ್ಣೀರು ಹಾಕಿದ್ದಾರೆ. ಪ್ರೀತಿಯಿಂದ ಬಳೆ ಹಾಕಿದ್ದಾನೆ. ವೇದಿಕೆ ಪೂರ ಭಾವುಕವಾಯ್ತು.
ಗುರುಪ್ರಸಾದ್ ಬಳೆ ಕೊಟ್ಟ ಕಾರಣ
ಎಲ್ಲ ಅಮ್ಮಂದಿರು ಕೈಯಲ್ಲಿ ಬಳೆ ಅಥವಾ ವಾಚ್ ಹಾಕ್ತಾರೆ. ನಮ್ಮ ಅಮ್ಮನ ಕೈಯಲ್ಲಿ ಏನೂ ಇರುತ್ತಿರಲಿಲ್ಲ. ಕೆಲಸ ಮಾಡ್ತಾ, ಮಾಡ್ತಾ ಬಳೆಯಲ್ಲಾ ಒಡೆದು ಹೋಗ್ತಾ ಇತ್ತು. ಅದಕ್ಕೆ ನನ್ನ ನೆನಪಿಗಾಗಿ ಬಳೆ ಕೊಟ್ಟಿದ್ದೀನಿ ಎಂದು ಗುರುಪ್ರಸಾದ್ ಹೇಳಿದ್ದಾರೆ. ಒಂದು ಜೊತೆ ಗಾಜಿನ ಬಳೆ ನೋಡಿದ್ರೆ, ಆ ತಾಯಿ ಕಣ್ಣಲ್ಲಿ ನೀರು ಬರುತ್ತೆ ಅಂದ್ರೆ, ಆ ತಾಯಿಗೆ ನೆಮ್ಮದಿ, ಆನಂದ ಎಲ್ಲ ಕೊಡಲಿ ಎಂದು ನಾವು ಪ್ರಾರ್ಥಿಸುತ್ತೇವೆ ಎಂದು ವಿಜಯ್ ಪ್ರಕಾಶ್ ಹೇಳಿದ್ದಾರೆ.
ಇದನ್ನೂ ಓದಿ: Saanya Iyer: ಬಿಗ್ ಬಾಸ್ ಮೇಲೆ ಸಾನ್ಯಾ ಕೋಪ! ರೂಪೇಶ್ಗೆ ತಲುಪುತ್ತಿಲ್ವಂತೆ ಪುಟ್ಟಗೌರಿ ಕಳಿಸಿದ ಗಿಫ್ಟ್!
ಗುರುಪ್ರಸಾದ್ ಹಿನ್ನೆಲೆ
ಗುರುಪ್ರಸಾದ್ ಮೈಸೂರಿನ ಹುಡುಗ. 15 ವರ್ಷ. ಬಡತನದಲ್ಲಿ ಅರಳಿದ ಪ್ರತಿಭೆ. 6 ತಿಂಗಳ ಹಿಂದೆ ಅಪ್ಪ ಹಾರ್ಟ್ ಅಟ್ಯಾಕ್ ಆಗಿ ತೀರಿ ಹೋಗಿದ್ದಾರಂತೆ. ಅಮ್ಮ ಮನೆ ಕೆಲಸ ಮಾಡಿ ಇವರನ್ನು ಸಾಕುತ್ತಿದ್ದಾಳೆ. ತಿಂಗಳಿಗೆ 7 ಸಾವಿರ ಬರುತ್ತಂತೆ. ಅನುಶ್ರೀ ಸಂಗೀತ ಕಲಿಯುತ್ತಿದ್ದೀರಾ ಎಂದು ಕೇಳುತ್ತಾರೆ. ಇಲ್ಲ ಎನ್ನುತ್ತಾನೆ. ಹೇಗೆ ಹಾಡ್ತೀರಿ ಎಂದಿದ್ದಕ್ಕೆ, ವಿಜಯ್ ಪ್ರಕಾಶ್ ಅವರ ಹಾಡು ಕೇಳಿ ಕಲಿತಿದ್ದೇನೆ ಎಂದು ಹೇಳಿದ್ದ.
ವೇದಿಕೆಯಲ್ಲೇ ಗುರುವಾದ ವಿಜಯ್ ಪ್ರಕಾಶ್
ಗುರುಪ್ರಸಾದ್ ವಿಪಿ ಸರ್ ಹಾಡು ಕೇಳಿ ಕಲಿಯುತ್ತಿದ್ದೇನೆ ಎಂದಿದ್ದೇ ತಡ, ವಿಜಯ್ ಪ್ರಕಾಶ್ ಅವರು ಗುರುಪ್ರಸಾದ್ಗೆ ಸಂಗೀತ ಪಾಠ ಹೇಳಿಕೊಡಲು ಒಪ್ಪಿಕೊಂಡಿದ್ದಾರೆ. ಎಷ್ಟು ದಿನ ಇಲ್ಲಿ ಇರ್ತಿಯೋ ಗೊತ್ತಿಲ್ಲ. ನೀನು ಇರುವ ತನಕ ನನ್ನ ಕೈಯಲ್ಲಿ ಆಗಿದ್ದು, ನಾನು ಸಂಗೀತ ಪಾಠ ಹೇಳಿ ಕೊಡ್ತೇನೆ ಎಂದು ವಿಜಯ್ ಪ್ರಕಾಶ್ ಅವರು ಹೇಳಿದ್ದಾರೆ. ವೇದಿಕೆಯಲ್ಲೇ ಸರಿಗಮಪ ಶುರು ಮಾಡಿದ್ದರು.
ಇದನ್ನೂ ಓದಿ: Bigg Boss Sanya: ಸಾನ್ಯಾ ಐಯ್ಯರ್ ಮೇಲೆ ದೇವಿ ಬರ್ತಾಳಂತೆ! ನಟಿ ಹೇಳಿದ್ದೇನು?
18 ಸರಿಗಮಪ ಲಿಟಲ್ ಚಾಂಪ್ಸ್ ಸೀಸನ್ ಯಶಸ್ವಿ
ರಾಜ್ಯಾದ್ಯಂತ ಮೆಚ್ಚುಗೆ ಪಡೆದ ಜೀ ಕನ್ನಡದ ಮ್ಯೂಸಿಕ್ ರಿಯಾಲಿಟಿ ಶೋ, ಸರಿಗಮಪ ಲಿಟಲ್ ಚಾಂಪ್ಸ್. 18 ಶೋ ಗಳನ್ನು ಈಗಾಗಲೇ ಯಶಸ್ವಿಯಾಗಿ ಪೂರೈಸಿದೆ. ಎಷ್ಟೋ ಜನ ಸರಿಗಮಪ ಕಾರ್ಯಕ್ರಮದಿಂದ ಬದುಕು ಕಟ್ಟಿಕೊಂಡಿದ್ದಾರೆ. ಈ ವೇದಿಕೆಯ ಮೂಲಕ ಜನಪ್ರಿಯರಾಗಿದ್ದಾರೆ. ಕರುನಾಡ ಜನರಿಗೆ ಇಷ್ಟವಾಗಿದ್ದಾರೆ. ಸಿನಿಮಾ ರಂಗದಲ್ಲಿ ಉನ್ನತ ಸ್ಥಾನಕ್ಕೆ ಏರಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ