ಜೀ ಕನ್ನಡ (Zee Kannada) ಅಭಿಮಾನಿಗಳಿಗೆ ಮನರಂಜನೆ (Entertainment) ನಿಡೋದ್ರಲ್ಲಿ ಸದಾ ಮುಂದೆ ಇರುತ್ತೆ. 2 ವಾರದ ಹಿಂದೆ ವಾರದಿಂದ ಜೀ ಕನ್ನಡದಲ್ಲಿ 'ಸರಿಗಮಪ ಲಿಟಲ್ ಚಾಂಪ್ಸ್ (SA RI GA MA PA Lil Champs) ಸೀಸನ್ -19' ಶುರುವಾಗಿದೆ. 18 ಸರಿಗಮಪ ಲಿಟಲ್ ಚಾಂಪ್ಸ್ ಸೀಸನ್ಗಳನ್ನು ಯಶಸ್ವಿಯಾಗಿ ಪೂರೈಸಿರುವ ಜೀ ಕನ್ನಡ ವಾಹಿನಿ 19ನೇ ಸೀಸನ್ ನಡೆಸುತ್ತಿದೆ. 18 ಸೀಸನ್ಗಳಲ್ಲಿ ಅದೇಷ್ಟೋ ಪುಟ್ಟ ಪುಟ್ಟ ಹಾಡುಗಾರರು ಇಲ್ಲಿ ಬಂದು ಕಲಿತು, ಯಶಸ್ವಿಯಾಗಿದ್ದಾರೆ. ಎಷ್ಟೋ ಜನ ತಮ್ಮ ಬದುಕು ಕಟ್ಟಿಕೊಂಡಿದ್ದಾರೆ. ಚಿತ್ರರಂಗದಲ್ಲೂ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಈ ಬಾರಿ ಸಹ ಎಲ್ಲ ಮಕ್ಕಳು ಅದ್ಭುತವಾಗಿ ಹಾಡುತ್ತಿವೆ. ಈ ವಾರದ ಕಾರ್ಯಕ್ರಮದಲ್ಲಿ ಸಂಕ್ರಾಂತಿಗಾಗಿ ಜನಪದ ರೌಂಡ್ ಇತ್ತು. ಮಹಾಗುರುಗಳು ರೈತರಿಗೆ ಹಾಡು (Snig) ಬರೆದಿದ್ದಾರೆ. ಅದನ್ನು ವಿಜಯ್ ಪ್ರಕಾಶ್ ಅವರು ಹಾಡಿದ್ದಾರೆ.
ಜಾನಪದ ಸಂಕ್ರಾಂತಿ
ಸರಿಗಮಪ ಲಿಟಲ್ ಚಾಂಪ್ಸ್ ಸೀಸನ್ -19 ನಲ್ಲಿ ಸಂಕ್ರಾಂತಿ ಹಬ್ಬದ ಪ್ರಯುಕ್ತ ಜಾನಪರ ಸಂಕ್ರಾಂತಿ ರೌಂಡ್ ಮಾಡಲಾಗ್ತಿದೆ. ಎಲ್ಲಾ ಮಕ್ಕಳು ಜಾನಪದ ಹಾಡುಗಳನ್ನು ಹೇಳಬೇಕು. ಕೆಲ ಮಕ್ಕಳು ತಮ್ಮ ಧ್ವನಿಯ ಮೂಲಕ ಅದ್ಭುತವಾಗಿ ಜಾನಪದ ಹಾಡನ್ನು ಹೇಳಿದ್ದಾರೆ. ಎಲ್ಲರೂ ಕೇಳಿ ಎಂಜಾಯ್ ಮಾಡಿದ್ದಾರೆ.
ರೈತರ ಬಗ್ಗೆ ಪದ ಕಟ್ಟಿದ ಮಹಾಗುರುಗಳು
ಸರಿಗಮಪ ಲಿಟಲ್ ಚಾಂಪ್ಸ್ ಸೀಸನ್ -19 ರಲ್ಲಿ ಹಂಸಲೇಖ ಸರ್ ಮಹಾಗುರುಗಳಾಗಿ ತೀರ್ಪು ನೀಡುತ್ತಾರೆ. ವಿಜಯ್ ಪ್ರಕಾಶ್ ಮತ್ತು ಅರ್ಜುನ್ ಜನ್ಯ ಜಡ್ಜ್ ಗಳಾಗಿದ್ದಾರೆ. ವಿಜಯ್ ಪ್ರಕಾಶ್ ರೈತರ ಬಗ್ಗೆ ನಾಲ್ಕು ಸಾಲು ಕೊಡಿ ಎಂದು ಕೇಳ್ತಾರೆ. ಅದಕ್ಕೆ ಹಂಸಲೇಖಾ ಸರ್ ಈ ರೀತಿ ಹೇಳಿದ್ದಾರೆ.
ಇದನ್ನೂ ಓದಿ: Nannamma Super Star: 'ಒಲವಿನ ನಿಲ್ದಾಣ'ದ ಜೊತೆ 'ಲಕ್ಷಣ', 'ನನ್ನಮ್ಮ ಸೂಪರ್ ಸ್ಟಾರ್'ನಲ್ಲಿ ಸಂಕ್ರಾಂತಿಯ ಸಿಹಿ ಹೂರಣ!
ರೈತರ ಹಾಡು ವಿಜಯ್ ಪ್ರಕಾಶ್ ಧ್ವನಿಯಲ್ಲಿ
'ಒಲವ ಬಿತ್ತಿ, ಒಳಿತು ಬೆಳೆ, ಕಳೆಯ ತೆಗೆ ಸತ್ಯ ತಿಳಿ, ನಾನು ರೈತ, ನಾನು ರೈತ ಎಂದಿದ್ದಾರೆ. ಅದನ್ನು ಮ್ಯೂಸಿಕ್ ಸಮೇತ ವಿಜಯ್ ಪ್ರಕಾಶ್ ಅವರು ಹಾಡು ಹೇಳಿದ್ದಾರೆ. ಎಲ್ಲರೂ ವಿಜಯ್ ಪ್ರಕಾಶ್ ಹಾಡಿಗೆ ಎದ್ದು ನಿಂತು ಚಪ್ಪಾಳೆ ತಟ್ಟಿದ್ದಾರೆ. ಸರಿಗಮಪ ಲಿಟಲ್ ಚಾಂಪ್ಸ್ ಸೀಸನ್ -19 ರೈತರಿಗೆ ಗೌರವ ಸಲ್ಲಿಸಿದ್ದಾರೆ.
View this post on Instagram
18 ಸರಿಗಮಪ ಸೀಸನ್ ಯಶಸ್ವಿ
ರಾಜ್ಯಾದ್ಯಂತ ಮೆಚ್ಚುಗೆ ಪಡೆದ ಜೀ ಕನ್ನಡದ ಮ್ಯೂಸಿಕ್ ರಿಯಾಲಿಟಿ ಶೋ, ಸರಿಗಮಪ ಲಿಟಲ್ ಚಾಂಪ್ಸ್. 18 ಶೋ ಗಳನ್ನು ಈಗಾಗಲೇ ಯಶಸ್ವಿಯಾಗಿ ಪೂರೈಸಿದೆ. ಎಷ್ಟೋ ಜನ ಸರಿಗಮಪ ಕಾರ್ಯಕ್ರಮದಿಂದ ಬದುಕು ಕಟ್ಟಿಕೊಂಡಿದ್ದಾರೆ. ಈ ವೇದಿಕೆಯ ಮೂಲಕ ಜನಪ್ರಿಯರಾಗಿದ್ದಾರೆ. ಕರುನಾಡ ಜನರಿಗೆ ಇಷ್ಟವಾಗಿದ್ದಾರೆ. ಸಿನಿಮಾ ರಂಗದಲ್ಲಿ ಉನ್ನತ ಸ್ಥಾನಕ್ಕೆ ಏರಿದ್ದಾರೆ.
ಇದನ್ನೂ ಓದಿ: Olavina Nildana: ಸಿದ್ಧಾಂತ್ ಮನೆಯಲ್ಲಿ ಅಣ್ಣ-ತಮ್ಮನ ನಡುವೆ ಗಲಾಟೆ! ಎಲ್ಲಾ ಶುರುವಾಗಿದ್ದು ತಾರಿಣಿಯಿಂದನಾ?
ಜನಪ್ರಿಯ ಕಾರ್ಯಕ್ರಮಗಳು
ಜೀ ಕನ್ನಡ ವಾಹಿನಿಯೂ ಈಗಾಗಲೇ ಜನಪ್ರಿಯ ಧಾರಾವಾಹಿಗಳನ್ನು ನೀಡುತ್ತಾ ಬಂದಿದೆ. ವಾರದ ದಿನಗಳಲ್ಲಿ ಧಾರಾವಾಹಿಗಳು ಜನರನ್ನು ರಂಜಿಸಿದ್ರೆ, ವೀಕೆಂಡ್ ನಲ್ಲಿ ಡ್ರಾಮಾ ಜೂನಿಯರ್ಸ್, ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೋಗಳ ಮೂಲಕ ಜನರನ್ನು ತಲುಪುವಲ್ಲಿ ಯಶಸ್ವಿಯಾಗಿವೆ. ಜೋಡಿ ನಂಬರ್ 01, ಕಾಮಿಡಿ ಕಿಲಾಡಿಗಳು, ಸೂಪರ್ ಕ್ವೀನ್ ನಂತಹ ಹಿಟ್ ಕಾರ್ಯಕ್ರಮ ನೀಡಿದೆ. ಜನ ಕಾರ್ಯಕ್ರಮಗಳನ್ನು ತಪ್ಪದೇ ನೋಡ್ತಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ