• Home
 • »
 • News
 • »
 • entertainment
 • »
 • SA RI GA MA PA ವೇದಿಕೆಯಲ್ಲೇ ಅನುಶ್ರೀಗೆ ಮದುವೆ ಆಫರ್! ಅವ್ರ ಪ್ರಪೋಸಲ್‌ಗೆ ಮಾತಿನಮಲ್ಲಿ ಹೇಳಿದ್ದೇನು?

SA RI GA MA PA ವೇದಿಕೆಯಲ್ಲೇ ಅನುಶ್ರೀಗೆ ಮದುವೆ ಆಫರ್! ಅವ್ರ ಪ್ರಪೋಸಲ್‌ಗೆ ಮಾತಿನಮಲ್ಲಿ ಹೇಳಿದ್ದೇನು?

ದಿಯಾ ಮದುವೆ ಹಾಡು

ದಿಯಾ ಮದುವೆ ಹಾಡು

ಕೇಳ್ರೊಪ್ಪೋ ಕೇಳಿ, ಮಾತಿನಮಲ್ಲಿ ಅನುಶ್ರೀಗೆ ಮದುವೆ ಪ್ರಪೋಸಲ್ ಬಂದಿದ್ಯಂತೆ, ಅದೂ ಸರಿಗಮಪ ವೇದಿಕೆ ಮೇಲೆಯೇ! ಹಾಗಾದ್ರೆ ಅನುಶ್ರೀ ಮುಂದೆ ಪ್ರಪೋಸಲ್ ಇಟ್ಟವರು ಯಾರು? ಅದಕ್ಕೆ ಅನುಶ್ರೀ ಏನ್ ಹೇಳಿದ್ರು? ನಿಮ್ಮ ಕುತೂಹಲಕ್ಕೆ ಇಲ್ಲಿದೆ ಉತ್ತರ...

 • News18 Kannada
 • Last Updated :
 • Karnataka, India
 • Share this:

  ಜೀ ಕನ್ನಡ (Zee Kannada) ಅಭಿಮಾನಿಗಳಿಗೆ ಮನರಂಜನೆ (Entertainment) ನಿಡೋದ್ರಲ್ಲಿ ಸದಾ ಮುಂದೆ ಇರುತ್ತೆ. 2 ವಾರದ ಹಿಂದೆ ವಾರದಿಂದ ಜೀ ಕನ್ನಡದಲ್ಲಿ 'ಸರಿಗಮಪ ಲಿಟಲ್ ಚಾಂಪ್ಸ್ ಸೀಸನ್ -19' (SA RI GA MA PA Lil Champs) ಶುರುವಾಗಿದೆ. 18 ಸರಿಗಮಪ ಲಿಟಲ್ ಚಾಂಪ್ಸ್ ಸೀಸಸ್‍ಗಳನ್ನು ಯಶಸ್ವಿಯಾಗಿ ಪೂರೈಸಿರುವ ಜೀ ಕನ್ನಡ ವಾಹಿನಿ 19ನೇ ಸೀಸನ್ ನಡೆಸುತ್ತಿದೆ. 18 ಸೀಸನ್‍ಗಳಲ್ಲಿ ಅದೆಷ್ಟೋ ಪುಟ್ಟ ಪುಟ್ಟ ಹಾಡುಗಾರರು ಇಲ್ಲಿ ಬಂದು ಕಲಿತು, ಯಶಸ್ವಿಯಾಗಿದ್ದಾರೆ. ಎಷ್ಟೋ ಜನ ತಮ್ಮ ಬದುಕು ಕಟ್ಟಿಕೊಂಡಿದ್ದಾರೆ. ಚಿತ್ರರಂಗದಲ್ಲೂ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಸರಿಗಮಪ ಲಿಟಲ್ ಚಾಂಪ್ಸ್ ಸೀಸನ್ -19 ಗೆ ದಿಯಾ ಹೆಗಡೆ (Diya Hegde) ಎನ್ನುವ ಹುಡುಗಿ ಸೆಲೆಕ್ಟ್ ಆಗಿದ್ದಾಳೆ. ಆದ್ರೆ ಈಕೆ ಸ್ಪರ್ಧಿ ಅಲ್ಲ. ವಿಶೇಷ ಸ್ಪರ್ಧಿ ಆಗಿ ಬಂದಿದ್ದಾಳೆ. ಹಾಡು ಚೆನ್ನಾಗಿ ಹಾಡ್ತಾಳೆ. ತನ್ನ ಮಾತಿನ ಮೂಲಕ ಮೋಡಿ ಮಾಡಿದ್ದಾಳೆ. ಈ ಬಾರಿಅನುಶ್ರೀಗೆ ಮದುವೆ (Marriage) ಹಾಡು ಮಾಡಿದ್ದಾಳೆ.


  ದಿಯಾ ಮದುವೆ ಹಾಡು
  ಪ್ರತಿ ಶನಿವಾರ ಮತ್ತು ಭಾನುವಾರ ಸರಿಗಮಪ ಲಿಟ್ಲ್ ಚಾಂಪ್ಸ್ ಕಾರ್ಯಕ್ರಮ ಪ್ರಸಾರ ಆಗುತ್ತದೆ. ಕಳೆದ ವಾರ ದಿಯಾ ಹೆಗಡೆ ಹೈಲೈಟ್ ಆಗಿದ್ದಾಳೆ. ದಿಯಾ, ನಿರೂಪಕಿ ಅನುಶ್ರೀ ಮೇಲೆ ಮದುವೆ ಹಾಡನ್ನು ಅದ್ಭುತವಾಗಿ ಹಾಡಿದ್ದಾಳೆ. ಹಾಡು ತುಂಬಾ ವೈರಲ್ ಆಗ್ತಿದೆ. ಆ ಹಾಡನ್ನು ಕೇಳಿ ದಿಯಾಳನ್ನು ಕರುನಾಡು ಮೆಚ್ಚಿಕೊಂಡಿದೆ.


  ದಿಯಾ ಹಾಡು ಹೇಗಿದೆ?
  ನಾ ಮುದುಕಿ ಆದರೇನಂತೆ ಇನ್ನೂ ಇರಾಕಿ
  ನನ್ನ ಮಗನ, ಮಗನ, ಮಗನ ಮದುವೆ ಮಾಡಕಿ
  ನನ್ನ ಮಗ ಹರೆಯಕೆ ಬಂದಾನೆ, ಮದುವೆ ಮಾಡು ಅಂತಾನೆ
  ಕನ್ಯಾ ಹುಡುಕು ಅಂತಾನೆ,
  ನಾಳಿಂದ, ನಾಳಿಂದ ಕನ್ಯಾ ಹುಡುಕೋಕಿ
  ವಿಪಿ ಸರ್, ನನಗೆ ಯಾರು ಸೊಸೆ ಆಗಬೇಕು ಅಂತ ಗೊತ್ತಾ?
  ಎಜೆ ಸರ್ ನಿಮಗೆ, ಮಹಾಗುರುಗಳೇ ನಿಮಗೆ,
  ನಾನು ಕನ್ನಡಕ ಹಾಕಿಕೊಂಡು ನೋಡಾಕಿ,
  ಅಂದದ ಸೊಸೆ ತರಾಕಿ, ಬೆಂಗಳೂರು ಬಸ್ ಹತ್ತಾಕಿ
  ಲಿಟಲ್ ಚಾಂಪ್ಸ್‌ಗೆ ಹೋಗಾಕಿ
  ನಮ್ಮ ಅನುಶ್ರೀ, ನಿಮ್ಮ ಅನುಶ್ರೀ ಬೇಕು ಅನ್ನಾಕಿ
  ನಮ್ಮ ಅನುಶ್ರೀ, ನಿಮ್ಮ ಅನುಶ್ರೀ ಬೇಕು ಅನ್ನಾಕಿ
  ಯಾಕ್ ಅನುಶ್ರೀ ಅವರೇ ನನ್ನ ಸೊಸೆ ಆಗಬೇಕು ಅಂದ್ರೆ,
  ಮಕ್ಕಳನ್ನು ಮುದ್ದು ಮಾಡೋಕಿ, ಅಂದದ ನಗೆಯ ಬೀರಾಕಿ
  ಮಾತಲ್ಲೇ ಮೋಡಿ ಮಾಡಾಕಿ, ಕಣ್ಣಲ್ಲೇ ಪ್ರೀತಿ ತೋರಾಕಿ
  ಈಗಲೇ, ಈಗಲೇ, ಈಗಲೇ ಫಿಕ್ಸ್ ಮಾಡಾಕಿ
  ನಮ್ಮ ಅನುಶ್ರೀ, ನಿಮ್ಮ ಅನುಶ್ರೀ, ನಮ್ಮ ಮನೆ ಸೊಸೆಯಾಕಿ
  ನಮ್ಮ ಅನುಶ್ರೀ, ನಿಮ್ಮ ಅನುಶ್ರೀ, ನಮ್ಮ ಮನೆ ಸೊಸೆಯಾಕಿ


  zee kannada program, sa ri ga ma pa season 19, diya hegde song viral about anushree, ಸರಿಗಮಪ ಲಿಟಲ್ ಚಾಂಪ್ಸ್ ಸೀಸನ್ 19, ಸರಿಗಮಪ ವೇದಿಕೆಯಲ್ಲೇ ಅನುಶ್ರೀಗೆ ಮದುವೆ ಆಫರ್! ಗಂಡು ಯಾರು ಗೊತ್ತಾ?, ಜೀ ಕನ್ನಡ ವಾಹಿನಿಯ ಕಾರ್ಯಕ್ರಮಗಳು, kannada news, karnataka news,
  ದಿಯಾ ಹೆಗಡೆ


  ಇದನ್ನೂ ಓದಿ: BBK Deepika Das: ದೀಪಿಕಾ ದಾಸ್‍ಗೆ ಅಣ್ಣನ ಮೇಲೆ ಕೋಪ, ಕಾರಣ ಗೊತ್ತಾದ್ರೆ ನಿಮಗೂ ಬೇಸರ ಆಗುತ್ತೆ! 


  ನಾನು ನಿಮ್ಮ ಮನೆಯ ಸೊಸೆ ಆಗಬೇಕು ಅಂತ ಹೇಳಿದೀಯ. ಆದರೆ ನಿನ್ನ ಮಗ ಯಾರು? ಅಂತ ಹೇಳಲೇ ಇಲ್ಲ ಎಂದು ಅನುಶ್ರೀ ಕೇಳ್ತಾರೆ. ನನ್ನ ಮಗ ಬಹಳ ಚೆಂದ ಇದ್ದಾನೆ. ಒಳ್ಳೊಳ್ಳೆಯ ಮ್ಯೂಸಿಕ್ ಮಾಡಿದಾನೆ. ಅದಕ್ಕೆ ಅನುಶ್ರೀ ಅವರೇ ಸೂಟ್ ಆಗ್ತಾರೆ ಎಂದು ಅರ್ಜುನ್ ಜನ್ಯ ಕಡೆ ನೋಡಿದ್ದಾಳೆ ಆ  ತುಂಟ ಹುಡುಗಿ!


  ಇದನ್ನೂ ಓದಿ: BBK Rupesh Rajanna: 100 ರೂಪಾಯಿ ಕದ್ದು, ಬೆತ್ತದಲ್ಲಿ ಹೊಡೆಸಿಕೊಂಡು, ಮಧ್ಯರಾತ್ರಿ ಒಂಟಿಯಾಗಿದ್ರಂತೆ ರಾಜಣ್ಣ! 


  ಎಲ್ಲೆಡೆ ಈ ವೈರಲ್ ಆದ ಹಾಡು
  ದಿಯಾ ಹೆಗಡೆ ಹಾಡಿದ ಹಾಡು ಎಲ್ಲೆಡೆ ವೈರಲ್ ಆಗಿದೆ. ಎಲ್ಲಾ ಕಡೆ ಶೇರ್ ಆಗ್ತಿದೆ. ಚೆಂದವಾಗಿ ಹಾಡಿದ್ದಾಳೆ ದಿಯಾ ಎಂದು ಹೇಳಿದ್ದಾರೆ. ಈ ದಿಯಾ ಸಖತ್ ಕ್ಯೂಟ್. ಇವಳು ತನ್ನದೇ ಆದ ಯೂಟ್ಯೂಬ್ ಚಾನೆಲ್ ಮಾಡಿಕೊಂಡು ಅಲ್ಲಿ ಹಾಡು, ನಟನೆ ಮಾಡ್ತಾಳೆ.

  Published by:Savitha Savitha
  First published: