ಜೀ ಕನ್ನಡ (Zee Kannada) ಅಭಿಮಾನಿಗಳಿಗೆ ಮನರಂಜನೆ ನಿಡೋದ್ರಲ್ಲಿ ಸದಾ ಮುಂದೆ ಇರುತ್ತೆ. 2 ವಾರದ ಹಿಂದೆ ವಾರದಿಂದ ಜೀ ಕನ್ನಡದಲ್ಲಿ 'ಸರಿಗಮಪ (Sa Ri Ga Ma Pa) ಲಿಟಲ್ ಚಾಂಪ್ಸ್ ಸೀಸನ್ -19' ಶುರುವಾಗಿದೆ. 18 ಸರಿಗಮಪ ಲಿಟಲ್ ಚಾಂಪ್ಸ್ ಸೀಸನ್ಗಳನ್ನು ಯಶಸ್ವಿಯಾಗಿ ಪೂರೈಸಿರುವ ಜೀ ಕನ್ನಡ ವಾಹಿನಿ 19ನೇ ಸೀಸನ್ ನಡೆಸುತ್ತಿದೆ. 18 ಸೀಸಗಳಲ್ಲಿ ಅದೆಷ್ಟೋ ಪುಟ್ಟ ಪುಟ್ಟ ಹಾಡುಗಾರರು ಇಲ್ಲಿ ಬಂದು ಕಲಿತು, ಯಶಸ್ವಿಯಾಗಿದ್ದಾರೆ. ಎಷ್ಟೋ ಜನ ತಮ್ಮ ಬದುಕು ಕಟ್ಟಿಕೊಂಡಿದ್ದಾರೆ. ಚಿತ್ರರಂಗದಲ್ಲೂ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಸರಿಗಮಪ ಲಿಟಲ್ ಚಾಂಪ್ಸ್ ಸೀಸನ್ -19 ಗೆ ದಿಯಾ ಹೆಗಡೆ (Diya Hegde) ಎನ್ನುವ ಹುಡುಗಿ ಸೆಲೆಕ್ಟ್ ಆಗಿದ್ದಾಳೆ. ಆದ್ರೆ ಈಕೆ ಸ್ಪರ್ಧಿ ಅಲ್ಲ. ವಿಶೇಷ ಸ್ಪರ್ಧಿ ಆಗಿ ಬಂದಿದ್ದಾಳೆ. ಹಾಡು ಚೆನ್ನಾಗಿ ಹಾಡ್ತಾಳೆ. ತನ್ನ ಮಾತಿನ ಮೂಲಕ ಮೋಡಿ ಮಾಡಿದ್ದಾಳೆ. ಈ ಬಾರಿ ಸರಿಗಮಪ ವೇದಿಕೆಯಲ್ಲಿ ದೊಡ್ಮನೆ ವೈಭವ ನಡೆಯುತ್ತಿದೆ. ಕಾರ್ಯಕ್ರಮಕ್ಕೆ ನಟ ಶಿವರಾಜ್ ಕುಮಾರ್ (Shivaraj Kumar) ಬಂದಿದ್ದಾರೆ.
ಸರಿಗಮಪ ವೇದಿಕೆಯಲ್ಲಿ ದೊಡ್ಮನೆ ವೈಭವ
ಈ ಬಾರಿ ಸರಿಗಮಪ ವೇದಿಕೆಯಲ್ಲಿ ದೊಡ್ಮನೆ ವೈಭವ ನಡೆಯುತ್ತಿದೆ. ಕಾರ್ಯಕ್ರಮಕ್ಕೆ ನಟ ಶಿವರಾಜ್ ಕುಮಾರ್ ಮುಖ್ಯ ಅಥಿತಿಯಾಗಿ ಬಂದಿದ್ದಾರೆ. ಎಲ್ಲಾ ಸ್ಪರ್ಧಿಗಳು ಶಿವಣ್ಣನ ಹಾಡುಗಳನ್ನು ಹಾಡಿದ್ದಾರೆ. ಶಿವಣ್ಣ ಸಹ ಖುಷಿ ಆಗಿದ್ದಾರೆ.
ದಿಯಾ ಹೆಗ್ಡೆ ಹಾಡು ಹೇಗಿದೆ ನೋಡಿ?
ಅಚ್ಚು ಮೆಚ್ಚಿನ ಅಣ್ಣವೊಬ್ಬರು ಕನ್ನಡ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿದ್ದಾರೆ ಏನ್ ಸಡಗರ
ಧೂಳು ಗೀಳು ಎಬ್ಬಿಸಿದ್ದಾರೆ ಏನ್ ಸಡಗರ, ಸ್ಟಂಟ್ ಗಿಂಟು ಹೆಜ್ಜೆ ಹಾಕಿ, ಸೆಂಟಿಮೆಂಟಲ್ ಲುಕ್ ಕೊಟ್ಟು ಚಮ್ ಚಮ್ ಹೊಳೆಯುತ್ತಾರೆ ಏನ್ ಸಂಭ್ರಮ, ಆಹಾ ಸುರ ಸುಂದರ
ಟುವ್ವಿ ಟುವ್ವಿ ಎಂದು ಹಾಡು ಹಾಡಿ, ಜನುಮದ ಜೋಡಿಯಾಗಿ,
ಜನ ಮೆಚ್ಚಿದ ಹುಡುಗ ಆಗ್ಯಾರಾ, ಹನುಮನ ಹೊತ್ತ ಭಜರಂಗಿ,
ಅಮ್ಮನ ಪ್ರೀತಿಯ ಜೋಗಿಯಾಗಿ ತಂಗ್ಯರ ಅಣ್ಣ ಆಗ್ಯಾರಾ,
ಆನಂದದಿಂದ ವೇದ ಕಾಣಿಸ್ಯಾರಾ, ಅವರೇ ನಮ್ಮ ಪ್ರೀತಿಯ ಹ್ಯಾಟ್ರಿಕ್ ಹೀರೋ ಶಿವಣ್ಣ
ಸರಳವಾದ ವ್ಯಕ್ತಿ ಅವರು ಪ್ರೀತಿಯನ್ನು ಹಂಚುತ್ತಾ ಸಾಮಾನ್ಯರಂತೆ ಬದುಕ್ಯಾರಾ
ಒಳ್ಳೆತನದಿಂದ ಬಾಳ್ತಾರೆ. ದಾನ ಧರ್ಮವೆಲ್ಲಾ ಮಾಡಿ, ಬಡವರ ಪಾಲಿಗೆ ದೈವವಾಗಿ,
ಮನಸ್ಸನು ಗೆದ್ದಿದ್ದಾರೆ ನಮ್ಮ ಶಿವಣ್ಣ, ನಮ್ಮ ಶಿವಣ್ಣ.
ಇದನ್ನೂ ಓದಿ: Actress Amulya: ವಾಟ್ ಎ ವೆದರ್, ಕೂಲ್ ಕೂಲ್ ಬೆಂಗಳೂರು ಎಂದ ನಟಿ ಅಮೂಲ್ಯ!
ದಿಯಾ ಹಾಡು ಮೆಚ್ಚಿಕೊಂಡ ಶಿವಣ್ಣ
ದಿಯಾ ಹೆಗ್ಡೆ ಹಾಡು ಕೇಳಿ ನಟ ಶಿವಣ್ಣ ಮೆಚ್ಚಿಕೊಂಡಿದ್ದಾರೆ. ಇಷ್ಟು ಪುಟ್ಟ ಮಗು ನಮ್ಮ ಬಗ್ಗೆ ಹಾಡು ಬರೆದ್ರೆ ಖುಷಿಯಾಗುತ್ತೆ ಎಂದು ಹೇಳಿದ್ದಾರೆ. ಕಂಠವೂ ಚೆನ್ನಾಗಿದೆ. ಸ್ವರಸ್ವತಿಯೂ ಒಲಿದಿದ್ದಾಳೆ ಎಂದು ಹೇಳಿದ್ದಾರೆ. ಮುಂದೆ ಈಕೆ ಹಂಸಲೇಖ ಅವರ ರೀತಿ ಆಗಬಹುದು ಎಂದು ಶಿವಣ್ಣ ಹೇಳಿದ್ದಾರೆ. ದಿಯಾಳನ್ನು ಎತ್ತಿಕೊಂಡು ಮುದ್ದಾಡಿದ್ದಾರೆ.
ಇದನ್ನೂ ಓದಿ: Sa Ri Ga Ma Pa: ಮಧ್ಯರಾತ್ರಿ ಎದ್ದು ಧ್ಯಾನ ಮಾಡೋ ಸರಿಗಮಪ ಹಾಡುಗಾರ!
18 ಸರಿಗಮಪ ಲಿಟಲ್ ಚಾಂಪ್ಸ್ ಸೀಸನ್ ಯಶಸ್ವಿ
ರಾಜ್ಯಾದ್ಯಂತ ಮೆಚ್ಚುಗೆ ಪಡೆದ ಜೀ ಕನ್ನಡದ ಮ್ಯೂಸಿಕ್ ರಿಯಾಲಿಟಿ ಶೋ, ಸರಿಗಮಪ ಲಿಟಲ್ ಚಾಂಪ್ಸ್. 18 ಶೋ ಗಳನ್ನು ಈಗಾಗಲೇ ಯಶಸ್ವಿಯಾಗಿ ಪೂರೈಸಿದೆ. ಎಷ್ಟೋ ಜನ ಸರಿಗಮಪ ಕಾರ್ಯಕ್ರಮದಿಂದ ಬದುಕು ಕಟ್ಟಿಕೊಂಡಿದ್ದಾರೆ. ಈ ವೇದಿಕೆಯ ಮೂಲಕ ಜನಪ್ರಿಯರಾಗಿದ್ದಾರೆ. ಕರುನಾಡ ಜನರಿಗೆ ಇಷ್ಟವಾಗಿದ್ದಾರೆ. ಸಿನಿಮಾ ರಂಗದಲ್ಲಿ ಉನ್ನತ ಸ್ಥಾನಕ್ಕೆ ಏರಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ