Sa Ri Ga Ma Pa: ಬರ್ತಿದೆ 'ಸರಿಗಮಪ ಲಿಟಲ್ ಚಾಂಪ್ಸ್ ಸೀಸನ್ -19', ಹಾಡೋ ಮಕ್ಕಳಿಗೆ ರೆಡಿಯಾಗ್ತಿದೆ ವೇದಿಕೆ!

'ಸರಿಗಮಪ ಲಿಟಲ್ ಚಾಂಪ್ಸ್ ಸೀಸನ್ -19' ಗೆ ವಿಡಿಯೋ ಕಳಿಸಬೇಕು. 4 ರಿಂದ 15 ವರ್ಷದೊಳಗಿನ ಮಕ್ಕಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು. ಅದಕ್ಕೆ ನಿಮ್ಮ ಮನೆಯಲ್ಲಿ ಈ ವಯಸ್ಸಿನ ಮಕ್ಕಳು ಹಾಡು ಹೇಳುತ್ತಿದ್ದರೆ, ಒಂದು ಹಾಡಿನ ವಿಡಿಯೋ ಮಾಡಿ, 9513516200 ನಂಬರ್  ಗೆ ವಾಟ್ಸಾಪ್ ಮಾಡಿ.

ಸರಿಗಮಪ ಲಿಟಲ್ ಚಾಂಪ್ಸ್ ಸೀಸನ್ -19

ಸರಿಗಮಪ ಲಿಟಲ್ ಚಾಂಪ್ಸ್ ಸೀಸನ್ -19

  • Share this:
    ನಿಮ್ಮ ಮಕ್ಕಳು ಚೆನ್ನಾಗಿ ಹಾಡು ಹೇಳ್ತಾರಾ? ಅವರಿಗಾಗಿ ಒಂದು ವೇದಿಕೆಯನ್ನು ಕಾಯ್ತಾ ಇದ್ದೀರಾ? ಇಷ್ಟು ದಿನ ಎಲ್ಲೂ ಅವಕಾಶ ಸಿಕ್ಕಿಲ್ವಾ? ಒಂದೇ ಒಂದು ಚಾನ್ಸ್ ಗಾಗಿ ಕಾಯ್ತಾ ಇದ್ರಾ? ಹಾಗಾದ್ರೆ ಅಂಥವರಿಗೆ ಈಗ ಒಂದು ಸುವರ್ಣ ಅವಕಾಶ. ಹೌದು ಜೀ ಕನ್ನಡದಲ್ಲಿ (Zee Kannada) ಶುರುವಾಗಲಿದೆ 'ಸರಿಗಮಪ (Sa Ri Ga Ma Pa)   ಲಿಟಲ್ ಚಾಂಪ್ಸ್ ಸೀಸನ್ -19' (Season 19).  18 ಸರಿಗಮಪ ಲಿಟಲ್ ಚಾಂಪ್ಸ್ ಸೀಸನ್‍ಗಳನ್ನು ಯಶಸ್ವಿಯಾಗಿ ಪೂರೈಸಿರುವ ಜೀ ಕನ್ನಡ ವಾಹಿನಿ 19ನೇ ಸೀಸನ್ ತರುತ್ತದೆ. 18 ಸೀಸನ್‍ಗಳಲ್ಲಿ ಅದೆಷ್ಟೋ ಮಕ್ಕಳು (Children) ಇಲ್ಲಿ ಬಂದು ಕಲಿತು, ಯಶಸ್ವಿಯಾಗಿದ್ದಾರೆ. ಎಷ್ಟೋ ಜನ ತಮ್ಮ ಬದುಕು ಕಟ್ಟಿಕೊಂಡಿದ್ದಾರೆ. ಚಿತ್ರರಂಗದಲ್ಲೂ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಈಗ ಮತ್ತೆ ಕರ್ನಾಟಕದ (Karnataka) ಮಕ್ಕಳಿಗೆ ಒಂದು ಸುವರ್ಣ ಅವಕಾಶ ಸಿಗುತ್ತಿದೆ. ಬರ್ತಿದೆ ಸರಿಗಮಪ ಲಿಟಲ್ ಚಾಂಪ್ಸ್ ಸೀಸನ್ -19.

    ಹಾಡೋ ಮಕ್ಕಳಿಗೆ ದೊಡ್ಡ ಅವಕಾಶ
    ಜೀ ಕನ್ನಡದಲ್ಲಿ ಹಾಡೋ ಮಕ್ಕಳಿಗೆ ದೊಡ್ಡ ವೇದಿಕೆ ರೆಡಿಯಾಗ್ತಿದೆ. ಮುದ್ದಾಗಿ ಸಾಂಗ್ಸ್ ಹೇಳೋಕೆ ಬರುತ್ತೆ ಅಂದ್ರೆ ತಮಗೆ ಸಿಕ್ಕೇ ಸಿಗುತ್ತೆ ಅವಕಾಶ. ಸದ್ಯದಲ್ಲೇ 'ಸರಿಗಮಪ ಲಿಟಲ್ ಚಾಂಪ್ಸ್ ಸೀಸನ್ -19' ಶುರುವಾಗುತ್ತಿದ್ದು, ಆಡಿಷನ್ ನಡೆಯಲಿದೆ. ಆಡಿಷನ್‍ನಲ್ಲಿ ಸೆಲೆಕ್ಟ್ ಆದವರು ಕರುನಾಡ ಜನರ ಮುಂದೆ ಹಾಡಲಿದ್ದಾರೆ.

    4 ರಿಂದ 15 ವರ್ಷದ ಒಳಗಿನ ಮಕ್ಕಳ ವಿಡಿಯೋ ಕಳಿಸಿ
    'ಸರಿಗಮಪ ಲಿಟಲ್ ಚಾಂಪ್ಸ್ ಸೀಸನ್ -19' ಗೆ ವಿಡಿಯೋ ಕಳಿಸಬೇಕು. 4 ರಿಂದ 15 ವರ್ಷದೊಳಗಿನ ಮಕ್ಕಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು. ಅದಕ್ಕೆ ನಿಮ್ಮ ಮನೆಯಲ್ಲಿ ಈ ವಯಸ್ಸಿನ ಮಕ್ಕಳು ಹಾಡು ಹೇಳುತ್ತಿದ್ದರೆ, ಒಂದು ಹಾಡಿನ ವಿಡಿಯೋ ಮಾಡಿ, 9513516200 ನಂಬರ್  ಗೆ ವಾಟ್ಸಾಪ್ ಮಾಡಿ.

    ಇದನ್ನೂ ಓದಿ: Paaru Serial: ರಿಯಲ್ ಲೈಫ್ ನಲ್ಲೂ ಸೂಪರ್ ಸಿಸ್ಟರ್, ವಿಶೇಷಚೇತನ ತಮ್ಮನನ್ನು ಅಮ್ಮನಂತೆ ನೋಡಿಕೊಳ್ಳುತ್ತಿರುವ ಪಾರು 

    18 ಸರಿಗಮಪ ಲಿಟಲ್ ಚಾಂಪ್ಸ್ ಸೀಸನ್ ಯಶಸ್ವಿ
    ರಾಜ್ಯಾದ್ಯಂತ ಮೆಚ್ಚುಗೆ ಪಡೆದ ಜೀ ಕನ್ನಡದ ಮ್ಯೂಸಿಕ್ ರಿಯಾಲಿಟಿ ಶೋ, ಸರಿಗಮಪ ಲಿಟಲ್ ಚಾಂಪ್ಸ್. 18 ಶೋ ಗಳನ್ನು ಈಗಾಗಲೇ ಯಶಸ್ವಿಯಾಗಿ ಪೂರೈಸಿದೆ. ಎಷ್ಟೋ ಜನ ಮಕ್ಕಳು, ಸರಿಗಮಪ ಲಿಟಲ್ ಚಾಂಪ್ಸ್ ನಿಂದ ಬದುಕು ಕಟ್ಟಿಕೊಂಡಿದ್ದಾರೆ. ಈ ವೇದಿಕೆಯ ಮೂಲಕ ಜನಪ್ರಿಯರಾಗಿದ್ದಾರೆ.

    ಯಶಸ್ವಿ ಕಾರ್ಯಕ್ರಮಗಳು
    ಜೀ ಕನ್ನಡ ವಾಹಿನಿಯೂ ಈಗಾಗಲೇ ಜನಪ್ರಿಯ ಧಾರಾವಾಹಿಗಳನ್ನು ನೀಡುತ್ತಾ ಬಂದಿದೆ. ವಾರದ ದಿನಗಳಲ್ಲಿ ಧಾರಾವಾಹಿಗಳು ಜನರನ್ನು ರಂಜಿಸಿದ್ರೆ, ವೀಕೆಂಡ್‍ನಲ್ಲಿ ಡ್ರಾಮಾ ಜೂನಿಯರ್ಸ್, ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೋಗಳು ಜನರನ್ನು ತಲುಪುವಲ್ಲಿ ಯಶಸ್ವಿಯಾಗಿವೆ. ಜನ ವೀಕೆಂಡ್ ಬಂತು ಅಂದ್ರೆ ಕಾರ್ಯಕ್ರಮಗಳನ್ನು ತಪ್ಪದೇ ನೋಡ್ತಾರೆ. ಈಗ ಸರಿಗಮಪ ಲಿಟಲ್ ಚಾಂಪ್ಸ್ ಬರುತ್ತಿದ್ದು, ಮಕ್ಕಳ ಮದ್ದಾಗಿ ಹಾಡೋದನನು ಕೇಳಲು ಕರ್ನಾಟಕ ರೆಡಿಯಾಗಿದೆ.

    ಇನ್ನೂ ಸರಿಗಮಪ ಲಿಟಲ್ ಚಾಂಪ್ಸ್ ನಲ್ಲಿ ಮಹಾಗುರುವಾಗಿ ಹಂಸಲೇಖ ಸರ್ ಇರುತ್ತಾರೆ. ಜಡ್ಜ್‍ಗಳಾಗಿ ವಿಜಯ್ ಪ್ರಕಾಶ್, ಅರ್ಜುನ್ ಜನ್ಯ ಇರಲಿದ್ದಾರೆ. ಆಂಕರ್ ಆಗಿ ಅನುಶ್ರೀ ಇರಲಿದ್ದಾರೆ.

    ಇದನ್ನೂ ಓದಿ: Kendasampige Serial: ಆಗಸ್ಟ್ 22ರಿಂದ ಕಲರ್ಸ್ ಕನ್ನಡದಲ್ಲಿ ಹರಡಲಿದೆ ಕೆಂಡಸಂಪಿಗೆ ಘಮ! ಹೊಸ ಧಾರಾವಾಹಿ ನೋಡಲು ರೆಡಿಯಾಗಿ 

    ಸದ್ಯ ಆಡಿಷನ್ ಶುರುವಾಗಲಿದ್ದು, ಮಕ್ಕಳು ಹಾಡನ್ನು ಹೇಳಲು ರೆಡಿಯಾಗ್ತಿದ್ರೆ, ಅವರಿಗಾಗಿ ವೇದಿಕೆ ರೆಡಿ ಆಗುತ್ತಿದೆ. ಎಷ್ಟು ಜನ ಮಕ್ಕಳು ಈ ಬಾರಿ ಇರ್ತಾರೆ? ಹೇಗೆ ಹಾಡ್ತಾರೆ? ಎಲ್ಲವನ್ನೂ ನೋಡಲು ಸೀಸನ್ ಶುರುವಾಗಬೇಕು. ನಿಮ್ಮ ಮಕ್ಕಳು ಚೆನ್ನಾಗಿ ಹಾಡ್ತಾ ಇದ್ರೆ, ಬೇಗ ಬೇಗ ನಿಮ್ಮ ಮಗುವಿನ ಹಾಡಿನ ವಿಡಿಯೋವನ್ನು ವಾಟ್ಸಾಪ್ ಮಾಡಿ. ಜೀ ಕನ್ನಡದಲ್ಲಿ ಹಾಡೋ ಮಕ್ಕಳಿಗೆ ದೊಡ್ಡ ವೇದಿಕೆ ರೆಡಿಯಾಗ್ತಿದೆ. ಮುದ್ದಾಗಿ ಸಾಂಗ್ಸ್ ಹೇಳೋಕೆ ಬರುತ್ತೆ ಅಂದ್ರೆ ತಮಗೆ ಸಿಕ್ಕೇ ಸಿಗುತ್ತೆ ಅವಕಾಶ.
    Published by:Savitha Savitha
    First published: