ಜೀ ಕನ್ನಡ (Zee Kannada) ಅಭಿಮಾನಿಗಳಿಗೆ ಮನರಂಜನೆ ನಿಡೋದ್ರಲ್ಲಿ ಸದಾ ಮುಂದೆ ಇರುತ್ತೆ. ಜೀ ಕನ್ನಡದಲ್ಲಿ ಶನಿವಾರ ಮತ್ತು ಭಾನುವಾರ 'ಸರಿಗಮಪ ಲಿಟಲ್ ಚಾಂಪ್ಸ್ ಸೀಸನ್ -19' (SA RI GA MA PA Lil Champs) ಕಾರ್ಯಕ್ರಮ ಪ್ರಸಾರವಾಗ್ತಿದೆ. 18 ಸರಿಗಮಪ ಲಿಟಲ್ ಚಾಂಪ್ಸ್ ಸೀಸನ್ಗಳನ್ನು ಯಶಸ್ವಿಯಾಗಿ ಪೂರೈಸಿರುವ ಜೀ ಕನ್ನಡ ವಾಹಿನಿ 19ನೇ ಸೀಸನ್ ನಡೆಸುತ್ತಿದೆ. 18 ಸೀಸನ್ಗಳಲ್ಲಿ ಅದೇಷ್ಟೋ ಪುಟ್ಟ ಪುಟ್ಟ ಹಾಡುಗಾರರು ಇಲ್ಲಿ ಬಂದು ಕಲಿತು, ಯಶಸ್ವಿಯಾಗಿದ್ದಾರೆ. ಎಷ್ಟೋ ಜನ ತಮ್ಮ ಬದುಕು ಕಟ್ಟಿಕೊಂಡಿದ್ದಾರೆ. ಚಿತ್ರರಂಗದಲ್ಲೂ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಈ ಬಾರಿ ಸಹ ಎಲ್ಲ ಮಕ್ಕಳು ಅದ್ಭುತವಾಗಿ ಹಾಡುತ್ತಿದ್ದಾರೆ. ಇದರ ನಿರೂಪಕಿ ಆಗಿರುವ ಅನುಶ್ರೀ (Anushree) ಅವರ ಹುಟ್ಟುಹಬ್ಬಕ್ಕೆ (Birthday) ವೇದಿಕೆಯಲ್ಲಿ ಸಪ್ರ್ರೈಸ್ ನೀಡಲಾಗಿದೆ.
ಮಾತಿನ ಮಲ್ಲಿ ನಿರೂಪಕಿ ಅನುಶ್ರೀ
ನಿರೂಪಕಿ ಅನುಶ್ರೀ ಅವರು ಹಲವು ವರ್ಷಗಳಿಂದ ಜೀ ಕನ್ನಡದಲ್ಲಿ ನಿರೂಪಣೆ ಮಾಡುತ್ತಾ ಬಂದಿದ್ದಾರೆ. ತಮ್ಮ ಅದ್ಭುತವಾದ ಮಾತಿನ ಮೂಲಕ ಕರುನಾಡ ಜನರನ್ನು ಸೆಳೆದಿದ್ದಾರೆ. ಅನುಶ್ರೀ ಅವರ ನಿರೂಪಣೆ ನೋಡೋದೇ ಚೆಂದ. ಪಟ ಪಟ ಎಂದು ಮಾತನಾಡುತ್ತಾರೆ. ಮಾತಿನ ಮಲ್ಲಿ ಅನುಶ್ರೀ ಅವರು ಕಾರ್ಯಕ್ರಮದ ಪುಟಾಣಿ ಮಕ್ಕಳಿಗೂ ಇಷ್ಟ.
ಅನುಶ್ರೀ ಅವರ ಹುಟ್ಟುಹಬ್ಬಕ್ಕೆ ಸರ್ಪ್ರೈಸ್
ನಿರೂಪಕಿ ಅನುಶ್ರೀ ಅವರ ಹುಟ್ಟುಹಬ್ಬ ಇದೇ ತಿಂಗಳು 25ನೇ ದಿನಾಂಕದಂದು ಇದೆ. ಅದಕ್ಕೆ, ಮುಂಚಿತವಾಗಿಯೇ ಜೀ ಕನ್ನಡ ವಾಹಿಯೂ ಅನುಶ್ರೀ ಅವರಿಗೆ ಸರ್ಪ್ರೈಸ್ ನೀಡಿದೆ. ಹಳೇ ಸ್ಪರ್ಧಿಗಳು ಈ ಬಾರಿ ಸರಿಗಮಪ ಕಾರ್ಯಕ್ರಮಕ್ಕೆ ಬಂದಿದ್ದರು. ಅವರೆಲ್ಲಾ ಅನುಶ್ರೀಗೆ ಹಾಡು ಹೇಳಿ, ಗುಲಾಬಿ ಕೊಟ್ಟು ವಿಶ್ ಮಾಡಿದ್ದಾರೆ.
ದಿಯಾ ಹೆಗಡೆ ಹಾಡು
ಈ ಬಾರಿ ಸರಿಗಮಪಗೆ ದಿಯಾ ಹೆಗಡೆ ಅನ್ನೋ ಹುಡುಗಿ ಬಂದಿದ್ದಾಳೆ. ಅವಳು ಎಲ್ಲರ ಮೇಲೂ ಕವಿತೆ ಬರೆಯುತ್ತಾಳೆ. ಈ ಬಾರಿ ಅನುಶ್ರೀ ಮೇಲೆ ಕವಿತೆ ಬರೆದಿದ್ದಾಳೆ.
ಇವರೆಂದ್ರೆ ಅಕ್ಕರೆ, ಇವರು ನಕ್ಕರೆ ಸವಿ ಸಕ್ಕರೆ
ಮಾತಿನಲ್ಲಿ ಶಕ್ತಿ, ಕನ್ನಡದ ಅಪರೂಪದ ಅಭಿವ್ಯಕ್ತಿ
ಅನುಶ್ರೀ ಅಕ್ಕ ನೀವು ನಮ್ಮವರು,
ಮಾತಿನಲ್ಲೇ ಮುನ್ನಡೆಸುವಿರಿ ಕರುನಾಡ ತೇರು
ಭಾಷೆಯಲ್ಲಿ ನುಡಿ ಸರಸ್ವತಿ, ನಾರಿ ಶಕ್ತಿಗೆ ನೀವು ಸದಾ ಸ್ಪೂರ್ತಿ
ದಿಕ್ಕು ದಿಕ್ಕುಗಳಲ್ಲಿ ಧ್ವನಿಸುತ್ತಿದೆ ನಿಮ್ಮ ಕೀರ್ತಿ
ಸಪ್ತ ಸ್ವರಗಳಿಗೆ ಅನುರಾಗದ ಗೆಳತಿ
ಅಪ್ಪು ಪರಮಾತ್ಮನಿಗಾಗಿ ಮೀಸಲಿಟ್ಟ ಈ ಜೀವನ
ಸಂಜೀವನ, ಅದುವೇ ಪಾವನ,
ನೀವು ಕರುನಾಡ ಮನೆ ಮಗಳು, ಜೀ ಕನ್ನಡದ ಹಿರಿ ಮಗಳು
ಹುಟ್ಟು ಹಬ್ಬದ ಶುಭಾಶಯ, ನಿಮಗೆ ಮೀಸಲು ಈ ಪುಟ್ಟ ಹೃದಯ
View this post on Instagram
ಅನುಶ್ರೀ ಕನ್ನಡ ಸಿನಿರಂಗದಲ್ಲಿ ಕಿರುತೆರೆ ನಿರೂಪಕಿಯಾಗಿ ಮತ್ತು ಚಿತ್ರನಟಿಯಾಗಿ ಸಕ್ರಿಯರಾಗಿದ್ದಾರೆ. ಮಂಗಳೂರಿನ ತುಳು ಕುಟುಂಬದಲ್ಲಿ ಜನಸಿದ ಇವರು `ಟೆಲಿ ಅಂತ್ಯಾಕ್ಷರಿ' ಕಾರ್ಯಕ್ರಮದ ಮೂಲಕ ನಿರೂಪಕಿಯಾಗಿ ಸಿನಿಪಯಣ ಆರಂಭಿಸಿದರು.
ಇದನ್ನೂ ಓದಿ: Rishabh Shetty: 7 ವರ್ಷದಲ್ಲಿ ದೇಶವೇ ಮೆಚ್ಚುವ ನಿರ್ದೇಶಕ, 'ರಿಕ್ಕಿ' ನೆನಪಿಸಿಕೊಂಡ ರಿಷಬ್ ಶೆಟ್ಟಿ!
ಈ ಟಿವಿ ಕನ್ನಡ ವಾಹಿನಿಯ 'ಡಿಮಾಂಡೆಪ್ಪೋ ಡಿಮಾಂಡು'' ಕಾರ್ಯಕ್ರಮದ ಮೂಲಕ ಮನೆಮಾತಾದ ಇವರು ಕಿಚ್ಚ ಸುದೀಪ್ ನಿರೂಪಣೆಯ ಕನ್ನಡ ಬಿಗ್ ಬಾಸ್ ಸೀಸನ್ ಒಂದರಲ್ಲಿ ಭಾಗವಹಿಸಿದ್ದರು. ನಂತರ `ಬೆಂಕಿಪಟ್ಣ' ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿದರು.ಇವರು 2011 ರಲ್ಲಿ ತೆರೆಕಂಡ `ಮುರಳಿ ಮೀಟ್ಸ್ ಮೀರಾ' ಚಿತ್ರದ ಡಬ್ಬಿಂಗ್ ಗಾಗಿ ರಾಜ್ಯ ಪ್ರಶಸ್ತಿ ಪಡೆದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ