Zee Kannada: ಸರಿಗಮಪ ಚಾಂಪಿಯನ್​ಶಿಪ್ ಕಿರೀಟ ಮುಡಿಗೇರಿಸಿಕೊಂಡವರು ಇವ್ರೇ ನೋಡಿ.. ಗೆದ್ದವರಿಗೆ ಸಿಕ್ಕಿದ್ದೇನು?

ಫೆಬ್ರವರಿ 26ರಂದು ನಡೆದ 'ಸರಿಗಮಪ ಚಾಂಪಿಯನ್ಸ್' ಗ್ರ್ಯಾಂಡ್ ಫಿನಾಲೆಯಲ್ಲಿ ಗಾಯಕಿ ನಂದಿತಾ ಮೆಂಟರ್ ಆಗಿದ್ದ ತಂಡ ಗೆದ್ದು ಬಿಗಿದೆ.  ನಂದಿತಾ ಟೀಮ್‌ನಲ್ಲಿ ರಜತ್, ಪೃಥ್ವಿ, ಸುಪ್ರಿಯಾ ಜೋಶಿ, ಸುಹಾನಾ, ಕೀರ್ತನ್ ಹೊಳ್ಳ, ಚೆನ್ನಪ್ಪ ಗಾಯಕರಾಗಿದ್ದರು.

ಗೆದ್ದು ಬೀಗಿದ ನಂದಿತ ತಂಡ

ಗೆದ್ದು ಬೀಗಿದ ನಂದಿತ ತಂಡ

  • Share this:
ಜೀ ಕನ್ನಡ(Zee Kannada)ದಲ್ಲಿ ಸೀರಿಯಲ್(Serial)​ಗಳಿಗಿಂತ ಹೆಚ್ಚು ಸದ್ದು ಮಾಡಿದ್ದು ರಿಯಾಲಿಟಿ ಶೋ(Reality Show)ಗಳು. ಅದರಲ್ಲೂ ಮೊದಲಿನಿಂದಲೂ ‘ಸರಿಗಮಪ’ ರಿಯಾಲಿಟಿ ಶೋ (SAREGAMAPA Reality Show) ಅಂದರೆ, ಎಲ್ಲರಿಗೂ ಅಚ್ಚುಮೆಚ್ಚು. ವಾರಾಂತ್ಯ ಬಂದರೆ ಸಾಕು ಸರಿಗಮಪ ಶೋ ನೋಡಲು ಕಾಯುತ್ತಿದ್ದ ವೀಕ್ಷಕರು ಸಹ ಇದ್ದರು. ಕಳೆದ ಮೂರು ತಿಂಗಳಿಂದ ಕಿರುತೆರೆ ವೀಕ್ಷಕರನ್ನು ರಂಜಿಸಿದ್ದ 'ಸರಿಗಮಪ' ಕಾರ್ಯಕ್ರಮ ಗ್ರ್ಯಾಂಡ್ ಫಿನಾಲೆ (Grand Finale) ಇದೇ ಫೆಬ್ರವರಿ 26ಕ್ಕೆ ನಡೆದಿದೆ. ಈ ಕಾರ್ಯಕ್ರಮವನ್ನು ಜೀ ಕನ್ನಡ ನೇರಪ್ರಸಾರ ಮಾಡಿತ್ತು. ಈ ಸೀಸನ್‌ ಆರು ತಂಡಗಳು ಭಾಗವಹಿಸಿದ್ದು, ಕಿರುತೆರೆ ವೀಕ್ಷಕರಿಗೆ ಸಂಗೀತದ ಜೊತೆ ಭರಪೂರ ಮನರಂಜನೆ ಸಿಕ್ಕಿದೆ. ಈ ಸೀಸನ್‌ನಲ್ಲಿ ಆರು ತಂಡಗಳನ್ನು ಮಾಡಿದ್ದು, ಒಂದೊಂದು ತಂಡದಲ್ಲಿ ಆರು ಮಂದಿ ಗಾಯಕರು ಪೈಪೋಟಿ ನೀಡಿದ್ದರು.

ಯಾರ ಮುಡಿಗೆ ಚಾಂಪಿಯನ್​ಶಿಪ್​ ಕಿರೀಟ?

ಫೆಬ್ರವರಿ 26ರಂದು ನಡೆದ 'ಸರಿಗಮಪ ಚಾಂಪಿಯನ್ಸ್' ಗ್ರ್ಯಾಂಡ್ ಫಿನಾಲೆಯಲ್ಲಿ ಗಾಯಕಿ ನಂದಿತಾ ಮೆಂಟರ್ ಆಗಿದ್ದ ತಂಡ ಗೆದ್ದು ಬಿಗಿದೆ.  ನಂದಿತಾ ಟೀಮ್‌ನಲ್ಲಿ ರಜತ್, ಪೃಥ್ವಿ, ಸುಪ್ರಿಯಾ ಜೋಶಿ, ಸುಹಾನಾ, ಕೀರ್ತನ್ ಹೊಳ್ಳ, ಚೆನ್ನಪ್ಪ ಗಾಯಕರಾಗಿದ್ದರು. ಹಿಂದಿನಿಂದಲೂ ಉತ್ತಮ ಪ್ರದರ್ಶನ ನೀಡುತ್ತಲೇ ಬಂದಿದ್ದ ತಂಡ ಫೆಬ್ರವರಿ ನಡೆದ ನೇರ ಪ್ರಸಾರ ಕಾರ್ಯಕ್ರಮದಲ್ಲೂ ಕೂಡ ಉತ್ತಮ ಪ್ರದರ್ಶ ನ ನೀಡಿ ಗೆಲುವಿನ ನಗೆ ಬೀಗಿದೆ. ಈ ಮೂಲಕ ಸರಿಗಮಪ ಚಾಂಪಿಯನ್​ಶಿಪ್​ ಕಿರೀಟವನ್ನು ತನ್ನ ಮುಡಿಗೇರಿಸಿಕೊಂಡಿದೆ.

ಮೊದಲನೇ ರನ್ನರ್​ ಅಪ್​ ಅನುರಾಧಾ ಭಟ್ ತಂಡ

ಹೌದು, ಆರು ತಂಡಗಳ ಪೈಕಿ ಗೆಲುವಿನ ತಂಡವನ್ನು ಉಳಿದ ಎರಡು ತಂಡಗಳನ್ನು ಮೊದಲನೇ ಹಾಗೂ ಎರಡನೇ ರನ್ನರ್ ಅಪ್ ಎಂದು ಘೋಷಿಸಲಾಗಿದೆ. ಮೊದಲನೇ ರನ್ನರ್ ಅಪ್ ಗಾಯಕಿ ಅನುರಾಧಾ ಭಟ್ ತಂಡ. ಈ ತಂಡದಲ್ಲಿ ಅನುರಾಧ ಭಟ್ ಟೀಮ್‌ನಲ್ಲಿ ಅಂಕಿತಾ ಕುಂಡು, ಶ್ರೀ ಹರ್ಷ, ವರ್ಣ, ದರ್ಶನ್, ಅಭಿಶ್ಯಂತ್, ಮೆಹಬೂಬ್ ಭಾಗವಹಿಸಿದ್ದರು. ಇನ್ನು ಎರಡನೇ ರನ್ನರ್ ಅಪ್ ಪ್ರಶಸ್ತಿ ಇಂದು ನಾಗರಾಜ್ ತಂಡ ಗಿಟ್ಟಿಸಿಕೊಂಡಿದೆ. ಇಂದು ನಾಗರಾಜ್ ತಂಡದಲ್ಲಿ ಸುನೀಲ್, ಸಾಕ್ಷಿ, ಸುಪ್ರಿತ್, ಅನ್ವಿತಾ, ಅಖಿಲಾ, ಗಗನಾ ಸ್ಪರ್ಧಿಗಳಾಗಿದ್ದರು.

ಇದನ್ನೂ ಓದಿ: ಟ್ರೆಂಡ್​ ಸೃಷ್ಟಿಸಿದ `ಟ್ರೇಡ್​ ಮಾರ್ಕ್’ ಸಾಂಗ್​​, ಅಪ್ಪು.. ನಿಮ್ಮನ್ನು ವರ್ಣಿಸೋಕೆ ಪದಗಳೇ ಸಾಲದು!

ಕಂಬದ  ರಂಗಯ್ಯ ಎಂಟರ್​ಟೈನರ್​ ಆಫ್​ ದಿ ಸೀಸನ್​!

ಸಂಗೀತದ ಯುದ್ಧದಲ್ಲಿ ಎಲ್ಲಾ ಗಾಯಕರೂ ಸಂಗೀತ ಪ್ರಿಯರ ಮನಗೆದ್ದಿದ್ದಾರೆ. ಇದೇ ವೇಳೆ ವಿಶೇಷ ಪ್ರಶಸ್ತಿಯನ್ನುಗಾಯಕರಿಗೆ ನೀಡಲಾಗಿದೆ. ಇದರಲ್ಲಿ ಪರ್ಫಾಮೆನ್ಸ್ ಆಫ್ ದಿ ಸೀಸನ್ ಪ್ರಶಸ್ತಿಯನ್ನು ಶ್ರೀಹರ್ಷ ಬಾಚಿಕೊಂಡಿದ್ದಾರೆ. ಎಂಟರ್‌ಟೈನರ್ ಆಫ್ ದಿ ಸೀಸನ್ ಪ್ರಶಸ್ತಿಯನ್ನು ಕಂಬದ ರಂಗಯ್ಯ ಪಾಲಾಗಿದೆ.

ಇದನ್ನೂ ಓದಿ: 2ನೇ ವರ್ಷದ ಸಂಭ್ರಮದಲ್ಲಿ ಜೀ ಪಿಚ್ಚರ್​​​, ವೀಕ್ಷಕರಿಗೆ ಕೊಡಲಿದೆ ಕೆಜಿಎಫ್​-2 ಪ್ರೀಮಿಯರ್​​ ಗಿಫ್ಟ್​!

ವೀಕ್ಷಕರ ಸಮ್ಮುಖದಲ್ಲೇ ವಿನ್ನರ್​ ಘೋಷಣೆ!

ಪ್ರತಿ ಸೀಸನ್‌ನಂತೆ ನಾದಬ್ರಹ್ಮ ಹಂಸಲೇಖ, ಗಾಯಕ ವಿಜಯ್ ಪ್ರಕಾಶ್ ಹಾಗೂ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ತೀರ್ಪುಗಾರಗಾಗಿ ಕಾಣಿಸಿಕೊಂಡಿದ್ದರು. ಇವರ ಸಮ್ಮುಖದಲ್ಲಿ ಈ 36 ಗಾಯಕರು ಹಾಡಿನ ಮೂಲಕ ಸ್ಪರ್ಧೆಗಿಳಿದಿದ್ದರು. ಜೊತೆಗೆ ಆಡಿಯನ್ಸ್​ ವೋಟ್ ಮಾಡಲು ಜೀ ಕನ್ನಡ ಅವಕಾಶ ಮಾಡಿಕೊಟ್ಟಿತ್ತು. ಹೀಗಾಗಿ ತೀರ್ಪುಗಾರರು ಹಾಗೂ ವೀಕ್ಷಕರ ಅಭಿಪ್ರಾಯವನ್ನೂ ಸೇರಿಸಿ ವಿಜೇತರನ್ನು ಘೋಷಣೆ ಮಾಡಲಾಯ್ತು.
Published by:Vasudeva M
First published: