ಕನ್ನಡ ಕಿರುತೆರೆಯ (Kannada Small Screen) ಲೋಕದಲ್ಲಿ ಜೀ ಕನ್ನಡ (Zee Kannada) ವಾಹಿನಿ ಕೇವಲ ಮನರಂಜನೆಯ (Entertainment) ಕಾರ್ಯಕ್ರಮಗಳಿಗಷ್ಟೇ ಸೀಮಿತವಾಗದೇ ಸದಭಿರುಚಿಯ ಕಾರ್ಯಕ್ರಮಗಳನ್ನೂ ನೀಡುವ ಮೂಲಕ ಎಲ್ಲಾ ವರ್ಗದ ಜನರನ್ನು ತನ್ನತ್ತ ಆಕರ್ಷಿಸುತ್ತಿದೆ. ಮಕ್ಕಳ ಅಭಿನಯದ ಮೂಲಕ ಜನರ ಮನಸ್ಸಿಗೆ ಮುದನೀಡುತ್ತಿರುವ ಡ್ರಾಮಾ ಜ್ಯೂನಿಯರ್ನ್ ಸೀಸನ್ 4 (Drama Juniors season 4) ಚೆನ್ನಾಗಿ ಮೂಡಿಬರುತ್ತಿದೆ. ಶನಿವಾರ ಭಾನುವಾರದಂದು ನಡೆಯುವ ಈ ರಿಯಾಲಿಟಿ ಶೋ (Reality Show) ನೋಡಲೆಂದು ಬಹುತೇಕ ಅಭಿಮಾನಿಗಳು ಕಾಯುತ್ತಿರುತ್ತಾರೆ. ಈ ರಿಯಾಲಿಟಿ ಶೋನಲ್ಲಿ ಕೇವಲ ಕಾಮಿಡಿ, ಪೌರಾಣಿಕ ಪಾತ್ರ ಮಾತ್ರ ತೋರಿಸಲಾಗುತ್ತಿಲ್ಲ, ಬಹುತೇಕರ ಜೀವನದಲ್ಲಿ ನಡೆದಿರುವುದನ್ನು ಕಣ್ಣಿಗೆ ಕಟ್ಟುವ ಹಾಗೆ ಮಕ್ಕಳು ಅಭಿನಯಿಸಿ ತೋರಿಸುತ್ತಿದ್ದಾರೆ.
ಈ ಬಾರಿವಿಶೇಷ ಅತಿಥಿಯಾಗಿ ಪದ್ಮಶ್ರಿ ಮಂಜಮ್ಮ ಜೋಗತಿ
ಈ ವಾರಾಂತ್ಯ ಡ್ರಾಮಾ ಜ್ಯೂನಿಯರ್ಸ್ ವೇದಿಕೆಯ ಮೇಲೆ ನಡೆಯುವ ಅದ್ಭುತವಾದ ನಾಟಕದ ಝಲಕ್ ಒಂದನ್ನು ನೀಡಿದ್ದಾರೆ. ಡ್ರಾಮಾ ವೇದಿಕೆಯಲ್ಲಿ ಮಂಗಳಮುಖಿಯರ ಬುದುಕಿನ ಚಿತ್ರಣವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ ಮಕ್ಕಳು. ಹಾಗೆಯೇ ಜೋಗತಿ ಮಂಜಮ್ಮ ಅವರ ಬದುಕಿನ ಚಿತ್ರಣವನ್ನು ತೆರೆದಿಟ್ಟಿದ್ದಾರೆ. ಈ ಮಕ್ಕಳ ಡ್ರಾಮಾವನ್ನು ನೋಡಿದಾಗ ಒಂದೆಡೆ ಮನಸ್ಸಿಗೆ ಬಹಳ ಸ್ಪೋರ್ತಿದಾಯಕವಾಗುತ್ತದೆ, ಈ ಬಾರಿಯ ಡ್ರಾಮಾ ಜ್ಯೂನಿಯರ್ಸ್ಗೆ ವಿಶೇಷ ಅತಿಥಿಯಾಗಿ ಪದ್ಮ ಶ್ರಿ ಮಂಜಮ್ಮ ಜೋಗತಿಯವರು ಆಗಮಿಸಿದ್ದಾರೆ.
ಇದನ್ನೂ ಓದಿ: Actress Gagana: ಗಟ್ಟಿಮೇಳ ಧಾರಾವಾಹಿ ಆರತಿ ನಿಜ ಜೀವನದಲ್ಲಿ ಇರೋದು ಹೀಗಂತೆ
ವಿಶೇಷ ಸಂಚಿಕೆಯ ಪ್ರೋಮೋ ಪ್ರಸಾರ
ಈಗಾಗಲೇ ಮೇ 21ರಂದು ನಡೆಯಲಿರುವ ವಿಶೇಷ ಸಂಚಿಕೆಯ ಪ್ರೋಮೋವನ್ನು ಬಿತ್ತರಿಸಿದ್ದಾರೆ. ಅದರಲ್ಲಿ ಜೋಗತಿ ಮಂಜಮ್ಮ ಅವರ ಬದುಕಿನ ಕಥೆಯನ್ನು ಮಕ್ಕಳು ಅಭಿನಯದ ಮೂಲಕ ಬಿತ್ತರಿಸಿದ್ದಾರೆ.
ಸವಾಲಿನ ಜೀವನವನ್ನು ಎದುರಿಸಿ ದಿಟ್ಟತನದಿಂದ ಬದುಕಿ ಸಾಧಿಸಿದ ಜೋಗತಿ ಮಂಜಮ್ಮ ಅವರಿಗೆ ಹಿರಿಯ ನಟಿ ಲಕ್ಷ್ಮೀ, ರವಿಂಚಂದ್ರನ್ ಸಾಂತ್ವನ ಹೇಳಿದ್ದಾರೆ.
ನಾವು ಹೆಣ್ಣು ಅಲ್ಲ ಗಂಡು ಅಲ್ಲ ನಾವೆಲ್ಲರೂ ಕಲಾವಿದರು ಎಂದು ಹೇಳುವ ಮಾತು ಜನರ ಮನಗೆದ್ದಿದೆ. ಹುಟ್ಟಿದ ಮನೆಯಿಂದಲೇ ಬಹಿಷ್ಕಾರಗೊಂಡು, ಸಮಾಜದ ತುಳಿತಕ್ಕೆ ಒಳಗಾಗಿ, ನೋವುಗಳಲ್ಲೇ ಜೀವನ ಸವೆಸಿ, ಕಷ್ಟಗಳನ್ನೇ ಮೆಟ್ಟಿಲಾಗಿಸಿಕೊಂಡು ಬೆಳೆದ ಜೋಗತಿ ಮಂಜಮ್ಮ ಅವರ ಕತೆ ಮುಂದಿನ ಸಂಚಿಕೆಯಲ್ಲಿ ಪ್ರಸಾರವಾಗುತ್ತಿದೆ ಈ ಕಾರ್ಯಕ್ರಮ ನೋಡಲು ವೀಕ್ಷಕರು ಕಾತರರಾಗಿದ್ದಾರೆ.
ಅವ್ವ ನಾನು ಶಾಲೆಗೆ ಹೋಗ್ಬರ್ತ್ತೀನಿ ಎಂದು ಶಾಲೆಗೆ ತೆರಳುವುದು ಹಾಗೆಯೇ ಜೋಗಿತಿ ಮಂಜಮ್ಮ ಅವರ ಅಮ್ಮ ಹೇಳುವ ಮಾತುಗಳು , ಅವರ ತಂದೆತಾಯಿ ಅವರಿಗೆ ಬಯ್ಯುವ ದೃಶ್ಯ, ಡಾಕ್ಟರ್ ಬಳಿ ತೆರಳುವುದು, ಮನೆಯಿಂದ ಆಕೆಯನ್ನು ಹೊರಗೆ ಹಾಕಿದ ರೀತಿ, ಕುಣಿತ ಕಲಿತುಕೊಂಡ ರೀತಿ ಇದನ್ನೆಲ್ಲ ಬಿಡಿ ಬಿಡಿಯಾಗಿ ಮಕ್ಕಳು ಅಭಿನಯಿಸಿ ತೋರಿಸಿದ್ದಾರೆ, ಇದನ್ನು ನೋಡಿದ ಮಂಜಮ್ಮ ಕಣ್ಣೀರಿಟ್ಟಿದ್ದಾರೆ.
ಜಾನಪದ ಕ್ಷೇತ್ರದ ಸಾಧನೆಗಾಗಿ ಪದ್ಮಶ್ರೀ ಪುರಸ್ಕಾರ ನೀಡಿ ಗೌರವಿಸಲಾಗಿದೆ
ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷೆ ಮಂಜಮ್ಮ ಜೋಗತಿ ಅವರಿಗೆ ಗಣರಾಜ್ಯೋತ್ಸವ 2021ರ ಸಂದರ್ಭದಲ್ಲಿ ಜಾನಪದ ಕ್ಷೇತ್ರದ ಸಾಧನೆಗಾಗಿ ಪದ್ಮಶ್ರೀ ಪುರಸ್ಕಾರ ನೀಡಿ ಗೌರವಿಸಲಾಗಿದೆ. ಹನುಮಂತಯ್ಯ ಶೆಟ್ಟಿ ಮತ್ತು ಜಯಲಕ್ಷ್ಮಿ ದಂಪತಿಯ ಸುಪುತ್ರರಾಗಿ ಜನ್ಮನಾಮ ಬಿ. ಮಂಜುನಾಥ ಶೆಟ್ಟಿ ಎಂಬುವುದಾಗಿತ್ತು. ಎಲ್ಲ ಮಕ್ಕಳಂತೆ ಆಡು, ಓದು, ಕುಣಿತದ ಸಡಗರದ ಬಾಲ್ಯ ಹೊಂದಿದ್ದರು. ಏಳನೇ ತರಗತಿಯ ವೇಳೆಗೆ ಶರೀರದಲ್ಲಿ ವಿಚಿತ್ರ ಏರುಪೇರು, ದೇಹದಲ್ಲಿ ದಿಢೀರಾಗಿ ಹೆಣ್ಣಿನ ಲಕ್ಷಣಗಳು ಗೋಚರಿಸಿದಾಗ ಹೆಣ್ಣಾಗಿ ಬದುಕಬೇಕೆಂಬ ಹಂಬಲ ಮೂಡಿದೆ.
ಇದನ್ನೂ ಓದಿ: Lakshana Serial: ಯಶಸ್ವಿಯಾಗಿ 200 ಸಂಚಿಕೆಗಳನ್ನು ಪೂರೈಸಿದ ಲಕ್ಷಣ ಧಾರಾವಾಹಿ
ಬಳ್ಳಾರಿ ಜಿಲ್ಲೆಯ ತಗ್ಗಿನಮಠ ಎಂಬ ಊರಿನಲ್ಲಿ ಜನಿಸಿದ ಮಂಜಮ್ಮ ಕಲಾಲೋಕಕ್ಕೆ ಚಿರಪರಿಚಿತರು. ಲೋಕಕ್ಕೆ ಅಸಹಜವಾದ ಸ್ಥಿತಿ ಹಾಗೂ ಕೌಟುಂಬಿಕ, ಸಾಮಾಜಿಕ ಬಹಿಷ್ಕಾರದ ಬರಸಿಡಿಲು ಎದುರಿಸಬೇಕಾಯಿತು. ಆತ್ಮಹತ್ಯೆಗೆ ಯತ್ನಿಸಿಯೂ ಬದುಕಿಕೊಂಡ ಮೇಲೆ ಬದುಕು-ಭಾವವೆರಡು ಸಮಾಜಮುಖಿಯಾಗಲು ದೃಢತೀರ್ಮಾನ ಕೈಗೊಳ್ಳುವಂತೆ ಮಾಡಿತು. ಮಂಜುನಾಥಶೆಟ್ಟಿ ಮಂಜಮ್ಮಳಾಗಿ ರೂಪಾಂತರಗೊಂಡರು. ಆ ಹಂತದಲ್ಲಿ ದೊರೆತ ಕಾಳವ್ವ ಜೋಗತಿಯೇ ಗುರು, ತಾಯಿ, ಮಾರ್ಗದರ್ಶಕಿಯಾದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ