Kichcha Sudeep: ಡಿಕೆಡಿ ವೇದಿಕೆಗೆ ವಿಶೇಷ ಅತಿಥಿಯಾಗಿ ಕಿಚ್ಚ ಸುದೀಪ್​, ರಾ ರಾ ರಕ್ಕಮ್ಮ ಹಾಡಿಗೆ ಹೆಜ್ಜೆ ಹಾಕಿದ ನಟ

ಡಿಕೆಡಿ ಸ್ಪರ್ಧಿಗಳನ್ನು ನೋಡಿ ಮತ್ತು ಅವರ ಅತ್ಯದ್ಭುತ ಪ್ರತಿಭೆಯನ್ನು ಕಂಡು ಸುದೀಪ್ ಅವರು ದಂಗಾಗಿ ಹೋಗಿದ್ದಾರೆ. ಅದೇ ರೀತಿ ಜಗತ್ತಿನಾದ್ಯಂತ ಸೆನ್ಸೇಶನ್ ಸೃಷ್ಟಿಸಿರುವ 'ರಾ ರಾ ರಕ್ಕಮ್ಮ' ಹಾಡಿಗೆ ಕಿಚ್ಚ ಇಲ್ಲಿ ಡ್ಯಾನ್ಸ್ ಮಾಡಿದರು.

ಕಿಚ್ಚ ಸುದೀಪ್​

ಕಿಚ್ಚ ಸುದೀಪ್​

 • Share this:
  ಜೀ ಕನ್ನಡ (Zee Kannada) ವಾಹಿನಿಯಲ್ಲಿ ಪ್ರಸಾರಗೊಳ್ಳುತ್ತಿರುವ ಜನಪ್ರಿಯ ರಿಯಾಲಿಟಿ ಶೋ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ನ (Dance Karnataka Dance) ಮುಖ್ಯ ಅತಿಥಿಯಾಗಿ ಕಿಚ್ಚ ಸುದೀಪ್ ಅವರು ಆಗಮಿಸಿದ್ದಾರೆ‌. ವಾರಾಂತ್ಯದಲ್ಲಿ ಪ್ರಸಾರಗೊಳ್ಳುತ್ತಿರುವ ಈ ರಿಯಾಲಿಟಿ ಶೋನಲ್ಲಿ ಈ ವಾರ ಕಿಚ್ಚೋತ್ಸವ ನಡೆಯುತ್ತಿದ್ದು, ಸ್ಪರ್ಧಿಗಳು ಸುದೀಪ್ (Sudeep) ಸಿನಿಮಾದ ಹಾಡುಗಳಿಗೆ ಹೆಜ್ಜೆ ಹಾಕಿ ಕುಣಿದು ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. ಡಿಕೆಡಿ ವೇದಿಕೆಯಲ್ಲಿ ವೀಕೆಂಡ್ ಮನೋರಂಜನೆ ಜೋರಾಗಿದೆ ಅದೇ ರೀತಿ ಸುದೀಪ್ ಅವರನ್ನು ಬಹಳ ಅದ್ದೂರಿಯಿಂದ ಡಿಕೆಡಿ ಸ್ವಾಗತಿಸಿದೆ. ಡಿಕೆಡಿ (DKD) ಸ್ಪರ್ಧಿಗಳನ್ನು ನೋಡಿ ಮತ್ತು ಅವರ ಅತ್ಯದ್ಭುತ ಪ್ರತಿಭೆಯನ್ನು ಕಂಡು ಸುದೀಪ್ ಅವರು ದಂಗಾಗಿ ಹೋಗಿದ್ದಾರೆ. ಅದೇ ರೀತಿ ಜಗತ್ತಿನಾದ್ಯಂತ ಸೆನ್ಸೇಶನ್ ಸೃಷ್ಟಿಸಿರುವ 'ರಾ ರಾ ರಕ್ಕಮ್ಮ' ಹಾಡಿಗೆ ಕಿಚ್ಚ ಇಲ್ಲಿ ಡ್ಯಾನ್ಸ್ ಮಾಡಿದರು.

  ದೇವರೇ ಬೇಗ ಬಾ ಅನ್ನೋ ಹಾಡಿನ ನೃತ್ಯಕ್ಕೆ ಸುದೀಪ್ ಬಹಳ ಭಾವುಕ

  ಅದ್ಭುತ ನೃತ್ಯ ಕಂಡ ಸುದೀಪ್ ಈ ಡ್ಯಾನ್ಸರ್ ಗಳ ಒಂದು ಪರ್ಸೆಂಟ್ ಡ್ಯಾನ್ಸ್ ಕೂಡ ನನ್ನಿಂದ ಮಾಡಲು ಸಾಧ್ಯವಿಲ್ಲ ಎನ್ನುವ ಮಾತನ್ನು ಹೇಳಿದ್ದಾರೆ‌. ಬಳ್ಳಾರಿಯ ರಿಷಿಕೇಶ್ ಮತ್ತು ತಂಡ ಮಾಡಿದ ಕಣ್ಣೀರು ತರಿಸುವಂತಹ ದೇವರೇ ಬೇಗ ಬಾ ಅನ್ನೋ ಹಾಡಿನ ನೃತ್ಯಕ್ಕೆ ಸುದೀಪ್ ಬಹಳ ಭಾವುಕರಾಗಿದ್ದಾರೆ. ಹಸಿವಿನ ರೌದ್ರತೆಯ ಪ್ರದರ್ಶನ ಮಾಡಿದ ಪುಟ್ಟ ಹುಡುಗಿ ಅವಳನ್ನು ಕಂಡು ಏನು ಮಾಡಲಾಗದೆ ಅಸಹಾಯಕನಾದ ಕೈ ಇಲ್ಲದ ಆಕೆಯ ಅಣ್ಣ ಅವರ ಜೊತೆಗಿನ ರೋಚಕತೆ ಮೂಲಕ ಸಹ ನೃತ್ಯಗಾರರ ರೋಮಾಂಚನಕಾರಿ ರೋಚಕ ನೃತ್ಯಕ್ಕೆ ಸೆಂಚುರಿ ಸ್ಟಾರ್ ಶಿವಣ್ಣ ಕೂಡ ಕಣ್ಣೀರು ಸುರಿಸಿದರು.

  ಇದನ್ನೂ ಓದಿ: Actress Sudha Rani: ಶ್ರೀರಸ್ತು ಶುಭಮಸ್ತು ಧಾರಾವಾಹಿ ಮೂಲಕ ಮತ್ತೆ ಕಿರುತೆರೆಗೆ ಮರಳುತ್ತಿದ್ದಾರೆ ಚಂದನವನದ ಸುಂದರಿ ಸುಧಾರಾಣಿ

  ಕೈ ಇಲ್ಲದ ನೃತ್ಯಪಟುವನ್ನು ಬಾಚಿ ತಬ್ಬಿಕೊಂಡ  ಕಿಚ್ಚ ಸುದೀಪ

  ಈ ದೃಶ್ಯ ಕಂಡು ಭಾವುಕರಾದ ಕಿಚ್ಚ ಸುದೀಪ ವೇದಿಕೆಗೆ ಹೋಗಿ ಕೈ ಇಲ್ಲದ ನೃತ್ಯಪಟುವನ್ನು ಬಾಚಿ ತಬ್ಬಿಕೊಂಡರು. ವಾಸ್ತವದಲ್ಲಿ ಈ ಹುಡುಗನ ಹಿನ್ನೆಲೆಯೂ ಬಡತನದಲ್ಲಿಯೇ ಈತ ಮೂಲತಹ ಬಳ್ಳಾರಿಯ ವನ್ನು ಅಲ್ಲಿನ ತರಕಾರಿಯಲ್ಲಿ ಮೂಡಿ ಗೊತ್ತು ತೂಕಕ್ಕೆ ಹಾಕುವ ಕೆಲಸವನ್ನು ಮಾಡುತ್ತಿದ್ದಾನೆ. ಕೈಗಳಿಲ್ಲದೆ ಹುಡುಗನ ಕರುಣಾಜನಕ ಬದುಕಿನ  ವ್ಯಥೆ ಕಂಡು ಸುದೀಪ್ ಒಂದು ಕ್ಷಣಕ್ಕೆ ನಿಬ್ಬೆರಗಾಗಿ ನಿಂತರು.

  ಅದೇರೀತಿ ಇತ್ತೀಚೆಗಷ್ಟೇ ನಮ್ಮನ್ನು ಅಗಲಿದ ಕರುನಾಡ ಚಕ್ರವರ್ತಿ ಪುನೀತ್ ರಾಜಕುಮಾರ್ ಅವರನ್ನು ವೇದಿಕೆಯಲ್ಲಿ ಸುದೀಪ್ ಅವರು ಸ್ಮರಿಸಿಕೊಂಡರು. ಬಾನದಾರಿಯಲ್ಲಿ ಸೂರ್ಯ ಜಾರಿಹೋದ ರಾತ್ರಿ ಆಯ್ತು ಮಲಗು ನನ್ನ ಪುಟ್ಟ ಕಂದ ಹಾಡನ್ನು ಸುದೀಪ್ ಅವರು ಹಾಡಿ ಅಪ್ಪುನನ್ನು ಸ್ಮರಿಸಿಕೊಂಡಿದ್ದಾರೆ. ರಾತ್ರಿ ಆಯ್ತು ಮಲಗು ನನ್ನ ಪುಟ್ಟ ಕಂದ ಹಾಡು ಬಾಲ್ಯದಲ್ಲಿ ತನ್ನನ್ನು ಹೇಗೆ ಆವರಿಸಿತ್ತು, ಅಪ್ಪು ಅವರು ಬಿಟ್ಟು ಹೋದ ಖಾಲಿತನ ತನ್ನನ್ನು ಯಾವ ರೀತಿ ಕಂಗೆಡಿಸುತ್ತಿದೆ ಅನ್ನೋದನ್ನು ಸುದೀಪ್ ಮನಸ್ಸು ತುಂಬಿ ಸ್ಮರಿಸಿಕೊಂಡರು.

  ಬಾಲ್ಯದಲ್ಲಿ ಅಪ್ಪು ಹಾಗೂ ಸುದೀಪ್ ತೆಗೆಸಿಕೊಂಡಿದ್ದಂತಹ ಒಂದು ಫೋಟೋವೊಂದರಂತೆ ಪೈಲ್ವಾನ್ ಸಿನಿಮಾ ಕಾರ್ಯಕ್ರಮದ ವೇಳೆ ಅಪ್ಪು ಮತ್ತು ಸುದೀಪ್ ಅವರು ತೆಗೆಸಿಕೊಂಡಿದ್ದರು ಈ ಫೋಟೋ ಇದೀಗ ಡಿಕೆಡಿ ವೇದಿಕೆ ಮೇಲೆ ಅನಾವರಣವಾಗಿದೆ. ಇದನ್ನು ಕಂಡು ಅಕ್ಷರಶಃ ಪ್ರೇಕ್ಷಕರು ಮತ್ತು ಅಲ್ಲಿ ನೆರೆದಿದ್ದ ಅಂತಹ ಎಲ್ಲಾ ಆಡಿಯಲ್ಸ್ ತಪ್ತ ಆಗಿರುವುದಂತೂ ಸುಳ್ಳಲ್ಲ.

  ಇದನ್ನೂ ಓದಿ: Actress Amrutha: ಗಂಡು ಮಗುವಿನ ತಾಯಿಯಾದ ಕಿರುತೆರೆ ನಟಿ ಅಮೃತಾ ನಾಯ್ಡು

  ಹ್ಯಾಟ್ರಿಕ್ ಹೀರೋ ಶಿವ ರಾಜ್‌ಕುಮಾರ್ ಸ್ಪೆಷಲ್‌ ಜಡ್ಜ್‌

  ರಿಯಾಲಿಟಿ ಶೋನಲ್ಲಿ ಕ್ರೇಜಿ ಕ್ವೀನ್ ರಕ್ಷಿತಾ, ಚಿನ್ನಿ ಮಾಸ್ಟರ್, ಅರ್ಜುನ್‌ ಜನ್ಯ ಅವರು ತೀರ್ಪುಗಾರರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಕಾರ್ಯಕ್ರಮಕ್ಕೆ ಪವರ್ ಹೆಚ್ಚಿಸಲು ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅವರು ಸ್ಪೆಷಲ್‌ ಜಡ್ಜ್‌ ಆಗಿ ಭಾಗಿಯಾಗುತ್ತಿದ್ದಾರೆ.
  Published by:Swathi Nayak
  First published: