Dance karnataka Dance: ಡ್ಯಾನ್ಸ್‌ ಕರ್ನಾಟಕ ಡ್ಯಾನ್ಸ್‌ ರಿಯಾಲಿಟಿ ಶೋನಲ್ಲಿ ರೆಕ್ಕೆಯ ಕುದುರೆ ಏರಿ ಹಾಡಿಗೆ ಶಿವಣ್ಣ ಸಖತ್ ಡ್ಯಾನ್ಸ್

ಈ ವಾರದ ವಿಶೇಷ ಅತಿಥಿಯಾಗಿ ಗೀತಾ ಶಿವರಾಜ್‌ಕುಮಾರ್ ಅವರನ್ನು ಕರೆಸಿದ್ದಾರೆ. ಮಕ್ಕಳ ಡ್ಯಾನ್ಸ್, ಅವರ ಪ್ರತಿಭೆ ನೋಡಿ ಗೀತಾ ಅವರಿಗೂ ಶಾಕ್ ಆಗಿದೆ. 

ಶಿವರಾಜ್‌ಕುಮಾರ್

ಶಿವರಾಜ್‌ಕುಮಾರ್

  • Share this:
    ಜೀ ಕನ್ನಡ (Zee Kannada) ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಡ್ಯಾನ್ಸ್‌ ಕರ್ನಾಟಕ ಡ್ಯಾನ್ಸ್‌ (Dance karnataka Dance) ರಿಯಾಲಿಟಿ ಶೋನಲ್ಲಿ ಕ್ರೇಜಿ ಕ್ವೀನ್ ರಕ್ಷಿತಾ (Rakshitha), ಚಿನ್ನಿ ಮಾಸ್ಟರ್ (Chinniprakash master), ಅರ್ಜುನ್‌ ಜನ್ಯ (Arjun Janya) ಅವರು ತೀರ್ಪುಗಾರರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಕಾರ್ಯಕ್ರಮಕ್ಕೆ ಪವರ್ ಹೆಚ್ಚಿಸಲು ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ (Shivarajkumar) ಅವರು ಸ್ಪೆಷಲ್‌ ಜಡ್ಜ್‌ ಆಗಿ ಭಾಗಿಯಾಗುತ್ತಿದ್ದಾರೆ. ಅವರ ಎನರ್ಜಿ ಮತ್ತು ನಗು ನೋಡಿ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ. 'ಈ ವಾರದ ವಿಶೇಷ ಅತಿಥಿಯಾಗಿ ಗೀತಾ ಶಿವರಾಜ್‌ಕುಮಾರ್ ಅವರನ್ನು ಕರೆಸಿದ್ದಾರೆ. ಮಕ್ಕಳ ಡ್ಯಾನ್ಸ್, ಅವರ ಪ್ರತಿಭೆ ನೋಡಿ ಗೀತಾ ಅವರಿಗೂ ಶಾಕ್ ಆಗಿದೆ. 

    ನವೀನ್ ಮತ್ತು ಹರ್ಷಿತಾ ಅಪ್ಪ ಮಗಳ ಬಾಂಧವ್ಯ ಸಾರುವ ಹಾಡಿಗೆ ಹೆಜ್ಜೆ ಹಾಕಿದ್ದಾರೆ

    ನವೀನ್ ಮತ್ತು ಹರ್ಷಿತಾ ಅಪ್ಪ ಮಗಳ ಬಾಂಧವ್ಯ ಸಾರುವ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಹರ್ಷಿತಾ ಅದನ್ನು ಅದ್ಭುತವಾಗಿ ನಿಭಾಯಿಸಿದ್ದಾರೆ. ತಂದೆಗೆ ಮಗಳನ್ನು ಎತ್ತಿ ಮುದ್ದಾಡಬೇಕು. ಆಕೆಯನ್ನು ತನ್ನ ಶಕ್ತಿ ಇರುವಷ್ಟು ಸಲಹಬೇಕು ಎನಿಸಿರುತ್ತದೆ. ಆದರೆ ಅದು ಕೆಲವೊಂದಿಷ್ಟು ಜನರಿಂದ ಸಾಧ್ಯವಾಗುವುದಿಲ್ಲ ಇದು ಅಂತಿಂಥ ಹಾಡಲ್ಲ, ಎಲ್ಲರ ಕಣ್ಣಲ್ಲೂ ನೀರು ತರಿಸುವ ಹಾಡು. ಅದುವೇ ರೆಕ್ಕೆಯ ಕುದುರೆ ಏರಿ ಹಾಡು. ಶಿವಣ್ಣ ಅಭಿನಯದ 'ಕವಚ' ಸಿನಿಮಾದ ಹಾಡಿದು. ಅದರಲ್ಲಿ ಕಣ್ಣು ಕಾಣದ ಅಪ್ಪ. ಆದರೆ ಇಲ್ಲಿ ಅಸಹಾಯಕ ಅಪ್ಪನ ಜೊತೆ ಮುದ್ದು ಮಗಳು ಯಾವ ರೀತಿ ಇರುತ್ತಾಳೆ ಎಂಬುದು ತೋರಿಸಲಾಗಿದೆ. ಆ ನಿಂದನೆಯೂ ಈ ಡ್ಯಾನ್ಸಿಗೂ ಮುನ್ನ ಅನಾವರಣವಾಗಿದೆ. ಆದರೆ ಇಷ್ಟು ಸಾಫ್ಟ್ ಇರುವ ಹಾಡಿಗೆ ಹೀಗೂ ಹೆಜ್ಜೆ ಹಾಕಬಹುದಾ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.

    ಇದನ್ನೂ ಓದಿ: New Serial: ಸಿರಿ ಕನ್ನಡ ವಾಹಿನಿಯಲ್ಲಿ 3 ಹೊಸ ಸೀರಿಯಲ್​ - ಮೇ 23ರಿಂದ ನಾನ್​ಸ್ಟಾಪ್​ ಮನರಂಜನೆ

    ಮಕ್ಕಳ ಡ್ಯಾನ್ಸ್ ಅವರ ಪ್ರತಿಭೆ ನೋಡಿ ಗೀತಾ ಅವರಿಗೂ ಶಾಕ್

    ಈ ವಾರದ ವಿಶೇಷ ಅತಿಥಿಯಾಗಿ ಗೀತಾ ಶಿವರಾಜ್‌ಕುಮಾರ್ ಅವರನ್ನು ಕರೆಸಿದ್ದಾರೆ. ಈ ವೇಳೆ 'ಕವಚ' ಸಿನಿಮಾದ ರೆಕ್ಕೆಯ ಕುದುರೆ ಏರಿ ಹಾಡಿಗೆ ನವೀನ್ ಮತ್ತು ಹರ್ಷಿತಾ ಡ್ಯಾನ್ಸ್ ಮಾಡಿದ್ದು, ಶಿವಣ್ಣನ ಮಡದಿ ಗೀತಾ ಅವರಿಗೆ ಖುಷಿಯಾಗಿದೆ. ಮಕ್ಕಳ ಡ್ಯಾನ್ಸ್, ಅವರ ಪ್ರತಿಭೆ ನೋಡಿ ಗೀತಾ ಅವರಿಗೂ ಶಾಕ್ ಆಗಿದೆ. ಈ ಕಾರಣಕ್ಕೆ ಮನಸಾರೆ ಹಾರೈಸಿದ್ದಾರೆ.  'ಕವಚ' ಸಿನಿಮಾದಲ್ಲಿರುವ ಹಾಡಿಗಿಂತ ಇದು ತುಂಬಾ ಅದ್ಭುತವಾಗಿದೆ ಎಂದಿದ್ದಾರೆ. ಮಕ್ಕಳ ಡ್ಯಾನ್ಸ್ ಗೆ ಫುಲ್ ಮಾರ್ಕ್ಸ್ ಪಡೆದಿದ್ದಾರೆ. ಹೆಣ್ಣು ಮಕ್ಕಳಿಗೆ ತಂದೆಯೇ ಮೊದಲ ಹೀರೊ. ಆ ಎಮೋಷನ್ ಅನ್ನ ತುಂಬಾ ಅದ್ಭುತವಾಗಿ ವೇದಿಕೆ ಮೇಲೆ ತಂದಿದ್ದೀರಾ ಎಂದು ಅರ್ಜುನ್ ಜನ್ಯಾ ಹೊಗಳಿದ್ದಾರೆ. ಜಡ್ಜ್‌ಗಳು ತಂದೆಯ ಪ್ರೀತಿಗೆ ಕರಗಿ, ಗೋಲ್ಡನ್ ಹ್ಯಾಟ್ ನೀಡಿದ್ದಾರೆ.

    ಇದನ್ನೂ ಓದಿ: ಗಟ್ಟಿಮೇಳದ ಮಹತಿಗೆ SSLCಯಲ್ಲಿ 99.04%, ಇದು ಸೀರಿಯಲ್ ಅಲ್ಲ ನಿಜವಾದ ರಿಸಲ್ಟ್!

    ಅಪ್ಪ ಸಸ್ಪೆನ್ಸ್ ಆಗಿ ಬಂದು, ಗಿಫ್ಟ್ ಕೊಟ್ಟಾಗ ಶಾಕ್

    ಪರ್ಫಾಮೆನ್ಸ್ ಮುಗಿದ ಮೇಲೆ ಅಪ್ಪ ಈ ನನ್ನ ಡ್ಯಾನ್ಸ್ ನೋಡಿಲ್ಲ ಅಂತ ಬಿಕ್ಕಿ ಬಿಕ್ಕಿ ಅತ್ತಳು ಹರ್ಷಿತಾ. ಅನುಶ್ರೀ ಸಮಾಧಾನ ಮಾಡಿದರೂ ಅಳು ನಿಲ್ಲುತ್ತಿಲ್ಲ. ಆಕೆಗೆ ತಂದೆ ಎಂದರೆ ತುಂಬಾ ಇಷ್ಟ. ಹೀಗಾಗಿಯೇ ಆ ಫೀಲ್ ಹೆಚ್ಚಾಗಿ ಕಾಣುತ್ತಿತ್ತು. ಆದರೆ  ಜಡ್ಜಸ್ ಸಮಾಧಾನ ಮಾಡಿದರೂ, ಅಳು ನಿಲ್ಲಲಿಲ್ಲ. ಕಡೆಗೆ ಅವರ ಅಪ್ಪ ಸಸ್ಪೆನ್ಸ್ ಆಗಿ ಬಂದು, ಗಿಫ್ಟ್ ಕೊಟ್ಟಾಗ ಶಾಕ್ ಆಗಿದ್ದಾಳೆ. ಫುಲ್ ಖುಷಿಯಾಗಿದ್ದಾಳೆ. ಇಂದಿನ ಎಪಿಸೋಡಿನಲ್ಲಿ ತಂದೆ ಮಗಳ ಪ್ರೀತಿ ಗಮನ ಸೆಳೆದಿದೆ.
    Published by:Swathi Nayak
    First published: