Dance Karnataka Dance: ಹುಲಿವೇಷಕ್ಕೆ ಸೆಂಚುರಿ ಸ್ಟಾರ್ ಶಿವಣ್ಣ ಭರ್ಜರಿ ಹೆಜ್ಜೆ!

ಪ್ರತಿ ಸ್ಪರ್ಧಿಗಳು ತಮ್ಮಲ್ಲಿ ಅಡಗಿರುವ ಪ್ರತಿಭೆಯನ್ನು ಇಲ್ಲಿ ಪ್ರದರ್ಶಿಸುತ್ತಿದ್ದಾರೆ. ದಕ್ಷಿಣ ಕನ್ನಡದ ಕಲೆಯಾದ ಹುಲಿ ವೇಷ ನೃತ್ಯಕ್ಕೆ ಈ ಬಾರಿ ಸೆಂಚುರಿ ಸ್ಟಾರ್ ಶಿವಣ್ಣ ಹೆಜ್ಜೆ ಹಾಕಿರುವುದು ವೇದಿಕೆಗೆ ಮೆರುಗನ್ನು ನೀಡಿದೆ. 

ಶಿವರಾಜ್‌ಕುಮಾರ್

ಶಿವರಾಜ್‌ಕುಮಾರ್

  • Share this:
    ಜೀ ಕನ್ನಡ (Zee Kannada) ವಾಹಿನಿಯಲ್ಲಿ ಪ್ರಸಾರಗೊಳ್ಳುತ್ತಿರುವ ಜನಪ್ರಿಯ ರಿಯಾಲಿಟಿ ಶೋ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ನಲ್ಲಿ (Dance Karnataka Dance) ಈ ವಾರ ನಿಮ್ಮ ಶಕ್ತಿ ಪ್ರದರ್ಶಿಸಿ ( ಶೋ ಯುರ್ ಸ್ಟ್ರೆಂಥ್ ರೌಂಡ್) ನಡೆಯುತ್ತಿದೆ. ತಮ್ಮ ಅದ್ಭುತ ಪ್ರತಿಭೆಯನ್ನು ತೋರಿಸಿಕೊಳ್ಳುವ ಸ್ಪರ್ಧಿಗಳಿಗೆ ಇದು ಒಂದು ಸುವರ್ಣಾವಕಾಶ. ಪ್ರತೀ ಸ್ಪರ್ಧಿಗಳು ತಮ್ಮಲ್ಲಿ ಅಡಗಿರುವ ಪ್ರತಿಭೆಯನ್ನು ಇಲ್ಲಿ ಪ್ರದರ್ಶಿಸುತ್ತಿದ್ದಾರೆ. ದಕ್ಷಿಣ ಕನ್ನಡದ ಕಲೆಯಾದ ಹುಲಿ ವೇಷ ನೃತ್ಯಕ್ಕೆ (Tiger Dance) ಈ ಬಾರಿ ಸೆಂಚುರಿ ಸ್ಟಾರ್ ಶಿವಣ್ಣ (Hatrick Hero Shivaraj Kumar) ಹೆಜ್ಜೆ ಹಾಕಿರುವುದು ವೇದಿಕೆಗೆ ಮೆರುಗನ್ನು ನೀಡಿದೆ. 

    ಎಲ್ಲಾ ಸ್ಪರ್ಧಿಗಳು ತಮ್ಮಲ್ಲಿರುವ ವಿಶೇಷ ಕಲೆಯನ್ನು ಈ ವೇದಿಕೆಯಲ್ಲಿ ಡ್ಯಾನ್ಸ್ ಮುಖಾಂತರ‌ ಪ್ರದರ್ಶಿಸುತ್ತಿದ್ದಾರೆ. ಅದೇ ರೀತಿ ದಕ್ಷಿಣ ಕನ್ನಡದ ಜನಪ್ರಿಯ ಕಲೆ ಹುಲಿ ಕುಣಿತಕ್ಕೆ ಮಹೇಶ್ ಹಾಗೂ ಚಾಹತ್ ಹೆಜ್ಜೆ ಹಾಕಿದ್ದಾರೆ. ಈ ಕಲೆಗೆ ಮನಸೋತು ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಕೂಡ ವೇದಿಕೆಗೆ ಬಂದು ಚಿನ್ನಿ ಮಾಸ್ಟರ್, ಅರ್ಜುನ್ ಜನ್ಯ ಜೊತೆ ನಾಲ್ಕು ಹೆಜ್ಜೆ ಹುಲಿವೇಷಕ್ಕೆ ಕುಣಿದಿದ್ದಾರೆ.

    ಹುಲಿಯಾಗಿ ಘರ್ಜಿಸಿ ಎಲ್ಲರನ್ನು ಅಚ್ಚರಿಗೊಳಿಸಿದ ಮಹೇಶ
    ಬಡತನದಲ್ಲಿ ಮೇಲೆ ಬಂದು ಡ್ಯಾನ್ಸ್ ನ ಉಸಿರಾಗಿಸಿಕೊಂಡು ಬಂದಿರುವಂತಹ ಮಹೇಶ ಇಂದು ಹುಲಿ ವೇಷ ಹಾಕಿ ವೇದಿಕೆಯನ್ನು ಅಲ್ಲಾಡಿಸಿದ್ದಾರೆ. ಎಷ್ಟು ಬಾರಿ ಎಗರಿ ಬಿದ್ದರು ಮಹೇಶ ಯಾವುದೇ ನೋವು ‌ಮಾಡಿ‌ಕೊಳ್ಳದೆ ಹುಲಿ ವೇಷಕ್ಕೆ ಹೆಜ್ಜೆ ಹಾಕಿದ್ದಾರೆ. ಕೈಯಲ್ಲೇ ಮಡಿಕೆ ಹೊಡೆದು, ತಲೆಯ ಸಹಾಯದಿಂದ ತೆಂಗಿನಕಾಯಿ ಕೂಡ ಹೊಡೆದ ಮಹೇಶ ಕೊಂಚವೂ ಧೃತಿಗೆಡದೆ ಮತ್ತೆ ಡ್ಯಾನ್ಸ್ ಮಾಡಿ ವೇದಿಕೆಯನ್ನು ನಲುಗಿಸಿದ್ದಾರೆ. ಡ್ಯಾನ್ಸ್ ಎಂದರೆ ಪ್ರಾಣ ಬಿಡುವ ಮಹೇಶ್ ಮೊದಲಿಗೆ ಹಾಕಿದ್ದೆ ಹುಲಿ ವೇಶದ ನೃತ್ಯ. ಇದರಿಂದಾಗಿ ಇಂದು ಡಿಕೆಡಿಯಲ್ಲಿ ಬಂದು ನಿಂತಿದ್ದಾರೆ. ಇಲ್ಲಿಯೂ ಹುಲಿಯಾಗಿ ಘರ್ಜಿಸಿ ಎಲ್ಲರನ್ನು ಅಚ್ಚರಿಗೊಳಿಸಿದ್ದಾರೆ.

    ವೇದಿಕೆಯಲ್ಲಿ ಹುಲಿ ಎಗರಾಡುತ್ತಿದ್ದರೆ ಜೊತೆಗೆ ವೇದಿಕೆಯ ಮೇಲೆ ದೇವತೆಗಳ ಆಗಮನ ಕೂಡ ಆಗಿದೆ. ಎಲ್ಲಾ ದೇವತೆಗಳು ಒಂದೇ ಬಾರಿ ವೇದಿಕೆ ಮೇಲೆ ಬಂದಾಗ ಇದು ಸ್ಪರ್ಧೆ ಎನ್ನುವ ಭಾವನೆ ಬರದೆ ಎಲ್ಲರಿಗೂ ಭಕ್ತಿ ಭಾವ ಮೂಡಿತ್ತು.

    ಇದನ್ನೂ ಓದಿ: Vaishnavi Gowda: ರಾ ರಾ ರಕ್ಕಮ್ಮ ಎಂದು ಹೆಜ್ಜೆ ಹಾಕಿದ ವೈಷ್ಣವಿ ಗೌಡ - ಕಾಮೆಂಟ್​ಗಳ ಮಳೆ ಸುರಿಸಿದ ಅಭಿಮಾನಿಗಳು

    ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್  ಅವರು ಸ್ಪೆಷಲ್‌ ಜಡ್ಜ್‌
    ರಿಯಾಲಿಟಿ ಶೋನಲ್ಲಿ ಕ್ರೇಜಿ ಕ್ವೀನ್ ರಕ್ಷಿತಾ, ಚಿನ್ನಿ ಮಾಸ್ಟರ್, ಅರ್ಜುನ್‌ ಜನ್ಯ ಅವರು ತೀರ್ಪುಗಾರರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಕಾರ್ಯಕ್ರಮಕ್ಕೆ ಪವರ್ ಹೆಚ್ಚಿಸಲು ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್  ಅವರು ಸ್ಪೆಷಲ್‌ ಜಡ್ಜ್‌ ಆಗಿ ಭಾಗಿಯಾಗುತ್ತಿದ್ದಾರೆ. ಪುಟ್ಟ ಮಕ್ಕಳ ಡ್ಯಾನ್ಸ್‌ಯಿಂದ ಹಿಡಿದು ವಯಸ್ಸಾದವರು ಡ್ಯಾನ್ಸ್‌ ಮಾಡಿ ಎಂದು ವೇದಿಕೆ ಮೇಲೆ ಕರೆದರೆ ಶಿವಣ್ಣ ಮೊದಲು ಹೋಗುತ್ತಾರೆ.

    ಎಲ್ಲಾ ಜೋಡಿಗಳು ವಿಭಿನ್ನ ಐಡಿಯಾಗಳೊಂದಿಗೆ ಈ ವಾರದ ಎಪಿಸೋಡ್​ನಲ್ಲಿ ಪ್ರೇಕ್ಷಕರನ್ನು ಮನರಂಜಿಸುತ್ತಿದ್ದಾರೆ‌.

    ಕೌಶಲ್ಯವನ್ನು ಪ್ರದರ್ಶಿಸಲು ಈ ಕಾರ್ಯಕ್ರಮವು ವೇದಿಕೆ
    ರಾಜ್ಯದಾದ್ಯಂತ ಆಡಿಷನ್‌ಗಳ ಮೂಲಕ ತಯಾರಕರು ವಿಶೇಷವಾಗಿ ಆಯ್ಕೆ ಮಾಡಿದ ನೃತ್ಯ ಉತ್ಸಾಹಿಗಳನ್ನು ಒಳಗೊಂಡಿದೆ. ಉದಯೋನ್ಮುಖ ನೃತ್ಯಪಟುಗಳಿಗೆ ತಮ್ಮ ನೃತ್ಯ ಕೌಶಲ್ಯವನ್ನು ಪ್ರದರ್ಶಿಸಲು ಈ ಕಾರ್ಯಕ್ರಮವು ವೇದಿಕೆಯಾಗಿದೆ.

    ಇದನ್ನೂ ಓದಿ: Sequels Movies: ಭಾರತದ ಬಹುನಿರೀಕ್ಷಿತ ಸೀಕ್ವೆಲ್‌ ಸಿನಿಮಾಗಳು, ಇವುಗಳಿಗಾಗಿ ಭಾರತವೇ ಕಾಯುತ್ತಿದೆ!

    ಹಿಂದಿನ ಸೀಸನ್‌ನಂತೆ, ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸೀಸನ್ 4 ಕೂಡ ವಿವಿಧ ವಯೋಮಾನದ ಉತ್ಸಾಹಿ ನೃತ್ಯಗಾರರನ್ನು ಹೊಂದಿದೆ. ರಿಯಾಲಿಟಿ ಶೋ ಎಲ್ಲಾ ನೃತ್ಯ ಉತ್ಸಾಹಿಗಳಿಗೆ ತಮ್ಮ ನೃತ್ಯ ಕೌಶಲ್ಯವನ್ನು ಪ್ರದರ್ಶಿಸಲು ಪರಿಪೂರ್ಣ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ.
    Published by:Swathi Nayak
    First published: