Reality Show: ಜೀ ಕನ್ನಡ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ವಿಜೇತರಿಗೆ ದೊರಕಲಿದೆ ಅಪ್ಪು ಟ್ರೋಫಿ

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಗಲಿಕೆ ಬಳಿಕ ಎಲ್ಲಾ ಕಾರ್ಯಕ್ರಮಗಳಲ್ಲಿ ಅವರನ್ನು ನೆನಪಿಸಿಕೊಳ್ಳಲಾಗುತ್ತದೆ ಅದೇ ರೀತಿ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸೀಸನ್ 6 ರಿಯಾಲಿಟಿ ಶೋನಲ್ಲಿ ಅಪ್ಪುಗೆ ವಿಭಿನ್ನ ರೀತಿಯಲ್ಲಿ ಗೌರವ ಸಲ್ಲಿಸಲಾಗಿದೆ.

ಅಪ್ಪು ಟ್ರೋಫಿ

ಅಪ್ಪು ಟ್ರೋಫಿ

  • Share this:
    ಜೀ ಕನ್ನಡ (Zee Kannada) ವಾಹಿನಿಯಲ್ಲಿ ಪ್ರಸಾರಗೊಳ್ಳುತ್ತಿರುವ ಜನಪ್ರಿಯ ರಿಯಾಲಿಟಿ ಶೋ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ (Dance  Karnataka Dance) ತನ್ನದೇ ಆದ ಪ್ರೇಕ್ಷಕರನ್ನು ಪಡೆಯುವಲ್ಲಿ ಯಶಸ್ವಿಯಾಗಿದೆ. ಈ ಸೀಸನ್ ಅಂತೂ ಬಹಳ ವಿಶೇಷ ಹೌದು ಸೆಂಚುರಿ ಸ್ಟಾರ್ ಶಿವಣ್ಣ (Shivanna) ಕಾರ್ಯಕ್ರಮದ ಮುಖ್ಯ ಜಡ್ಜ್ ಆಗಿ ಆಗಮಿಸಿದ್ದಾರೆ. ಇದು ಕಾರ್ಯಕ್ರಮಕ್ಕೆ ಹೊಸ ಮೆರುಗನ್ನು ತಂದುಕೊಟ್ಟಿದೆ ಎಂದರೆ ಸುಳ್ಳಾಗದು. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ (Punith Rajkumar) ಅಗಲಿಕೆ ಬಳಿಕ ಎಲ್ಲಾ ಕಾರ್ಯಕ್ರಮಗಳಲ್ಲಿ ಅವರನ್ನು ನೆನಪಿಸಿಕೊಳ್ಳಲಾಗುತ್ತದೆ ಅದೇ ರೀತಿ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸೀಸನ್ 6 ರಿಯಾಲಿಟಿ ಶೋನಲ್ಲಿ (Reality Show) ಅಪ್ಪುಗೆ ವಿಭಿನ್ನ ರೀತಿಯಲ್ಲಿ ಗೌರವ ಸಲ್ಲಿಸಲಾಗಿದೆ.

    ಅಪ್ಪು ಟ್ರೋಫಿ ನೋಡಿ ಬಹಳ ಬಾಹುಕರಾಗಿದ ಸೆಂಚುರಿ ಸ್ಟಾರ್ ಶಿವಣ್ಣ

    ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸೀಸನ್ 6 ಶೋನ ವಿಜೇತರಿಗೆ ಅಪ್ಪು ಇರುವ ಟ್ರೋಫಿ ಸಿಗಲಿದೆ ಆ ಟ್ರೋಫಿಯನ್ನು ನಿನ್ನೆ ಸಂಚಿಕೆಯಲ್ಲಿ ಪುನೀತ್ ರಾಜಕುಮಾರ್ ಅವರ ಮುದ್ದಿನ ಅಣ್ಣ ಡಾ. ಶಿವರಾಜ್ ಕುಮಾರ್ ಅವರು ಅನಾವರಣ ಮಾಡಿದ್ದಾರೆ. ಪುನೀತ್ ಅಗಲಿಕೆ ಬಳಿಕ ಸಾರ್ವಜನಿಕವಾಗಿ ಇವರು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಅಲ್ಲದೆ ನಿನ್ನೆ ಸಂಚಿಕೆಯಲ್ಲಿ ಟ್ರೋಫಿ ನೋಡಿ ಬಹಳ ಬಾಹುಕರಾಗಿದ್ದಾರೆ ಸೆಂಚುರಿ ಸ್ಟಾರ್ ಶಿವಣ್ಣ.

    ಇದನ್ನೂ ಓದಿ: Sampada Hulivana: ತೆಲುಗಿನಲ್ಲಿ ಮಿಂಚಲು ಮತ್ತೊಬ್ಬ ಕನ್ನಡತಿ ಸಜ್ಜು, ಮಿಥುನ ರಾಶಿ ನಟಿ ಸಂಪದಾಗೆ ಅವಕಾಶಗಳ ಸುರಿಮಳೆ

    ಡ್ಯಾನ್ಸ್ ವಿತ್ ಅಪ್ಪು ಹಾಡಿಗೆ ಕುಣಿದು ಕುಪ್ಪಳಿಸಿದ ಇಡೀ ಡಿಕೆಡಿ ಕುಟುಂಬ

    ಸ್ಯಾಂಡಲ್ ವುಡ್ ನಲ್ಲಿ ತಮ್ಮ ಅದ್ಭುತ ಡ್ಯಾನ್ಸ್ ಮೂಲಕ ಗುರುತಿಸಿಕೊಂಡವರು ಎಂದರೆ ಅದು ನಮ್ಮ ಪುನೀತ್ ರಾಜಕುಮಾರ್ ಮಾತ್ರ. ಆದ್ದರಿಂದ ಪುನೀತ್ ರಾಜಕುಮಾರ್ ಅವರಿಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಈ ವಾರದ ಡಿಕೆಡಿಯಲ್ಲಿ ಅಪ್ಪು ನಟನೆಯ ಸಿನಿಮಾಗಳ ಹಾಡನ್ನು ಡ್ಯಾನ್ಸ್ ಪ್ರೇಮಿಗಳು ನೃತ್ಯ ಮಾಡಿದ್ದಾರೆ.

    ಡ್ಯಾನ್ಸ್ ವಿತ್ ಅಪ್ಪು ಹಾಡಿಗೆ ಇಡೀ ಡಿಕೆಡಿ ಕುಟುಂಬವು ಕುಣಿದು ಕುಪ್ಪಳಿಸಿದೆ. ಬಹಳ ಗೌರವದಿಂದ ಅಪ್ಪುವಿನ ಟ್ರೋಫಿಯನ್ನು ವೇದಿಕೆಗೆ ತಿಳಿಸಿದ್ದಾರೆ. ಅದೇ ರೀತಿ ಅಪ್ಪುನ ಅಪ್ಪಟ ಅಭಿಮಾನಿ ಅನುಶ್ರೀ ಅವರು ಜೊತೆಗೆ ಡ್ಯಾನ್ಸ್ ವಿತ್ ಅಪ್ಪು ಹಾಡಿಗೆ ಹೆಜ್ಜೆ ಹಾಕಿದ್ದಾರೆ.

    ನೃತ್ಯದ ನಡುವಲ್ಲಿ ಅಪ್ಪು ಟ್ರೋಫಿ ಮೇಲೆ ಏರಿಸಿದ್ದು ಶಿವಣ್ಣ ಅದರ ಬಟ್ಟೆ ಸರಿಸಿ ಟ್ರೋಫಿಯನ್ನು ಅನಾವರಣ ಮಾಡಿದರು. ಆ ಕ್ಷಣಕ್ಕೆ ನಕ್ಷತ್ರಗಳ ನಡುವೆ ಅಪ್ಪು ಕಂಚಿನ ಪ್ರತಿಭೆ ಮಿನುಗುದ್ದಂತೆ ಕಾಣಿಸಿತು ಎಂದರೆ ಸುಳ್ಳಾಗದು.

    ಡ್ಯಾನ್ಸ್ ಮಾಡುತ್ತಿರುವ ಪುನೀತ್ ರಾಜಕುಮಾರ್ ಅಂತೆ ಟ್ರೋಫಿಯಲ್ಲಿ ಅವರ ಪ್ರತಿಮೆಯನ್ನು ನಿಲ್ಲಿಸಲಾಗಿದೆ. ಹಾಗೆ ಟ್ರೋಫಿಯಲ್ಲಿ ಪವರ್ ಎಂದು ಕೂಡ ಬರೆಯಲಾಗಿದೆ. ಈ ಕ್ಷಣಕ್ಕೆ ಎಂಥವರಿಗಾದರೂ ಕಣ್ಣಲ್ಲಿ ನೀರು ತುಂಬುವುದು ಸ್ವಾಭಾವಿಕ.

    ಶಿವಣ್ಣ ಕೂಡ ವೇದಿಕೆಯಲ್ಲಿ‌ ಇದನ್ನು ಕಂಡು ಅಕ್ಷರಶಃ ಕುಗ್ಗಿ ಹೋದರು. ಶಿವಣ್ಣನ ದುಃಖ ಇಡೀ ಡಿಕೆಡಿ ಬಳಗದ ದುಃಖವಾಗಿತ್ತು. ಅಷ್ಟೇ ಅಲ್ಲ ಟ್ರೋಫಿಗೆ ಶಿವಣ್ಣ ಮುತ್ತಿಟ್ಟಾಗ ಇಡೀ ಕರುನಾಡಿಗೆ ದುಃಖ ಉಮ್ಮಳಿಸಿ ಬಂದಿತ್ತು ಎಂದರೆ ತಪ್ಪಾಗಲಾರದು.

    ಇದನ್ನೂ ಓದಿ: Jothe Jotheyali Serial: ಆಸ್ತಿ ಪತ್ರಕ್ಕೆ ಸಹಿ ಹಾಕಿದ ಅನು ಸಿರಿಮನೆ! ವರ್ಕೌಟ್ ಆಯ್ತಾ ಹರ್ಷ-ಮೀರಾ ಪ್ಲಾನ್?

    ಹ್ಯಾಟ್ರಿಕ್ ಹೀರೋ ಶಿವ ರಾಜ್‌ಕುಮಾರ್ ಸ್ಪೆಷಲ್‌ ಜಡ್ಜ್‌

    ರಿಯಾಲಿಟಿ ಶೋನಲ್ಲಿ ಕ್ರೇಜಿ ಕ್ವೀನ್ ರಕ್ಷಿತಾ, ಚಿನ್ನಿ ಮಾಸ್ಟರ್, ಅರ್ಜುನ್‌ ಜನ್ಯ ಅವರು ತೀರ್ಪುಗಾರರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಕಾರ್ಯಕ್ರಮಕ್ಕೆ ಪವರ್ ಹೆಚ್ಚಿಸಲು ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅವರು ಸ್ಪೆಷಲ್‌ ಜಡ್ಜ್‌ ಆಗಿ ಭಾಗಿಯಾಗುತ್ತಿದ್ದಾರೆ. ಪುಟ್ಟ ಮಕ್ಕಳ ಡ್ಯಾನ್ಸ್‌ಯಿಂದ ಹಿಡಿದು ವಯಸ್ಸಾದವರು ಡ್ಯಾನ್ಸ್‌ ಮಾಡಿ ಎಂದು ವೇದಿಕೆ ಮೇಲೆ ಕರೆದರೆ ಶಿವಣ್ಣ ಮೊದಲು ಹೋಗುತ್ತಾರೆ. ಎಲ್ಲಾ ಜೋಡಿಗಳು ವಿಭಿನ್ನ ಐಡಿಯಾಗಳೊಂದಿಗೆ ಈ ವಾರದ ಎಪಿಸೋಡ್​ನಲ್ಲಿ ಪ್ರೇಕ್ಷಕರನ್ನು ಮನರಂಜಿಸಿದ್ದಾರೆ.
    Published by:Swathi Nayak
    First published: