• Home
 • »
 • News
 • »
 • entertainment
 • »
 • Reality Show: ಡಿಕೆಡಿ - ಡ್ರಾಮಾ ಜೂನಿಯರ್ಸ್ ಮಹಾಸಂಗಮ, ಜೀ ಕನ್ನಡದಲ್ಲಿ ಮನರಂಜನೆಯ ಮಹಾಪೂರ

Reality Show: ಡಿಕೆಡಿ - ಡ್ರಾಮಾ ಜೂನಿಯರ್ಸ್ ಮಹಾಸಂಗಮ, ಜೀ ಕನ್ನಡದಲ್ಲಿ ಮನರಂಜನೆಯ ಮಹಾಪೂರ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ರಿಯಾಲಿಟಿ ಶೋಗಳಾದ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಹಾಗೂ ಡ್ರಾಮಾ ಜೂನಿಯರ್ಸ್ ಮಹಾಸಂಗಮ ಜನಮನ ಗೆಲ್ಲುವಲ್ಲಿ ಈ ಬಾರಿ ಯಶಸ್ವಿಯಾಗಿದೆ. 

 • Share this:

  ಜೀ ಕನ್ನಡ (Zee Kannada) ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ರಿಯಾಲಿಟಿ ಶೋಗಳಾದ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ (Dance Karnataka Dance)  ಹಾಗೂ ಡ್ರಾಮಾ ಜೂನಿಯರ್ಸ್ (Drama Juniors) ಮಹಾಸಂಗಮ ಜನಮನ ಗೆಲ್ಲುವಲ್ಲಿ ಈ ಬಾರಿ ಯಶಸ್ವಿಯಾಗಿದೆ. ಈ ಕಾರ್ಯಕ್ರಮದಲ್ಲಿ ದಿಗ್ಗಜರ ಮಹಾ ಸಮಾಗಮವಾಗಿದೆ ಸ್ನೇಹಕ್ಕೆ ಸ್ನೇಹ ಪ್ರೀತಿಗೆ ಪ್ರೀತಿ ಹಾಡಿಗೆ ಶಿವರಾಜ್ ಕುಮಾರ್ (Shiva Rajkumar) ಹಾಗೂ ರವಿಚಂದ್ರನ್ (Ravichandran) ಸಖತ್ ಆಗಿ ಕುಣಿದಿದ್ದಾರೆ. ಅಭಿಮಾನಿಗಳೆಲ್ಲರೂ ಇವರಿಬ್ಬರನ್ನು ಒಂದೇ ಜೊತೆಗೆ ಕಾಣಲು ಬಯಸಿದ್ದರು. ಈ ಖುಷಿಯನ್ನು ಶಿವಣ್ಣ ಕೇಕ್ ಕತ್ತರಿಸುವ ಮೂಲಕ ಹಂಚಿಕೊಂಡರು. ಆಚರಿಸಿದರು.


  ಈಶ್ವರಿ ಮತ್ತು ವಜ್ರೇಶ್ವರಿ ಸಾಧನೆಯ ಸಂಭ್ರಮದ ಒಂದು ಅದ್ಭುತ ಝಲಕ್


  ಬಾಲ್ಯದಿಂದಲೇ ಸ್ನೇಹಿತರಾದ ರವಿಚಂದ್ರನ್ ಹಾಗೂ ಶಿವರಾಜ್ ಕುಮಾರ್ ಅವರ ಸಿನಿಮಾಗಳ ಅದ್ಭುತ ಹಾಡುಗಳಿಗೆ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ವೇದಿಕೆಯ ಮಕ್ಕಳು ಸಕ್ಕತ್ತಾಗಿ ಹಾಕಿದ್ದಾರೆ. ತಮ್ಮ ಅದ್ಭುತ ಡ್ಯಾನ್ಸ್ ಮೂಲಕ ಹೃಷಿಕೇಶ್ ಹಾಗೂ ಶ್ರಾವ್ಯ ಮತ್ತು ದಿಲೀಪ್ ವಿಧಿತಾ ಜೋಡಿಯು ಶಿವರಾಜ್ ಕುಮಾರ್ ಹಾಗೂ ರವಿಚಂದ್ರನ್ ಅವರ ಈಶ್ವರಿ ಮತ್ತು ವಜ್ರೇಶ್ವರಿ ಸಾಧನೆಯ ಸಂಭ್ರಮದ ಒಂದು ಅದ್ಭುತ ತೋರಿಸಿದ್ದಾರೆ.


  ಡಿಕೆಡಿ ಸ್ಪರ್ಧಿಗಳಾದ ಸಾಕ್ಷ ಹಾಗೂ ಸಹನಾ ಲಕ್ಷ್ಮಿ ಅಮ್ಮನ ಬದುಕಿನ ಪುಟಗಳನ್ನು ಮತ್ತೆ ತೆರೆದು ಅವರು ನಟಿಸಿದ ಸಿನಿಮಾಗಳ ಹಾಡನ್ನು ಡ್ಯಾನ್ಸ್ ಮುಖಾಂತರ ಅದ್ಭುತವಾಗಿ ಪ್ರದರ್ಶನ ನೀಡಿದ್ದಾರೆ.  ಅದೇ ರೀತಿ ಮ್ಯಾಜಿಕಲ್ ಕಂಪೋಸರ್ ಎಂದೇ ಖ್ಯಾತರಾಗಿರುವ ಅರ್ಜುನ್ ಜನ್ಯ ಅವರಿಗೆ ಸದ್ವಿನ್ ಹಾಗೂ ಶಾರಿಕಾ ತಮ್ಮ ಅದ್ಭುತ ಪರ್ಫಾರ್ಮೆನ್ಸ್ ಮೂಲಕ ಗೌರವ ನೀಡಿದರು.


  ಇನ್ನು ಪ್ರತಿ ಸೀಸನ್ ಗಳಲ್ಲೂ ಮಹಾ ಸಂಚಿಕೆಯಲ್ಲಿ ನಡೆಸುವ ಜಡ್ಜಸ್ ಮತ್ತು ನಿರೂಪಕಿ ಅನುಶ್ರೀ ಅವರ ನಟನೆಯನ್ನು ಕಲಾವಿದರು ಬಹಳ ಚೆನ್ನಾಗಿ ಮಾಡಿದ್ದಾರೆ.


  ಇದನ್ನೂ ಓದಿ: Paaru Serial: ತಂದೆ ಹನುಮಂತುಗೆ ಮನೆ ಕೊಳ್ಳಲು ಪಾರು ಸಹಾಯ! ಇದು ಸಾಧ್ಯ ಆಗುತ್ತಾ?


  ಹ್ಯಾಟ್ರಿಕ್ ಹೀರೋ ಶಿವ ರಾಜ್‌ಕುಮಾರ್ ಸ್ಪೆಷಲ್‌ ಜಡ್ಜ್‌


  ರಿಯಾಲಿಟಿ ಶೋನಲ್ಲಿ ಕ್ರೇಜಿ ಕ್ವೀನ್ ರಕ್ಷಿತಾ, ಚಿನ್ನಿ ಮಾಸ್ಟರ್, ಅರ್ಜುನ್‌ ಜನ್ಯ ಅವರು ತೀರ್ಪುಗಾರರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಕಾರ್ಯಕ್ರಮಕ್ಕೆ ಪವರ್ ಹೆಚ್ಚಿಸಲು ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅವರು ಸ್ಪೆಷಲ್‌ ಜಡ್ಜ್‌ ಆಗಿ ಭಾಗಿಯಾಗುತ್ತಿದ್ದಾರೆ. ಪುಟ್ಟ ಮಕ್ಕಳ ಡ್ಯಾನ್ಸ್‌ಯಿಂದ ಹಿಡಿದು ವಯಸ್ಸಾದವರು ಡ್ಯಾನ್ಸ್‌ ಮಾಡಿ ಎಂದು ವೇದಿಕೆ ಮೇಲೆ ಕರೆದರೆ ಶಿವಣ್ಣ ಮೊದಲು ಹೋಗುತ್ತಾರೆ. ಎಲ್ಲಾ ಜೋಡಿಗಳು ವಿಭಿನ್ನ ಐಡಿಯಾಗಳೊಂದಿಗೆ ಈ ವಾರದ ಎಪಿಸೋಡ್​ನಲ್ಲಿ ಪ್ರೇಕ್ಷಕರನ್ನು ಮನರಂಜಿಸಿದ್ದಾರೆ.


  ಇದನ್ನೂ ಓದಿ: Divya Uruduga: ಬಿಗ್​ಬಾಸ್​ ಬೆಡಗಿ ಈಗ ಸ್ಯಾಂಡಲ್​ವುಡ್​ನಲ್ಲಿ ಫುಲ್ ಬ್ಯುಸಿ! ಹೊಸ ಚಿತ್ರ ಒಪ್ಪಿಕೊಂಡ ದಿವ್ಯಾ ಉರುಡುಗ


   ಕ್ರೇಜಿಸ್ಟಾರ್​, ಜೂಲಿ, ಡಿಂಪಲ್ ಕ್ವೀನ್​ ಒಂದೇ ವೇದಿಕೆಯಲ್ಲಿ


  ಅದೇ ರೀತಿ ಡ್ರಾಮ ಜೂನಿಯರ್ಸ್ ರಿಯಾಲಿಟಿ ಶೋನಲ್ಲಿ ಹಿಂದಿನ 3 ಸೀಸನ್ ಗಳಲ್ಲಿ ತೀರ್ಪುಗಾರರಾಗಿದ್ದ ಜೂಲಿ ಲಕ್ಷ್ಮೀ ರವರು 4 ನೇ ಸೀಸನ್ ನಲ್ಲೂ ಮುಂದುವರೆದಿದ್ದರೆ ಅವರ ಜೊತೆಗೆ ಕನಸುಗಾರ ಕ್ರೇಜಿಸ್ಟಾರ್ ರವಿಚಂದ್ರನ್ ರವರು ಜೊತೆಯಾಗಿದ್ದಾರೆ. ಅದಲ್ಲದೆ ಇಲ್ಲಿವರೆಗೂ ವಿಶೇಷ ಕಾರ್ಯಕ್ರಮಗಳಿಗೆ ಅತಿಥಿಯಾಗಿ ಬರುತ್ತಿದ್ದ ರವಿಚಂದ್ರನ್ ಅವರು ಈಗ ಜೀ ಕನ್ನಡವಾಹಿನಿಯ ಡ್ರಾಮಾ ಜೂನಿಯರ್ಸ್ ಕಾರ್ಯಕ್ರಮದ ಪ್ರಮುಖ ತೀರ್ಪುಗಾರರಾಗಿರುವುದು ವೀಕ್ಷಕರಲ್ಲಿ ವೀಕ್ಷಕರಿಗೆ ಕಾರ್ಯಕ್ರಮ ನೋಡಲು ಇನ್ನಷ್ಟು ಆಸಕ್ತಿ ನೀಡಿದೆ. ಅದ್ಭುತ ನಿರೂಪಕ ಮಾಸ್ಟರ್ ಆನಂದ್ ರವರ ನಿರೂಪಕರಾಗಿ ಈ ಸೀಸನ್ ನಲ್ಲೂ ಕಾರ್ಯನಿರ್ವಹಿಸುತ್ತಿದ್ದಾರೆ.


  ಒಟ್ಟಾರೆಯಾಗಿ ಮಹಾ ಸಂಗಮ ಎರಡು ದಿನದ ಸಂಚಿಕೆಗಳು ಪೂರ್ತಿಯಾಗಿ ಜನಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಡ್ರಾಮಾ ಜೂನಿಯರ್ಸ್ ಪುಟ್ಟ ಮಕ್ಕಳು ಹಾಗೂ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ನ ಅದ್ಭುತ ಸ್ಪರ್ಧಿಗಳು ತಮ್ಮ ಪ್ರತಿಭೆಯನ್ನು ಎಲ್ಲಿ ಉತ್ತಮವಾಗಿ ಪ್ರದರ್ಶಿಸಿದ್ದಾರೆ.

  Published by:Swathi Nayak
  First published: