ಕನ್ನಡ ಕಿರುತೆರೆ ಲೋಕದಲ್ಲಿ ವೀಕೆಂಡ್ ವಿತ್ ರಮೇಶ್(Weekend With Ramesh) ಕಾರ್ಯಕ್ರಮ ಹೊಸ ಅಲೆಯನ್ನು ಸೃಷ್ಟಿ ಮಾಡಿದೆ. ಇಂದಿನವರೆಗೂ ಕಾರ್ಯಕ್ರಮದ ಪ್ರತಿಯೊಂದು ಎಪಿಸೋಡ್(Episode)ಗಳು ಜನರ ಮನಸ್ಸುಗಳಲ್ಲಿ ಅಚ್ಚಳಿಯದೆ ಕೂತಿದೆ. ಪ್ರೇಕಕ್ಷ(Audience)ರಿಗೆ ಸಾಧಕರ ಜೀವನವನ್ನು ಪರಿಚಯಿಸುವುದು ಈ ಶೋ(Show)ನ ಮುಖ್ಯ ಅಜೆಂಡಾವಾಗಿತ್ತು. ಕೇವಲ ಸಿನಿಮಾ(Cinema) ಕ್ಷೇತ್ರಕ್ಕೆ ಸೀಮಿತವಾಗದೆ, ಎಲ್ಲ ಕ್ಷೇತ್ರಗಳಲ್ಲೂ ಸಾಧನೆ ಮಾಡಿದವರನ್ನು ಈ ರೆಡ್ ಸೀಟ್(Red Seat) ಮೇಲೆ ಕೂರಿಸಲಾಗಿತ್ತು. ಇಲ್ಲಿ ಕೂತವರ ಒಬ್ಬೊಬ್ಬರ ಕಥೆಯನ್ನು ಕೇಳಿದರೆ, ನೋಡುಗರಿಗೆ ತಾವೂ ಏನಾದರೂ ಸಾಧಿಸಬೇಕೆಂಬ ಛಲ ಹುಟ್ಟಿತ್ತು. ಇದುವೇ ಈ ಈ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕಿದ್ದ ತಾಕತ್ತು. ಇದೀಗ ವೀಕ್ಷಕರಿಗೆ ಮನರಂಜನೆಯ ಜೊತೆಗೆ ಸ್ಫೂರ್ತಿಯನ್ನು ನೀಡುವ ಈ ಕಾರ್ಯಕ್ರಮ ಮತ್ತೆ ಬರುತ್ತಿದೆ. ತಮ್ಮ ನೆಚ್ಚಿನ ತಾರೆ(Stars)ಯರ ಬದುಕಿನ ಬಗ್ಗೆ ತಿಳಿದುಕೊಂಡು ಅಭಿಮಾನಿಗಳು ಖುಷಿಪಟ್ಟಿದ್ದರು. ರಮೇಶ್ ಅರವಿಂದ್(Ramesh Arvind) ಅವರ ಅದ್ಭುತ ನಿರೂಪಣೆ ಎಲ್ಲರನ್ನೂ ಮೋಡಿ ಮಾಡಿತ್ತು. ಹಾಗಾದರೆ, 'ವೀಕೆಂಡ್ ವಿತ್ ರಮೇಶ್' ಸೀಸನ್ 5 ಯಾವಾಗ ಶುರುವಾಗಲಿದೆ? ಈ ಪ್ರಶ್ನೆಗೆ ಇಲ್ಲಿದೆ ಉತ್ತರ.
ಓಟಿಟಿಯಲ್ಲಿ ‘ವೀಕೆಂಡ್ ವಿತ್ ರಮೇಶ್’, ಸೀಸನ್ - 5?
ಹೌದು, ಈ ಹಿಂದೆ ನಡೆದ ಪ್ರೆಸ್ ಮೀಟ್ ಒಂದರಲ್ಲಿ ಜೀ ವಾಹಿನಿಯ ಬ್ಯುಸಿನೆಸ್ ಹೆಡ್ ರಾಘವೇಂದ್ರ ಹುಣಸೂರ್ ಅವರು ಹೇಳಿದ ಮಾಹಿತಿ ಇದು, ಅವರು ಹೇಳುವ ಪ್ರಕಾರ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ಓಟಿಟಿಯಲ್ಲಿ ಪ್ರಸಾರವಾಗುವ ಸಾಧ್ಯತೆಗಳಿವೆ. ಮುಂದಿನ ವರ್ಷ ಆರಂಭದಲ್ಲಿಯೇ ಈ ಕಾರ್ಯಕ್ರಮ ಶುರುವಾಗಲಿದೆ. ರಮೇಶ್ ಅರವಿಂದ್ ಅವರೇ ನಿರೂಪಣೆ ಮಾಡಲಾಗಿದ್ದಾರೆ ಎಂದಿದ್ದಾರೆ. ಜೀ ಕನ್ನಡದ ಓಟಿಟಿ ಪ್ಲಾಟ್ಫಾರ್ಮ್ ಜೀ 5ನಲ್ಲಿ 'ವೀಕೆಂಡ್ ವಿತ್ ರಮೇಶ್' ಈ ಬಾರಿ ಪ್ರಸಾರವಾಗಲಿದೆ. ಈ ವಿಚಾರವನ್ನು ಸ್ವತಃ ಜೀ ಕನ್ನಡ ವಾಹಿನಿಯ ಮುಖ್ಯಸ್ಥರಾದ ರಾಘವೇಂದ್ರ ಹುಣಸೂರು ಅವರು ಬಹಿರಂಗಪಡಿಸಿದ್ದಾರೆ. ಎಕ್ಸ್ಕ್ಲೂಸಿವ್ ಆಗಿ ಓಟಿಟಿಯಲ್ಲಿ ಮಾತ್ರ ಈ ಶೋವನ್ನು ಪ್ರಸಾರ ಮಾಡುವುದಕ್ಕೆ ವಾಹಿನಿ ನಿರ್ಧಾರ ಮಾಡಿದೆ.
ಜೀ ವಾಹಿನಿಯಲ್ಲೇ ಪ್ರಸಾರ ಮಾಡಿ ಎಂದು ಪ್ರೇಕ್ಷಕರು
ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ಜೀ ವಾಹಿನಿಯಲ್ಲೇ ಪ್ರಸಾರವಾಗುತ್ತಿತ್ತು. ಸೀಸನ್ ಒಂದರಿಂದ ನಾಲ್ಕರವರೆಗೆ ಜೀ ವಾಹಿನಿಯಲ್ಲೇ ಪ್ರಸಾರವಾಗಿದೆ. ಆದರೆ ಈ ಬಾರಿಯ ಹೊಸ ಸೀಸನ್ ಮಾತ್ರ ಜೀ 5 OTTಯಲ್ಲಿ ಪ್ರಸಾರವಾಗುವ ಸಾಧ್ಯತೆ ಹೆಚ್ಚಿದೆ. ಇದಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಈ ಸೀಸನ್ ಕೂಡ ವಾಹಿನಿಯಲ್ಲೇ ಪ್ರಸಾರ ಮಾಡಿ ಅಂತಿದ್ದಾರೆ. ಈ ಕಾರ್ಯಕ್ರಮದಿಂದ ಅದೆಷ್ಟೋ ಮಂದಿಗೆ ಸ್ಫೂರ್ತಿಯಾಗಿದೆ. ಈಗ ನೀವು ಇದನ್ನು ಒಟಿಟಿಗೆ ಸೀಮಿತ ಮಾಡಿದರೆ, ಹೇಗೆ? ಎಂದು ಪ್ರಶ್ನೆ ಮಾಡಿದ್ದಾರೆ. ಹಳ್ಳಿಗಳ ಕಡೆಯಲ್ಲೂ ನಿಮ್ಮ ಶೋಗಳನ್ನು ನೋಡಿತ್ತಿದ್ದರು. ನೀವು ಈಗ ಓಟಿಟಿಯಲ್ಲಿ ಪ್ರಸಾರ ಮಾಡಿದರೆ ಅವರು ಏನು ಮಾಡುತ್ತಾರೆ? ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ.
ಇದನ್ನು ಓದಿ : ಶೀಘ್ರದಲ್ಲೇ ತೆರೆ ಮೇಲೆ ಅಪ್ಪು ಬಯೋಪಿಕ್, ಸಂತೋಷ್ ಆನಂದ್ರಾಮ್ ಕೊಟ್ಟ ಸುಳಿವೇನು?
ಮೊದಲ ಅತಿಥಿ ಪುನೀತ್ ರಾಜ್ ಕುಮಾರ್
ವೀಕೆಂಡ್ ವಿತ್ ರಮೇಶ್ ಎಂಬ ಕಾರ್ಯಕ್ರಮ ಆರಂಭವಾಗಿದ್ದೇ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಸಂಚಿಕೆಯಿಂದ. ಎರಡು ದಿನ ಇವರ ಶೋ ಪ್ರಸಾರವಾಗಿತ್ತು. ಮೊದಲ ಸಂಚಿಕೆಯಲ್ಲೇ ಕನ್ನಡ ಕಿರುತೆರೆ ಪ್ರೇಕ್ಷಕರ ಹೃದಯ ಮುಟ್ಟಿತ್ತು. ಇದಾದ ಮೇಲೆ ಹಲವು ಸಾಧಕರು ಈ ರೆಡ್ ಸೀಟ್ ಮೇಲೆ ಕೂತಿದ್ದಾರೆ.
ಇದನ್ನು ಓದಿ : ಕನ್ನಡ ಕಿರುತರೆಯಲ್ಲಿ ಹೊಸ ಧಾರಾವಾಹಿಗಳ ಸುಗ್ಗಿ, ಸೀರಿಯಲ್ ಪ್ರಿಯರಿಗೆ ತ್ರಿಬಲ್ ಧಮಾಕ!
ಡಿ ಬಾಸ್ ಸಂಚಿಕೆ ಅತಿ ಹೆಚ್ಚು ಟಿ.ಆರ್.ಪಿ
ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಇದುವರೆಗೂ ದರ್ಶನ್ ಅವರ ಸಂಚಿಕೆ ಅತಿ ಹೆಚ್ಚು ಟಿ.ಆರ್.ಪಿ ತಂದುಕೊಟ್ಟಿದೆಯಂತೆ. ಇದೀಗ ಮತ್ತೆ ವೀಕೆಂಡ್ ವಿತ್ ರಮೇಶ್ ಶೋ ಶುರುವಾಗುತ್ತಿದೆ. ಈ ಬಾರಿ ಆ ರೆಡ್ ಸೀಟ್ ಮೇಲೆ ಯಾವೆಲ್ಲಾ ಸಾಧಕರು ಕೂರುತ್ತಾರೆ ಎಂಬ ಕುತೂಹಲ ಮೂಡಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ