Puttakkana Makkalu: ಕಂಠಿಗೆ ಕಾದಿದೆಯಾ ಸಂಕಷ್ಟ? ಶುರುವಾಗುವ ಮುನ್ನವೇ ಅಂತ್ಯವಾಗುತ್ತಾ ಪ್ರೀತಿ?

ಧಾರಾವಾಹಿಯಲ್ಲಿ ಎರಡು ಕ್ಯೂಟ್ ಲವ್ ಸ್ಟೋರಿ ನೋಡಲು ಪ್ರೇಕ್ಷಕರು ಪ್ರತಿದಿ‌ನ ಕಾಯುತ್ತಿದ್ದಾರೆ. ಸಹನಾ ಮತ್ತು ಮೇಷ್ಟ್ರ ಸೈಲೆಂಟ್ ಲವ್ ಸ್ಟೋರಿ ಅಂತೂ ನೋಡಲು ಇನ್ನೂ ಚೆಂದ. ಇಬ್ಬರು ಅಕ್ಕಂದಿರ ಪ್ರೀತಿಯ ತಂಗಿ ಸುಮಾ ಇದೀಗ ಇಬ್ಬರ ಲವ್ ಸ್ಟೋರಿ ಆಗುವುದರಲ್ಲಿ ಡೌಟೇ ಇಲ್ಲ.

ಕಂಠಿ

ಕಂಠಿ

 • Share this:
  ಜೀ ಕನ್ನಡ (Zee Kannada) ವಾಹಿನಿಯಲ್ಲಿ ಪ್ರಸಾರಗೊಳ್ಳುತ್ತಿರುವ ನಂಬರ್ 1 ಧಾರಾವಾಹಿ "ಪುಟ್ಟಕ್ಕನ ಮಕ್ಕಳು' (Puttakkana Makkalu) ಇದೀಗ ಮತ್ತೆ ಹೊಸ ಟ್ವಿಸ್ಟ್ ಮೂಲಕ ಪ್ರೇಕ್ಷಕರನ್ನು ಮನರಂಜಿಸುತ್ತಿದೆ. ಇದೀಗ ಧಾರಾವಾಹಿಯಲ್ಲಿ ಎರಡು ಕ್ಯೂಟ್ ಲವ್ ಸ್ಟೋರಿ (Love Story) ನೋಡಲು ಪ್ರೇಕ್ಷಕರು ಪ್ರತಿದಿ‌ನ ಕಾಯುತ್ತಿದ್ದಾರೆ. ಕಂಠಿ (Kanti) ಮತ್ತು ಸ್ನೇಹಾ (Sneha) ಜೋಡಿ ಎಲ್ಲರಿಗೂ ಅಚ್ಚುಮೆಚ್ಚು ಎಂದರೆ ತಪ್ಪಾಗಲಾರದು.ಇನ್ನೊಂದೆಡೆ ಸಹನಾ ಮತ್ತು ಮೇಷ್ಟ್ರ ಸೈಲೆಂಟ್ ಲವ್ ಸ್ಟೋರಿ ಅಂತೂ ನೋಡಲು ಇನ್ನೂ ಚೆಂದ. ಇಬ್ಬರು ಅಕ್ಕಂದಿರ ಪ್ರೀತಿಯ ತಂಗಿ ಸುಮಾ ಇದೀಗ ಇಬ್ಬರ ಲವ್ ಸ್ಟೋರಿ ಆಗುವುದರಲ್ಲಿ ಡೌಟೇ ಇಲ್ಲ.

  ಪರಸ್ಪರ ಯಾವಾಗ ಪ್ರೀತಿ ಹೇಳಿಕೊಳ್ಳುತ್ತಾರೆ  ಮುರುಳಿ ಮತ್ತು ಸಹನಾ

  ಅಕ್ಕನಿಗೆ ಮುರುಳಿ ಮೇಷ್ಟ್ರ ಮೇಲೆ ಏನೋ ಆಕರ್ಷಣೆಯಿದೆ ಎಂಬುದು ಸುಮಾಳಿಗೆ ತಿಳಿದಿದೆ. ಇದೇ ಕಾರಣಕ್ಕೆ ಸಹನಾಳನ್ನು ಆಗಾಗ ರೇಗಿಸ್ತಾ ಇರುತ್ತಾಳೆ. ಅಷ್ಟೇ ಅಲ್ಲ ಅವ್ವನ ಅನುಮತಿ ಪಡೆದು ಇಬ್ಬರನ್ನು ಭೇಟಿ ಮಾಡುವಂತೆ ಮಾಡುತ್ತಿದ್ದಾಳೆ.

  ಇಬ್ಬರು ಪ್ರೀತಿಯನ್ನು ಆದಷ್ಟು ಬೇಗ ಹೇಳಿಕೊಳ್ಳಲಿ ಎಂದು ಬಯಸುತ್ತಿದ್ದಾಳೆ. ಸುಮಾಳಿಗೆ ಆಕೆಯ ಫ್ರೆಂಡ್ ಕೂಡ ಸಾಥ್ ನೀಡುತ್ತಿದ್ದಾಳೆ. ಆ ಇಬ್ಬರು ಪ್ರೀತಿಯಲ್ಲಿ ಬಿದ್ದು ಇಷ್ಟು ಒದ್ದಾಡುತ್ತಿದ್ದಾರೋ ಇಲ್ಲವೋ ಗೊತ್ತಿಲ್ಲ. ಇತ್ತ ಮನೆಯಲ್ಲಿ ಅವ್ವ ಸಹನಾಳಿಗೆ ಮದುವೆ ಮಾಡುವ ಯೋಚನೆ ಕೂಡ ಮಾಡಿದ್ದಾರೆ. ಅವರಿಬ್ಬರು ಪರಸ್ಪರ ಯಾವಾಗ ಪ್ರೀತಿ ಹೇಳಿಕೊಳ್ಳುತ್ತಾರೆ ಎಂದು ಪ್ರೇಕ್ಷಕರು ಕಾಯುತ್ತಿದ್ದಾರೆ.

  ಇದನ್ನೂ ಓದಿ: Kannadathi Serial: ಇಳಕಲ್ ಸೀರೆಯಲ್ಲಿ ಕನ್ನಡತಿ ಸುಂದರಿಯರು ಮಿಂಚಿಂಗ್, ಇದು ಬೆಸ್ಟ್ ಸೀರಿಯಲ್ ಅಂದ್ರು ಫ್ಯಾನ್ಸ್

  ಸ್ನೇಹಾಳಿಗೂ ದೊರೆ ಮೇಲೆ ಮೇಲೆ ಲವ್ವಾಗಿದಾ?

  ಇತ್ತ ಸ್ನೇಹ ಮತ್ತು ಕಂಠಿ ನಡುವಿನ ಬಾಂಧವ್ಯ ಅವರಿಗೆ ತಿಳಿಯದಂತೆ ತುಂಬಾ ಹತ್ತಿರವಾಗುತ್ತಿದೆ. ಇಷ್ಟು ದಿನ ದೊರೆ ಮಾತ್ರ ಸ್ನೇಹಾಳನ್ನುಳನ್ನು ಇಷ್ಟಪಡುತ್ತಿದ್ದ ಎಂದು ಕಾಣಿಸುತ್ತಿದ್ದ ಪ್ರೀತಿ ಇದೀಗ ಸ್ನೇಹಾಳಿಗೂ ದೊರೆ ಮೇಲೆ ಮೇಲೆ ಲವ್ವಾಗಿದೆ.

  ಹೌದು ದೊರೆ ನೀಡಿದಂತಹ ಒಂದು ಕೆಂಪು ಗುಲಾಬಿ ಒಂದನ್ನು ಸ್ನೇಹ ಜೋಪಾನವಾಗಿ ನೀರಿನಲ್ಲಿ ತೆಗೆದಿಟ್ಟಿದ್ದಾಳೆ. ಹೂ ಮುಡಿಯಲು ಆಸಕ್ತಿಯೇ ಇಲ್ಲದ ಸ್ನೇಹ ಹೂವನ್ನು ಈ ರೀತಿ ಜೋಪಾನ ಮಾಡುತ್ತಿರುವುದನ್ನು ಕಂಡು ತಂಗಿ ಸುಮಾಳಿಗೆ ಈ ಬಗ್ಗೆ ಸಂಶಯ ಕೂಡ ಬಂದಿದೆ.

  ಸ್ನೇಹಾ ಏನನ್ನೋ ಹೇಳಿ ಯಾಮಾರಿಸಿದ್ದಾಳೆ. ಆದರೆ ಎಲ್ಲವೂ ಸಹಜವಾದ ಮೇಲೆ ಆ ಗುಲಾಬಿಯನ್ನು ಪ್ರೀತಿಯಿಂದ ಸಾವರಿಸಿ, ನೋಡುವ ತವಕದ ನಗೆಯೊಂದನ್ನು ಬೀರಿದ್ದಾಳೆ.

  ಇದನ್ನೂ ಓದಿ: Ginirama Serial: ಶಿವರಾಮನ ಬಾಳಲ್ಲಿ ಮತ್ತೆ ಎಂಟ್ರಿ ಕೊಡುತ್ತಾಳಾ ಹಳೆ ಪ್ರೇಯಸಿ ನೇಹಾ?

  ಸ್ನೇಹ ಈಗ ಡಮ್ಮಿ ಕಂಠಿಯನ್ನು ಅರೆಸ್ಟ್ ಮಾಡಿಸಿದ್ದಾಳೆ

  ಸ್ನೇಹಾಳನ್ನು ಸದ್ಯಕ್ಕೆ ಇಂಪ್ರೆಸ್ ಮಾಡಿದ್ದಾಗಿದೆ. ನಮ್ಮ ಮನೆಗೆ ಇಷ್ಟೆಲ್ಲಾ ಸಹಾಯ ಮಾಡುವಂತಹ ಮನಸ್ಸು ಇದೆಯಲ್ಲ. ಆ ಮನುಷ್ಯನನ್ನು ನೋಡಬೇಕೆಂಬ ಕಾತುರತೆ ಸಹಜವಾಗಿಯೇ ಅವಳಲ್ಲಿ ಹುಟ್ಟಿದೆ. ಅಷ್ಟೇ ಅಲ್ಲ ಆತನ ಮೇಲೆ ಹೊಸ ಭಾವವೊಂದು ಚಿಗುರೊಡೆಯಲು ಆರಂಭಿಸಿದೆ.

  ಆತ ಕೊಟ್ಟ ಗುಲಾಬಿ ತೆಗೆದುಕೊಂಡ ಮೇಲೆ ಸ್ನೇಹಾ ಆ ದೊರೆ ಬಗ್ಗೆಯೇ ಯೋಚಿಸುವುದಕ್ಕೆ ಶುರು ಮಾಡಿದ್ದಾಳೆ. ಆದರೆ ಮುಂದೆ ಇದು ಕಂಠಿಗೆ ಸಮಸ್ಯೆಯನ್ನು ಮಾಡಬಹುದು. ತಾನೇ ಸೃಷ್ಟಿಸಿರುವ ದೊರೆಯ ವಿರುದ್ಧ ಕಂಠಿ ಸೋಲಬಹುದು.

  ಬಂಗಾರಮ್ಮನ ಮಗ ಕಂಠಿ ಯಾರೆಂಬುದು ತಿಳಿಯದೆ ಹಾಗೆ ಅವನ ಬಗ್ಗೆ ಕೆಟ್ಟ ಅಭಿಪ್ರಾಯ ಇಟ್ಟುಕೊಂಡಿರುವ ಸ್ನೇಹ ಈಗ ಡಮ್ಮಿ ಕಂಠಿಯನ್ನು ಅರೆಸ್ಟ್ ಮಾಡಿಸಿದ್ದಾಳೆ.

  ಇತ್ತ ಪುಟ್ಟಕ್ಕನ ಮೇಲೆ ವಿನಾಕಾರಣ ದ್ವೇಷ ಕಾರುತ್ತಿರುವ ರಾಜೇಶ್ವರಿಗೆ ಬಂಗಾರಮ್ಮ ಪುಟ್ಟಕ್ಕನ ಮೇಲೆ ತೋರಿಸುವ ಒಲವು ಮತ್ತು ಸಹಾಯವನ್ನು ಸಹಿಸಲು ಸಾಧ್ಯವಾಗುತ್ತಿಲ್ಲ. ಪುಟ್ಟಕ್ಕನ ಮನೆಯಲ್ಲಿ ನಡೆಯುತ್ತಿರುವ ಎಲ್ಲಾ ವಿಚಾರಗಳನ್ನು ತಿಳಿದುಕೊಳ್ಳಲು ಮೆಸ್ ನಲ್ಲಿ ತನ್ನ ಕಡೆ ಒಂದು ವ್ಯಕ್ತಿಯನ್ನು ಕೆಲಸಕ್ಕೆ ಕೂಡ ಇರಿಸಿದ್ದಾಳೆ ರಾಜೇಶ್ವರಿ. ಮುಂದೆ ಇವರಿಬ್ಬರ ಪ್ರೀತಿಗೆ ರಾಜೇಶ್ವರಿ ಅಡ್ಡವಾಗುತ್ತಾಳಾ ನೋಡಬೇಕಿದೆ?
  Published by:Swathi Nayak
  First published: