ಪುಟ್ಟಕ್ಕನ ಮಕ್ಕಳು (Puttakkana Makkalu), ಜೀ ಕನ್ನಡದ (Zee Kannada) ಹೆಸರಾಂತ ಧಾರಾವಾಹಿ (Serial). ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿದಿನ ಸಂಜೆ 7.30ಕ್ಕೆ ಪ್ರಸಾರವಾಗುತ್ತದೆ. ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಪುಟ್ಟಕ್ಕನ ಪಾತ್ರದಲ್ಲಿ ಉಮಾಶ್ರೀ ಅಮೋಘವಾಗಿ ಅಭಿನಯಿಸುತ್ತಿದ್ದಾರೆ. ಉಮಾಶ್ರೀ ಗಂಡ ಆಕೆಯನ್ನು ಬಿಟ್ಟು ಅದೇ ಊರಿನಲ್ಲಿ ರಾಜಿ ಎಂಬಾಕೆಯನ್ನು ಎರಡನೇ ಮದುವೆಯಾಗಿದ್ದಾನೆ. ಇನ್ನು ಉಮಾಶ್ರೀಗೆ ಮೂವರು ಹೆಣ್ಣು ಮಕ್ಕಳು. ಗಂಡ ಬಿಟ್ಟು ಹೋಗಿದ್ದರೂ, ಮೂವರನ್ನು ಚೆನ್ನಾಗಿ ಸಾಕಿದ್ದಾಳೆ. ಮೆಸ್ ಒಂದನ್ನು ನಡೆಸುತ್ತಿದ್ದು, ಅದರಿಂದ ಜೀವನ ಸಾಗಿಸುತ್ತಿದ್ದಾಳೆ. ಮೊದಲನೇ ಮಗಳು ಸಹನಾ (Sahana) ಓದದೇ ತನ್ನ ತಾಯಿಗೆ ಹೋಟೆಲ್ ಕೆಲಸದಲ್ಲಿ ಸಹಾಯ ಮಾಡುತ್ತಿದ್ದಾಳೆ. ಎರಡನೇ ಮಗಳು ಸ್ನೇಹಾ (Sneha) ಓದಿನಲ್ಲೂ ಜೋರು. ಮಾತಿನಲ್ಲೂ ಜೋರು. ಮೂರನೇ ಮಗಳು ಸುಮಾ ಓದಿನ ಜೊತೆ ಆಟಗಳಲ್ಲೂ ಮುಂದು.
ಮುರುಳಿ ಸರ್ ನ ಪ್ರೀತಿ ಮಾಡ್ತೀರೋ ಸಹನಾ
ಧಾರಾವಾಹಿಯಲ್ಲಿ ಮುರುಳಿ ಮೇಷ್ಟ್ರು ಸಹನಾಳನ್ನು ಇಷ್ಟ ಪಡುತ್ತಿದ್ದಾರೆ. ಅಲ್ಲದೇ ಈ ವಿಷಯವನ್ನು ಸಹನಾಗೆ ಹೇಳಿದ್ದಾರೆ. ಸಹನಾಗೂ ಇಷ್ಟ ಇದೆ. ಸಹನಾ ಮನೆಯವರ ಮನೆಗೆ ಬಂದು ಹೋಗಿದ್ದಾರೆ. ಆದ್ರೆ ಮುರುಳಿ ಮನೆಯವರಿಗೆ ಇಷ್ಟ ಇಲ್ಲ. ನಮ್ಮ ಜಾತಿ ಅಲ್ಲ ಮದುವೆ ಆಗಬೇಡ ಅಂತಿದ್ದಾರೆ.
ಮದುವೆ ಮಾತುಕತೆ ನಡೆಯುತ್ತಿಲ್ಲ
ಸಹನಾಳನ್ನು ಮದುವೆ ಆಗಲು ಮುರುಳಿ ಮೇಷ್ಟ್ರಿಗೆ ಮಾತ್ರ ಇಷ್ಟ. ಆದ್ರೆ ಮನೆಯವರಿಗೆ ಇಷ್ಟ ಇಲ್ಲ. ಅದಕ್ಕೆ ಬಂದು ಮದುವೆ ಮಾತುಕತೆ ನಡೆಸುತ್ತಿಲ್ಲ. ಅದಕ್ಕೆ ಪುಟ್ಟಕ್ಕ ಒಮ್ಮೆ ಕೇಳಿದ್ದಾಳೆ. ಯಾವಾಗ ನಿಮ್ಮ ಮನೆಯರು ಬರುತ್ತಾರೆ ಎಂದು ಮುರುಳಿ ಸರ್ ಒಪ್ಪಿಸುತ್ತೇನೆ. ಬೇಗ ಬರುತ್ತೇವೆ ಎನ್ನುತ್ತಿದ್ದಾರೆ.
ಇದನ್ನೂ ಓದಿ: Bigg Boss Kannada: ಬಿಗ್ಬಾಸ್ ಮನೆಯಲ್ಲಿ ಯಾರಿದು 'ಪ್ರಶಾಂತಿ'? ವಾವ್ ಕ್ಯೂಟ್ ಎಂದ ಜನ!
ಜನರ ಚುಚ್ಚು ಮಾತು
ಪುಟ್ಟಕ್ಕನ ಮೆಸ್ ಬರೋ ಜನ ಒಂದೊಂದು ಮಾತನಾಡುತ್ತಿದ್ದಾರೆ. ಸಹನಾ ಮದುವೆ ನಿಶ್ಚಯ ಆಯ್ತಂತೆ. ಪ್ರೀತಿ ಮಾಡಿದ ಹುಡುಗನ ಜೊತೆ ಮದುವೆ ಅಲ್ವಾ?, ಏನೂ ಗೊತ್ತಿಲ್ಲದವರ ರೀತಿ ಇರ್ತಿದ್ದೆ, ಯಾವಾಗ ಪ್ರೀತಿ ಮಾಡ್ದೆ ಎಂದೆಲ್ಲಾ ಪ್ರಶ್ನೆಗಳುನ್ನು ಕೇಳ್ತಾ ಇದ್ದಾರೆ. ಅದಕ್ಕೆ ಸಹನಾ ಏನೂ ಮಾತನಾಡಿಲ್ಲ.
ಸ್ನೇಹಾನಾ ಪ್ರೀತಿಸಿ ಮದುವೆ ಆಗ್ತಾಳಾ?
ಪ್ರೀತಿ ಮಾಡಿ ಮದುವೆ ಮಾಡಿಕೊಂಡ್ರೆ ಖರ್ಚು ಕಮ್ಮಿ ಅಲ್ವಾ ಎಂದು ಜನ ಚುಚ್ಚಿ ಮಾತನಾಡುತ್ತಿದ್ದಾರೆ. ಸ್ನೇಹಾ ಸಹ ಪ್ರೀತಿ ಮಾಡಿಯೇ ಮದುವೆ ಆಗ್ತಾರೆ ಅನ್ನಿಸುತ್ತೆ ಅಲ್ವಾ ಎಂದು ಕೇಳ್ತಾ ಇದ್ದಾರೆ. ಓದು ಬರಹ ಇಲ್ಲದೇ ಇರೋ ಸಹನಾನೇ ಪ್ರೀತಿ ಮಾಡಿ ಮದುವೆ ಆಗ್ತಿದ್ದಾಳೆ. ಇನ್ನೂ ಊರು ಸುತ್ತುವ ಸ್ನೇಹಾಗೆ ಪ್ರೀತಿ ಆಗಲ್ವಾ ಎಂದು ಜನ ಕೇಳುತ್ತಿದ್ದಾರೆ.
ಪುಟ್ಟಕ್ಕನಿಗೆ ಬೇಸರ
ಮಕ್ಕಳ ಬಗ್ಗೆ ಊರುವರ ಮಾತನಾಡ್ತಾ ಇದ್ರೆ ಪುಟ್ಟಕ್ಕನಿಗೆ ಬೇಸರ ಆಗ್ತಾ ಇದೆ. ನಮ್ಮ ಮಕ್ಕಳು ಊರವರ ಬಾಯಿಗೆ ಸಿಕ್ಕಿದ್ದಾರೆ. ಆದಷ್ಟು ಬೇಗ ಎಲ್ಲದಕ್ಕೂ ಒಂದು ದಾರಿ ಮಾಡಬೇಕು ಎಂದುಕೊಳ್ತಿದ್ದಾಳೆ. ಯಾಕಂದ್ರೆ ಮೊದಲೇ ಗಂಡ ಜೊತೆಗೆ ಇಲ್ಲ. ಮಕ್ಕಳ ಬಗ್ಗೆಯೂ ತಪ್ಪು ಮಾತನಾಡುತ್ತಿದ್ರೆ ಏನು ಮಾಡುವುದು ಎಂದು ಸಂಕಟದಲ್ಲಿದ್ದಾಳೆ.
ಇದನ್ನೂ ಓದಿ: Ramachari: ತನ್ನ ಪ್ರಾಣ ಉಳಿಸಿಕೊಳ್ಳಲು ಮಗಳನ್ನು ಬಲಿ ಕೊಡಲು ಮಾನ್ಯತಾ ಸಿದ್ಧ!
ಪುಟ್ಟಕ್ಕನ ಬೇಸರಕ್ಕೆ ಮುಕ್ತಿ ಸಿಗುತ್ತಾ? ಸ್ನೇಹಾ ಇದಕ್ಕೆಲ್ಲಾ ಉತ್ತರ ನೀಡ್ತಾಳಾ? ಮುಂದೇನಾಗುತ್ತೆ ಅಂತ ನೋಡೋಕೆ ಪುಟ್ಟಕ್ಕನ ಮಕ್ಕಳು ಧಾರಾವಾಹಿ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ