• Home
  • »
  • News
  • »
  • entertainment
  • »
  • Puttakkana Makkalu: ಪುಟ್ಟಕ್ಕ ಅಡುಗೆ ಮಾಡುವುದಕ್ಕೂ ಸೈ, ಗೂಡ್ಸ್ ಆಟೋ ಓಡಿಸೋಕೂ ಜೈ, ಎಲ್ಲಾ ಮಕ್ಕಳಿಗಾಗಿ!

Puttakkana Makkalu: ಪುಟ್ಟಕ್ಕ ಅಡುಗೆ ಮಾಡುವುದಕ್ಕೂ ಸೈ, ಗೂಡ್ಸ್ ಆಟೋ ಓಡಿಸೋಕೂ ಜೈ, ಎಲ್ಲಾ ಮಕ್ಕಳಿಗಾಗಿ!

ಗೂಡ್ಸ್ ಆಟೋ ಓಡಿಸೋಕು ಸೈ ಪುಟ್ಟಕ್ಕ

ಗೂಡ್ಸ್ ಆಟೋ ಓಡಿಸೋಕು ಸೈ ಪುಟ್ಟಕ್ಕ

ಪುಟ್ಟಕ್ಕ ಮತ್ತು ಅವಳ ಮಗಳ ಕನಸು ನನಸಾಗೋ ಸಮಯ ಬಂದಿದೆ. ಆಟವಾಡಲು ಎಲ್ಲರೂ ಹೊರಟು ನಿಂದಿದ್ದಾರೆ. ಗೆದ್ದೇ ಗೆಲ್ಲುತ್ತೇವೆ ಎಂಬ ವಿಶ್ವಾಸದಲ್ಲಿ ಇದ್ದಾರೆ. ಪುಟ್ಟಕ್ಕನೇ ಹೋಗಿ ಗೂಡ್ಸ್ ಆಟೋ ಸ್ಟಾರ್ಟ್ ಮಾಡಿ ಬಂದಿದ್ದಾಳೆ.

  • News18 Kannada
  • Last Updated :
  • Karnataka, India
  • Share this:

    ಪುಟ್ಟಕ್ಕನ ಮಕ್ಕಳು  (Puttakkana Makkalu), ಜೀ ಕನ್ನಡದ (Zee Kannada) ಹೆಸರಾಂತ ಧಾರಾವಾಹಿ (Serial). ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿದಿನ ಸಂಜೆ 7.30ಕ್ಕೆ ಪ್ರಸಾರವಾಗುತ್ತದೆ. ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಪುಟ್ಟಕ್ಕನ ಪಾತ್ರದಲ್ಲಿ ಉಮಾಶ್ರೀ ಅಮೋಘವಾಗಿ ಅಭಿನಯಿಸುತ್ತಿದ್ದಾರೆ. ಉಮಾಶ್ರೀ ಗಂಡ ಆಕೆಯನ್ನು ಬಿಟ್ಟು ಅದೇ ಊರಿನಲ್ಲಿ ರಾಜಿ ಎಂಬಾಕೆಯನ್ನು ಎರಡನೇ ಮದುವೆಯಾಗಿದ್ದಾನೆ. ಇನ್ನು ಉಮಾಶ್ರೀಗೆ ಮೂವರು ಹೆಣ್ಣು ಮಕ್ಕಳು. ಗಂಡ ಬಿಟ್ಟು ಹೋಗಿದ್ದರೂ, ಮೂವರನ್ನು ಚೆನ್ನಾಗಿ ಸಾಕಿದ್ದಾಳೆ. ಮೆಸ್ ಒಂದನ್ನು ನಡೆಸುತ್ತಿದ್ದು, ಅದರಿಂದ ಜೀವನ ಸಾಗಿಸುತ್ತಿದ್ದಾಳೆ. ಮೊದಲನೇ ಮಗಳು ಸಹನಾ ಓದದೇ ತನ್ನ ತಾಯಿಗೆ ಹೋಟೆಲ್ (Hotel) ಕೆಲಸದಲ್ಲಿ ಸಹಾಯ ಮಾಡುತ್ತಿದ್ದಾಳೆ. ಎರಡನೇ ಮಗಳು ಸ್ನೇಹಾ ಓದಿನಲ್ಲೂ ಜೋರು. ಮಾತಿನಲ್ಲೂ ಜೋರು. ಮೂರನೇ ಮಗಳು ಸುಮಾ ಓದಿನ ಜೊತೆ ಆಟಗಳಲ್ಲೂ ಮುಂದು.


    ಮೂರನೇ ಮಗಳು ಸುಮಾ ತಂಡಕ್ಕೆ ಕೋಚ್ ಇರಲಿಲ್ಲ
    ಸುಮಾ ಮತ್ತು ಆಕೆಯ ತಂಡ ಖೋ ಖೋ ಆಟವನ್ನು ಚೆನ್ನಾಗಿ ಆಡುತ್ತಾರೆ. ಆದರೆ ಅವರ ಕಾಲೇಜಿನಲ್ಲಿ ಇವರಿಗೆ ಸರಿಯಾಗಿ ತರಬೇತಿ ಸಿಗುತ್ತಿಲ್ಲ. ಸರಿಯಾದ ಕೋಚ್ ಇಲ್ಲದ ಕಾರಣ, ಪಂದ್ಯಗಳನ್ನು ಸೋಲುತ್ತಿದ್ದಾರೆ. ಈ ಬಗ್ಗೆ ಪುಟ್ಟಕ್ಕನೇ ಕಾಲೇಜಿಗೆ ಹೋಗಿ ಅವರ ಪಿ.ಟಿ ಮಾಸ್ಟರ್ ಬಳಿ ಮಾತನಾಡಿರುತ್ತಾಳೆ. ಆದ್ರೆ ಅವರು ನಾವು ತರಬೇತಿ ಕೊಡಲ್ಲ ಎಂದು ಹೇಳುತ್ತಾರೆ.


    ಸೀರೆ ಕಟ್ಟಿ ಕೋಚ್ ಆಗಿದ್ದ ಪುಟ್ಟಕ್ಕ
    ಮಗಳು ಸುಮಾ ಮತ್ತು ಆಕೆಯ ತಂಡಕ್ಕಾಗಿ ಪುಟ್ಟಕ್ಕ ಕೋಚ್ ಆಗಿದ್ದಳು. ತನ್ನ ಗದ್ದೆಯನ್ನೇ ಆಟದ ಮೈದಾನವಾಗಿ ಬದಲಾಯಿಸಿದಿದ್ದಳು. ದಿನವೂ ಮಕ್ಕಳಿಗೆ ಖೋ ಖೋ ಆಟ ಹೇಳಿ ಕೊಟ್ಟಿದ್ದಾಳೆ. ಮಕ್ಕಳು ಶ್ರದ್ಧೆಯಿಂದ ಕಲಿತಿದ್ದಾರೆ. ಮೊದಲು ಎಲ್ಲರೂ ಪುಟ್ಟಕ್ಕ ಏನ್ ಕೋಚ್ ಕೊಡ್ತಾಳೆ ಎಂದುಕೊಂಡಿದ್ರು. ಆದ್ರೆ ಈಗ ಆಕೆಯನ್ನು ನೋಡಿ ಎಲ್ಲರೂ ಬೆರಗಾಗಿದ್ದಾರೆ.


    ಇದನ್ನೂ ಓದಿ: Ramachari: ಚಾರು ಕೊಲ್ಲಲು ಹೋದ ರಾಮಾಚಾರಿ ಅಣ್ಣ ಕೋದಂಡ! ತನ್ನ ಹೆಂಡ್ತಿ ಸಾವಿಗೆ ಕಾರಣ ಎಂದು ಕೋಪ


    ಪುಟ್ಟಕ್ಕನೂ ಖೋ ಖೊ ಆಟಗಾರ್ತಿ
    ಚಿಕ್ಕವಳಿದ್ದಾಗ ಪುಟ್ಟಕ್ಕ ಸಹ ಖೋಖೋ ಆಟಗಾರ್ತಿ ಆಗಿರುತ್ತಾಳೆ. ತನ್ನದೇ ಊರಿನ ಜನರನ್ನು ಕರೆದುಕೊಂಡು ತಂಡ ಕಟ್ಟಿರುತ್ತಾಳೆ. ಎದುರಾಳಿ ತಂಡದವರಲ್ಲಿ ನಡುಕ ಹುಟ್ಟಿಸುತ್ತಿತ್ತು ಇವಳ ಆಟ. ಆದ್ರೆ ಬಡತನ, ಮದುವೆ ಎಲ್ಲವೂ ಪುಟ್ಟಕ್ಕನನ್ನು ಆಟದಿಂದ ದೂರ ಮಾಡಿತ್ತು. ಈಗ ಅದೇ ತರಬೇತಿಯನ್ನು ಮಗಳಿಗೆ ಹೇಳಿ ಕೊಟ್ಟಿದ್ದಾಳೆ.


    zee kannada serial, umashree drive goods auto, kannada serial, puttakkana makkalu serial today episode, puttakkana makkalu serial cast, kho kho Coach, ಪುಟ್ಟಕ್ಕನ ಮಕ್ಕಳು ಧಾರಾವಾಹಿ, ಖೋ ಖೋ ಕೋಚ್ ಆದ ಬಿಟ್ಟಿದ್ದಾಳೆ ಪುಟ್ಟಕ್ಕ, ಪುಟ್ಟಕ್ಕ ಅಡುಗೆ ಮಾಡುವುದಕ್ಕೂ ಸೈ, ಗೂಡ್ಸ್ ಆಟೋ ಓಡಿಸೋಕು ಸೈ, ಎಲ್ಲಾ ಮಕ್ಕಳಿಗಾಗಿ, ಜೀ ಕನ್ನಡ ಧಾರಾವಾಹಿಗಳು, Kannada news, Karnataka news,
    ಪುಟ್ಟಕ್ಕ


    ಗೂಡ್ಸ್ ಆಟೋ ಡ್ರೈವರ್ ಆದ ಪುಟ್ಟಕ್ಕ
    ಪುಟ್ಟಕ್ಕ ಮತ್ತು ಅವಳ ಮಗಳ ಕನಸು ನನಸಾಗೋ ಸಮಯ ಬಂದಿದೆ. ಆಟವಾಡಲು ಎಲ್ಲರೂ ಹೊರಟು ನಿಂದಿದ್ದಾರೆ. ಗೆದ್ದೇ ಗೆಲ್ಲುತ್ತೇವೆ ಎಂಬ ವಿಶ್ವಾಸದಲ್ಲಿ ಇದ್ದಾರೆ. ಆದ್ರೆ ಆ ಸ್ಥಳಕ್ಕೆ ಹೇಗೆ ಹೋಗುವುದು ಎಂದು ಚಿಂತೆ ಮಾಡುತ್ತಿರುವಾಗ, ಆಟೋ ಬಂದು ನಿಂತಿದೆ. ಇದನ್ನು ಯಾರು ಓಡಿಸುತ್ತಾರೆ ಎಂದು ಎಲ್ಲರೂ ಕೇಳಿದ್ದಾರೆ. ಆಗ ಪುಟ್ಟಕ್ಕನೇ ಹೋಗಿ ಗೂಡ್ಸ್ ಆಟೋ ಸ್ಟಾರ್ಟ್ ಮಾಡಿ ಬಂದಿದ್ದಾಳೆ.


    zee kannada serial, umashree drive goods auto, kannada serial, puttakkana makkalu serial today episode, puttakkana makkalu serial cast, kho kho Coach, ಪುಟ್ಟಕ್ಕನ ಮಕ್ಕಳು ಧಾರಾವಾಹಿ, ಖೋ ಖೋ ಕೋಚ್ ಆದ ಬಿಟ್ಟಿದ್ದಾಳೆ ಪುಟ್ಟಕ್ಕ, ಪುಟ್ಟಕ್ಕ ಅಡುಗೆ ಮಾಡುವುದಕ್ಕೂ ಸೈ, ಗೂಡ್ಸ್ ಆಟೋ ಓಡಿಸೋಕು ಸೈ, ಎಲ್ಲಾ ಮಕ್ಕಳಿಗಾಗಿ, ಜೀ ಕನ್ನಡ ಧಾರಾವಾಹಿಗಳು, Kannada news, Karnataka news,
    ಸುಮಾ


    ಅಡುಗೆಗೂ ಸೈ, ಆಟೋ ಓಡಿಸಲೂ ಸೈ
    ಪುಟ್ಟಕ್ಕ ಮೆಸ್ ನಡೆಸುತ್ತಿದ್ದು, ಸುತ್ತಮುತ್ತ ಹಳ್ಳಿಗಳಲ್ಲೇ ಈಕೆಯ ಊಟ ಎಲ್ಲರಿಗೂ ಇಷ್ಟ. ಊರಲ್ಲೂ ಎಲ್ಲರೂ ಬಂದು ಊಟ ಮಾಡಿಹೋಗುತ್ತಾರೆ. ಕಷ್ಟಗಳನ್ನು ಮೆಟ್ಟಿ ನಿಂತ ಪುಟ್ಟಕ್ಕ, ಮಕ್ಕಳಿಗಾಗಿ ಏನು ಬೇಕಾದ್ರೂ ಮಾಡಲು ಸಿದ್ಧ ಇರುತ್ತಾಳೆ. ಈಗ ಚಿಕ್ಕ ಮಗಳು ಸುಮಾಗಾಗಿ ಆಟೋ ಓಡಿಸಿಕೊಂಡು ಹೋಗುತ್ತಿದ್ದಾಳೆ.


    ಇದನ್ನೂ ಓದಿ: Bigg Boss Kannada: ಗೊತ್ತಿದ್ದು ತಪ್ಪು ಮಾಡಿದ್ರಾ ಗುರೂಜಿ, ಸೌಕರ್ಯ ಇಲ್ಲದೇ ಮನೆ ಮಂದಿಗೆ ಬೇಸರ! 


    ಸುಮಾ ತಂಡ ಖೋಖೋ ಗೆಲ್ಲುತ್ತಾ? ಪುಟ್ಟಕ್ಕನ ತರಬೇತಿ ಸರಿ ಇವರನ್ನು ಗೆಲ್ಲಿಸುತ್ತಾ? ಮುಂದೇನಾಗುತ್ತೆ ಅಂತ ನೋಡೋಕೆ ಪುಟ್ಟಕ್ಕನ ಮಕ್ಕಳು ಸೀರಿಯಲ್ ನೋಡಬೇಕು.

    Published by:Savitha Savitha
    First published: