• Home
  • »
  • News
  • »
  • entertainment
  • »
  • Puttakkana Makkalu: ರೋಚಕ ತಿರುವು ಕಂಡ ಪುಟ್ಟಕ್ಕನ ಮಕ್ಕಳು! ಕಂಠಿ ನಿಜ ಬಣ್ಣ ಬಯಲಾಗುತ್ತಾ?

Puttakkana Makkalu: ರೋಚಕ ತಿರುವು ಕಂಡ ಪುಟ್ಟಕ್ಕನ ಮಕ್ಕಳು! ಕಂಠಿ ನಿಜ ಬಣ್ಣ ಬಯಲಾಗುತ್ತಾ?

ಶ್ರೀನೇ ದೊರೆ ಅನ್ನೋ ಸತ್ಯ ಸ್ನೇಹಾಗೆ ಗೊತ್ತಾಯ್ತಾ?

ಶ್ರೀನೇ ದೊರೆ ಅನ್ನೋ ಸತ್ಯ ಸ್ನೇಹಾಗೆ ಗೊತ್ತಾಯ್ತಾ?

ಸ್ನೇಹ ದೊರೆ ಯಾರು ಎಂದು ಎಲ್ಲೆಡೆ ಹುಡುಕುತ್ತಿದ್ದಾಳೆ. ಅಷ್ಟರಲ್ಲೇ ಮೆಸ್ ಗೆ ಬಂದ ಮುತ್ತಯ್ಯ ಎನ್ನುವವನು ನನಗೆ ದೊರೆ ಗೊತ್ತು ಎಂದಿದ್ದಾನೆ. ಎದೆ ಮೇಲೆ ಅವ್ವ ಎಂದು ಹಚ್ಚೆ ಹಾಕಿಸಿಕೊಂಡಿದ್ದಾನೆ. ನನಗೆ ಗೊತ್ತು ಎಂದಿದ್ದಾನೆ.

  • News18 Kannada
  • Last Updated :
  • Karnataka, India
  • Share this:

    ಪುಟ್ಟಕ್ಕನ ಮಕ್ಕಳು (Puttakkan Makkalu), ಜೀ ಕನ್ನಡದ (Zee Kannada) ಹೆಸರಾಂತ ಧಾರಾವಾಹಿ (Serial). ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿದಿನ ಸಂಜೆ 7.30ಕ್ಕೆ ಪ್ರಸಾರವಾಗುತ್ತದೆ. ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಪುಟ್ಟಕ್ಕನ ಪಾತ್ರದಲ್ಲಿ ಉಮಾಶ್ರೀ ಅಮೋಘವಾಗಿ ಅಭಿನಯಿಸುತ್ತಿದ್ದಾರೆ. ಉಮಾಶ್ರೀ ಗಂಡ ಆಕೆಯನ್ನು ಬಿಟ್ಟು ಅದೇ ಊರಿನಲ್ಲಿ ರಾಜಿ ಎಂಬಾಕೆಯನ್ನು ಎರಡನೇ ಮದುವೆಯಾಗಿದ್ದಾನೆ. ಇನ್ನು ಉಮಾಶ್ರೀಗೆ ಪುಟ್ಟಕ್ಕನಿಗೆ ಮೂವರು ಹೆಣ್ಣು ಮಕ್ಕಳು. ಮೆಸ್ ಒಂದನ್ನು ನಡೆಸುತ್ತಿದ್ದು, ಅದರಿಂದ ಜೀವನ ಸಾಗಿಸುತ್ತಿದ್ದಾಳೆ. ಮೊದಲನೇ ಮಗಳು ಸಹನಾ ಓದದೇ ತನ್ನ ತಾಯಿಗೆ ಹೋಟೆಲ್ ಕೆಲಸದಲ್ಲಿ ಸಹಾಯ ಮಾಡುತ್ತಿದ್ದಾಳೆ. ಎರಡನೇ ಮಗಳು ಸ್ನೇಹ ಓದಿನಲ್ಲೂ ಜೋರು. ಮಾತಿನಲ್ಲೂ ಜೋರು. ಮೂರನೇ ಮಗಳು ಸುಮಾ ಓದಿನ ಜೊತೆ ಆಟಗಳಲ್ಲೂ ಮುಂದು. ಸ್ನೇಹಗೆ (Sneha) ಶ್ರೀನೇ ದೊರೆ (Dore) ಎಂದು ಗೊತ್ತಾಗುತ್ತಾ?


    ಸ್ನೇಹಳನ್ನು ಪ್ರೀತಿ ಮಾಡ್ತಿರೋ ಕಂಠಿ
    ಕಂಠಿ ಸ್ನೇಹಳನ್ನು ತುಂಬಾ ಪ್ರೀತಿ ಮಾಡುತ್ತಿದ್ದಾನೆ. ಆದ್ರೆ ಹೇಳಿಕೊಳ್ಳಲು ಮಾತ್ರ ಒದ್ದಾಟ ನಡೆಸುತ್ತಿದ್ದಾನೆ. ಯಾಕಂದ್ರೆ ಸ್ನೇಹ, ಕಂಠಿ ಒಳ್ಳೆಯ ಸ್ನೇಹಿತರು. ಅಲ್ಲದೇ ಕಂಠಿ ಸ್ನೇಹ ಬಳಿ ಸುಳ್ಳು ಹೇಳಿದ್ದಾನೆ. ತನ್ನ ಹೆಸರನ್ನು ಶ್ರೀ ಎಂದು ಹೇಳಿಕೊಂಡು ತಿರುಗುತ್ತಿದ್ದಾನೆ. ಅಲ್ಲದೇ ಸ್ನೇಹಾಗೆ ಕಂಠಿ ಮತ್ತು ಅವರಮ್ಮ ಬಡ್ಡಿ ಬಂಗಾರಮ್ಮನ ಹೆಸರು ಕೇಳಿದ್ರೂ ಆಗಲ್ಲ. ಅದಕ್ಕೆ ಪ್ರೀತಿ ಹೇಳಿಕೊಳ್ಳಲು ಭಯ.


    ದೊರೆ ಹೆಸರಲ್ಲಿ ಸ್ನೇಹಾಳಿಗೆ ಲೆಟರ್
    ಸ್ನೇಹಳನ್ನು ಪ್ರೀತಿ ಮಾಡ್ತಿರೋ ಕಂಠಿ, ಅವಳ ಬಳಿ ಶ್ರೀ ಎಂದು ಹೇಳಿಕೊಂಡಿದ್ದಾನೆ. ಅದಲ್ಲದೇ ದೊರೆ ಎನ್ನುವವನ ಹೆಸರಿನಲ್ಲಿ ಪತ್ರ ಬರೆದು ಆಗಾಗ ಸ್ನೇಹಾಗೆ ಕಳಿಸುತ್ತಾ ಇರುತ್ತಾನೆ. ಸ್ನೇಹಾಗೂ ದೊರೆ ಮೇಲೆ ಗೌರವ ಇದೆ. ಅಲ್ಲದೇ ಮರೆಯಲ್ಲಿದ್ದುಕೊಂಡು ತಮಗೆ ಸಹಾಯ ಮಾಡ್ತಾರೆ ಎಂದು ಗೊತ್ತಾಗಿದೆ.


    ಇದನ್ನೂ ಓದಿ: Matte Mayamruga: 2 ವರ್ಷದಿಂದ ಮಾಳವಿಕಾ ಪತಿ ಕೃಷ್ಣ ಪ್ರಸಾದ್ ಎಲ್ಲಿ ಹೋದ್ರು? ಎಲ್ಲಿ ನೋಡಿದ್ರೂ ಮಾಯಾಮೃಗದ್ದೇ ಚರ್ಚೆ!


    ದೊರೆ ಗೊತ್ತು ಎಂದ ಮುತ್ತಯ್ಯ
    ಸ್ನೇಹ ದೊರೆ ಯಾರು ಎಂದು ಎಲ್ಲೆಡೆ ಹುಡುಕುತ್ತಿದ್ದಾಳೆ. ಅಷ್ಟರಲ್ಲೇ ಮೆಸ್ ಗೆ ಬಂದ ಮುತ್ತಯ್ಯ ಎನ್ನುವವನು ನನಗೆ ದೊರೆ ಗೊತ್ತು ಎಂದಿದ್ದಾನೆ. ಎದೆ ಮೇಲೆ ಅವ್ವ ಎಂದು ಹಚ್ಚೆ ಹಾಕಿಸಿಕೊಂಡಿದ್ದಾನೆ. ನನಗೆ ಗೊತ್ತು. ನಾನು ನೋಡಿದ್ದೇನೆ ಎಂದು ಮುತ್ತಯ್ಯ ಸ್ನೇಹ ಬಳಿ ಹೇಳಿದ್ದಾನೆ. ಸ್ನೇಹ ಅವನು ನೋಡಲು ಹೇಗಿದ್ದ ಹೇಳು ಎನ್ನುತ್ತಿದ್ದಾಳೆ.


    zee kannada serial, puttakkana makkalu serial today episode, puttakkana makkalu serial cast, ಪುಟ್ಟಕ್ಕನ ಮಕ್ಕಳು ಧಾರಾವಾಹಿ, ಶ್ರೀನೇ ದೊರೆ ಅನ್ನೋ ಸತ್ಯ ಸ್ನೇಹಾಗೆ ಗೊತ್ತಾಯ್ತಾ? ಕಂಠಿ ನಿಜ ಬಣ್ಣ ಬಯಲಾಗುತ್ತಾ?, ಜೀ ಕನ್ನಡ ಧಾರಾವಾಹಿಗಳು, Kannada news, Karnataka news,
    ಮುತ್ತಯ್ಯ


    ಬಂಗಾರಮ್ಮನ ಮಗ ದೊರೆ ಎಂದು ಹೇಳ್ತಾನಾ?
    ಮುತ್ತಯ್ಯ ಸ್ನೇಹ ಬಳಿ ದೊರೆ ಬಗ್ಗೆ ಹೇಳುತ್ತಿದ್ದು, ಅವನು ಅವರ ಮಗ ಎನ್ನುತ್ತಿದ್ದಾನೆ. ಸ್ನೇಹ ಯಾರ ಮಗ ಹೇಳು ಎನ್ನುತ್ತಿದ್ದಾಳೆ. ಮುತ್ತಯ್ಯ ಬಂಗಾರಮ್ಮನ ಮಗನೇ ಶ್ರೀ ಎಂದು ಹೇಳ್ತಾನಾ ಅಂತ ಇವತ್ತಿನ ಸಂಚಿಕೆಯಲ್ಲಿ ನೋಡಬೇಕು. ಸ್ನೇಗಾಗೆ ಮೊದಲೇ ಬಟ್ಟಿ ಬಂಗಾರಮ್ಮ ಮತ್ತು ಅವರ ಮಗ ಎಂದ್ರೆ ಇಷ್ಟ ಇಲ್ಲ. ಅವರು ಬಡವರಿಗೆ ಸಾಲು ಕೊಟ್ಟು, ಬಡ್ಡಿ ಹೆಸರಲ್ಲಿ ಹಿಂಸೆ ಕೊಡ್ತಾರೆ ಎನ್ನುವುದ ಸ್ನೇಹ ವಾದ.


    zee kannada serial, puttakkana makkalu serial today episode, puttakkana makkalu serial cast, ಪುಟ್ಟಕ್ಕನ ಮಕ್ಕಳು ಧಾರಾವಾಹಿ, ಶ್ರೀನೇ ದೊರೆ ಅನ್ನೋ ಸತ್ಯ ಸ್ನೇಹಾಗೆ ಗೊತ್ತಾಯ್ತಾ? ಕಂಠಿ ನಿಜ ಬಣ್ಣ ಬಯಲಾಗುತ್ತಾ?, ಜೀ ಕನ್ನಡ ಧಾರಾವಾಹಿಗಳು, Kannada news, Karnataka news,
    ಪುಟ್ಟಕ್ಕ


    ಸ್ನೇಹಾಗೆ ಶ್ರೀ ಮೇಲೆ ಪ್ರೀತಿ
    ಕಂಠಿ, ಶ್ರೀ ಎಂದು ಹೇಳಿಕೊಂಡು ಸ್ನೇಹ ಜೊತೆ ತಿರುಗಾಡುತ್ತಿದ್ದಾನೆ. ಅವನಿಗೆ ಸ್ನೇಹಾ ಅಂದ್ರೆ ತುಂಬಾ ಇಷ್ಟ. ಈಗ ಸ್ನೇಹಗೂ ಶ್ರೀ ಮೇಲೆ ಇಷ್ಟ ಆಗಿದೆ. ಸದಾ ಅವನ ನೆನಪಲ್ಲೇ ಇರುತ್ತಾಳೆ. ತನಗೆ ಶ್ರೀ ಮೇಲೆ ಪ್ರೀತಿ ಆಗಿದ್ಯಾ ಎಂದು ಅವಳಿಗೆ ಅನುಮಾನ ಶುರುವಾಗಿದೆ. ಅವನೇ ಕಂಠಿ ಎಂದು ಗೊತ್ತಾದ್ರೆ, ಎಲ್ಲ ಅಲ್ಲಿಗೆ ಮುಗಿದು ಹೋಗುತ್ತೆ.


    ಇದನ್ನೂ ಓದಿ: Bhagya Lakshmi: ತಾಂಡವ್-ಶ್ರೇಷ್ಠ ಸಂಬಂಧ ಭಾಗ್ಯನಿಗೆ ತಿಳಿಯುತ್ತಾ? ಒಂದೇ ಹೋಟೆಲ್‍ನಲ್ಲಿ ಇಬ್ಬರು! 


    ಸ್ನೇಹಾಗೆ ಸತ್ಯ ಗೊತ್ತಾಗುತ್ತಾ? ಸ್ನೇಹ-ಶ್ರೀ ದೂರ ಆಗ್ತಾರಾ? ಮುಂದೇನಾಗುತ್ತೆ ಅಂತ ನೋಡೋಕೆ ಪುಟ್ಟಕ್ಕನ ಮಕ್ಕಳು ಧಾರಾವಾಹಿ ನೋಡಬೇಕು.

    Published by:Savitha Savitha
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು