ಪುಟ್ಟಕ್ಕನ ಮಕ್ಕಳು (Puttakkana Makkalu), ಜೀ ಕನ್ನಡದ (Zee Kannada) ಹೆಸರಾಂತ ಧಾರಾವಾಹಿ (Serial). ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿದಿನ ಸಂಜೆ 7.30ಕ್ಕೆ ಪ್ರಸಾರವಾಗುತ್ತದೆ. ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಪುಟ್ಟಕ್ಕನ ಪಾತ್ರದಲ್ಲಿ ಉಮಾಶ್ರೀ ಅಮೋಘವಾಗಿ ಅಭಿನಯಿಸುತ್ತಿದ್ದಾರೆ. ಪುಟ್ಟಕ್ಕನ ಗಂಡ ಆಕೆಯನ್ನು ಬಿಟ್ಟು ಅದೇ ಊರಿನಲ್ಲಿ ರಾಜಿ ಎಂಬಾಕೆಯನ್ನು ಎರಡನೇ ಮದುವೆಯಾಗಿದ್ದಾನೆ. ಇನ್ನು ಪುಟ್ಟಕ್ಕನಿಗೆ ಮೂವರು ಹೆಣ್ಣು ಮಕ್ಕಳು. ಸಹನಾ, ಸ್ನೇಹ, ಸುಮಾ. ಮೂವರನ್ನು ಚೆನ್ನಾಗಿ ಸಾಕಿದ್ದಾಳೆ. ದೊಡ್ಡ ಮಗಳು ಸಹನಾ ಪ್ರೀತಿ ಮಾಡ್ತೀರೋ ಮುರಳಿ ಮೇಷ್ಟ್ರು ಜೊತೆ ಮದುವೆ ಸೆಟ್ ಆಗಿದೆ. ಅಕ್ಕನ ಮದುವೆ (Marriage) ತಯಾರಿಯಲ್ಲಿ ಸ್ನೇಹಾ, ಕಂಠಿ ಪ್ರೀತಿ (Love) ಅರುಳುತ್ತಾ ನೋಡಬೇಕು.
ಸಹನಾ ವೆಡ್ಸ್ ಮುರಳಿ
ಸಹನಾ ಮತ್ತು ಮುರಳಿ ಮೇಷ್ಟ್ರು ಒಬ್ಬರನ್ನೊಬ್ಬರು ಇಷ್ಟ ಪಡ್ತಾ ಇದ್ರು. ಇದಕ್ಕೆ ಪುಟ್ಟಕ್ಕ ಮತ್ತು ಮುರಳಿ ಮೇಷ್ಟ್ರು ಮನೆಯವರು ಒಪ್ಪಿದ್ದಾರೆ. ನಿಶ್ಚಿತಾರ್ಥ ಮಾಡಬೇಕು ಎಂದುಕೊಂಡಿದ್ದಾರೆ. ಅದರ ತಯಾರಿಲ್ಲಿ ಪುಟ್ಟಕ್ಕನ ಮಕ್ಕಳು ಇದ್ದಾರೆ. ಪುಟ್ಟಕ್ಕನ ಮನೆಗೆ ಸಹಾಯ ಮಾಡಲು ಬಂಗಾರಮ್ಮ ತನ್ನ ಮಕ್ಕಳನ್ನು ಕಳಿಸಿದ್ದಾಳೆ.
ಸ್ನೇಹಳಿಗೆ ಪ್ರೀತಿ ಹೇಳಿಕೊಳ್ಳಲು ಕಂಠಿ ಒದ್ದಾಟ
ಕಂಠಿ ಸ್ನೇಹಳನ್ನು ತುಂಬಾ ಪ್ರೀತಿ ಮಾಡುತ್ತಿದ್ದಾನೆ. ಆದ್ರೆ ಹೇಳಿಕೊಳ್ಳಲು ಮಾತ್ರ ಒದ್ದಾಟ ನಡೆಸುತ್ತಿದ್ದಾನೆ. ಯಾಕಂದ್ರೆ ಸ್ನೇಹ, ಕಂಠಿ ಒಳ್ಳೆಯ ಸ್ನೇಹಿತರು. ಅಲ್ಲದೇ ಕಂಠಿ ಸ್ನೇಹ ಬಳಿ ಸುಳ್ಳು ಹೇಳಿದ್ದಾನೆ. ತನ್ನ ಹೆಸರನ್ನು ಶ್ರೀ ಎಂದು ಹೇಳಿಕೊಂಡು ತಿರುಗುತ್ತಿದ್ದಾನೆ. ಅಲ್ಲದೇ ಸ್ನೇಹಾಗೆ ಕಂಠಿ ಮತ್ತು ಅವರಮ್ಮ ಬಡ್ಡಿ ಬಂಗಾರಮ್ಮನ ಹೆಸರು ಕೇಳಿದ್ರೂ ಆಗಲ್ಲ ಅದಕ್ಕೆ.
ಇದನ್ನೂ ಓದಿ: Kendasampige: ಸುಮನಾಳನ್ನು ಮನೆಯಿಂದ ಆಚೆ ಕಳಿಸಿದ ಮಾವ, ಸಾಧನಾ ಪ್ಲ್ಯಾನ್ ಸಕ್ಸಸ್!
ಅಕ್ಕನ ಮದುವೆ ತಯಾರಿ
ಅಲ್ಲದೇ ಶ್ರೀನೇ ದೊರೆ ಹೆಸರಿನಲ್ಲಿ ನಮ್ಮ ಮನೆಗೆ ಸಹಾಯ ಮಾಡ್ತಾ ಇರೋದು ಎಂದು ಸ್ನೇಹಾಗೆ ಗೊತ್ತಾಗಿದೆ. ಅದಕ್ಕೆ ಆಕೆಗೆ ಶ್ರೀ ಮೇಲೆ ಗೌರ ಹೆಚ್ಚಾಗಿದೆ. ಅವರತನ್ನು ಕಂಡ್ರೆ ಒಲವು ಇದೆ. ಈಗ ಅಕ್ಕನ ಮದುವೆ ತಯಾರಿಯಲ್ಲಿ ಶ್ರೀ ಸ್ನೇಹಾ ಮನೆಯವರಿಗೆ ಸಹಾಯ ಮಾಡ್ತಾ ಇದ್ದಾನೆ. ಈ ಸಂದರ್ಭದಲ್ಲಿ ಇಬ್ಬರಿಗೂ ಪ್ರೀತಿ ಅರುಳುತ್ತಾ ನೊಡಬೇಕು.
ಮನೆ ಕ್ಲೀನ್ ಮಾಡುತ್ತಿರುವ ಸ್ನೇಹಾ-ಶ್ರೀ
ಶ್ರೀ ಸ್ನೇಹಾ ಜೊತೆ ಸೇರಿಕೊಂಡು ಮನೆ ಕ್ಲೀನ್ ಮಾಡ್ತಾ ಇದ್ದಾರೆ. ಮನೆಯಲ್ಲಿ ಧೂಳು ಹೆಚ್ಚಾಗಿದೆ. ಅದಕ್ಕೆ ಸ್ನೇಹಾ ಕಂಠಿಗೆ ಮೂಗಿಗೆ ಬಟ್ಟೆ ಕಟ್ಟಿಕೊಳ್ಳಲು ಹೇಳ್ತಾಳೆ. ಅಷ್ಟರಲ್ಲಿ ಸ್ನೇಹಾ ಮೇಲಿಂದ ಬೀಳುತ್ತಾಳೆ. ಆಕೆಯನ್ನು ಶ್ರೀ ಹಿಡಿದುಕೊಂಡಿದ್ದಾನೆ. ಇಬ್ಬರು ಒಬ್ಬರಿಗೊಬ್ಬರು ನೋಡುತ್ತಾ ನಿಂತಿದ್ದಾರೆ.
ಕಂಠಿ ಅಂತ ಗೊತ್ತಾದ್ರೆ ತಾಂಡವ ರೂಪ
ಸ್ನೇಹಾಗೆ ಬಡ್ಡಿ ಬಂಗಾರಮ್ಮ ಅವರ ಮಗ ಕಂಠಿ ಹೆಸರು ಕೇಳಿದ್ರೆ ಆಗಲ್ಲ. ಸ್ನೇಹಾ ಪ್ರಕಾರ ಬಡವರಿಗೆ ದುಡ್ಡು ಕೊಟ್ಟು, ಅವರಿಗೆ ಬಡಿದು ದುಡ್ಡು ವಸೂಲಿ ಮಾಡ್ತಾರೆ ಅನ್ನೋ ಭಾವನೆ ಇದೆ. ಅದಕ್ಕೆ ಸ್ನೇಹಾಗೆ ಕಂಠಿ ಕಂಡ್ರೆ ಆಗಲ್ಲ. ಇನ್ನು ಶ್ರೀನೇ ಕಂಠಿ ಅಂತ ಗೊತ್ತಾದ್ರೆ, ಮುಂದೇನಾಗುತ್ತೆ ಅನ್ನೋ ಕಲ್ಪನೆ ಕೂಡ ಇಲ್ಲ.
ಇದನ್ನೂ ಓದಿ: BBK Rakesh Adiga: ಬಿಗ್ ಬಾಸ್ ಗೆಲ್ಲಬೇಕಾಗಿದ್ದು ರೂಪೇಶ್ ಅಲ್ಲ, ರಾಕೇಶ್! ಹೀಗಂತ ಹೇಳುತ್ತಿರೋದು ಯಾರು ಗೊತ್ತಾ?
ಶ್ರೀ ಸ್ನೇಹಾಳನ್ನು ಪ್ರೀತಿ ಮಾಡ್ತಾ ಇದ್ದಾರೆ. ಆದ್ರೆ ಹೇಳಿಕೊಂಡಿಲ್ಲ. ಸ್ನೇಹಾಗೂ ಶ್ರೀ ಮೇಲೆ ಲವ್ ಆಗ್ತಾ ಇದೆ. ಅಕ್ಕನ ಮದುವೆ ತಯಾರಿಯಲ್ಲಿ, ಇವರು ಮದುವೆ ಸಿಹಿ ಸುದ್ದಿ ಕೊಡ್ತಾರಾ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ