ಪುಟ್ಟಕ್ಕನ ಮಕ್ಕಳು (Puttakkana Makkalu), ಜೀ ಕನ್ನಡದ (Zee Kannada) ಹೆಸರಾಂತ ಧಾರಾವಾಹಿ (Serial). ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿದಿನ ಸಂಜೆ 7.30ಕ್ಕೆ ಪ್ರಸಾರವಾಗುತ್ತದೆ. ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಪುಟ್ಟಕ್ಕನ ಪಾತ್ರದಲ್ಲಿ ಉಮಾಶ್ರೀ ಅಮೋಘವಾಗಿ ಅಭಿನಯಿಸುತ್ತಿದ್ದಾರೆ. ಪುಟ್ಟಕ್ಕನ ಗಂಡ ಆಕೆಯನ್ನು ಬಿಟ್ಟು ಅದೇ ಊರಿನಲ್ಲಿ ರಾಜಿ ಎಂಬಾಕೆಯನ್ನು ಎರಡನೇ ಮದುವೆಯಾಗಿದ್ದಾನೆ. ಇನ್ನು ಪುಟ್ಟಕ್ಕನಿಗೆ ಮೂವರು ಹೆಣ್ಣು ಮಕ್ಕಳು. ಸಹನಾ, ಸ್ನೇಹ, ಸುಮಾ. ಮೂವರನ್ನು ಚೆನ್ನಾಗಿ ಸಾಕಿದ್ದಾಳೆ. ದೊಡ್ಡ ಮಗಳು ಸಹನಾ ಪ್ರೀತಿ (Love) ಮಾಡ್ತೀರೋ ಮುರಳಿ ಮೇಷ್ಟ್ರು ಜೊತೆ ಮದುವೆ ಮಾಡಿಸಬೇಕು ಎಂದು ಒದ್ದಾಡ್ತಾ ಇದ್ರು. ಈಗ ಅದು ನನಸಾಗಿದೆ. ಮುರುಳಿ ಮನೆಯವರು ಮದುವೆಗೆ (Marriage) ಒಪ್ಪಿದ್ದಾರೆ.
ಸಹನಾಳನ್ನು ಒಪ್ಪಿದ ಮುರುಳಿ ಮನೆಯವರು
ಸಹನಾ ಮತ್ತು ಮುರಳಿ ಮೇಷ್ಟ್ರು ಒಬ್ಬರನ್ನೊಬ್ಬರು ಇಷ್ಟ ಪಡ್ತಾ ಇದ್ರು. ಇದಕ್ಕೆ ಪುಟ್ಟಕ್ಕನ ಒಪ್ಪಿಗೆ ಸಿಕ್ಕಿತ್ತು. ಆದ್ರೆ, ಮುರಳಿ ಮೇಷ್ಟ್ರು ಮನೆಯವರು ಒಪ್ಪಿರಲಿಲ್ಲ. ಈಗ ಮುರಳಿ ಸರ್ ಮನೆಯಲ್ಲೂ ಮದುವೆಗೆ ಒಪ್ಪಿದ್ದಾರೆ. ಸಹನಾಳನ್ನು ಸೊಸೆ ಮಾಡಿಕೊಳ್ಳುವುದಾಗಿ ಹೇಳಿದ್ದಾರೆ.
ಮುರಳಿ ಅಮ್ಮ ಏನ್ ಅಂದ್ರು?
ಮೊದಲು ಸಹನಾಳನ್ನು ಬೇಡ ಎಂದು ಮುರಳಿ ಅಮ್ಮ ಹಠ ಹಿಡಿದಿದ್ದರು. ಆದ್ರೆ ಮನೆಯವರೆಲ್ಲಾ ಒಪ್ಪಿದ ಮೇಲೆ ತಾನು ಒಪ್ಪದಿದ್ರೆ ಸರಿ ಹೋಗಲ್ಲ. ನನಗೆ ಈ ಮದುವೆಗೆ ಒಪ್ಪಿಗೆ ಇದೆ. ನನ್ನ ಮಗನಿಗೆ ನಾನು ಬೇಡ ಆಗಿರಬಹುದು. ಆದ್ರೆ ನನಗೆ ನನ್ನ ಮಗನ ಖುಷಿ ಮುಖ್ಯ ಎಂದು ಹೇಳಿದ್ದಾರೆ. ಆದ್ರೆ ಮನಸ್ಸಿನಲ್ಲಿ ಅವಳು ಬಂದು ಅದ್ಯಾಗೆ ಖುಷಿಯಾಗಿರ್ತಾಳೋ ನೋಡ್ತೀನಿ ಎಂದುಕೊಂಡಿದ್ದಾಳೆ.
ಇದನ್ನೂ ಓದಿ: BBK Grand Finale: ಶನಿವಾರ-ಭಾನುವಾರ ಅಲ್ಲ, ಶುಕ್ರವಾರ-ಶನಿವಾರ ಬಿಗ್ಬಾಸ್ ಗ್ರ್ಯಾಂಡ್ ಫಿನಾಲೆ!
ಪುಟ್ಟಕ್ಕನ ಮನೆಯಲ್ಲಿ ಸಂಭ್ರಮ
ಮುರಳಿ ಸರ್ ಮನೆಯಲ್ಲಿ ಮದುವೆಗೆ ಒಪ್ಪಿದ್ದು. ಪುಟ್ಟಕ್ಕನಿಗೆ ತುಂಬಾ ಸಂತೋಷವಾಗಿದೆ. ಸಹನಾಳಿಗೂ ತನ್ನ ಪ್ರೀತಿ ಮೇಷ್ಟ್ರು ಸಿಗುತ್ತಾರೆ ಎಂದು ಖುಷಿಯಾಗಿದ್ದಾಳೆ. ಪುಟ್ಟಕ್ಕನ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಇನ್ನೇನು ಸಹನಾ ಮದುವೆಗೆ ಎಲ್ಲಾ ತಯಾರಿ ಮಾಡಿಕೊಳ್ಳಬೇಕು ಅಂತಿದ್ದಾರೆ.
ಈ ಮದುವೆಗೆ ಒಪ್ಪಿಸಿದ್ದು ಯಾರು?
ಇಷ್ಟು ದಿನ ಮುರಳಿ ಸರ್ ಮನೆಯವರು ಮದುವೆ ಬೇಡ ಅಂತಿದ್ರು. ಈಗ ಹೇಗೆ ಮದುವೆಗೆ ಒಪ್ಪಿಕೊಂಡ್ರು? ಮುರಳಿ ಸರ್ ಮದುವೆಗೆ ಒಪ್ಪಿಸಿದ್ರಾ ಎಂದು ಸುಮಾ ಕೇಳ್ತಾಳೆ. ಅದಕ್ಕೆ ಸ್ನೇಹ ಅಲ್ಲ, ದೊರೆ ಈ ಮದುವೆಗೆ ಎಲ್ಲರನ್ನೂ ಒಪ್ಪಿಸಿದ್ದಾನೆ ಎಂದು ಹೇಳ್ತಾಳೆ. ಆಗ ಎಲ್ಲರೂ ಆಶ್ಚರ್ಯಗೊಳ್ತಾರೆ.
ಶ್ರೀ ಬಳಿ ಸವಾಲ್ ಹಾಕಿದ್ದ ಸ್ನೇಹ
ಶ್ರಿ, ದೊರೆ ಎಲ್ಲನೂ ಕಂಠಿನೇ. ಕಂಠಿ ಸ್ನೇಹ ಬಳಿ ಶ್ರೀ ಎಂದುಕೊಂಡು ಸ್ನೇಹಿತನಾಗಿದ್ದಾನೆ. ದೊರೆ ಎನ್ನುವ ಹೆಸರಿನಲ್ಲಿ ಸ್ನೇಹಾಗೆ ಸಹಾಯ ಮಾಡ್ತಾನೆ. ಸ್ನೇಹಾಗೆ ಶ್ರೀನೇ ದೊರೆ ಎಂದು ಗೊತ್ತಾಗಿದೆ. ಆದ್ರೆ ಕಂಠಿ ಎಂದು ಗೊತ್ತಾಗಿಲ್ಲ. ಶ್ರೀ ಬಳಿ ದೊರೆಗೆ ತಾಕತ್ ಇದ್ರೆ, ಈ ಮದುವೆಗೆ ಒಪ್ಪಿಸುತ್ತಾನೆ ಎಂದು ಸವಾಲ್ ಹಾಕಿದ್ದಳು. ಅದಕ್ಕೆ ಕಂಠಿ ಮುರುಳಿ ಸರ್ ಮನೆಯವರು ಮದುವೆಗೆ ಒಪ್ಪುವಂತೆ ಮಾಡಿದ್ದಾನೆ.
ಇದನ್ನೂ ಓದಿ: Meghana Raj: ಕ್ರಿಸ್ಮಸ್ಗೆ ಗುಡ್ ನ್ಯೂಸ್ ಕೊಟ್ಟ ನಟಿ ಮೇಘನಾ ರಾಜ್! ಏನದು ಗೊತ್ತಾ?
ಸಹನಾ-ಮುರುಳಿ ಮದುವೆಗೆ ದಾರಿ ಸುಲಭ, ಸ್ನೇಹ ದೊರೆಯನ್ನು ಪ್ರೀತಿ ಮಾಡೋಕೆ ಒಪ್ಪಿಕೊಳ್ತಾಳಾ? ಮುಂದೇನಾಗುತ್ತೆ ಅಂತ ನೋಡೋಕೆ ಪುಟ್ಟಕ್ಕನ ಮಕ್ಕಳು ಧಾರಾವಾಹಿ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ