ಪುಟ್ಟಕ್ಕನ ಮಕ್ಕಳು (Puttakkana Makkalu), ಜೀ ಕನ್ನಡದ (Zee Kannada) ಹೆಸರಾಂತ ಧಾರಾವಾಹಿ (Serial). ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿದಿನ ಸಂಜೆ 7.30ಕ್ಕೆ ಪ್ರಸಾರವಾಗುತ್ತದೆ. ಪುಟ್ಟಕ್ಕನ ಮಕ್ಕಳುಧಾರಾವಾಹಿಯಲ್ಲಿ ಪುಟ್ಟಕ್ಕನ ಪಾತ್ರದಲ್ಲಿ ಉಮಾಶ್ರೀ ಅಮೋಘವಾಗಿ ಅಭಿನಯಿಸುತ್ತಿದ್ದಾರೆ. ಉಮಾಶ್ರೀ ಗಂಡ ಆಕೆಯನ್ನು ಬಿಟ್ಟು ಅದೇ ಊರಿನಲ್ಲಿ ರಾಜಿ (Raji) ಎಂಬಾಕೆಯನ್ನು ಎರಡನೇ ಮದುವೆಯಾಗಿದ್ದಾನೆ (Marriage). ಇನ್ನು ಉಮಾಶ್ರೀಗೆ ಮೂವರು ಹೆಣ್ಣು ಮಕ್ಕಳು. ಗಂಡ ಬಿಟ್ಟು ಹೋಗಿದ್ದರೂ, ಮೂವರನ್ನು ಚೆನ್ನಾಗಿ ಸಾಕಿದ್ದಾಳೆ. ಮೆಸ್ ಒಂದನ್ನು ನಡೆಸುತ್ತಿದ್ದು, ಅದರಿಂದ ಜೀವನ ಸಾಗಿಸುತ್ತಿದ್ದಾಳೆ. ಮೊದಲನೇ ಮಗಳು ಸಹನಾ ಓದದೇ ತನ್ನ ತಾಯಿಗೆ ಹೋಟೆಲ್ ಕೆಲಸದಲ್ಲಿ ಸಹಾಯ ಮಾಡುತ್ತಿದ್ದಾಳೆ. ಎರಡನೇ ಮಗಳು ಸ್ನೇಹಾ ಓದಿನಲ್ಲೂ ಜೋರು. ಮಾತಿನಲ್ಲೂ ಜೋರು. ಮೂರನೇ ಮಗಳು ಸುಮಾ ಓದಿನ ಜೊತೆ ಆಟಗಳಲ್ಲೂ ಮುಂದು.
ಪುಟ್ಟಕ್ಕನ ತಂಡಕ್ಕೆ ಸವಾಲು
ಪುಟ್ಟಕ್ಕನ ಮಗಳು ಸುಮಾ ಖೋ ಖೋ ಆಟಗಾರ್ತಿ. ಆಕೆಗೆ ಶಾಲೆಯಲ್ಲಿ ಸರಿಯಾದ ಕೋಚ್ ಸಿಗದ ಕಾರಣ, ಪುಟ್ಟಕ್ಕನೇ ಕೋಚ್ ಆಗಿ ಸುಮಾ ತಂಡಕ್ಕೆ ತರಬೇತಿ ನೀಡಿದ್ದಾಳೆ. ತನ್ನ ಗದ್ದೆಯನ್ನೇ ಆಟದ ಮೈದಾನವಾಗಿ ಬದಲಾಯಿಸಿದಿದ್ದಳು. ದಿನವೂ ಮಕ್ಕಳಿಗೆ ಖೋ ಖೋ ಆಟ ಹೇಳಿ ಕೊಟ್ಟಿದ್ದಾಳೆ. ಮಕ್ಕಳು ಶ್ರದ್ಧೆಯಿಂದ ಕಲಿತಿದ್ದಾರೆ. ಅದನ್ನು ಈಗ ಸಾಬೀತು ಮಾಡುವ ಸಮಯ ಬಂದಿದೆ. ಮಕ್ಕಳೆಲ್ಲಾ ಚೆನ್ನಾಗಿ ಆಡಬೇಕು ಎಂದು ತಯಾರಾಗಿದ್ದಾರೆ.
ಸಿಟಿ ತಂಡದ ವಿರುದ್ಧ ಗೇಮ್
ಪುಟ್ಟಕ್ಕನ ತಂಡ ಎದುರಿಸಬೇಕಿರೋದು ಸಿಟಿ ಕಾಲೇಜಿನ ತಂಡವನ್ನು. ಅವರು ಸಹ ತುಂಬಾ ಪ್ರಬಲರಾಗಿದ್ದಾರೆ. ಅವನ್ನು ಎದುರಿಸಿ ಗೆಲ್ಲಬೇಕಿದೆ. ಆದ್ರೆ ಆ ತಂಡ ತುಂಬಾ ಚೆನ್ನಾಗಿ ಆಡುತ್ತಿದೆ. ಆ ತಂಡದ ವಿರುದ್ಧ ಸುಮಾ ತಂಡ ವೀಕ್ ಆಗ್ತಿದೆ. ಪುಟ್ಟಕ್ಕ ಅವರಿಗೆ ಧೈರ್ಯ ತುಂಬುತ್ತಾಳೆ.
ಇದನ್ನೂ ಓದಿ: Bigg Boss Kannada: ವಿನೋದ್ ಔಟ್ ಆದ ಬೆನ್ನಲ್ಲೇ, 'ಬಡವರ ಮಕ್ಕಳು ಬೆಳಿಬೇಕ್ ಕಣ್ರಯ್ಯ' ಅಭಿಯಾನ!
ರಾಜಿ ಕುತಂತ್ರ
ರಾಜಿಗೆ ಅವರು ಊರಿನ ತಂಡ ಗೆಲ್ಲಬೇಕು ಎನ್ನುವುದಕ್ಕಿಂತ, ಪುಟ್ಟಕ್ಕ ಸೋಲಬೇಕು ಎನ್ನುವುದೇ ಅವಳ ಮನಸ್ಸಿನಲ್ಲಿ ಇರುವುದು. ಅದಕ್ಕೆ ಆಕೆ ಸುಮಾ ತಂಡ ಸೋಲಿಸಲು ಕುತಂತ್ರ ಮಾಡಿದ್ದಾಳೆ. ಅದಕ್ಕೆ ಸುಮಾ ತಂಡದ ಕಾಲೇಜಿನ ಕೋಚ್ ನನ್ನು ಹಿಡಿದಿದ್ದಾಳೆ. ಅವನ ಬಳಿ ಹೋಗಿ ಮಜ್ಜಿಗೆಗೆ ನಿದ್ದೆ ಮಾತ್ರೆ ಹಾಕು ಎಂದು ಹೇಳುತ್ತಾಳೆ. ಅವನು ಅದೇ ರೀತಿ ಮಾಡಿದ್ದಾನೆ.
ಪುಟ್ಟಕ್ಕನ ತಂಡ ಸೋಲುತ್ತಾ?
ಆಟದ ಮಧ್ಯೆ ಬ್ರೇಕ್ ಬಂದಾಗ ಪುಟ್ಟಕ್ಕನ ತಂಡ ಆ ಮಜ್ಜಿಗೆಯನ್ನು ಕುಡಿಯುತ್ತೆ. ಹಾಗಾದ್ರೆ ಮುಂದೆ ಸುಮಾ ಟೀಂ ಆಟ ಆಡಲು ಆಗಲ್ವಾ? ಸಿಟಿ ತಂಡದ ಮುಂದೆ ಹಳ್ಳಿ ತಂಡಕ್ಕೆ ಗೆಲುವು ಸಿಗಲ್ವಾ? ಮುಂದೇನಾಗುತ್ತೆ ಅಂತ ಆಟ ಕುತೂಹಲ ಮೂಡಿಸಿದೆ.
ಪುಟ್ಟಕ್ಕನೂ ಖೋ ಖೋ ಆಟಗಾರ್ತಿ
ಚಿಕ್ಕವಳಿದ್ದಾಗ ಪುಟ್ಟಕ್ಕ ಸಹ ಖೋಖೋ ಆಟಗಾರ್ತಿ ಆಗಿರುತ್ತಾಳೆ. ತನ್ನದೇ ಊರಿನ ಜನರನ್ನು ಕರೆದುಕೊಂಡು ತಂಡ ಕಟ್ಟಿರುತ್ತಾಳೆ. ಎದುರಾಳಿ ತಂಡದವರಲ್ಲಿ ನಡುಕ ಹುಟ್ಟಿಸುತ್ತಿತ್ತು ಇವಳ ಆಟ. ಆದ್ರೆ ಬಡತನ, ಮದುವೆ ಎಲ್ಲವೂ ಪುಟ್ಟಕ್ಕನನ್ನು ಆಟದಿಂದ ದೂರ ಮಾಡಿತ್ತು. ಈಗ ಅದೇ ತರಬೇತಿಯನ್ನು ಮಗಳಿಗೆ ಹೇಳಿ ಕೊಟ್ಟಿದ್ದಾಳೆ.
ಇದನ್ನೂ ಓದಿ: Megha Shetty: ಮತ್ತೆ ಜೊತೆ ಜೊತೆಯಾಗಿ ಕಾಣಿಸಿಕೊಂಡ ಅನಿರುದ್ಧ್-ಅನು ಸಿರಿಮನೆ!
ಪುಟ್ಟಕ್ಕನ ತಂಡಕ್ಕೆ ಸೋಲಾಗುತ್ತಾ? ರಾಜಿ ಕುತಂತ್ರ ಗೆಲ್ಲುತ್ತಾ? ಸುಮಾ ಮತ್ತೆ ಕುಗ್ಗಿ ಹೋಗುತ್ತಾಳಾ? ಮುಂದೇನಾಗುತ್ತೆ ಅಂತ ನೋಡೋಕೆ ಪುಟ್ಟಕ್ಕನ ಮಕ್ಕಳು ಧಾರಾವಾಹಿ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ