ಜೀ ಕನ್ನಡದ (Zee Kannada) ಹೆಸರಾಂತ ಧಾರಾವಾಹಿ ಪುಟ್ಟಕ್ಕನ ಮಕ್ಕಳು (Puttakkana Makkalu). ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿದಿನ ಸಂಜೆ 7.30ಕ್ಕೆ ಪ್ರಸಾರವಾಗುತ್ತದೆ. ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ (Serial) ಪುಟ್ಟಕ್ಕನ ಪಾತ್ರದಲ್ಲಿ ಉಮಾಶ್ರೀ ಅಮೋಘವಾಗಿ ಅಭಿನಯಿಸುತ್ತಿದ್ದಾರೆ. ಈ ಸೀರಿಯಲ್ TRP ಯಲ್ಲಿ ನಂಬರ್ 1 ಇದೆ. ಪುಟ್ಟಕ್ಕನಿಗೆ 3 ಹೆಣ್ಣು ಮಕ್ಕಳಿದ್ದು, ಈಗ ದೊಡ್ಡ ಮಗಳು ಸಹನಾ, ಎರಡನೇ ಮಗಳು ಸ್ನೇಹಾ, ಕೊನೆ ಮಗಳು ಸುಮಾ ಖೋ ಖೋ ಆಟದಲ್ಲಿ ಚಾಂಪಿಯನ್. ಕಂಠಿ ಮತ್ತು ಸ್ನೇಹಾ ಇಬ್ಬರು ಒಬ್ಬರಿಗೊಬ್ಬರು ತುಂಬಾ ಪ್ರೀತಿ ಮಾಡ್ತಾ ಇದ್ದಾರೆ. ಸ್ನೇಹಾಳಿಗೆ ರಾಮಾಚಾರಿ ಸಿನಿಮಾ ರೀತಿ ಕಂಠಿ ಪ್ರಪೆÇೀಸ್ ಮಾಡಿದ್ದ. ಸ್ನೇಹಾ ಸಹ ಒಪ್ಪಿಕೊಂಡಿದ್ದಾಳೆ. ಆದ್ರೆ ಶ್ರೀ ಎಂದು ಹೇಳಿಕೊಂಡು ಕಂಠಿ ಸ್ನೇಹಾಳನ್ನು ಲವ್ (Love) ಮಾಡ್ತಾ ಇದ್ದಾನೆ.
ಬಂಗಾರಮ್ಮನ ಮಗನೇ ಕಂಠಿ
ಬಂಗಾರಮ್ಮನ ಮಗನೇ ಕಂಠಿ, ಈ ಶ್ರೀ ಎಂದು ಸ್ನೇಹಾಗೆ ಗೊತ್ತಿಲ್ಲ. ಯಾಕಂದ್ರೆ ಬಂಗಾರಮ್ಮನನ್ನು ಕಂಡ್ರೆ ಸ್ನೇಹಾಗೆ ಆಗಲ್ಲ. ಬಂಗಾರಮ್ಮನಿಗೂ ಸ್ನೇಹಾ ಕಂಡ್ರೆ ಆಗಲ್ಲ. ಅಲ್ಲದೇ ಸ್ನೇಹಾ ಪುಟ್ಟಕ್ಕನ ಮಗಳು ಎಂದು ಗೊತ್ತಿಲ್ಲ. ಸ್ನೇಹಾ ಹುಬ್ಬಳ್ಳಿಗೆ ಎಕ್ಸಾಂ ಬರೆಯಲು ಹೊರಟಿದ್ದಾಳೆ. ಅವಳ ಜೊತೆ ಕಂಠಿ ಸಹ ಹೊರಟಿದ್ದಾನೆ. ಈ ವಿಷ್ಯ ಬಂಗಾರಮ್ಮನಿಗೆ ಗೊತ್ತಾಗಿದೆ. ಅದಕ್ಕೆ ಆಕೆ ಹುಡುಗರನ್ನು ಕಳಿಸಿ ಸ್ನೇಹಾಳನ್ನು ಕಿಡ್ನ್ಯಾಪ್ ಮಾಡಲು ಹೇಳಿರುತ್ತಾಳೆ. ಆದ್ರೆ ಆಕೆಯನ್ನು ಕಂಠಿ ಕಾಪಾಡ್ತಾನೆ.
ಬಂಗಾರಮ್ಮನನ್ನು ಬೇಡಿಕೊಂಡ ಪುಟ್ಟಕ್ಕ
ಬಂಗಾರಮ್ಮನ ಕಡೆ ಹುಡುಗರು ಸ್ನೇಹಾಳನ್ನು ಕಿಡ್ನ್ಯಾಪ್ ಮಾಡುಲು ಹೋಗ್ತಿದ್ದಾರೆ ಎಂದು ಪುಟ್ಟಕ್ಕನಿಗೆ ಗೊತ್ತಾಗುತ್ತೆ. ಅದಕ್ಕೆ ಪುಟ್ಟಕ್ಕ ಬಂಗಾರಮ್ಮನಿಗೆ ಕರೆ ಮಾಡಿ ಮನೆಗೆ ಕರೆಸಿಕೊಳ್ತಾಳೆ. ನೀವು ಯಾರನ್ನು ನಂಜಮ್ಮನ ಕಡೆ ಹುಡುಗಿ ಅಂದುಕೊಂಡಿದ್ದೀರೋ, ಅವಳೇ ನನ್ನ ಎರಡನೇ ಮಗಳು ಸ್ನೇಹಾ. ಆಕೆಗೆ ಏನೂ ತೊಂದ್ರೆ ಕೊಡಬೇಡಿ ಎಂದು ಪುಟ್ಟಕ್ಕ ಬೇಡಿಕೊಂಡಿದ್ದಾಳೆ.
ಪುಟ್ಟಕ್ಕನಿಂದ ಮಾತು ಪಡೆದ ಬಂಗಾರಮ್ಮ
ಶ್ರೀನೇ ನಿಮ್ಮ ಮಗ ಕಂಠಿ ಎಂದು ನಮಗೆ ಗೊತ್ತಿರಲಿಲ್ಲ. ಅವನು ನಾನೊಬ್ಬ ಅನಾಥ ಎಂದು ಹೇಳಿಕೊಂಡಿದ್ದ. ನನ್ನ ಮಗಳಿಗೂ ಈ ವಿಷ್ಯ ಗೊತ್ತಿಲ್ಲ ಎಂದು ಪುಟ್ಟಕ್ಕ ಹೇಳ್ತಾಳೆ. ಅದಕ್ಕೆ ಬಂಗಾರಮ್ಮ ನನ್ನ-ನಿನ್ನ ನಂಟು ಚೆನ್ನಾಗಿರಬೇಕು ಎಂದ್ರೆ, ನಿನ್ನ ಮಗಳು ನನ್ನ ಮಗನಿಂದ ದೂರ ಇರಬೇಕು. ಅವರಿಬ್ಬರೂ ಯಾವತ್ತೂ ಭೇಟಿಯಾಗಬಾರದು ಎಂದು ಬಂಗಾರಮ್ಮ ಹೇಳ್ತಾಳೆ. ಅದಕ್ಕೆ ಪುಟ್ಟಕ್ಕ ಸರಿ ಎಂದು ಮಾತು ಕೊಡ್ತಾಳೆ.
ಪ್ರೀತಿ ವಿಷ್ಯ ಹೇಳಿಕೊಂಡ ಸ್ನೇಹಾ
ಸ್ನೇಹಾ ಎಕ್ಸಾಂ ಬರೆದು ಹುಬ್ಬಳ್ಳಿಯಿಂದ ಬಂದ ತಕ್ಷಣ ಅವ್ವನ ಬಳಿ ಮಾತನಾಡುತ್ತಿದ್ದಾಳೆ. ಅವ್ವ ನಾನು ಮತ್ತು ಶ್ರೀ ಇಬ್ಬರು ಪ್ರಿತಿ ಮಾಡ್ತಾ ಇದ್ದೀವಿ. ನನ್ನ ಪರೀಕ್ಷೆ ಎಲ್ಲಾ ಮುಗಿದ ಮೇಲೆ ಮದುವೆ ಆಗ್ತೀವಿ ಎಂದು ಹೇಳಿದ್ದಾಳೆ. ಅದಕ್ಕೆ ಪುಟ್ಟಕ್ಕ ಕೋಪ ಮಾಡಿಕೊಂಡು, ನಿನ್ನ ಮದುವೆ ಬಗ್ಗೆ ನಿರ್ಧಾರ ತೆಗೆದುಕೊಳ್ಳಬೇಕಾದವಳು ನಾನು ಎಂದಿದ್ದಾಳೆ.
ತನ್ನ ಮೇಲೆ ಆಣೆ ಮಾಡಿಸಿಕೊಂಡ ಪುಟ್ಟಕ್ಕ
ಪುಟ್ಟಕ್ಕ ಸ್ನೇಹಾ ಬಳಿ ಕೇಳಿದ್ದಾಳೆ. ನಿನಗೆ ನಾನು ಮುಖ್ಯನಾ, ಆ ಹುಡುಗ ಮುಖ್ಯನಾ ಎಂದು? ಅದಕ್ಕೆ ಸ್ನೇಹಾ ನನಗೆ ಯಾವತ್ತಿದ್ರೂ ನೀನೇ ಮುಖ್ಯ ಎಂದಿದ್ದಾಳೆ. ಅದಕ್ಕೆ ಪುಟ್ಟಕ್ಕ, ನನ್ನ ಮೇಲೆ ಆಣೆ ಮಾಡು ಹೇಳು ನೀನು ಯಾವತ್ತೂ ಆ ಹುಡುಗನನ್ನು ಮೀಟ್ ಮಾಡಬಾರದು. ಮಾತನಾಡಬಾರದು ಎಂದು ಹೇಳಿದ್ದಾಳೆ. ಸ್ನೇಹಾ ಆಣೆ ಮಾಡಿದ್ದಾಳೆ.
ಇದನ್ನೂ ಓದಿ: Weekend With Ramesh: ಗಂಡನ ಕನಸಿಗಾಗಿ ತಾಳಿ ಅಡವಿಟ್ಟಿದ್ರಂತೆ, ಹೆಂಡ್ತಿ ತ್ಯಾಗ ನೆನೆದು ಕಣ್ಣೀರಿಟ್ಟ ನೆನಪಿರಲಿ ಪ್ರೇಮ್!
ಈಗ ತಾನೇ ಶುರುವಾಗಿದ್ದ ಸ್ನೇಹಾ-ಕಂಠಿ ಪ್ರೀತಿ ಕೊನೆಗೊಳ್ಳುತ್ತಿದೆ. ಬಂಗಾರಮ್ಮನ ಕೋಪಕ್ಕೆ ಮಗನ ಪ್ರೀತಿ ಬಲಿಯಾಗುತ್ತಿದೆ. ಮುಂದೇನಾಗುತ್ತದೆ ಎಂದು ನೋಡೋಕೆ ಪುಟ್ಟಕ್ಕನ ಮಕ್ಕಳು ಧಾರಾವಾಹಿ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ