Puttakkana Makkalu: ಶ್ರೀನೇ ಕಂಠಿ ಎಂದು ತಿಳಿಯದೇ ಬಾಯಿಗೆ ಬಂದಂತೆ ಮಾತನಾಡಿದ್ದಾಳೆ ಸ್ನೇಹ! ತನ್ನ ಮಗನ ವಿರುದ್ಧ ದೂರು ನೀಡಿದ್ದು ಗೊತ್ತಾಗುತ್ತಾ?

ಕಂಠಿ ಮೇಲೆ ಸ್ನೇಹ ಪೊಲೀಸರಿಗೆ ದೂರು ಕೊಟ್ಟಿರುತ್ತಾಳೆ. ತನ್ನ ಮಗನ ವಿರುದ್ಧ ದೂರು ಕೊಟ್ಟವರನ್ನು ಬಂಗಾರಮ್ಮ ಹುಡುಕುತ್ತಾ ಇರುತ್ತಾಳೆ. ಆದ್ರೆ ಯಾರು ಅಂತ ಗೊತ್ತಾಗಿರಲ್ಲ. ಈಗ ಸ್ನೇಹಳೇ ಆ ವಿಷಯವನ್ನು ಹೇಳಲು ಹೋಗುತ್ತಾಳೆ. ಅಷ್ಟರಲ್ಲಿ ಪುಟ್ಟಕ್ಕ ತಡೆಯುತ್ತಾಳೆ.

ಸ್ನೇಹ

ಸ್ನೇಹ

  • Share this:
    ಪುಟ್ಟಕ್ಕನ ಮಕ್ಕಳು (Puttakkana Makkalu), ಜೀ ಕನ್ನಡದ (Zee Kannada) ಹೆಸರಾಂತ ಧಾರಾವಾಹಿ (Serial). ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿದಿನ ಸಂಜೆ 7.30ಕ್ಕೆ ಪ್ರಸಾರವಾಗುತ್ತದೆ. ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಪುಟ್ಟಕ್ಕನ ಪಾತ್ರದಲ್ಲಿ ಉಮಾಶ್ರೀ ಅಮೋಘವಾಗಿ ಅಭಿನಯಿಸುತ್ತಿದ್ದಾರೆ. ಉಮಾಶ್ರೀ ಗಂಡ ಆಕೆಯನ್ನು ಬಿಟ್ಟು ಅದೇ ಊರಿನಲ್ಲಿ ರಾಜಿ ಎಂಬಾಕೆಯನ್ನು ಎರಡನೇ ಮದುವೆಯಾಗಿದ್ದಾನೆ. ಇನ್ನು ಉಮಾಶ್ರೀಗೆ ಮೂವರು ಹೆಣ್ಣು ಮಕ್ಕಳು. ಗಂಡ ಬಿಟ್ಟು ಹೋಗಿದ್ದರೂ, ಮೂವರನ್ನು ಚೆನ್ನಾಗಿ ಸಾಕಿದ್ದಾಳೆ. ಮೆಸ್ ಒಂದನ್ನು ನಡೆಸುತ್ತಿದ್ದು, ಅದರಿಂದ ಜೀವನ ಸಾಗಿಸುತ್ತಿದ್ದಾಳೆ. ಮೊದಲನೇ ಮಗಳು ಸಹನಾ (Sahana) ಓದದೇ ತನ್ನ ತಾಯಿಗೆ ಹೋಟೆಲ್ (Hotel) ಕೆಲಸದಲ್ಲಿ ಸಹಾಯ ಮಾಡುತ್ತಿದ್ದಾಳೆ. ಎರಡನೇ ಮಗಳು ಸ್ನೇಹ (Sneha) ಓದಿನಲ್ಲೂ ಜೋರು. ಮಾತಿನಲ್ಲೂ ಜೋರು. ಮೂರನೇ ಮಗಳು ಸುಮಾ (Suma) ಓದಿನ ಜೊತೆ ಆಟಗಳಲ್ಲೂ ಮುಂದು.

    ಸ್ನೇಹಳಿಗೆ ಪ್ರೀತಿ ಹೇಳಿಕೊಳ್ಳಲು ಕಂಠಿ ಒದ್ದಾಟ
    ಕಂಠಿ ಸ್ನೇಹಳನ್ನು ತುಂಬಾ ಪ್ರೀತಿ ಮಾಡುತ್ತಿದ್ದಾನೆ. ಆದ್ರೆ ಹೇಳಿಕೊಳ್ಳಲು ಮಾತ್ರ ಒದ್ದಾಟ ನಡೆಸುತ್ತಿದ್ದಾನೆ. ಯಾಕಂದ್ರೆ ಸ್ನೇಹ, ಕಂಠಿ ಒಳ್ಳೆಯ ಸ್ನೇಹಿತರು. ಅಲ್ಲದೇ ಕಂಠಿ ಸ್ನೇಹ ಬಳಿ ಸುಳ್ಳು ಹೇಳಿದ್ದಾನೆ. ತನ್ನ ಹೆಸರನ್ನು ಶ್ರೀ ಎಂದು ಹೇಳಿಕೊಂಡು ತಿರುಗುತ್ತಿದ್ದಾನೆ. ಅಲ್ಲದೇ ಸ್ನೇಹಾಗೆ ಕಂಠಿ ಮತ್ತು ಅವರಮ್ಮ ಬಡ್ಡಿ ಬಂಗಾರಮ್ಮನ ಹೆಸರು ಕೇಳಿದ್ರೂ ಆಗಲ್ಲ ಅದಕ್ಕೆ. ಕಂಠಿ ಯಾವಾಗ ತನ್ನ ಪ್ರೀತಿ ಹೇಳಿ ಒಪ್ಪಿಸುತ್ತಾನೋ ಗೊತ್ತಿಲ್ಲ.

    ಪೂರ್ವಿ ಜೊತೆ ಕಂಠಿ ನಿಶ್ಚಿತಾರ್ಥ
    ಇನ್ನು ಬಂಗಾರಮ್ಮ ತನ್ನ ಮಗ ಕಂಠಿಗೆ, ಅಣ್ಣನ ಮಗಳು ಪೂರ್ವಿ ಜೊತೆ ನಿಶ್ಚಿತಾರ್ಥ ಮಾಡಲು ಬಂಗಾರಮ್ಮ ರೆಡಿ ಆಗಿದ್ದಾಳೆ. ಇರೋ ಒಬ್ಬ ಮಗನ ನಿಶ್ಚಿತಾರ್ಥ ಗ್ರಾಂಡ್ ಆಗಿ ಮಾಡಲು ಮುಂದಾಗಿದ್ದಾಳೆ. ಅದಕ್ಕೆ ತನಗೆ ಪರಿಚಯ ಇರೋರನ್ನೆಲ್ಲಾ ಕರೆಯುತ್ತಿದ್ದಾಳೆ. ಅದೇ ರೀತಿ ಪುಟ್ಟಕ್ಕನಿಗೂ ಕರೆ ಮಾಡಿದ್ದಾಳೆ ಆದ್ರೆ ಸ್ನೇಹ ಮಾತನಾಡಿದ್ದಾಳೆ.

    ಇದನ್ನೂ ಓದಿ: Ramachari: ಇತ್ತ ರಾಮಾಚಾರಿ ಪ್ರಾಜೆಕ್ಟ್​​ಗೆ ಕಲ್ಲು ಹಾಕಿದ ಚಾರು, ಅತ್ತ ಸಾಯಲು ಹೊರಟ ಅತ್ತಿಗೆ ಅಪರ್ಣ!

    ಕಂಠಿ ಬಗ್ಗೆ ಮಾತನಾಡುತ್ತಿದ್ದಾಳೆ

    ಸ್ನೇಹ ಜೊತೆ ಮಾತನಾಡುತ್ತಾಳೆ. ನಿನ್ನ ನೋಡಿಲ್ಲ, ಆದ್ರೆ ಕೇಳಿದ್ದೆ ಅಂತಾಳೆ. ನಿನಗೆ ನನ್ನ ಮೇಲೆ ಕೋಪ ಇದೆ ಎಂದು ಗೊತ್ತು. ನಿಮ್ಮ ಅವ್ವನನ್ನು ನಾನು ಪಂಚಾಯಿತಿಗೆ ಕರೆಸಿದ ಅಂತ ತಾನೇ, ನಿನಗೆ ನನ್ನ ಮೇಲೆ ಕೋಪ. ಇದನ್ನು ನಾವಿಬ್ಬರು ಸಿಕ್ಕಾಗಲೇ ಮಾತನಾಡೋಣ ಅಂದುಕೊಂಡೆ. ಆಗಿಲ್ಲ. ನನ್ನ ಮಗನಿಗೆ ನಿಶ್ಚಿತಾರ್ಥ ಗೊತ್ತಾಗಿದೆ. ಅದನ್ನು ಪುಟ್ಟಕ್ಕನಿಗೆ ಹೇಳಬೇಕಿತ್ತು ಎಂದು ಹೇಳುತ್ತಾಳೆ.

    Zee Kannada serial, Kannada serial, Puttakkana Makkalu serial today episode, Puttakkana Makkalu serial cast, ಪುಟ್ಟಕ್ಕನ ಮಕ್ಕಳು ಧಾರಾವಾಹಿ, 200 ಸಂಚಿಕೆಗಳ ಸಂಭ್ರಮದಲ್ಲಿ ಪುಟ್ಟಕ್ಕನ ಮಕ್ಕಳು ಧಾರಾವಾಹಿ, ಕನ್ನಡ ಧಾರಾವಾಹಿಗಳು, Kannada news, Karnataka news,
    ಬಂಗಾರಮ್ಮ


    ರೌಡಿಯನ್ನು ಯಾರು ಮದುವೆ ಆಗ್ತಾರೆ?
    ಕಂಠಿ ನಿಶ್ಚಿತಾರ್ಥದ ಬಗ್ಗೆ ಕೇಳಿ, ಸ್ನೇಹ ನಿಮ್ಮ ಹುಡುಗನನ್ನು ಯಾವುದೋ ಹುಡುಗಿ ಒಪ್ಪಿಕೊಂಡಿದ್ದಾಳಾ? ಪ್ರೀತಿಯಿಂದ ಒಪ್ಪಿಕೊಂಡ್ಲಾ? ಅಥವಾ ನಿಮ್ಮ ಭಯದಲ್ಲಿ ಒಪ್ಪಿಕೊಂಡಿದ್ದಾಳಾ ಎಂದು ಬಂಗಾರಮ್ಮನನ್ನು ಕೇಳುತ್ತಾಳೆ. ನಿಮ್ಮ ಬಗ್ಗೆ, ನಿಮ್ಮ ಮಗನ ಬಗ್ಗೆ ಗೊತ್ತಿರೋ ಯಾರೂ ಈ ಸಂಬಂಧ ಒಪ್ಪಿಕೊಳ್ಳಲ್ಲ. ಒಬ್ಬ ರೌಡಿಯನ್ನು ಯಾವ ಹುಡುಗಿ ತಾನೇ ಒಪ್ಪುತ್ತಾಳೆ? ಎಂದು ಸ್ನೇಹ ಹೇಳುತ್ತಾಳೆ. ಅದಕ್ಕೆ ಬಂಗಾರಮ್ಮ ಕೋಪ ಬಂದ್ರೂ ತಡೆದುಕೊಂಡು, ನಿಮ್ಮ ಅಮ್ಮನ ಮೇಲಿನ ಪ್ರೀತಿ ಈ ರೀತಿ ಮಾತನಾಡಿಸುತ್ತಿದೆ ಎಂದು ಹೇಳುತ್ತಾಳೆ.

    ಇದನ್ನೂ ಓದಿ: Jothe Jotheyali: ಜೊತೆ ಜೊತೆಯಲಿ ಮೆಗಾ ಟ್ವಿಸ್ಟ್! ಹರೀಶ್ ರಾಜ್ ಬಂದಿರೋದೇ ಆರ್ಯವರ್ಧನ್ ಬದಲಿಗೆ!

    ದೂರು ಕೊಟ್ಟ ಬಗ್ಗೆ ಹೇಳಲು ಹೊರಟ ಸ್ನೇಹ
    ಕಂಠಿ ಮೇಲೆ ಸ್ನೇಹ ಪೊಲೀಸರಿಗೆ ದೂರು ಕೊಟ್ಟಿರುತ್ತಾಳೆ. ತನ್ನ ಮಗನ ವಿರುದ್ಧ ದೂರು ಕೊಟ್ಟವರನ್ನು ಬಂಗಾರಮ್ಮ ಹುಡುಕುತ್ತಾ ಇರುತ್ತಾಳೆ. ಆದ್ರೆ ಯಾರು ಅಂತ ಗೊತ್ತಾಗಿರಲ್ಲ. ಈಗ ಸ್ನೇಹಳೇ ಆ ವಿಷಯವನ್ನು ಹೇಳಲು ಹೋಗುತ್ತಾಳೆ. ಅಷ್ಟರಲ್ಲಿ ಪುಟ್ಟಕ್ಕ ತಡೆಯುತ್ತಾಳೆ.

    ಮುಂದೇನಾಗುತ್ತೆ, ಸ್ನೇಹಳನ್ನು ಪ್ರೀತಿ ಮಾಡ್ತೀರೋ ಕಂಠಿ ಬೇರೆ ಹುಡುಗಿಯನ್ನು ಮದುವೆ ಆಗ್ತಾನಾ ನೋಡಬೇಕು. ಎಲ್ಲವನ್ನೂ ನೋಡಲು ಪುಟ್ಟಕ್ಕನ ಮಕ್ಕಳು ಧಾರಾವಾಹಿ ನೋಡಬೇಕು.
    Published by:Savitha Savitha
    First published: