Puttakkana Makkalu: ಮಗನ ವಿರುದ್ಧ ದೂರು ಕೊಟ್ಟವರ ಸುಳಿವು ಸಿಕ್ತು, ಸ್ನೇಹಾಳನ್ನು ಸುಮ್ನೆ ಬಿಡ್ತಾಳಾ ಬಂಗಾರಮ್ಮ?

ಮುಖಾಮುಖಿಯಾಗಿರುವ ಸ್ನೇಹ, ಬಂಗಾರಮ್ಮ ಬಳಿ ನಾನೇ ನಿಮ್ಮ ಮಗನ ವಿರುದ್ಧ ದೂರು ನೀಡಿದ್ದು ಏನ್ ಮಾಡ್ತೀರಾ ಎಂದು ಪ್ರಶ್ನಿಸಿದ್ದಾಳೆ. ಬಂಗಾರಮ್ಮನಿಗೆ ಈಗ ಸ್ನೇಹ ಬಗ್ಗೆ ಸಂಪೂರ್ಣವಾಗಿ ಗೊತ್ತಾಗಿದೆ. ಈಗ ಅವಳು ಏನ್ ಮಾಡ್ತಾಳೆ? ಕಂಠಿ ಬೇರೆ ಸ್ನೇಹಾಳನ್ನು ಲವ್ ಮಾಡೋದೋ ಗೊತ್ತಾದ್ರೆ ಸುಮ್ನೆ ಇರ್ತಾಳಾ?

ಸ್ನೇಹ

ಸ್ನೇಹ

  • Share this:
    ಪುಟ್ಟಕ್ಕನ ಮಕ್ಕಳು (Puttakkana Makkalu), ಜೀ ಕನ್ನಡದ (Zee Kannada) ಹೆಸರಾಂತ ಧಾರಾವಾಹಿ (Serial). ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿದಿನ ಸಂಜೆ 7.30ಕ್ಕೆ ಪ್ರಸಾರವಾಗುತ್ತದೆ. ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಪುಟ್ಟಕ್ಕನ ಪಾತ್ರದಲ್ಲಿ ಉಮಾಶ್ರೀ ಅಮೋಘವಾಗಿ ಅಭಿನಯಿಸುತ್ತಿದ್ದಾರೆ. ಉಮಾಶ್ರೀ ಗಂಡ ಆಕೆಯನ್ನು ಬಿಟ್ಟು ಅದೇ ಊರಿನಲ್ಲಿ ರಾಜಿ ಎಂಬಾಕೆಯನ್ನು ಎರಡನೇ ಮದುವೆಯಾಗಿದ್ದಾನೆ (Marriage). ಇನ್ನು ಉಮಾಶ್ರೀಗೆ ಮೂವರು ಹೆಣ್ಣು ಮಕ್ಕಳು. ಗಂಡ ಬಿಟ್ಟು ಹೋಗಿದ್ದರೂ, ಮೂವರನ್ನು ಚೆನ್ನಾಗಿ ಸಾಕಿದ್ದಾಳೆ. ಮೆಸ್ ಒಂದನ್ನು ನಡೆಸುತ್ತಿದ್ದು, ಅದರಿಂದ ಜೀವನ ಸಾಗಿಸುತ್ತಿದ್ದಾಳೆ. ಮೊದಲನೇ ಮಗಳು ಸಹನಾ ಓದದೇ ತನ್ನ ತಾಯಿಗೆ ಹೋಟೆಲ್ ಕೆಲಸದಲ್ಲಿ ಸಹಾಯ ಮಾಡುತ್ತಿದ್ದಾಳೆ. ಎರಡನೇ ಮಗಳು ಸ್ನೇಹ (Sneha) ಓದಿನಲ್ಲೂ ಜೋರು. ಮಾತಿನಲ್ಲೂ ಜೋರು. ಮೂರನೇ ಮಗಳು ಸುಮಾ ಓದಿನ ಜೊತೆ ಆಟಗಳಲ್ಲೂ ಮುಂದು.

    ಸ್ನೇಹಳಿಗೆ ಪ್ರೀತಿ ಹೇಳಿಕೊಳ್ಳಲು ಕಂಠಿ ಒದ್ದಾಟ

    ಕಂಠಿ ಸ್ನೇಹಳನ್ನು ತುಂಬಾ ಪ್ರೀತಿ ಮಾಡುತ್ತಿದ್ದಾನೆ. ಆದ್ರೆ ಹೇಳಿಕೊಳ್ಳಲು ಮಾತ್ರ ಒದ್ದಾಟ ನಡೆಸುತ್ತಿದ್ದಾನೆ. ಯಾಕಂದ್ರೆ ಸ್ನೇಹ, ಕಂಠಿ ಒಳ್ಳೆಯ ಸ್ನೇಹಿತರು. ಅಲ್ಲದೇ ಕಂಠಿ ಸ್ನೇಹ ಬಳಿ ಸುಳ್ಳು ಹೇಳಿದ್ದಾನೆ. ತನ್ನ ಹೆಸರನ್ನು ಶ್ರೀ ಎಂದು ಹೇಳಿಕೊಂಡು ತಿರುಗುತ್ತಿದ್ದಾನೆ. ಅಲ್ಲದೇ ಸ್ನೇಹಾಗೆ ಕಂಠಿ ಮತ್ತು ಅವರಮ್ಮ ಬಡ್ಡಿ ಬಂಗಾರಮ್ಮನ ಹೆಸರು ಕೇಳಿದ್ರೂ ಆಗಲ್ಲ ಅದಕ್ಕೆ. ಕಂಠಿ ಯಾವಾಗ ತನ್ನ ಪ್ರೀತಿ ಹೇಳಿ ಒಪ್ಪಿಸುತ್ತಾನೋ ಗೊತ್ತಿಲ್ಲ.

    ಪೂರ್ವಿ ಜೊತೆ ಕಂಠಿ ನಿಶ್ಚಿತಾರ್ಥ

    ಇನ್ನು ಬಂಗಾರಮ್ಮ ತನ್ನ ಮಗ ಕಂಠಿಗೆ, ಅಣ್ಣನ ಮಗಳು ಪೂರ್ವಿ ಜೊತೆ ನಿಶ್ಚಿತಾರ್ಥ ಮಾಡಲು ಬಂಗಾರಮ್ಮ ರೆಡಿ ಆಗಿದ್ದಾಳೆ. ಇರೋ ಒಬ್ಬ ಮಗನ ನಿಶ್ಚಿತಾರ್ಥ ಗ್ರ್ಯಾಂಡ್ ಆಗಿ ಮಾಡಲು ಮುಂದಾಗಿದ್ದಾಳೆ. ಅದಕ್ಕೆ ತನಗೆ ಪರಿಚಯ ಇರೋರನ್ನೆಲ್ಲಾ ಕರೆಯುತ್ತಿದ್ದಾಳೆ. ಅದೇ ರೀತಿ ಪುಟ್ಟಕ್ಕನನ್ನು ಕರೆಯಲು ಮನೆಗೆ ಬಂದಿದ್ದಾಳೆ. ಆದ್ರೆ ಅಲ್ಲಿ ಆಗಿದ್ದೇ ಬೇರೆ.

    ಇದನ್ನೂ ಓದಿ: Kendasampige: ಪ್ರತಿಭಟನೆಯಲ್ಲಿ ಬೆಂಕಿ ಹಚ್ಚಿಕೊಂಡವ ಚಿಕಿತ್ಸೆ ಫಲಿಸದೇ ಸಾವು! ಸುಮನಾ ತಮ್ಮ ರಾಜೇಶ್ ಇನ್ನಿಲ್ಲ!

    ಮುಖಾಮುಖಿಯಾದ ಸ್ನೇಹ ಮತ್ತು ಬಂಗಾರಮ್ಮ

    ಪುಟ್ಟಕ್ಕನ ಎರಡನೇ ಮಗಳು ಸ್ನೇಹಳನ್ನು ಬಂಗಾರಮ್ಮ ನೋಡಿರಲಿಲ್ಲ. ಬೇರೆ ಹುಡುಗಿಯನ್ನು ಸ್ನೇಹ ಅಂದುಕೊಂಡಿದ್ಲು. ಈಗ ಮನೆ ಬಳಿ ಬಂದಿರುವ ಬಂಗಾರಮ್ಮ ಸ್ನೇಹ ಮುಖಾಮುಖಿಯಾಗಿದ್ದಾರೆ. ಸ್ನೇಹಾಗೆ ಇವಳೇ ಬಂಗಾರಮ್ಮ ಎಂದು ಗೊತ್ತು. ಬಂಗಾರಮ್ಮನಿಗೆ ಈಕೆಯೇ ಸ್ನೇಹ ಎಂದು ಗೊತ್ತಿಲ್ಲ. ಸ್ನೇಹ ಧೈರ್ಯವಾಗಿ ಆಕೆಯ ಬಳಿ ಮಾತನಾಡುತ್ತಿದ್ದಾಳೆ.

    Zee Kannada serial, Kannada serial, Puttakkana Makkalu serial today episode, today episode big twist, Puttakkana Makkalu serial cast, ಪುಟ್ಟಕ್ಕನ ಮಕ್ಕಳು ಧಾರಾವಾಹಿ, ಜೀ ಕನ್ನಡ ಧಾರಾವಾಹಿಗಳು, Kannada news, Karnataka news,
    ಬಂಗಾರಮ್ಮ


    ನಾನೇ ದೂರು ಕೊಟ್ಟಿದ್ದು ಎಂದ ಸ್ನೇಹ
    ಮುಖಾಮುಖಿಯಾಗಿರುವ ಸ್ನೇಹ, ಬಂಗಾರಮ್ಮ ಬಳಿ ನಾನೇ ನಿಮ್ಮ ಮಗನ ವಿರುದ್ಧ ದೂರು ನೀಡಿದ್ದು ಏನ್ ಮಾಡ್ತೀರಾ ಎಂದು ಪ್ರಶ್ನಿಸಿದ್ದಾಳೆ. ಕಂಠಿ ತನ್ನ ಅಮ್ಮ ಕೊಟ್ಟಿರುವ ದುಡ್ಡಿಗೆ ಮಾರ್ಕೆಟ್ ನಲ್ಲಿ ಬಡ್ಡಿ ವಸೂಲಿ ಮಾಡುತ್ತಾನೆ. ಅದನ್ನು ಸ್ನೇಹ ತಪ್ಪಾಗಿ ತಿಳಿದುಕೊಂಡಿರುತ್ತಾಳೆ.

    Zee Kannada serial, Kannada serial, Puttakkana Makkalu serial today episode, today episode big twist, Puttakkana Makkalu serial cast, ಪುಟ್ಟಕ್ಕನ ಮಕ್ಕಳು ಧಾರಾವಾಹಿ, ಜೀ ಕನ್ನಡ ಧಾರಾವಾಹಿಗಳು, Kannada news, Karnataka news,
    ಕಂಠಿ


    ಜನ ಸಾಮಾನ್ಯರಿಗೆ ಬೆದರಿಸಿ ದುಡ್ಡು ವಸೂಲಿ ಮಾಡುತ್ತಾರೆ ಎಂದುಕೊಂಡಿದ್ದಾಳೆ. ಅದಕ್ಕೆ ಅವನಿಗೆ ಬುದ್ದಿ ಕಲಿಸಬೇಕು ಎಂದು ಪೊಲೀಸರಿಗೆ ದೂರು ನೀಡಿರುತ್ತಾಳೆ. ದೂರು ಕೊಟ್ಟವರನ್ನು ಬಂಗಾರಮ್ಮ ಹುಡುಕುತ್ತಾ ಇರುತ್ತಾಳೆ.

    ಇದನ್ನೂ ಓದಿ: Gattimela: ವೇದಾಂತ್, ವಿಕ್ರಾಂತ್​​ಗೆ ಅಮ್ಮ ಸಿಕ್ಕಿದ ಖುಷಿ! ನಿಜವಾದ ಅಮ್ಮ ಯಾರು ಗೊತ್ತಾಯ್ತಾ?

    ಬಂಗಾರಮ್ಮನಿಗೆ ಈಗ ಸ್ನೇಹ ಬಗ್ಗೆ ಸಂಪೂರ್ಣವಾಗಿ ಗೊತ್ತಾಗಿದೆ. ಈಗ ಅವಳು ಏನ್ ಮಾಡ್ತಾಳೆ? ಕಂಠಿ ಬೇರೆ ಸ್ನೇಹಾಳನ್ನು ಲವ್ ಮಾಡೋದೋ ಗೊತ್ತಾದ್ರೆ ಸುಮ್ನೆ ಇರ್ತಾಳಾ? ಕಂಠಿ ಈಗ ಏನ್ ಮಾಡ್ತಾನೆ. ಎಲ್ಲವನ್ನೂ ನೋಡಬೇಕು ಅಂದ್ರೆ ಪುಟ್ಟಕ್ಕನ ಮಕ್ಕಳು ಧಾರಾವಾಹಿ ನೋಡಬೇಕು.
    Published by:Savitha Savitha
    First published: