Puttakkana Makkalu: ಬಂಗಾರಮ್ಮನ ಮಗ ಕಂಠಿ ಯಾರೆಂದು ಪೊಲೀಸ್‍ಗೆ ಗೊತ್ತಾಯ್ತಾ? ಕಣ್ಣ ಮುಚ್ಚಾಲೆ ಮುಕ್ತಾಯ

ಈ ಬಾರಿಯೂ ಕಂಠಿ ಮುಖಕ್ಕೆ ಬಟ್ಟೆ ಹಾಕಿಕೊಂಡು ಬಂದಿದ್ದಾನೆ. ಆದ್ರೆ ಪೊಲೀಸರ ಮುಂದೆ ಬಂದು ಮುಖದ ಬಟ್ಟೆ ಸರಿಸಿ, ನಾನೇ ಬಂಗಾರಮ್ಮನ ಮಗ ಕಂಠಿ. ಏನ್ ನನ್ನ ಹುಡುಕುತ್ತಿದ್ರೆ ಏನ್ ವಿಷಯ ಅಂತ ಕೇಳಿದ್ದಾನೆ. ಪೊಲೀಸ್ ಕಂಠಿಯನ್ನು ನೋಡಿ ಶಾಕ್ ಆಗಿದ್ದಾರೆ.

 ಪುಟ್ಟಕ್ಕನ ಮಕ್ಕಳು

ಪುಟ್ಟಕ್ಕನ ಮಕ್ಕಳು

 • Share this:
  ಪುಟ್ಟಕ್ಕನ ಮಕ್ಕಳು (Puttakkana Makkalu), ಜೀ ಕನ್ನಡದ (Zee Kannada) ಹೆಸರಾಂತ ಧಾರಾವಾಹಿ (Serial). ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿದಿನ ಸಂಜೆ 7.30ಕ್ಕೆ ಪ್ರಸಾರವಾಗುತ್ತದೆ. ಪುಟ್ಟಕ್ಕಳ ಮಕ್ಕಳು ಧಾರಾವಾಹಿಯಲ್ಲಿ ಪುಟ್ಟಕ್ಕನ ಪಾತ್ರದಲ್ಲಿ ಉಮಾಶ್ರೀ ಅಮೋಘವಾಗಿ ಅಭಿನಯಿಸುತ್ತಿದ್ದಾರೆ. ಉಮಾಶ್ರೀ ಗಂಡ ಆಕೆಯನ್ನು ಬಿಟ್ಟು ಅದೇ ಊರಿನಲ್ಲಿ ರಾಜಿ ಎಂಬಾಕೆಯನ್ನು ಎರಡನೇ ಮದುವೆಯಾಗಿದ್ದಾನೆ. ಇನ್ನು ಉಮಾಶ್ರೀಗೆ ಮೂವರು ಹೆಣ್ಣು ಮಕ್ಕಳು. ಗಂಡ (Husband) ಬಿಟ್ಟು ಹೋಗಿದ್ದರೂ, ಮೂವರನ್ನು ಚೆನ್ನಾಗಿ ಸಾಕಿದ್ದಾಳೆ. ಮೆಸ್ ಒಂದನ್ನು ನಡೆಸುತ್ತಿದ್ದು, ಅದರಿಂದ ಜೀವನ ಸಾಗಿಸುತ್ತಿದ್ದಾಳೆ. ಸಹನಾ, ಸ್ನೇಹ, ಸುಮಾ ಮೂವರು ಮಕ್ಕಳು. ಇನ್ನು ಅದೇ ಊರಿನಲ್ಲಿ ಬಡ್ಡಿ ಬಂಗರಮ್ಮ ಇದ್ದು, ಅವನ ಮಗ ಕಂಠಿ. ಪೊಲೀಸರು (Police) ಸುಮಾರು ದಿನದಿಂದ ಕಂಠಿಯನ್ನು ಹುಡುಕುತ್ತಿದ್ದರು ಸಿಕ್ಕಿಲ್ಲ. ಈಗ ಕಂಠಿಯೇ ಪೊಲೀಸರ ಮುಂದೆ ಬಂದು ನಿಂತಿದ್ದಾನೆ.

  ಕಂಠಿಯನ್ನು ಹುಡುಕುತ್ತಿದ್ದ ಪೊಲೀಸ್
  ಬಂಗಾರಮ್ಮನ ಮಗ ಕಂಠಿ, ತನ್ನ ಅಮ್ಮ ಕೊಟ್ಟ ದುಡ್ಡಿನ ಬಡ್ಡಿ ವಸೂಲಿಯನ್ನು ಮಾಡುತ್ತಾನೆ. ಮಾರ್ಕೆಟ್‍ನಲ್ಲಿ ಬಡ್ಡಿ ಹಣ ವಸೂಲಿ ಮಾಡೋದೇ ಇವನ ಕೆಲಸ. ಬಡ್ಡಿ ದುಡ್ಡು ಕೊಡದವರನ್ನು ಹೊಡೆಯುತ್ತಾನೆ. ಇದನ್ನೇ ತಪ್ಪಾಗಿ ತಿಳಿದುಕೊಂಡ ಪುಟ್ಟಕ್ಕನ ಎರಡನೇ ಮಗಳು ಸ್ನೇಹ ಪೊಲೀರಿಗೆ ದೂರು ನೀಡಿರುತ್ತಾಳೆ. ಅಮಾಯಕರಿಗೆ ಬಂಗಾರಮ್ಮ ಮತ್ತು ಅವನ ಮಗ ಕಂಠಿ ತೊಂದರೆ ಕೊಡುತ್ತಿದ್ದಾರೆ. ಅವರಿಗೆ ಶಿಕ್ಷೆ ನೀಡಿ ಎಂದು. ಆದ್ರೆ ಕಂಠಿ ಎಂದು ಬೇರೆಯವರನ್ನು ಅರೆಸ್ಟ್ ಮಾಡಿ ಇರುತ್ತಾರೆ.

  ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಪೊಲೀಸ್‍ಗೆ ಹೊಡೆದಿದ್ದ ಕಂಠಿ
  ಕಂಠಿಗೆ ತನ್ನ ಅಮ್ಮ ಎಂದ್ರೆ ಪ್ರಾಣ. ಅವಳ ಬಗ್ಗೆ ಯಾರಾದ್ರೂ ಕೆಟ್ಟದಾಗಿ ಮಾತನಾಡಿದ್ರೆ ಸುಮ್ಮನೇ ಬಿಡಲ್ಲ. ಒಮ್ಮೆ ಪೊಲೀಸ್ ಮಾರ್ಕೆಟ್‍ನಲ್ಲಿ ಕಂಠಿ ಹುಡುಕುವ ಸಲುವಾಗಿ, ಬಂಗಾರಮ್ಮನಿಗೆ ಬೈದಿರುತ್ತಾನೆ. ಅದಕ್ಕೆ ಕಂಠಿ ಮುಖಕ್ಕೆ ಬಟ್ಟೆ ಕಟ್ಟಿಕೊಮಡು ಪೊಲೀಸ್‍ಗೆ ಸಿರುಆಯಿ ಹೊಡೆದಿರುತ್ತಾನೆ. ಅಂದಿನಿಂದ ಪೊಲೀಸ್ ಕಂಠಿಯನ್ನು ಹುಡುಕತ್ತಾ ಇರುತ್ತಾರೆ.

  ಇದನ್ನೂ ಓದಿ: Doresani: ಮಾತಲ್ಲಿ ಹೇಳಲಾಗದ್ದನ್ನು ಪತ್ರದ ಮೂಲಕ ಹೇಳ್ತಿದ್ದಾಳೆ ದೀಪಿಕಾ! ಲೆಟರ್​ನಲ್ಲಿ ಏನಿದೆ?

  ಇವತ್ತು ಪೊಲೀಸ್ ಮುಂದೆ ಬರಲಿರುವ ಕಂಠಿ
  ಪೊಲೀಸ್ ಕಂಠಿ ಯಾರೆಂದು ನೋಡಿರುವುದಿಲ್ಲ. ಬೇರೆ ಒಬ್ಬನನ್ನು ಕಂಠಿ ಎಂದುಕೊಂಡಿರುತ್ತಾನೆ. ಜೊತೆಗಿರುವವರು ಸುಳ್ಳು ಹೇಳುತ್ತಾರೆ ಎಂದು ಪೊಲೀಸ್‍ಗೆ ಗೊತ್ತಾಗುತ್ತೆ. ಅದಕ್ಕೆ ಕಾನ್‍ಸ್ಟೇಬಲ್ ಗಳನ್ನು ನಿಲ್ಲಿಸಿಕೊಂಡು, ಬಂಗಾರಮ್ಮನಿಗೆ ಬೈದ್ರೆ ಕಂಠಿ ಬರುತ್ತಾನೆ ಅಲ್ಲವೇ ಎನ್ನುತ್ತಾನೆ. ಅಷ್ಟರಲ್ಲಿ ಬುಲೆಟ್ ಸೌಂಡ್ ಆಗುತ್ತೆ. ತಿರುಗಿ ನೋಡಿದ್ರೆ ಕಂಠಿಯೇ ಬಂದು ಪೊಲೀಸರ ಮುಂದೆ ನಿಲ್ಲುತ್ತಾನೆ.

  Zee Kannada serial, Puttakkana Makkalu serial today episode, Puttakkana Makkalu serial cast, Big twist in episode, ಪುಟ್ಟಕ್ಕನ ಮಕ್ಕಳು ಧಾರಾವಾಹಿ, ಜೀ ಕನ್ನಡ ಧಾರಾವಾಹಿಗಳು, Kannada news, Karnataka news,
  ಕಂಠಿ


  ಕಂಠಿ ನೋಡಿ ಶಾಕ್ ಆದ ಪೊಲೀಸ್
  ಈ ಬಾರಿಯೂ ಕಂಠಿ ಮುಖಕ್ಕೆ ಬಟ್ಟೆ ಹಾಕಿಕೊಂಡು ಬಂದಿದ್ದಾನೆ. ಆದ್ರೆ ಪೊಲೀಸರ ಮುಂದೆ ಬಂದು ಮುಖದ ಬಟ್ಟೆ ಸರಿಸಿ, ನಾನೇ ಬಂಗಾರಮ್ಮನ ಮಗ ಕಂಠಿ. ಏನ್ ನನ್ನ ಹುಡುಕುತ್ತಿದ್ರೆ ಏನ್ ವಿಷಯ ಅಂತ ಕೇಳಿದ್ದಾನೆ. ಪೊಲೀಸ್ ಕಂಠಿಯನ್ನು ನೋಡಿ ಶಾಕ್ ಆಗಿದ್ದಾರೆ.

  ಈಗ ಏನ್ ಮಾಡ್ತಾರೆ ಪೊಲೀಸ್
  ಕಂಠಿ ಯಾರೆಂದು ಸ್ನೇಹಗೂ ಕೂಡ ಗೊತ್ತಿಲ್ಲ. ಆದ್ರೆ ಕಂಠಿ ಮಾತ್ರ ಶ್ರೀ ಎಂದು ಹೇಳಿಕೊಂಡು, ಸ್ನೇಹಳ ಪರಿಚಯ ಮಾಡಿಕೊಂಡಿದ್ದಾನೆ. ಕಂಠಿಗೆ ಸ್ನೇಹಳನ್ನು ಕಂಡ್ರೆ ಇಷ್ಟ. ಅದಕ್ಕೆ ಶ್ರೀ ಎಂದು ಹೇಳಿಕೊಂಡೇ ಓಡಾಡುತ್ತಿದ್ದಾನೆ. ಈಗ ಪೊಲೀಸ್‍ಗೆ ವಿಷಯ ಗೊತ್ತಾಗಿದೆ. ಪೊಲೀಸ್ ಸ್ನೇಹ ಬಳಿ ಸತ್ಯ ಹೇಳೋ ಸಾಧ್ಯತೆ ಇದೆ. ಅಲ್ಲದೇ ಮತ್ತೆ ಅವಳಿಂದ ದೂರು ಪಡೆದು, ಕಂಠಿಯನ್ನು ಅರೆಸ್ಟ್ ಮಾಡೋ ಸಾಧ್ಯತೆ ಇದೆ.

  ಇದನ್ನೂ ಓದಿ: Kannadathi: ಅಮ್ಮಮ್ಮ ಇಲ್ಲದಿರುವಾಗ ಭುಗಿಲೆದ್ದ ಆಸ್ತಿ ವಿವಾದ; ಹರ್ಷ, ಚಿಕ್ಕಪ್ಪನ ನಡುವೆ ಗಲಾಟೆಯಾಗುತ್ತಾ? 

  ಪುಟ್ಟಕ್ಕನ ಮಕ್ಕಳು ಧಾರಾವಾಹಿಯೂ ದಿನ ಕುತೂಹಲ ಮೂಡಿಸುತ್ತಿದ್ದು, ಏನಾಗುತ್ತೆ, ಏನಾಗುತ್ತೆ ಅಂತ ಪ್ರೇಕ್ಷಕ ಕಾಯುತ್ತಿದ್ದಾನೆ. ಎಲ್ಲದಕ್ಕೂ ಸಂಚಿಕೆಗಳನ್ನು ನೋಡಬೇಕು.
  Published by:Savitha Savitha
  First published: